ನಿನ್ನ ಕಣ್ಣ ನೋಟದಲ್ಲಿ ಬಗೆ-ಬಗೆಯು ಕಾಣಿಸುತ್ತಿತ್ತು,
ನೂರಾರು ಬಯಕೆಗಳು ತುಂಬಿತ್ತು,
ಕೊನೆಕಾಣದ ಭಾವನೆಗಳು ಅಡಗಿ ಕುಳಿತಿತ್ತು,
ನೋವು-ದು:ಖದಿಂದಕೂಡಿದ ಅಳುವಿತ್ತು,
ಆದರೂ ಖುಷಿಯು ತುಂಬಿದ ಪ್ರೀತಿಯ ಸುಖವ ಕಾಣುತ ನಲಿವಿನಿಂದ ಕುಣಿಯುತ್ತಿತ್ತು…
ಮೇಲ್ನೋಟಕ್ಕೆ ಹೊರಗಿಂದ ಕಣ್ಣಿನ ನೋಟ ಸುಂದರ,
ಕಣ್ಣೊಳಗಿನ ಯಾರೂ ಕಾಣದ ನೋವು ಬಲು ಭೀಕರ,
ಖುಷಿಗೂ ಕಣ್ಣೀರ ಹನಿ ಚಿಮ್ಮಿಸುವೆ,
ದುಃಖಕ್ಕಂತೂ ಕಣ್ಣೀರ ಹೊಳೆಯೇ ಹರಿಸುವೆ,
ಆದರೂ ನೋವ ಮರೆತು ನಲಿವೆ-ನಗುವೆ,
ಆ ಕಣ್ಣ ನೋಟ ಬಲು ಇಷ್ಟವೆ..
ಶಾಂತಾರಾಮ ಹೊಸ್ಕೆರೆ,
ಶಿರಸಿ, ಉತ್ತರ ಕನ್ನಡ…7676106237
ಬರಹಗಾರ...
0 Followers
0 Following