ನಿನೊಂತರ ಜಾದು ಕಣೆ,
ಯಾಕೋ ಗೊತ್ತಿಲ್ಲ....
ಒಮ್ಮೊಮ್ಮೆ ಕನಸಲ್ಲಿ ಬರ್ತಿಯಾ
ಒಮ್ಮೆಮ್ಮೆ ಎದುರಿಗೆ ಬರ್ತಿಯಾ
ಒಮ್ಮೊಮ್ಮೆ ಅಳ್ಸ್ತಿಯಾ
ಒಮ್ಮೊಮ್ಮೆ ನಗ್ಸ್ತಿಯಾ.
ನಿನೊಂತರ ಜಾದು ಕಣೆ,
ಯಾಕೋ ಗೊತ್ತಿಲ್ಲ...
ಒಮ್ಮೊಮ್ಮೆ ನಿನ್ನ ಹೆಸರು ಕಿವಿಗೆ ಕೇಳ್ಸುತ್ತೆ,
ಒಮ್ಮೊಮ್ಮೆ ನಿನ್ನ ಹೆಸರು ಗೊತ್ತಿಲ್ದೆ ಬಾಯಲ್ಲಿ ಬರುತ್ತೆ,
ಒಮ್ಮೊಮ್ಮೆ ಕಥೆಯಾಗ್ತಿಯಾ,
ಒಮ್ಮೊಮ್ಮೆ ಕವಿತೆಯಾಗ್ತಿಯಾ.
ಆದರೂ ನಿನೊಂತರ ಜಾದು ಕಣೆ,
ಯಾಕೊ ಗೊತ್ತಿಲ್ಲ....
ಒಮ್ಮೊಮ್ಮೆ ನೆನಪಾದ್ರೆ ಇಷ್ಟಾ ಆಗ್ತಿಯಾ
ಒಮ್ಮೊಮ್ಮೆ ಕಷ್ಟ ಆದ್ರೆ ಕಣ್ಣಿರ ಒರೆಸ್ತಿಯಾ.,
ಆದ್ರೂ ನಿನೊಂತರ ಜಾದು ಕಣೆ.
ಒಮ್ಮೊಮ್ಮೆ ಕಾಯಿಸ್ತಿಯಾ
ಒಮ್ಮೊಮ್ಮೆ ಕಾಯ್ತಿಯಾ,
ಒಮ್ಮೊಮ್ಮೆ ದೇವರ ಹತ್ತಿರ ಏನೆನೋ ಬೇಡ್ಕೊತಿಯಾ,
ಒಮ್ಮೊಮ್ಮೆ ಅದೇ ದೇವರನ್ನ ಬೈತಿರ್ತಿಯಾ,
ಯಾಕೊ ಗೊತ್ತಿಲ್ಲ ,,,
ಆದ್ರೂ ನಿನೊಂತರ ಜಾದು ಕಣೆ.
ನಿಶ್ಯಬ್ದ ಮನಸು.
ಪರಶುರಾಮ ಹೊಸಮನಿ
(೦೨)
…..ಹುಡುಗಿ…..
ನಕ್ಕಾರೆ ನಕ್ಕುಬಿಡು ಹುಡುಗಿ
ಚೊರ್ರೆಂದು ಉರಿವ ಬಿಸಿಲಿನೊಡೆಯ ನಾಚಿ ನೀರಾಗುವಂತೆ.
ಮರುಭೂಮಿಯ ಬರಗಾಲದಲಿ ಸುರಿವ ಮಳೆಯಂತೆ.
ನಕ್ಕಾರೆ ನಕ್ಕುಬಿಡು ಹುಡುಗಿ
ಜುಳು ಜುಳು ಹರಿಯುವ ನದಿಯು ಬೆಕ್ಕಸ ಬೆರಗಾಗಿ ನಿನ್ನನ್ನೆ ನೋಡುವಂತೆ,
ಕಲ್ಲು ಕಲ್ಲಿನಲಿ ನಿನ್ನದೆ ನಗುವಿನ ಕಲರವ
ಸಂಗೀತದ ಸ್ವರವಾಗುವಂತೆ.
ನಕ್ಕಾರೆ ನಕ್ಕುಬಿಡು ಹುಡುಗಿ
ಹುಣ್ಣಿಮೆಯ ಚಂದಿರ
ಅಮವಾಸ್ಯೆಯಲ್ಲೂ ತುಸು ನಗುವಿಗೆ ಜೊಲ್ಲು ಸುರಿಸುವಂತೆ,
ಕುವೆಂಪು,ಬೇಂದ್ರೆಯು ನಿನ್ನ ನಗುವಿಗೆ ಸೋತು
ಬರೆದ ಕವಿತೆಗಳೆಲ್ಲ ಅಳಿಸಿ ಮತ್ತೆ ಬರೆಯುವಂತೆ.
ನಕ್ಕಾರೆ ನಕ್ಕುಬಿಡು ಹುಡುಗಿ
ಮತ್ತೆ ಮತ್ತೆ ಮಂಡಿಯೂರಿ,ನಾಚಿ
ಒಲವಿನುಡುಗೊರೆ ತಂದು ಪ್ರೀತಿಸೆನ್ನುವಂತೆ.
ಕಾಡಿ,ಬೇಡಿ ಅಮ್ಮನೊಂದಿಗೆ ಹಣವ ಬೇಡಿದಂತೆ ಬೆಡುವೆ ಹುಡುಗಿ
ನನಗಾಗಿ ಬಂದುಬಿಡು ಹುಡುಗಿ
ಬಂದುಬಿಡು.
ನಿಶ್ಯಬ್ದ ಮನಸು
ಪರಶುರಾಮ ಹೊಸಮನಿ
ಸಾ:ಕಲ್ಲಗೊನಾಳ
ತಾ;ಕುಷ್ಟಗಿ ಜಿ;ಕೊಪ್ಪಳ
೫೮೩೨೮೧.
0 Followers
0 Following