ಮಾಧ್ಯಮಗಳು ಜ್ಞಾನದ ರೂವಾರಿಗಳು

ProfileImg
16 Nov '24
2 min read


image

ಇಂದು ರಾಷ್ಟ್ರೀಯ ಪತ್ರಿಕಾ ದಿನ.ಸ್ವತಂತ್ರ ಮತ್ತು ಮುಕ್ತವಾದ ಪತ್ರಿಕಾ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು, ಪ್ರತಿ ವರ್ಷ ನವೆಂಬರ್ 16 ರಂದು ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ,ಇದರ ಮುಖ್ಯ ಉದ್ದೇಶ ಪತ್ರಿಕಾ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸುವುದು.ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಅತೀ ಮುಖ್ಯವಾಗಿದೆ ಇದು ಸರ್ಕಾರ ಮತ್ತು ಜನಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ ದೇಶದ ಆಡಳಿತದ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಹಾಗಾಗಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವಲ್ಲಿ ಪತ್ರಿಕಾ ಮಾಧ್ಯಮವು ವಹಿಸುವ ಪಾತ್ರದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಲ್ಲಿ ಈ ಪತ್ರಿಕಾ ದಿನಾಚರಣೆ ಬಹ ಪ್ರಾಮುಖ್ಯತೆ ಪಡೆದುಕೊಂಡಿದೆ ! ಪ್ರಜಾಪ್ರಭುತ್ವವವು ಶಾಸಕಾಂಗ ಕಾರ್ಯಾಂಗ,ನ್ಯಾಯಾಂಗ ಹಾಗೂ ನಾಲ್ಕನೆಯ ಪ್ರಮುಖ ಆಧಾರ ಸ್ತಂಭವಾದ ಮಾಧ್ಯಮಗಳ ಆಧಾರದ ಮೇಲೆ ನಿಂತಿದೆ ! ಮಾಧ್ಯಮಗಳು ನಾಲ್ಕು ಆಧಾರ ಸ್ತಂಭಗಳಲ್ಲಿ ಒಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತತ್ವಗಳನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಆಧಾರ ಸ್ತಂಭವು ಅದರ ವ್ಯಾಪ್ತಿಯೊಳಗೆ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ ಪ್ರಜಾಪ್ರಭುತ್ವವೆಂದರೆ ಜನರಿಂದ ಜನರಿಗಾಗಿ, ಜನರಿಗೋಸ್ಕರ ಇರುವ ಸರ್ಕಾರ .ಹಾಗಾಗಿ ಪ್ರಜೆಗಳಿಗೆ ನಿಷ್ಪಕ್ಷಪಾತವಾದ, ಸತ್ಯವಾದ ವಿಷಯಗಳನ್ನು ತಿಳಿಸುವಲ್ಲಿ ಪತ್ರಿಕೆಗಳ ಪಾತ್ರ ಬಹಳ ಜವಾಬ್ದಾರಿಯುತ ಹಾಗೂ
ಮಹತ್ವದ್ದಾಗಿರುತ್ತದೆ. ಪತ್ರಿಕೆಗಳು ತಮ್ಮದೇ ವ್ಯಾಪ್ತಿಯಲ್ಲಿ ಹತ್ತು ಹಲವು ಸ್ವರೂಪಗಳಲ್ಲಿ ಜನರಿಗೆ ಮಾಹಿತಿಯನ್ನು ನೀಡುವ ಮೂಲಕ ಸರ್ಕಾರ ಮತ್ತು ಜನರ ನಡುವೆ ಸಂಪರ್ಕದ ಸೇತುವೆಯಾಗಿ ಬಹಳ ಅತ್ಯುತ್ತಮವಾದ ಕಾರ್ಯವನ್ನು ನಿರ್ವಹಿಸುತ್ತ ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಮಹತ್ವ ಮತ್ತು ಅನಿವಾರ್ಯತೆಯನ್ನು ತಿಳಿಸುತ್ತವೆ,ಪತ್ರಿಕಾ ಮಾಧ್ಯಮವು ನಮಗೆ ಕೇವಲ ದೇಶದೊಳಗಿನ ಮಾಹಿತಿಯನ್ನಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದರ ಪ್ರತಿ ಕ್ಷಣ ಕ್ಷಣದ ಸುದ್ದಿಗಳನ್ನು ನೀಡುವುದರಿಂದ ಪ್ರತಿದಿನ ಪತ್ರಿಕೆಗಳನ್ನು ಓದುವ ಮೂಲಕ  ಟಿ.ವಿ, ಸ್ಮಾರ್ಟ್ಫೋನ್ಗಳಲ್ಲಿ ಸುದ್ದಿಗಳನ್ನು ಕೇಳುವ ನೋಡುವ ಮೂಲಕ ರಾಜಕೀಯ, ತಂತ್ರಜ್ಞಾನ,ಕ್ರೀಡೆ,ವಿಜ್ಞಾನ, ಮನೋರಂಜನೆ ಸೇರಿ ಸಮಾಜದ ಪ್ರತಿಯೊಂದು ಕ್ಷೇತ್ರದ ವಿಷಯಗಳನ್ನು ತಿಳಿದು ಕೊಳ್ಳುಲು ಸೇತುವೆಯಾಗಿವೆ ಹೀಗೆ ಪ್ರತಿಯೊಂದು ಸುದ್ದಿಗಳನ್ನು ಕುಳಿತಲ್ಲೇ ನಮಗೆ ತಿಳಿಸಿ ಕೊಡುವುದರಿಂದ ಪತ್ರಿಕಾ ಮಾಧ್ಯಮವು ಜನರ ಜ್ಞಾನದ ರೂವಾರಿಯಾಗಿವೆ. ಎಂದರು ತಪ್ಪಿಲ್ಲ,ಇಷ್ಟಲ್ಲದೆ ಮುಖ್ಯವಾಗಿ ಪತ್ರಿಕೋದ್ಯಮವು ಜನರ ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ಕಾರ್ಯ ನಿವರ್ಹಿಸುವುದರಿಂದ,ಜನರಿಗೆ ಎದುರಾಗುವ ಯಾವುದೇ ಕಷ್ಟ, ಅನ್ಯಾಯಗಳನ್ನು ಬೆಳಕಿಗೆ ತರುವುದು ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆ ಸಮಾಜದ ವ್ಯವಸ್ಥೆಯ ದುಸ್ಥಿತಿಯನ್ನು ಎತ್ತಿ ತೋರಿಸುತ್ತಾ ಸರ್ಕಾರದ ಲೋಪ ದೋಷಗಳನ್ನು ನೇರವಾಗಿ ತಿಳಿಸುತ್ತಾ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕೆಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ,!ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವಲ್ಲಿ ಪತ್ರಿಕಾ ಮಾಧ್ಯಮವು ಜನರಿಗೆ ಅರಿವುವನ್ನು ಮೂಡಿಸುವುದರ ಜೊತೆಗೆ ಇದು ವಾಕ್ ಸ್ವಾತಂತ್ರ್ಯ ಮತ್ತು ನಾಗರಿಕರ ಸ್ವಾತಂತ್ರ್ಯವನ್ನು ಎತ್ತಿಹಿಡಿ ಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ,! ಇನ್ನು ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರ ಪಾತ್ರವನ್ನು ನೋಡುವುದಾದರೆ ಸಮಾಜದ ಎಲ್ಲಾ ಕ್ಷೆತ್ರದ ವರದಿಗಳನ್ನು ಸರ್ಕಾರದ ಕಾರ್ಯಸೂಚಿಗಳನ್ನು ಜನರಿಗೆ ತಿಳಿಸುವುದು ಹಾಗೂ ಯಾವುದೇ ಬೆದರಿಕೆ,ಮೋಸ ಅನ್ಯಾಯಗಳನ್ನು ನಿರ್ಭಯವಾಗಿ ಪ್ರಕಟಿಸುವುದು ಮತ್ತು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನಿರ್ಧಾರಗಳನ್ನು ವರದಿ ಮಾಡುವುದು ಹಾಗೂ ಸಾರ್ವಜನಿಕ ಅಭಿಪ್ರಾಯದ ಮೇಲೆ ಬೆಳಕು ಚೆಲ್ಲುವಂತಹ ಬಹು ಮುಖ್ಯ ಕೆಲಸವನ್ನು ಬಹಳ ಸಮರ್ಥವಾಗಿ ನಿರ್ವಹಿಸುವುದರ ಜೊತೆಗೆ ಸರ್ಕಾರದ ಅಡಳಿತದ ವ್ಯೆಖರಿ ಹಾಗೂ ಒಳ್ಳೆಯದು ಕೆಟ್ಟದೂ ,ದೇಶ ವಿದೇಶಗಳ ಸುದ್ದಿಯೊಡಗೂಡಿ ಯಾವುದೇ ವಿಷಯವಿರಲಿ ಅದನ್ನು ಜನರಿಗೆ ತಲುಪಿಸುವ ಬಹುಮುಖ್ಯ ಕೆಲಸವನ್ನು ಮಾಧ್ಯಮಗಳ ಜೀವಾಳವಾಗಿರುವ ಪತ್ರಕರ್ತರು ಉತ್ತಮ ಸಮಾಜಕ್ಕೆ ಕನ್ನಡಿಯಾಗಿ ಕಾರ್ಯನಿರ್ವಹಿಸುತ್ತಾರೆ, ಅವರ ವರದಿಗಳು ಮತ್ತು ಹೇಳಿಕೆಗಳು ಸಮಾಜದ ಎಲ್ಲಾ ಕ್ಷೇತ್ರದ ವಿವಿಧ ಕಾರ್ಯ ಚಟುವಟಿಕೆಗಳು ಜನಾಭಿಪ್ರಾಯವನ್ನೂಳಗೊಂಡ ಅಂಶಗಳನ್ನು ಸೇರಿ ಹಲವು ವಿಚಾರಧಾರೆಗಳನ್ನು ಸತ್ಯದೊಂದಿಗೆ ಪ್ರತಿಬಿಂಬಿಸುತ್ತವೆ. ಪತ್ರಿಕೋದ್ಯಮವು ಸರ್ಕಾರಕ್ಕೂ ಸಲಹೆ ಸೂಚನೆಗಳನ್ನು ಕೊಡುವುದರೊಟ್ಟಿಗೆ ಸರ್ಕಾರ ಮತ್ತು ಜನರ ಕಾವಲುಗಾರನಾಗಿಯೂ ಕೆಲಸ ನಿರ್ವಹಿಸುತ್ತವೆ,ಅದಕ್ಕೇ ಇರಬೇಕು ಹಿರಿಯರು ಖಡ್ಗಕ್ಕಿಂತ ಲೇಖನಿ ಹರಿತವೆಂದು ಹೇಳಿರುವುದು.ಮುಕ್ತ,ನಿರ್ಭೀತ, ನ್ಯಾಯ,ನಿಷ್ಠ ಜವಾಬ್ದಾರಿಯುತ ಹಾಗೂ ಮೌಲ್ಯಯುತ ವಾದ ಕಾರ್ಯನಿರ್ವಹಿಸುತ್ತ ಮಾಧ್ಯಮಗಳು ಉತ್ತಮ  ಸಮಾಜಕ್ಕೆ ದಾರಿ ದೀಪವಾಗಲಿ ಎಂದು ಆಶಿಸುತ್ತ ಎಲ್ಲಾ ಪರ್ತಕರ್ತರಿಗೂ ರಾಷ್ಟ್ರೀಯ ಪತ್ರಿಕಾ ದಿನದ ಹಾರ್ಧಿಕ ಶುಭಾಶಯಗಳು.
ಗೀತಾಂಜಲಿ ಎನ್ , ಎಮ್




ProfileImg

Written by Geethanjali NM

Author ✍️

0 Followers

0 Following