ಸ್ವಗತ

ProfileImg
28 Apr '24
1 min read


image

ನಿನ್ನ
ಧ್ಯಾನದ
ಒಂದೇ
ಹಣತೆ
ಸದಾ
ಉರಿಯುತ್ತದೆ..
ನಿನ್ನ 
ಹೆಸರಿನ
ನನ್ನ
ಲೋಕದೊಳಗೆ..
ಒಮ್ಮೆ
ನಿಟ್ಟುಸಿರು
ಹಣತೆಯ
ಅರ್ಥಕ್ಕೇ
ಗಾಳಿಯಾಗುತ್ತದೆ..
ಇನ್ನೊಮ್ಮೆ
ಮೌನದ
ಬೆಳಕಾಗಿ
ಅತ್ತ
ನಗುವೂ
ಇರದ
ಇತ್ತ
ವಿಷಾದವೂ
ಅನಿಸದ
ನಿಶ್ಚಲತೆ
ಮಂದವಾಗಿ
ಹರಡುತ್ತದೆ..
ನಿನ್ನ 
ಧ್ಯಾನದ
ಹಣತೆಗೆ
ನನ್ನ
ನಿರೀಕ್ಷೆಗಳ
ಅಂಗೈ
ಸದಾ 
ಕಾವಲಾಗುತ್ತದೆ..
ಕಾಲನ
ಬಿರುಗಾಳಿಗೆ
ಮರೆವ
ಕತ್ತಲಾದರೆ
ನನ್ನ
ಕಣ್ಣು
ಕುರುಡಾಗಿ
ಪದಗಳು
ಅನಾಥವಾಗಬಾರದಲ್ಲ???

Category:Poetry



ProfileImg

Written by Srimathi Kulkarni

0 Followers

0 Following