Do you have a passion for writing?Join Ayra as a Writertoday and start earning.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೊಂದಿರುವ ಆಸ್ತಿ!

ನಿಮಿಷಕ್ಕೆ ಕೆಲ ಲಕ್ಷ ರೂಪಾಯಿ ದುಡಿಯುವ ಲಿಟಲ್ ಮಾಸ್ಟರ್ !

ProfileImg
05 Jun '24
2 min read


image

ಕ್ರಿಕೆಟ್ ನಿಂದ ನಿವೃತ್ತಿ ಹೊಂದಿ 10 ವರ್ಷ ಆದರೂ  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಆದಾಯ ಹೆಚ್ಚುತ್ತಲೇ ಇದೆ. ಸಚಿನ್ ತೆಂಡೂಲ್ಕರ್ ಈಗಲೂ ನಿಮಿಷಕ್ಕೆ ಕೆಲವು ಲಕ್ಷ ರೂಪಾಯಿಗಳನ್ನು  ದುಡಿಯುತ್ತಿದ್ದಾರೆ!

ತೆಂಡೂಲ್ಕರ್ ಅವರ ನಿವ್ವಳ ಆಸ್ತಿ ಮೌಲ್ಯ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗಿಂತ ಹೆಚ್ಚಿದೆ. ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಒಟ್ಟು ಆಸ್ತಿ ಮೌಲ್ಯ 1,350 ಕೋಟಿ ರೂಪಾಯಿ ಆಗಿದೆ. ತೆಂಡೂಲ್ಕರ್ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು ಆಗಿದ್ದಾರೆ.

ಆದಾಯದ ಮೂಲ:

ತೆಂಡೂಲ್ಕರ್ ಅವರು ಅಡಿಡಾಸ್, ಬಿಎಂಡಬ್ಲ್ಯು ಇಂಡಿಯಾ, ಕೋಕಾಕೋಲಾ, ಜಿಲೆಟ್, ತೋಷಿಬಾ ಮೊದಲಾದ ಕಂಪೆನಿಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ವಾರ್ಷಿಕವಾಗಿ ಅವರಿಗೆ 20 ರಿಂದ 22 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇದಲ್ಲದೆ ತೆಂಡೂಲ್ಕರ್ ಅವರು ಟೆಕ್ಸ್ ಟೈಲ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಟ್ರೂ ಬ್ಲೂ ಬ್ರಾಂಡ್ ನ ಬಟ್ಟೆಯ ವ್ಯಾಪಾರವನ್ನು ಮಾಡುತ್ತಿದ್ದಾರೆ. ಇದು ಅವರಿಗೆ ಸಾಕಷ್ಟು ಆದಾಯವನ್ನು ತಂದು ಕೊಡುತ್ತಿದೆ.

ಸಚಿನ್ ತೆಂಡೂಲ್ಕರ್ ತಮ್ಮದೇ ಆದ ಪ್ಯಾಶನ್ ಬ್ರಾಂಡ್ wrogn ಹೊಂದಿದ್ದಾರೆ. ಇವರು ಹಲವು ಬ್ರಾಂಡ್ ಗಳ ಜೊತೆಗೆ ಜಾಹೀರಾತು ಒಪ್ಪಂದ ಮಾಡಿಕೊಂಡಿದ್ದಾರೆ. 
ತೆಂಡೂಲ್ಕರ್ ಸೋಶಿಯಲ್ ಮೀಡಿಯಾದ ಮೂಲಕ ಕೂಡಾ ಹಣ ಗಳಿಸುತ್ತಾರೆ.

ಹೋಟೆಲ್ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಸಚಿನ್ ತೆಂಡೂಲ್ಕರ್ ಅವರು ಬೆಂಗಳೂರು ಹಾಗೂ ಮುಂಬೈಯಲ್ಲಿ ರೆಸ್ಟೋರೆಂಟ್ ಹೊಂದಿದ್ದಾರೆ. ಇದು ಅವರಿಗೆ ಸಾಕಷ್ಟು ಆದಾಯವನ್ನು ತರುತ್ತಿದೆ.

ಇನ್ನು ಹೂಡಿಕೆ ವಿಷಯಕ್ಕೆ ಬರುವುದಾದರೆ ತೆಂಡೂಲ್ಕರ್ ಅವರು ಸ್ಮಾರ್ಟ್ರಾನ್ ಇಂಡಿಯಾ, ಸ್ಪಿನ್ನಿ, ಎಸ್ ಡ್ರೈವ್, ಜೆಟ್ಸಿಂಥೆಸಿಸ್‌ ಮತ್ತು ಸ್ಯಾಚ್‌ ಕಂಪನಿಗಳಲ್ಲಿ ಹೂಡಿಕೆಯನ್ನು ಮಾಡಿದ್ದಾರೆ.

ರಿಯಲ್ ಎಸ್ಟೇಟ್ ಹೂಡಿಕೆ:

ತೆಂಡೂಲ್ಕರ್  ರಿಯಲ್ ಎಸ್ಟೇಟ್ ನಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ.  ಅವರು ಮುಂಬೈಯ ಬಾಂದ್ರಾದಲ್ಲಿ ಹೊಂದಿರುವ ಐಷಾರಾಮಿ ಬಂಗಲೆಯ ಬೆಲೆ 100 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಇದನ್ನು ತೆಂಡೂಲ್ಕರ್ ಅವರು 2009ರಲ್ಲಿ 39 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದ್ದರು. ತೆಂಡೂಲ್ಕರ್ ಅವರು ಲಂಡನ್ ನಲ್ಲಿ ಸಹ ಐಷಾರಾಮಿ ಮನೆಯನ್ನು ಹೊಂದಿದ್ದಾರೆ.

ತೆಂಡೂಲ್ಕರ್ ಅವರಿಗೆ ದುಬಾರಿ ಬೆಲೆಯ ಕಾರುಗಳು ಎಂದರೆ ಬಹಳ ಇಷ್ಟ. ಅವರು 20 ಕೋಟಿ ರೂಪಾಯಿಗೂ ಹೆಚ್ಚಿನ ಬೆಲೆ ಬಾಳುವ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಪ್ರತಿ ನಿಮಿಷಕ್ಕೆ ಕೆಲವು ಲಕ್ಷ ರೂಪಾಯಿ ದುಡಿಯುವ ಸಚಿನ್ ತೆಂಡೂಲ್ಕರ್ ಅವರು ತಿಂಗಳಿನ ಲೆಕ್ಕಾಚಾರದಲ್ಲಿ ಕೆಲವು ಕೋಟಿ ರೂಪಾಯಿಗಳ ಆದಾಯವನ್ನು ಗಳಿಸುತ್ತಾರೆ. ನಿವೃತ್ತಿ ಹೊಂದಿ ಹತ್ತು ವರ್ಷ ಕಳೆದರೂ ಭಾರತದ ಯಾವುದೇ ಕ್ರಿಕೆಟಿಗರಿಗೆ ಸಚಿನ್ ತೆಂಡೂಲ್ಕರ್ ಅವರ ನಿವ್ವಳ ಆಸ್ತಿಯನ್ನು ಹಿಂದೆ ಹಾಕಲು ಸಾಧ್ಯವಾಗಿಲ್ಲ ಎನ್ನುವುದು ಅವರ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.

-ಅರುಣ್ ಕಿಲ್ಲೂರು
___

Category:Sports


ProfileImg

Written by Arun Killuru

Author,Journalist,Photographer