ಬಂದೇ ಬರುತ್ತಾಳೆ ನನ್ನಮ್ಮಾ
ಯಾರಿಲ್ಲದಿದ್ದರೂ ಜೀವಿಸುತಿದ್ದೆ ನಿನ್ನಾಶ್ರಯದಲಿ
ಯಾಕೆ ದೂರ ಮಾಡಿದೆ ಅಮ್ಮಾ.....
ಮಕ್ಕಳ ಕೂಗು ಕೇಳಿಸದೇ ಅಮ್ಮಾ,
ಕಾಣದ ಕೈವಾಡಕೆ ನೀನೇಕೆ ಬಲಿಯಾದೆ ಅಮ್ಮಾ
ಕಾಣದೆ ತೋರಿದ ಉದ್ಘಟತನಕೆ ಉತ್ತರಿಸು ಬಾ ಅಮ್ಮಾ
ಅಮ್ಮನ ಶಕ್ತಿಯಲಿ ಮಕ್ಕಳ ಮೆರೆಸಲು ಬಾ ಅಮ್ಮಾ
ನಿನ್ನ ಶಕ್ತಿ ಅಜರಾಮರ ಎಂದು ತೋರಿಸು ಬಾ ಅಮ್ಮಾ
ಪಾಪಿಗಳ ಕೃತ್ಯಕ್ಕೆ ನೀನೇ ಉತ್ತರವಾಗಿ ಬಾ ಅಮ್ಮಾ
ಪಾಪಿಗಳ ಹುಟ್ಟಡಗಿಸಿ ಊರನು ಉದ್ಧರಿಸು ಬಾ ಅಮ್ಮಾ