ಕರುನಾಡಿನ ತಾಯಂದಿರಿಗೆಲ್ಲ ಆತ್ಮೀಯ ನಮಸ್ಕಾರಗಳು.ಜಗತ್ತಿನಲ್ಲಿ ದೇವರು ಎಲ್ಲೆಡೆಯೂ ಇರಲಾರ ಎಂದು ತಾಯಿ ಎನ್ನುವ ದೇವರನ್ನು ಸೃಷ್ಟಿ ಮಾಡಿದ .ಪ್ರಪಂಚದಲ್ಲಿ ಎದ್ದರು ಬಿದ್ದರು ಮೊದಲು ಬಾಯಲ್ಲಿ ಬರುವುದೇ ಅಮ್ಮಾ ಎನ್ನುವ ಶಬ್ದ.ಅದು ಪ್ರತಿ ಭಾಷೆಯಲ್ಲೂ ಅಮ್ಮ ,ಮಾ ,ಅವ್ವಮಮ್ಮಿ ಮಾಯಿ,ಆಯಿ ,ಎಲ್ಲವೂ ತಾಯಿಯ ಇನ್ನೊಂದು ಶಬ್ದಾರ್ಥವೇ.ಅಮ್ಮನ ಭಾವನೆಗಳನ್ನು ನೋಡುತ್ತ ತಿಳಿಯುತ್ತ ಬೆಳೆದಿರುತ್ತೇವೆ ಆದರೆ ನಮ್ಮಮ್ಮನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ ನಾವು ಅಮ್ಮನಾದ ಮೇಲೆ ಮಾತ್ರವೇ ಸಾಧ್ಯ.ನಾನು ಅಮ್ಮ ನಾಗಿದ್ದು 2009 ರ ಮಾರ್ಚ್ ತಿಂಗಳ ಲ್ಲಿ ಮೊದಲ ಮಗುವಿನ 👨👩👧ಆಗಮನ.ಉಯ್ ಉಯ್ ಎಂದು ಅಳುವ ನನ್ನದೇ ರಕ್ತ ಹಂಚಿಕೊಂಡು ಹುಟ್ಟಿದ ಮಗುವಿನ ಧ್ವನಿಗೆ ನಾನೇ ಬೆರಗಾಗಿ ನೋಡಿದ್ದೆ.ಎರಡನೇ ಮಗಳು 2014 ರಲ್ಲಿ 👨👩👧👧ನನ್ನ ಮಡಿಲು ತುಂಬಿದಳು.ಇವರಿಬ್ಬರ ಆಗಮನದ ನಂತರ ನನ್ನಲ್ಲಿ ಬಂದ ಆ ಹತ್ತು ಭಾವನೆಗಳನ್ನು ಹಂಚಿಕೊಳ್ಳಲು ಇಷ್ಟ ಪಡುತ್ತೇನೆ.ಪ್ರಥಮ ವಾಗಿ ಅಮ್ಮ ಎಂದು ಕರೆಸಿಕೊಳ್ಳುವಾಗ ಆದ ಹರ್ಷ ಮತ್ತು ಪುಳಕಿತ ಉಲ್ಲಾಸ .ಎರಡನೆ ದಾಗಿ ಅಂಬೆಗಾಲು ಹಾಕಿದಾಗ ಕೃಷ್ಣ ನ⛹️ ಬಾಲ ಲೀಲೆ ಕೇಳುತ್ತ ಬೆಳೆದ ನನಗೆ ಕೃಷ್ಣ ಹೀಗೆ ಇದ್ದನೋ ಎಂದುಕೊಂಡೆ ಇಬ್ಬರು ಮಕ್ಕಳಿಗೂ ಕೃಷ್ಣ ವೇಷ ಭೂಷಣ ಹಾಕಿ ಸಂಭ್ರಮ ಪಟ್ಟು ನನ್ನವನ ಭಾವಕ್ಕೆ ಜೊತೆಯಾದೆ.ಮೂರನೆಯದು ಅವರ ಪುಟ್ಟ ಪುಟ್ಟ ಹೆಜ್ಜೆಗಳು 🏃ನಂಗೆ ಮನೆಯಲ್ಲಿ ಕೃಷ್ಣ ನ ಹೆಜ್ಜೆಯಂತೆ ಕಂಡದ್ದು.ನಾಲ್ಕನೆಯದು ಅವರ ತೊದಲು ನುಡಿಗಳು.ಅಮ್ಮ, ಅಪ್ಪ, ಅಜ್ಜಿ ,ಅಜ್ಜ,ಮಾವ ,ದೊಡ್ಡಪ್ಪ,ಚಿಕ್ಕಮ್ಮ ,ಅಕ್ಕ ಎನ್ನುವ ಬಾಲ ನುಡಿಗಳನ್ನು ಕೇಳಿ ಬಾಲ್ಯ ನೆನಪಿಸಿಕೊಂಡು ಹರ್ಷಿಸಿದೆ.ಐದನೆಯದು ಅವರು 5 ವರ್ಷಗಳು ಆಗುವವರೆಗೂ ಮುದ್ದು ಮುಖಗಳನ್ನು ನೋಡಿ ನನ್ನ ಅಪ್ಪ ಅಮ್ಮ ನಾನು ನನ್ನ ತಂಗಿ👭 ಹೀಗೆ ಇದ್ದೆವು ಎಂದು ಸಂಭ್ರಮ ಪಟ್ಟರು...ಅದು ನಾನು ನನ್ನ ಹೆತ್ತವರಿಗೆ ಕೊಟ್ಟ ಉಡುಗೊರೆ ಎನ್ನಿಸಿದ್ದು ಸುಳ್ಳಲ್ಲ.ಆರನೆಯದು ಮಕ್ಕಳ ಬಾಯಲ್ಲಿ ಅಪ್ಪ ಅಪ್ಪ 👫ಎನ್ನುತ್ತ ಅವರ ಅಪ್ಪನನ್ನು ಇಬ್ಬರು ಹಚ್ಚಿಕೊಂಡು ಅಳುತ್ತ ತೊದಲುತ್ತ ಸಂಜೆ ಆಫೀಸ್ ನಿಂದ ನನ್ನವ ಬರುವುದನ್ನೇ ಕಾಯುತ್ತ ಇರುತ್ತಿದ್ದರು.ನಾನು ಹೀಗೆ ಅಲ್ಲವೇ ಬಾಲ್ಯದಲ್ಲಿ ಜಗುಲಿ ತುದಿಯಲ್ಲಿ ಕುಳಿತು ನನ್ನ ಅಪ್ಪ 🙋ಪೇಟೆಯಿಂದ ಬರುವುದನ್ನು ಕಾಯುತ್ತಿದ್ದೆ ಎನ್ನಿಸಿತು.ಏಳ ನೆಯದು ಅವರು ಬಾಲ್ಯದಲ್ಲಿ ಯೇ ಹಾಡು ನೃತ್ಯ ಕ್ಜೆ ಗೆಜ್ಜೆ ತೊಟ್ಟು ಹೆಜ್ಜೆ ಹಾಕಿದ ಘಳಿಗೆ ಕಣ್ಣು ತುಂಬಿ ಹೋಗಿತ್ತು.ಎಂಟನೆಯದು ಅವರಿಬ್ಬರನ್ನು ಶಾಲೆಗೆ ಕಳುಹಿಸಿದ👩💻👩💻 ಮೊದಲ ದಿನ ಅತ್ತು ಕರೆದು ಮಾಡದೆ ಸೀದಾ ಶಾಲೆ ಗೆ ಹೋಗಿದ್ದುಮಕ್ಕಳು ನಮ್ಮ ಹಾಗೆಯೇ ಆಗುತ್ತಾರೆ ಎಂಬ ನಂಬಿಕೆ ಯ ಭಾವ ತುಂಬಿದ್ಫು.ಒಂಭತ್ತನೆ ಯದು ಪ್ರತಿ ಸಲವು ಅಮ್ಮಾ 👩⚖️ಎಂದರೆ ಜಗತ್ತಿನಲ್ಲಿ ಎತ್ತರದ ,ಜವಾಬ್ದಾರಿ ಯ ಸ್ಥಾನ ,ಮಕ್ಕಳ ಬದುಕು ಕಟ್ಟಿಕೊಳ್ಳಲು ತಾಯಿ ಪಾತ್ರ ಬಹಳ ಮುಖ್ಯ ಎಂದು ಅರಿವಿಗೆ ಬಂತು ..ಆ ಅರಿವು ಅಮ್ಮ ನಮಗೆ ಹೇಳುತ್ತಿದ್ದ ಹಿತ ನುಡಿಗಳನ್ನು ನೆನಪಿಸಿನನ್ನ ಮತ್ತು ಮಕ್ಕಳ ನಡುವೆ 👨👩👧👧ಬಾಂಧವ್ಯ ಹೆಚ್ಚಿಸಿತು.ಹತ್ತನೆಯದಾಗಿ ಕೇವಲ ಸ್ತ್ರೀ ಶಕ್ತಿ ಎಂದರೆ ಆಗುವುದಿಲ್ಲ ಅಮ್ಮನಷ್ಟೇ ಅಪ್ಪನು ಬೇಕು ಅಪ್ಪ ಆಲದ ಮರದ ಹಾಗೆ ನೆರಳು ನೀಡುವ ಮೂಲಕ ತಾಯಿಗೂ ಮಕ್ಕಳಿಗೂ ನೆರಳಾಗಿ ,ಬೆಳಕಾಗಿ ಬದುಕಾಗಿ ❤️❤️,ಭಾವ ತುಂಬುವ ಅಪ್ಪನಾಗಿಮಕ್ಕಳ ಏಳಿಗೆಯಲ್ಲಿಯೇ ಸಂತೋಷ ಕಂಡು ತನ್ನ ಮಕ್ಕಳಿಗೆಜನ್ಮ ವಿತ್ತ ಹೆಂಡತಿಗೆ ಕೃತಜ್ಞನಾಗಿ ಹೆಂಡತಿಯಲ್ಲಿ🧡 ತಾಯಿ ,ಅಕ್ಕಾ 💛ಗೆಳತಿ ಎಲ್ಲ ಭಾವಗಳನ್ನು ಕಂಡು ನವಿರಾಗಿತ್ತಾನೆ ಎಂದು ಗೊತ್ತಾಗಿದ್ದೆ ನನ್ನವನು ಮಕ್ಕಳ ನ್ನು ಹಚ್ಚಿಕೊಂಡು ಒದ್ದಾಡುವ ರೀತಿನ್ನು ನೋಡಿ.👨👩👧👧ಆಗಲೇ ನಂಗೂ ನನ್ನ ಅಪ್ಪನ👨👧👧 ವಿಸ್ಮಯ ಜಗತ್ತಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದ್ಫು ಅಪ್ಪ ಎಂದರೆ ಆಲದ ಮರ ಎನ್ನುವ ಭಾವ ಗೌರವ ಮುಡಿದ್ದು.ಜಗತ್ತಿಗೆ ಅಪ್ಪ ಅಮ್ಮ ಇಬ್ಬರು ಪಾರ್ವತಿ ಪರಮೇಶ್ವರ👫 ಇದ್ದಂತೆ.ಮಕ್ಕಳು ಹುಟ್ಟಿದ ಮೇಲೆ ಯೇ ನಮಗೆ ಈ ಜಗತ್ತು ಅರ್ಥವಾಗುವುದು.👫ಧನ್ಯವಾದಗಳು.🙏🙏ಎಚ್ ಎಸ್ ಭವಾನಿ ಉಪಾಧ್ಯಬೆಂಗಳೂರು..❤️❤️
ನಾನು ಲೇಖಕಿ.ಬರೆಯುವುದು ನನಗೆ ಅತ್ಯಂತ ಇಷ್ಟ. ಓದು ಬರಹ ನನ್ನ ಬದುಕಿನ ಭಾಗ.6363008419
0 Followers
0 Following