Do you have a passion for writing?Join Ayra as a Writertoday and start earning.

ತಾಯ್ಮಡಿಲಿಗೊಂದು ನಮನ

ProfileImg
12 May '24
2 min read


image

ಇಂದು ವಿಶ್ವ ತಾಯಂದಿರ ದಿನ.
ಸೃಷ್ಟಿಯೊಳಗೆ ಮಾತೃತ್ವ ಎನ್ನುವುದೊಂದು ಅದ್ಭುತ ಸೃಷ್ಠಿ, ಮಾತೇ ಸಕಲ ಜೀವಿಗಳಿಗೂ ಜೀವದಾತೆ ಸಕಲ ಮಕ್ಕಳಿಗೂ ಸುಖದಾತೆ!ಮಾತೃತ್ವ ಎನ್ನುವ ಪದವೇ ನವಿರಾದ ನೆಮ್ಮದಿಯ ಕಡಲು ಇಂಥ ಪವಿತ್ರ ಮಾತೃತ್ವವನ್ನು ಗೌರವಿಸಲು ಮತ್ತು ಅವಳ ಪ್ರೀತಿ ಮತ್ತು ಕಾಳಜಿಯನ್ನು ಸ್ಮರಿಸಲು ಜಗತ್ತಿನ ಎಲ್ಲಾ ತಾಯಂದಿರಿಗೂ ಈ ದಿನವನ್ನು ಮಿಸಲಾಗಿಡಲಾಗಿದೆ. ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಆಚರಿಸಲಾಗುವ ಈ ದಿನವನ್ನು ಕೆಲವು ದೇಶಗಳು ಮಾರ್ಚ್ ನಲ್ಲಿ ಆಚರಿಸಿದರೆ ಭಾರತ ,ಅಮೇರಿಕ ಸೇರಿ ಕೆಲವು ದೇಶಗಳಲ್ಲಿ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುವುದು. 
ಒಂದು ಮಗುವಿಗೆ ಸಂಸ್ಕಾರ ಮೌಲ್ಯಗಳನ್ನು ತುಂಬಿ ಬೆಳೆಸುವ ತಾಯಿ ಉತ್ತಮ ಸಮಾಜಕ್ಕೆ ಭದ್ರ ಭುನಾದಿಯನ್ನು ಹಾಕುವ ಪುಣ್ಯವಂತಳು ಹಾಗಾಗಿ  ಸ್ವಾಸ್ಥ್ಯ ಸಮಾಜದ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ತುಂಬಾ ಮಹತ್ತರವಾದದ್ದು ಪ್ರತೀ ತಾಯಂದಿರ ತ್ಯಾಗ,ಪ್ರೀತಿ ಕಾಳಜಿ, ಮಮತೆ,ವಾತ್ಸಲ್ಯಕ್ಕೆ ಜಗತ್ತಿನಲ್ಲಿ ಯಾವ ದುಭಾರಿ ವಸ್ತುವೂ ಸರಿದೊಗಲಾರದು. ತಾಯಿಯ ಪವಿತ್ರ ನಿಸ್ವಾರ್ಥ ಪ್ರೀತಿಗೆ ಮತ್ತು ಅಮೂಲ್ಯವಾದ ತ್ಯಾಗಕ್ಕೆ ಹಾಗೂ ಯಾವ ಪ್ರತಿಫಲಾಕ್ಷೇ ಇಲ್ಲದೆ ಮಾಡುವ ಅವಳ ಸೇವೆಗೆ ಬೆಲೆ ಕಟ್ಟಲಾಗದು. ತಾಯಿಯ ಈ ಪ್ರೀತಿ, ತ್ಯಾಗ ಹಾಗೂ ಮಕ್ಕಳಿಗಾಗಿ ಅವಳು ಕಳೆದುಕೊಂಡ ಸುಖ ಸಂತೋಷ, ಆರೋಗ್ಯ ಮತ್ತು ಅವಳ ಅಮೂಲ್ಯ ಸಮಯವನ್ನು ಯಾರೂ ಎಂದಿಗೂ ಮರಳಿಸಲು ಸಾಧ್ಯವೇ ಇಲ್ಲ. ಪ್ರತೀ ಮಗುವನ್ನು ಈ ಜಗತ್ತಿಗೆ ತಂದು ಜೀವ ಜೀವನ ಜೊತೆ ಇಷ್ಟೆಲ್ಲಾ ಅಮೂಲ್ಯ ಕೊಡುಗೆಗೆಗಳನ್ನು ಕೊಡುವ ಆ ಮಾತೃ ದೇವತೆಗೆ ಗೌರವ ಹಾಗೂ ಕೃತಜ್ಞತೆ ಸಲ್ಲಿಸುವ ಸಲುವಾಗಿ ಪ್ರತೀ ತಾಯಂದಿರಿಗಾಗಿ ಈ ಸುದಿನವನ್ನು ಸಮರ್ಪಿಸಲಾಗಿದೆ. 1908ರಲ್ಲಿ ಅಮೆರಿಕದಲ್ಲಿ ಈ ಆಚರಣೆಯನ್ನು ಮೊದಲಿಗೆ ಪ್ರಾರಂಭ ಮಾಡಲಾಯಿತು. ಅಮೇರಿಕಾದಲ್ಲಿ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್ ಮದುವೆಯೂ ಆಗದೆ ತಾಯಿಯೊಟ್ಟಿಗೆಯೇ ಇದ್ದರು.1905ರಲ್ಲಿ ಅನಾರ ತಾಯಿ ಮರಣ ಹೊಂದಿದರು. ನಂತರ ತನ್ನ ತಾಯಿಯ ಮೇಲಿನ ಪ್ರೀತಿಯ ಸೂಚಕವಾಗಿ ಅನಾ ತಾಯಂದಿರ ದಿನವನ್ನು ಆಚರಿಸಲು ಶುರುಮಾಡಿದರು ಕ್ರಮೇಣ 1914 ಮೇ 9,ರಂದು ಅಮೇರಿಕದ ಅಂದಿನ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಪ್ರತಿ ವರ್ಷ ಮೇ 2ನೇ ಭಾನುವಾರವನ್ನು "ತಾಯಂದಿರ ದಿನ"ಎಂದು ಆಚರಿಸಲಾಗುತ್ತದೆ ಎಂದು ಅಧಿಕೃತವಾಗಿ ಜಾರಿಗೊಳಿಸಿದರು.ಅದರ ನಂತರ ಅಮೆರಿಕ, ಭಾರತ ಸೇರಿ ಇತರ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತಿದೆ.!

ಗೀತಾಂಜಲಿ ಎನ್ ಎಮ್

Category : Parenting and Family


ProfileImg

Written by Geethanjali NM

Helping hands are better than praying lips..!!