ಪ್ರಕೃತಿಯನ್ನು ನೋಡಲು ಹೊರಟವರ ದೃಷ್ಟಿಗೆ ಹಲವು ದೃಶ್ಯಗಳು,ಅನುಭವಗಳು,ಪಾಠಗಳು.…
ಕಾಣದ ದೇವರ ಸೃಷ್ಟಿ,
ಈ ಸುಂದರ ಹಸಿರು ಸೃಷ್ಟಿ,
ಜೀವ ಸಂಕುಲಗಳಿಗೆ ಆಶ್ರಯ,
ಅರಿಯಲಾಗದು ಈ ಪ್ರಕೃತಿ ವಿಸ್ಮಯ..
ಹಕ್ಕಿಗಳ ಕಲರವದ ಹಾಡುಗಳು,
ಪ್ರಾಣಿಗಳ ಘರ್ಜನೆಗಳು,
ಹರಿವ ಝರಿ ತೊರೆಗಳು,
ತಂಗಾಳಿಗೆ ತಲೆದೂಗುವ ಹಸಿರೆಲೆಗಳು,
ನಿಸರ್ಗದ ನಡುವೆ ಬಂಧವನು ಬೆಳೆಸಿ ಬದುಕುವ ಅವೆಷ್ಟೋ ಜೀವಗಳು,
ಇದರ ನಡುವೆ ನಿಸರ್ಗವ ನಾಶಮಾಡುವ ನರರಾಕ್ಷಸರು,
ಅನುಭವಕ್ಕೆ ಬರುವಂತೆ ಪ್ರಕೃತಿಯ ವಿಕೋಪಗಳು…
ನಳನಳಿಸಿ ಜಿಗಿಯುತ,ತಿರುಗುತ,ಹರಿಯುವ ನೀರು,
ಮಳೆಗೆ ಮತ್ತೆ-ಮತ್ತೆ ಚಿಗುರುವ ಹಸಿರು,
ಹಸಿರಿನಿಂದ ಜೀವ ಸಂಕುಲಗಳಿಗೆ ಉಸಿರು,
ವಿಶಾಲ ಪ್ರಕೃತಿಯ ನಡುವೆ ನಿಂತರೆ ತಮ್ಮನ್ನು ತಾವೇ ಮರೆಯುವರು..
ಈ ಪ್ರಕೃತಿ ಕೊರತೆಯಾಗದಂತೆ ಎಲ್ಲವನ್ನೂ ನೀಡಿದೆ,
ಆದರೆ ನಮಗೆ ಎಷ್ಟು ಕೊಟ್ಟರೂ ಸಾಕಾಗದೆ ಮತ್ತೇನೋ ಹುಡುಕುತ್ತಿದೆ…
ಶಾಂತಾರಾಮ ಹೊಸ್ಕೆರೆ,
ಶಿರಸಿ, ಉತ್ತರ ಕನ್ನಡ…
ಬರಹಗಾರ...
0 Followers
0 Following