ನನ್ನ ಮೋಡ ನೀನು



image

ನಿನ್ನ ಮೋಹದಾ ಮೋಡದೊಳಗೆ.
ಆ ಚಂದ್ರಮನನ್ನೇ ಬಂಧಿಸಿರುವೇ.
ನಾ ಬೀಸು ಗಾಳಿಯಾಗಿ ನಿನ್ನ ಮೈ ಸೋಕಿ
ಬಂದನದೀ  ಚಂದ್ರಮನ ಬಿಡಿಸುವೇ.

ಕಾರ್ಮೋಡವಲ್ಲ ಶುದ್ಧ ಬೆಳ್ಮೋಡ ನೀನು.
ಚಂದ್ರನ ಬೆಳಕಲಿ ಶುದ್ಧಿಯಾದವಳು ನೀನು.
ನೀಲಾಕಾಶದಲಿ ಆ ನಿನ್ನ ಹಾಲ್ಗೆಣ್ಣೆ ಪದರಾ.
ಹಾಕಿದಂತೆ ಇಡೀ ಬಾನಿಗೆಲ್ಲ ಹಂದರಾ.

ನಾ ತಂಗಾಳಿಯಾಗಿ ಮೈಸೂಕಿ ನೀ ನಾಚುತಿರಲು.
ಸಮುದ್ರ ನೀರಲೆಗಳು ನಿನ್ನ ಕೈಮಾಡಿ ಕರೆಯುತಿರಲು.
ಶಾಖದ ಸೋಕಿಗೆ ಸಾಕಾಗಿ ಧರೇ ನಿನ್ನ ಕಾಯುತ್ತಿರಲು
ಇಬ್ಬರ ಸಮ್ಮಿಲನದಿ ಮಳೆಯಾಗಿ ಇವರೆಲ್ಲ ಹರಸುತ್ತಿರಲು

ಇಳೆಯಲಿ ಪವಿತ್ರ ಹೊಳೆಯಾಗಿ ಸಂಚರಿಸಿ..
ಭುವಿಯ ಸಕಲ ಜೀವರಾಶಿಯೇನೆ ತಣಿಸಿ
ಸಾಗರ ಸೇರುವ ನಮ್ಮಿಬ್ಬರ ಕೊನೆ ಆಸೆ..
ರವಿಶಾಖದ ಶಾಪವು ನಮ್ಮಿಬ್ಬರ ಬೇರ್ಪಡಿಸಿ

ಮತ್ತೆ ನೀ ಮೋಡವಾಗುವುದೇ ಬಲು ಸುಂದರ..        

                                  ಕಿರಣ್ 

Category:Literature



ProfileImg

Written by ಕಿರಣ್ ಕರಿಗೌಡ್ರ

I am Kiran