ನಮ್ಮೂರ ಸರ್ಕಾರಿ ಶಾಲೆ (ಕೃಷ್ಣಗಿರಿ)

ನಮ್ಮ ಬಾಲ್ಯದ ಸ್ವರ್ಗ



image

ಮೊದಲಿಗೆ ನಮ್ಮೂರಿನ ಪರಿಚಯ ಮಾಡಿ ಆಮೇಲೆ ಶಾಲೆಯ ಬಗ್ಗೆ ಹೇಳ್ತೆನೆ

ಊರಿನ ಹೆಸರು- ಕೃಷ್ಣಗಿರಿ

ಪಾವಗಡ “ತಾ”. ತುಮಕೂರು “ಜಿ”

ನಮ್ಮ ಕರ್ನಾಟಕ.

ನಾನ್‌ ಹೇಳೊಕೆ ಹೊರಟಿರೋದು ನಮ್ಮೂರಿನ (ಜಿ ಎಚ್‌ ಪಿ ಎಸ್‌ ಕೃಷ್ಣಗಿರಿ) ಸರ್ಕಾರಿ ಶಾಲೆಯ ಬಗ್ಗೆ, ಇವತ್ತಿಗೂ ಕೂಡ ಆ ನಮ್ಮ ಶಾಲೆಕಡೆ ನೋಡಿದರೆ ನಮ್ಮ ಎಲ್ಲಾ ಹಳೆಯ ಚಲನ ವಲನಗಳು ಮನಸ್ಸಿನಲ್ಲಿ ಉಕ್ಕಿ ಬರುತ್ತವೆ. ಆ ಒಂದೊಂದು ನೆನಪುಗಳು ನಮ್ಮನ್ನು ಖುಷಿ ಪಡಿಸುತ್ತವೆ.

ವಿಶಾಲವಾದ ಶಾಲೆಯ ಆವರಣ, ಸುತ್ತಲು ಬೆಳೆದು ನಿಂತಿದ್ದ ಅಶೋಕ ಮರಗಳು ಹಾಗು ತೆಂಗಿನ ಗಿಡಗಳು, ಮಧ್ಯದಲ್ಲಿ ಹೆಮ್ಮರವಾಗಿದ್ದ ದೊಡ್ದ ಬೇವಿನ ಮರ ಮತ್ತೆ ಕಾಂಪೋಂಡ್‌ ಪಕ್ಕದಲ್ಲೆ ನೆಟ್ಟಿದ್ದ ಮೈಸೂರ್‌ ಮಲ್ಲಿಗೆ, ಆನೆಕಿವಿ ಗಿಡ ಮತ್ತು ಆನೇಕ ಹೂ ಗಿಡಗಳು ನಮ್ಮನ್ನು ಶಾಲೆಯತ್ತ ಆಕರ್ಶಿಸುತಿದ್ದವು.

ಬೆಳಿಗ್ಗೆ ನಮ್ಮ ಮನೆಗಳಲ್ಲಿನ ನಮ್ಮ ಪಾಲಿನ ಕೆಲಸಗಳನ್ನು ಮುಗಿಸಿ ಅಮ್ಮ ಮಾಡಿಟ್ಟ ಊಟವನ್ನು ಗಬಗಬನೆ ತಿಂದು ಅದೇನೊ ಇಂಪಾರ್ಟೆಂಟ್‌ ಮೀಟಿಂಗಿಗೆ ಲೇಟಾಗಿದೆ ಅನ್ನೊತರ ಅರ್ಜಂಟ್‌ ಅರ್ಜಂಟಲ್ಲಿ ಯುನಿಫಾಮ್‌ ಆಕ್ಕೊಂಡು ಅಕ್ಕಪಕ್ಕದ ಮನೆಯ ನಮ್ಮ ಚಡ್ಡಿ ದೊಸ್ತರನ್ನ ಕರಕೊಂಡು ಅವನ ಹೆಗಲಮೇಲೆ ಬಲಗೈ ಹಾಕಿ ಎಡಗೈ ಜೊರಾಗಿ ಬೀಸುತ್ತಾ ಬರಬರನೆ ಶಾಲೆಗೆ ಹೋಗಿ ಬ್ಯಾಗ್‌ ನಮ್‌ ಕೊಠಡಿಯಲ್ಲಿ ಬಿಸಾಕಿ ಸೀದಾ ಶಾಲೆಯ ಆಟದ ಮೈದಾನಕ್ಕೆ ಎಂಟ್ರಿ..!

ನಮ್‌ ಶಾಲೆಯ ಬೆಲ್‌ ಹೊಡೆಯಿತಿದ್ದದ್ದು ಹತ್ತುಗಂಟೆಗಾದರು ನಾವೆಲ್ಲ ಎಂಟುವರೆಗೆ ಹಾಜರಾಗಿ ಅರ್ದ ಗಂಟೆಯಲ್ಲಿ ಶಾಲೆಯ ಆವರಣವನ್ನು ಸುಚಿಗೊಳಿಸಿ, ಒಂಬತ್ತಕ್ಕೆ ಶುರುವಾದ ನಮ್ಮ ಆಟ ಹತ್ತುಗಂಟೆಗೆ ಹೊಡೆದ ಬೆಲ್‌ ಶಬ್ದಕ್ಕೆ ತಟ್ಟನೆ ನಿಲ್ಲುತಿತ್ತು..! ಶಬ್ದ ಕೇಳಿದ ತಕ್ಷಣ ಆಟವಾಡುತ್ತ ದೂಳಾಗಿದ್ದ ಕೈಗಳಿಗೆ ಅಲ್ಲೆ ಆವರಣದ ಮೂಲೆಯಲ್ಲಿದ್ದ ನಲ್ಲಿಯಲ್ಲಿ ಒಂದೆ ಬಾರಿಗೆ ಮೂರ್ನಾಲ್ಕು ಕೈ ಅಡ್ಡ ಹಿಡಿದು ಅವಸರದಲ್ಲಿ ತೊಳೆದ ಕೈಗಳನ್ನು ಯುನಿಫಾಮ್‌ ನಿಕ್ಕಾರಕ್ಕೆ ಹೊರಸುತ್ತಾ ಸೀದಾ ಹೋಗಿ ಪ್ರಾರ್ಥನೆ ಲೈನಿಗೆ ನಿಲ್ಲುತಿದ್ದೆವು.

ಆಗ ಎಲ್ಲಾರನ್ನು ಗಮನಿಸುತಿದ್ದ ನಮ್‌ ಮೇಷ್ಟ್ರು ಒಮ್ಮೆ ಎಲ್ಲರಕಡೆ ಕಣ್ಣಾಯಿಸುತ್ತ ಯುನಿಫಾಂ ಧರಿಸದವರನ್ನು ಪಕ್ಕಕ್ಕೆ ಕರೆದು ಸ್ಪೇಶಲ್‌ ಕ್ಲಾಸ್‌ ತೆಗಿತಿದ್ರು. 

ಎಲ್ಲಾ ಊರುಗಳ ಶಾಲೆಗಳಿಗಿಂತ ನಮ್ಮೂರಿನ ಶಾಲೆ ವಿಭಿನ್ನವಾಗಿತ್ತು, ನಮ್ಮೂರು ನಾಲ್ಕು ಹಟ್ಟಿಗಳಿಂದ ಕೂಡಿದ್ದರಿಂದ ಮಕ್ಕಳ ಸಂಖ್ಯೆ ಜಾಸ್ತಿ ಇತ್ತು. ಊರಿಂದ ಪಟ್ಟಣ ದೂರ ಇದ್ದ ಕಾರಣ ಯಾರು ಕೂಡ ಕಾರ್ವೆಂಟ್‌ ಗೆ ಖಾಸಗಿ ಶಾಲೆಗಳ ಕಡೆ ಹೋಗುತ್ತಿರರಿಲ್ಲ. ಈ ಶಾಲೆಯ ಉತ್ತಮ ಬೆಳವಣಿಗೆಗೆ ಮುಖ್ಯ ಕಾರಣ ಒಳ್ಳೆಯ ಶಿಕ್ಷಕರು ಸಿಕ್ಕಿದ್ದು ನಮ್ಮೂರಿಗೆ ಬಂದ ಶಿಕ್ಷಕರನ್ನು ಊರಿನ ವಾತಾವರಣ ಹಾಗೂ ಊರಿನ ಜನರ ಸ್ವೀಕರಿಸಿದ್ದು ಕೂಡ ಒಂದು ರೀತಿಯಲ್ಲಿ ಕಾರಣವಾಗಿತ್ತು.

ಶಾಲೆಯಲ್ಲಿ ಆಯೋಜಿಸುತಿದ್ದ ಪ್ರತಿಯೊಂದು ಕಾರ್ಯಕ್ರಮಗಳು ಕೂಡ ಅತ್ಯದ್ಭುತವಾಗಿ ಮೂಡಿಬರುತಿದ್ದವು ಮತ್ತು ಎಲ್ಲಾರನ್ನು ಒಗ್ಗೂಡಿಸಿ ಯಶಸ್ವಿಯಾಗಿ ರೂಪುಗೊಂಡು ಎಲ್ಲಾ ವಿಭಾಗಗಳಲ್ಲು ಸೈ ಎನಿಸಿಕೊಳ್ಳುವಂತಹ ವಿಚಾರಗಳನ್ನು ಒಳಗೊಂಡಿದ್ದವು.

ಈ ಶಾಲೆಗಾಗಿ ಈ ಶಾಲೆಯ ಏಳಿಗೆಗಾಗಿ ನಮ್ಮೂರಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಹಿತನುಡಿಗಳನ್ನು ಉಧಾಹರಣೆಗಳ ಮೂಲಕ ಭವಿಷ್ಯದ ಅರಿವಿನ ಬಗ್ಗೆ ಜಾಗೃತಿ ಮೂಡಿಸಿ ನಮ್ಮೂರಿನ ಮಕ್ಕಳ ಯಶಸ್ಸಿಗೆ ಕಾರಣ ಕರ್ತರಾಗಿರುವಂತಹ ದೇವರಂತ ಶಿಕ್ಷಕರ ಹೆಸರುಗಳನ್ನು ನಾನು ಇಲ್ಲಿ ಹೇಳಲು ಬಯಸುತ್ತೇನೆ. 

ಊರಿಗೆ ಬಂದ ಅತ್ಯುತ್ತಮ ಶಿಕ್ಷಕರಲ್ಲಿ ಮೊದಲನೆಯವರು ಶ್ರಿ ಮಹೇಶ್ವರಯ್ಯ ಮೇಷ್ಟ್ರು, ಎರಡೆನೆಯವರಾಗಿ ಶ್ರಿ ಸಿದ್ದಪ್ಪ ಮೇಷ್ಟ್ರು,  ಮೂರನೇಯವರಾಗಿ            ಶ್ರಿ ಹನುಮಂತರಾಯಪ್ಪ ಮೇಷ್ಟ್ರು, ನಾಲ್ಕನೇಯವರಾಗಿ ಶ್ರಿಮತಿ ಉಮಾದೇವಿ ಮೇಡಂ, ಐದನೇಯವರಾಗಿ ಶ್ರಿಮತಿ ವಾಣಿ ಮೇಡಂ, ಆರನೇಯವರಾಗಿ ಶ್ರಿ ಓಬಳಾಪತಿ ಮೇಷ್ಟ್ರು ಕೊನೆಯದಾಗಿ ಶ್ರಿ ಜೈ ಪ್ರಕಾಶ್‌ ಮೇಷ್ಟ್ರು. 

ಈ ಎಲ್ಲಾ ಶಿಕ್ಷಕರು ಕೂಡ ಈ ಶಾಲೆಯನ್ನು ತಮ್ಮ ಸ್ವಂತ ಮನೆಯ ರೀತಿಯಲ್ಲಿ ನೋಡಿಕೊಂಡು ಈ ಶಾಲೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಎಲ್ಲಾ ಮಕ್ಕಳಿಗೂ ಎಲ್ಲಾ ರೀತಿಯ ಸಮಾನತೆ ಒದಗಿಸಲು ಪ್ರತಿಯೊಬ್ಬರಲ್ಲು ಒಂದೊಂದು ಪ್ರತಿಬೆಗಳನ್ನು ಗುರುತಿಸಿ ಶಾಲೆಯಲ್ಲಿ ಆಯೋಜಿಸುತಿದ್ದ ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ  ಸಮಾನವಾದ ಅವಕಾಶಗಳನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು ಮತ್ತು ಊರಿನ ಜನರ ಮನಸ್ಸಿನಲ್ಲಿ ಮನೆಮಾಡಿದ್ದರು. 

ವಿಶೇಷವಾಗಿ ಶ್ರಿ ಹನುಮಂತರಾಯಪ್ಪ ಮೇಷ್ಟ್ರು ಈಗಲೂ ಕೂಡ ನಮ್ಮೂರಿನ ಶಾಲೆಯಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ ಇವರು ಸುಮಾರು ಹತ್ತೊಂಬತ್ತು ವರ್ಷಗಳಿಂದ ನಮ್ಮ ಶಾಲೆಯಲ್ಲೇ ಕಾರ್ಯ ನಿರ್ವಹಿಸುತಿದ್ದಾರೆ.

                                                                                -ಈ ಶಾಲೆಯ ಹಳೆ ವಿಧ್ಯಾರ್ಥಿ

                                                                                  -ಸತೀಶ್‌ ಎನ್‌ ಕೃಷ್ಣಗಿರಿ

 

 

Category:Education



ProfileImg

Written by ಸತೀಶ್‌ ಎನ್‌ ಕೃಷ್ಣಗಿರಿ

ಕನ್ನಡ ಬರಹಗಾರ

0 Followers

0 Following