ಗೂಡಿನಲ್ಲಿ ಮರಿಯ ಬಿಟ್ಟು
ಹಾರಲು ಹೊರಟ ಅಮ್ಮನನ್ನು
ಮತ್ತೆ ಕರೆದು ಮತ್ತನಿಟ್ಟು
ಕಂದ ,ಕಳುಸಿಕೊಟ್ಟಿತು...
ಅಮ್ಮ ನೀನು ಬೇಗ ಬಾರೆ
ಕಾಯಲಾರೆ ಜಾಸ್ತಿ ಹೊತ್ತು
ಬಾಡಬಹುದು ನನ್ನ ಮೋರೆ
ಹೇಳಿ ,ಕಂದ ಗೂಡಿನಲ್ಲಿ ಮಲಗಿತು...
ತುತ್ತ ತರುವೆ ನಿನಗೆ ಇಂದು
ಕೂಗಬೇಡ ನೀನು ಇನ್ನು
ಕಾಯುತಿರು ತುತ್ತಿಗೆ ಎಂದು
ಹೇಳಿ ,ತಾಯಿ ಹಕ್ಕಿ ಹಾರಿ ಹೋಯಿತು ...
ಮರಳಿ ಬಂದೆ ಕಂದ ನಾನು
ಏಳು ಬೇಗ ಗೂಡಿನಿಂದ
ನಿನಗೆ ಬೇಕೆ ಹಾಲು ಜೇನು
ಎಂದು ,ಕಂದನಿಗೆ ಸಿಹಿಯ ತುತ್ತು ಕೊಟ್ಟಿತು...
ಶ್ರೀಮತಿ. ಶೋಭಾ.ಶರ್ಮ
0 Followers
0 Following