ಹೌದು ಭಾರತೀಯ ಪರಂಪರೆಯನ್ನ ಅಮೂಲಾಗ್ರವಾಗಿ ಅಧ್ಯಯನ ಮಾಡುತ್ತ ಬಂದರೆ ಸಂಗೀತಕ್ಕೆ ತನ್ನದೆಯಾದ ಮಹತ್ವವಿದೆ. ಹೌದು ಮನುಷ್ಯರು ಮಾತ್ರವಲ್ಲˌನಾವು ಪೂಜಿಸುವ ದೇವತೆಗಳು ಕೂಡ ಸಂಗೀತವನ್ನ ಆನಂದಿಸಿದವರು. ಕೃಷ್ಣನ ಕೊಳಲ ನಾದಕ್ಕೆ ಮನುಷ್ಯರು ಮಾತ್ರವಲ್ಲದೆˌ ಸಕಲ ಚರಾಚರಗಳು ಮನಸೋಲುತ್ತಿದ್ದವು ಎಂಬ ಮಾತಿದೆ. ಅದಕ್ಕೆ ಅವನನ್ನ ವೇಣು ನಾದ ಪ್ರೀಯ ಅನ್ನುವುದು. ಇದಕ್ಕೆ ಸಂಬಂಧಿಸಿದ ಹಾಡುವೊಂದನ್ನˌ ಪಂಡಿತ್ ವೆಂಕಟೇಶ್ ಕುಮಾರರ ಧ್ವನಿಯಲ್ಲಿ ಒಮ್ಮೇ ಮರೆಯದೆ ಕೇಳಿ.
ನಾವು ವಿದ್ಯೆಯನ್ನ ಆರಂಭಿಸುವ ಮೊದಲು ಮಾಡುವ ಆರಾಧನೇ ಅವಳದ್ದೆ ಹೌದು , ಅವಳೇ ತಾಯಿ ಶಾರದೆ. ಇವತ್ತು ಪ್ರತಿಯೊಬ್ಬ ಸಂಗೀತದ ಸಾಧಕನು ಕೂಡˌಇವತ್ತು ತಾನು ಏನಾದರೂ ಸಾಧನೆ ಮಾಡಿದ್ರೆˌಅದಕ್ಕೆ ಸರಸ್ವತಿಯ ಕೃಪೆಯೇ ಕಾರಣವೆಂದು ನಂಬುತ್ತಾನೆ. ಅವಳನ್ನ ವೀಣಾಧಾರಿಣಿಯಾಗಿ ಕಾಣುತ್ತೇವೆ. ಇನ್ನು ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾದೇವˌಒಬ್ಬ ಡಮರುಗ ದಾರಿ ಹೀಗೆ ದೇವತೆಗಳು ಕೂಡ ಸಂಗೀತವನ್ನ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಂದವರು ಎಂಬ ನಂಬಿಕೆ ನಮ್ಮದು. ಅದಕ್ಕಾಗಿಯೆ ಭಾರತದಲ್ಲಿ ಆರಂಭವಾದ ಭಕ್ತಿಚಳುವಳಿಗೆ ಆಧಾರವಾಗಿದದ್ದು ಸಂಗೀತ.
ಅದು ತಮಿಳು ನಾಡಿನ ನಾಯನಾರ್ ಗಳು ಅಳ್ವಾರ್ ಗಳಿಂದ ಆರಂಭವಾಗಿˌ ಕರ್ನಾಟಕದ ಶರಣರುˌದಾಸರುˌಮಹಾರಾಷ್ಟ್ರದ ವಾರಕರಿ ಸಂಪ್ರಾದಾಯˌಬಂಗಾಳದ ಚೈತನ್ಯ ಭಕ್ತಿಪಂಥˌಹೀಗೆ ಸಾಮೂಹಿಕವಾಗಿ ಸಂಗೀತದ ಪೂಜೆ ನಡೆಯಿತು. ದಕ್ಷಿಣದಲ್ಲಿˌ ಪುರಂದರದಾಸರು, ಮುತ್ತುಸ್ವಾಮಿ ದೀಕ್ಷಿತರುˌತ್ಯಾಗರಾಜರು ಸೇರಿದಂತೆ ಆನೇಕರು ತಮ್ಮದೆಯಾದ ರೀತಿಯಲ್ಲಿ ಸಂಗೀತ ಪರಂಪರೆಯನ್ನ ಬೆಳೆಸಿದರು. ಶಾಸ್ತ್ರಿಯ ಸಂಗೀತ ಮಾತ್ರವಲ್ಲದೆˌಯಕ್ಷಗಾನˌನೃತ್ಯˌಕಥಕ್ಕಳಿ ಹೀಗೆ ಪ್ರತಿಯೊಂದು ಕಡೆಯೆ ಸಂಗೀತ ಬಳಕೆಯಾದದ್ದು ಆಧ್ಯಾತ್ಮಿಕವಾಗಿಯೆ.
ಸಂಗೀತವೆಂದರೆ ಮನೊರಂಜನೆ ಎಂದು ನಾವುಗಳು ಭಾವಿಸಿದರೆˌಅದನ್ನ ಕಲಿಯುತ್ತ ಬಂದವರುˌತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು ಅದನ್ನ ಆಧ್ಯಾತ್ಮಿಕತೆ ಎಂದೆ ಭಾವಿಸುವುದು. ನಮ್ಮಲ್ಲಿ ಯಾವುದೆ ವಿದ್ಯೆ ಸಾಗುತ್ತ ಬಂದಿದ್ದು ಗುರು ಶಿಷ್ಯ ಪರಂಪರೆಯಿಂದ. ಅದಕ್ಕೆ ಸಂಗೀತ ಬೇರೆಯಲ್ಲ. ಯಾವಾಗ ಶಿಷ್ಯನೊಬ್ಬ ಸಂಪೂರ್ಣ ಗುರುವಿಗೆ ಶರಣು ಹೋಗುತ್ತಾನೋˌಗುರು ಆತನನ್ನ ಸ್ವೀಕರ ಮಾಡುತ್ತಾನೆ. ಒಬ್ಬ ಗುರುವಿಗೆ ಶಿಷ್ಯನ ಅವಶ್ಯತೆ ತನ್ನ ಪ್ರತಿಷ್ಠೆಗಿಂತˌತಾನು ಆರಾಧಿಸಿಕೊಂಡು ಬಂದದನ್ನ ಮುಂದಿನ ಪೀಳಿಗೆಗೆ ದಾಟಿಸಬೇಕೆಂಬ ಬಯಕೆ ಅವನಾದಾಗಿರುತ್ತೆ. ಹಾಗಾಗಿಯೆ ಭಾರತೀಯ ಸಂಗೀತ ಆಧ್ಯಾತ್ಮಿಕತೆಯ ಬುನಾದಿಯ ಮೇಲೆ ನಿಂತಿದೆ. ಸಂಗೀತವೆಂದರೆ ಕೇವಲ ಮನೊರಂಜನೆ ಮಾತ್ರವಲ್ಲ ಅದೊಂದು ಉಪಾಸನೆ.
0 Followers
0 Following