ಹೋಯ್ ಈಗ ಸೊಳ್ಳೆಗಳು ಕೂಡ ಅಪ್ಡೇಟ್ ಆಗಿದಾವೆ ಮಾರಾಯ್ರೆ!
ನಾನು ಸಣ್ಣದಿರುವಾಗ ಮೈ ತುಂಬಾ ಬಟ್ಟೆ ಹೊದ್ದು ಕೊಂಡ್ರೆ ಸಾಕಿತ್ತು,ಸೊಳ್ಳೆಗಳಿಂದ ಬಚಾವ್ ಆಗಬಹುದಿತ್ತು. ಆದ್ರೆ ಈಗ ಬಟ್ಟೆ ಮೇಲೇನೇ ಚುಚ್ಚುವಷ್ಟು ಮುಂದುವರೆದಿದ್ದಾವೆ. ಮೊದಮೊದಲು ಫ್ಯಾನ್ ಗಾಳಿ ಇದ್ರೆ ಸೊಳ್ಳೆಗಳು ಬರೋದೇ ಇಲ್ಲ ಅಂದುಕೊಳ್ತಾ ಇದ್ವಿ. ಅದು ಅನಿಸಿಕೆ ಮಾತ್ರ. ಯಾವುದಕ್ಕೂ ಹೆದ್ರಲ್ಲ ಈಗಿನ ಸೊಳ್ಳೆಗಳು.ಅದ್ರಲ್ಲೂ ಕಚ್ಚಿದ ಸುಳಿವು ಕೊಡದ ಹಾಗೆ ಕಚ್ಚಿ ತುರಿಕೆ ಉಂಟಾಗೋ ಹಾಗೆ ಮಾಡುತ್ತಾವೆ
ಏನೇ ಇರ್ಲಿ ಸೊಳ್ಳೆ ಬಲೆ ಹಾಕಿ ಕೊಂಡ್ರೆ ಇಂಜೆಕ್ಷನದಿಂದ ಸ್ವಲ್ಪ ತಪ್ಪಿಸಿ ಕೊಳ್ಳಬಹುದು ಅಂತ ಅಂದು ಕೊಂಡ್ರೆ ಅದೂ ಸಾಧ್ಯವಿಲ್ಲ. ಯಾಕಂದ್ರೆ ನಾವು ಯಾವಾಗ ಹೊರಗಡೆ ಬರ್ತೇವೆ ಅಂತ ಸೊಳ್ಳೆಗಳು ಕಾಯ್ತ ಇರುತ್ತಾವೆ. ಬಲೆ ಎತ್ತಿದ ಕುಡ್ಲೆ ಒಳಗೆ ನುಸುಳ್ತಾವೆ.ಎಷ್ಟಾಗುತ್ತೆ ಅಷ್ಟು ರಕ್ತ ಹೀರಿ ಹಾರೋಕಾಗ್ದೆ ಮಲ್ಕೊಂಡು ಬಿಡ್ತಾವೆ.
ಯಾವ ಉಪಾಯನು ನಡಿಯಲ್ಲ ಸೊಳ್ಳೆ ಬತ್ತಿ ಹಾಕಿದ್ರೆ ನಮಗೆ ಉಸಿರಾಡೋಕೆ ಕಷ್ಟ. ಈಗ ಹೊಸದೊಂದು ಅಪ್ಲಿಕೇಶನ್ ಬಂದಿದಂತೆ ಸೊಳ್ಳೆ ಓಡ್ಸೋಕೆ! ಅದನ್ನಾದ್ರೂ ಪ್ರಯೋಗ ಮಾಡೋಣ ಅಂತ ಡೌನ್ಲೋಡ್ ಮಾಡಿದೆ.ಆ ಶಬ್ದ ಕೇಳಿ ನನಗಂತೂ ನಿದ್ದೆ ಬಂದಿಲ್ಲ. ಸೊಳ್ಳೆಗಳು ಮಾತ್ರ ಆರಾಮಾಗಿ ಹಾರಾಡ್ತಾ ಸಂಗೀತ ಆಸ್ವಾದಿಸೋ ಥರ ಇತ್ತು.
ಸೊಳ್ಳೆಗಳು, ಕೆಲವೊಂದು ಕೀಟಗಳನ್ನು ನೋಡಿದ್ರೆ ಮನುಷ್ಯನ ಶಕ್ತಿ ಏನು ಅಲ್ಲ ಅನಿಸುತ್ತೆ. ಇರುವೆಗಳನ್ನು ನೋಡ್ಬೇಕು, ಆ ಸಿಮೆಂಟ್ ನೆಲವನ್ನು ಕೊರೆದು ಮನೆಯೊಳಗೆ ಬರ್ತಾವೆ.
ಮೊದಲ ಮಳೆಗೆ ಭೂಮಿಯ ಆಡಿಯಿಂದ ಬರೋ ರೆಕ್ಕೆಯ ಗೆದ್ದಲಿನ ಶಕ್ತಿನ ಅಂತೂ ಮೆಚ್ಚಿ ಕೊಳ್ಳಲೇ ಬೇಕು.
ಏನೇ ಆದ್ರೂ ನಾವು ಆಪ್ ಮೂಲಕ ಅಪ್ಡೇಟ್ ಆಗೋ ಸಮಯದಲ್ಲಿ ಕೀಟಗಳಂತು ತುಂಬಾ ಅಪ್ಡೇಟ್ ಆಗಿದಾವೆ.
ಹವ್ಯಾಸಿ ಬರಹಗಾರ್ತಿ
0 Followers
0 Following