ನಿನ್ನ ಮಡಿಲಿನಲ್ಲಿ ಮತ್ತೆ ಮಲಗುವಾಸೆ
ಪ್ರೀತಿ ತುಂಬುವ ಹಾಲನ್ನು ಕುಡಿಯವಾಸೆ
ಮಮತೆ ಬೀರುವ ಕನಸು ತರಿಸುವಾಸೆ
ಚಂದಿರನನ್ನು ತೊಟ್ಟಿಲಿನಲ್ಲಿ ಬರುವಾಸೆ
ತಂಪಾದ ಗಾಳಿಯೇ ನಿದ್ರೆ ಬರಿಸಲು
ಮರಗಳೇ ತಂಪನ್ನು ನೀಡುತ್ತಾ ಇರಲು
ಹಕ್ಕಿಗಳ ಗಾಯನಕ್ಕೆ ಇಂಪು ನೀಡುತ್ತಿರಲು
ಹಿತವಾಗಿ ನಗುವನ್ನು ನೀನೇ ಕಲಿಸುತ್ತೀರಲು
ದೇವರೇ ಅಮೂಲ್ಯ ಅಮ್ಮಸಂಪತ್ತು ಸೃಷ್ಟಿಸಲು
ಭೇದವಿಲ್ಲದೆ ನನ್ನ ಕೂಸು ನುಡಿಯುತ್ತಿರಲು
ನಿನ್ನ ಜೀವಕ್ಕೆ ನಾನೇ ಮತ್ತೆ ಮರು ಕೊಡಲು
ಅಮ್ಮ ನಿನ್ನ ಉದರದಿ ಮತ್ತೆ ಹುಟ್ಟಿ ಬರಲು
ಮನೆ ಬೆಳಗಲು ಬಂದಿರುವ ಜ್ಯೋತಿಯಾಗಿರಲು
ಕೈ ತುತ್ತು ನೀಡುವ ಅನ್ನಪೂರ್ಣ ಮಾತೆಯಾಗಿರಲು
ಅಮ್ಮ ನಿಮ್ಮ ಮಡಿಲಿನಲ್ಲಿ ಮಲಗುವಾಸೆಯಾಗಿರಲು
ದೇವರಿಗೆ ನಾನು ಸದಾ ನಾನು ಕೃತಜ್ಞತೆ ಹೇಳುತ್ತಿರಲು