ಮೊಬೈಲ್- ಮಾಯೆ

ದೇಶದಲ್ಲಿ ಶೇಕಡಾ 95% ಫೋನ್ ಬಳಸುವವರ ಸಂಖ್ಯೆ ಅಧಿಕವಾಗಿದೆ.ಮೊಬೈಲ್ ಪೋನ್ ಗಳು ಎಷ್ಟು ಪೂರಕವೋ ಅಷ್ಟೇ ಮಾರಕವಾಗಿದೆ.

ProfileImg
18 May '24
1 min read


image
 

*ಮೊಬೈಲ್_ ಮಾಯೆ*

ಅಬ್ಬಬ್ಬಾ ಈ ಮೊಬೈಲ್ ಎಂಬ ಮಾಯಾವಿ ಮಗುವಿನಿಂದ ಹಿಡಿದು ವೃದ್ಧರವರೆಗೂ ಆಕರ್ಷಿಸುತ್ತಿದೆ. ಎಲ್ಲಾರ ಕೈಯಲ್ಲಿ ಕಿವಿಯಲ್ಲಿ ಫೋನ್ ಗಳದ್ದೆ ಹಾವಳಿ .ಪ್ರತಿಯೊಬ್ಬ ಮನೆಯಲ್ಲೂ ಪ್ರತಿಯೊಬ್ಬ ಸದಸ್ಯರೂ ಬಳಕೆ ಮಾಡುತ್ತಾರೆ. ಕೆಲವರು ಊಟ ಇಲ್ಲದಿದ್ದರೂ ಪರವಾಗಿಲ್ಲ ಮೊಬೈಲ್  ಬೇಕು ಎನ್ನುವ ಮನಸ್ಥಿತಿಗೆ ಬಂದಿರುತ್ತಾರೆ.
* ಮೊಬೈಲ್ ನೋಡದೆ ಊಟ ತಿನ್ನದ ಮಗು ಹೊರಗಡೆ ಆಡದೆ ಮೊಬೈಲ್ ಆನ್ಲೈನ್ನಲ್ಲಿ ಆಡುವ ಮಕ್ಕಳು ,ಓದುವ ಕಡೆ ಗಮನ ಹರಿಸದೇ ಫೋನ್ನಲ್ಲೇ ಮುಳುಗಿರುವ ವಿದ್ಯಾರ್ಥಿಗಳು, ದಿನವಿಡೀ ಕೆಲಸವಿಲ್ಲದೆ reels ನಲ್ಲೇ  ಕಾಲ ಕಳೆಯುವ  ಜನತೆಗಳು.
*  ಮೊಬೈಲ್ ಫೋನುಗಳು ಸ್ನೇಹಿತರು ಹಾಗೂ ಕುಟುಂಬದೊಂದಿಗೆ ವೇಗವಾಗಿ ಸುಲಭವಾಗಿ ಸಂವಹನಗೊಳಿಸುತ್ತದೆ.
*  ಶಿಕ್ಷಣ ಆರೋಗ್ಯ ವ್ಯಾಪಾರ ಮನರಂಜನೆ ಬ್ಯಾಂಕಿಂಗ್ ಎಲ್ಲ ಕ್ಷೇತ್ರಗಳಲ್ಲೂ ಮಧ್ಯವರ್ತಿಯಾಗಿ ಮುಖ್ಯಪಾತ್ರವಹಿಸಿ ಕಾರ್ಯನಿರ್ವಹಿಸುತ್ತದೆ.
*  ಹಾಗೆ ನಾವು ಎಲ್ಲೇ ಎಷ್ಟೇ ದೂರವಿದ್ದರೂ ತಕ್ಷಣ ಕೂತಲ್ಲಿಯೇ ಜನರ ಜೊತೆ ಸಂಪರ್ಕಗೊಳಿಸುತ್ತದೆ, ಅವಶ್ಯಕತೆ ಇದ್ದಾಗ ತಕ್ಷಣ ಹಣ ವರ್ಗಾವಣೆಗೆ ಸಹಾಯವಾಗುತ್ತದೆ,root maping ತೋರಿಸುವುದರಲ್ಲೂ ಮಾರ್ಗದರ್ಶಕರಾಗುತ್ತದೆ.
*  ದೃಷ್ಟಿ ದೋಷ ಶ್ರವಣದೋಷ ಮಾನಸಿಕ ಆರೋಗ್ಯಕ್ಕೆ ಗಂಭೀರ ಪರಿಣಾಮ ಬೀರುತ್ತದೆ.
*  ಮೊಬೈಲ್ ಫೋನ್ ನೀಲಿ ಕಿರಣಗಳಿಂದ ಕಣ್ಣಿಗೆ ತುಂಬಾ ತೊಂದರೆಯಾಗುತ್ತದೆ ಇದರಿಂದ ಸ್ಲೀಪಿಂಗ್ ಡಿಸಾರ್ಡರ್  ಪ್ರಾರಂಭವಾಗುತ್ತದೆ. 
*ರಸ್ತೆಗಳಲ್ಲಿ ಸಂಚರಿಸುವಾಗ ಮೊಬೈಲ್ ನಲ್ಲಿ ನಿರತವಾದಾಗ ಹೆಚ್ಚಾ ಿ ಅಪಘಾತಗಳು ಸಂಭವಿಸುತ್ತವೆ.
ಮೊಬೈಲೆನಿಂದ  ಎಷ್ಟುಅನುಕೂಲವು ಇದೆಯೋ ಹಾಗೇ ಅನಾನುಕೂಲವು ಅಷ್ಟೇ ಇವೆ.
*  ಆದರೆ ನಾವು ಜವಾಬ್ದಾರಿತವಾಗಿ ಹೇಗೆ ಎಷ್ಟು ಸಮಯದವರೆಗೂ ಬಳಸಬೇಕು ಎಂಬುದು ನಮ್ಮ ಮೇಲೆ ನಿರ್ಧರಿತವಾಗುತ್ತದೆ…..
*-✍️ಕವಿತ ಏ.ಆರ್.ಸುರಹೊನ್ನೆ.
[email protected]

Category:Technology



ProfileImg

Written by Kavitha A.R Surahonne

Writer..✍️

0 Followers

0 Following