ಮಮತೆಯ ದೀಪ.

ಆರಿ ಹೋದ ದೀಪಕ್ಕೆ ಜೀವಕಳೆ ಬಂದಂತೆ..

ProfileImg
10 Jul '24
2 min read


image

ಕತ್ತಲು ಕವಿಯುವ ಸಮಯ , ಇತ್ತ ಜಾನಕಮ್ಮ ಒಲೆ ಮೇಲೆ ಅನ್ನ ಕುದಿಯಲು ಇಟ್ಟಿದ್ದಾಳೆ. ಒಲೆ ಉರಿತಾ ಇತ್ತು, ಆದರೆ ಜಾನಕಮ್ಮಳ ಲಕ್ಷ್ಯ  ಅಲ್ಲಿ ಇರಲಿಲ್ಲ, ಒಲೆ ಉರಿಯ ಮಂದ ಬೆಳಕಿನಲ್ಲಿ ಅವಳ ಮುಖ ಚಿಂತೆಯಲ್ಲಿ ತೊಡಗಿದಂತೆ ಕಾಣುತಿತ್ತು. 

ಜಾನಕಮ್ಮಳ ಜೀವನ ನಡು ನೀರಲ್ಲಿ ಕೈ ಬಿಟ್ಟಂತೆ ಆಗಿತ್ತು. ಗಂಡ ಮದುವೆ ಆದ ಮೂರೇ ವರ್ಷಕ್ಕೆ ಹೊಗೆ ಬಿಟ್ಟು ಬಿಟ್ಟು ಹೋಗೇ ಬಿಟ್ಟ. ಇತ್ತ ಎರಡು ವರ್ಷದ ಮಗ ವಿನೋದ್,, ಅವನನ್ನು ಸಾಕಿ ದೊಡ್ಡವನಾಗಿ ಮಾಡಿ ಎಂಜಿನಿಯರಿಂಗ್ ಓದಿಸಿದ್ಲು. ಆಮೇಲೆ ಮಗ ಕೂಡ ಬೇರೆ ದೇಶಕ್ಕೆ ಕೆಲಸ ಸಿಕ್ಕಿತು ಅಂತ ಐದು ವರ್ಷದ ಹಿಂದೆ ಹೋದವನು ಪತ್ತೇನೆ ಇಲ್ಲ, ಇನ್ನೂ ಬದುಕಿದ್ದಾನೋ ಇಲ್ಲವೋ ಅನ್ನೋ ಚಿಂತೆ ಜಾನಕಮ್ಮನದ್ದು. 

ಒಲೆಯ ಮೇಲಿನ ಅನ್ನದ ಕುದಿವ ಕಾಳು ಅವಳ ಕೈ ಮೇಲೆ ಬಿದ್ದಾಗಲೇ ಆಕೆ ಭಾವನಾಲೋಕದಿಂದ  ಹೊರಬಂದಿದ್ದು. ರಾತ್ರಿ ಊಟ ಮಾಡಿ ಮಲಗೆದ್ದ ಜಾನಕಮ್ಮಬೆಳಿಗ್ಗೆ ಎದ್ದ ಕೂಡಲೇ ನೋಡಿದ್ದು ದಾನಕಾಯೋ ರಂಗಣ್ಣನ ಮುಖ.. ಆತನ ಮುಖದ ಮೇಲೆ ಏನೋ ಮಂದಹಾಸ ಇತ್ತು.. ಜಾನಕಮ್ಮಳಿಗೆ ಕುತೂಹಲ, ತನ್ನ ಮಗನ ಮುಖ ನೋಡಿರದ ಜಾನಕಮ್ಮಳಿಗೆ ಆ ದಿನ ಒಂದು ಕ್ಷಣ ಸ್ವರ್ಗದ ಬಾಗಿಲು ತೆರೆದಂತೆ ಆಗಿತ್ತು.. ರಂಗ ಜಾನಕಮ್ಮಳಿಗೆ " ಜಾನಮ್ಮ, ಜಾನಮ್ಮ,  ನಿನ್ನ ಮೂಗ ಬಂದವನೇ. ಅಲ್ಲಿ ಬಸ್ ಸ್ಟಾಂಡ್ ಮುಂದೆ ಕಾರಲ್ಲಿ ಬರತಿದ್ಧನ್ನ ನೋಡಿದೆ ", ಅಂದ.. 

ಜಾನಕಮ್ಮ ರಂಗನಿಗೆ, " ಏನಲಾ,, ರಂಗಣ್ಣ ದಿಟ ಹೇಳ್ತೀದ್ಯಾ ಹೇಗೆ? " ಅಂದ್ಲು. ಇಷ್ಟು ಮಾತನಾಡುವ ಹೊತ್ತಿಗೆ ವಿನೋದನ ಕಾರು ಗುಡಿಸಲು ಮುಂದೆ ಬಂದು ನಿಂತಿತ್ತು. ಜಾನಕಮ್ಮಳ ಅರಳಿದ ಮುಖ ಒಮ್ಮೆ ಮಂಕು ಬಡಿದು ಹೋಗಿತ್ತು.. 

ಕಾರಿನಿಂದ ಹೊರಗೆ ಇಳಿದ ಕೆಂಪು ಬಣ್ಣದ,ಎತ್ತರವಾದ ಹುಡುಗಿ ಕೆಳಗೆ ಇಳಿದಳು. ವಿನೋದ್ ಅವಳನ್ನು Dasy ಅಂತ ಕೂಗಿದ, look dasy, she is my mother,ಅಂತ ಅವಳಿಗೆ ಪರಿಚಯ ಮಾಡಿಸಿದ. Dasy ಯು hii ಅಂತ ಜಾನಕಮ್ಮಳನ್ನು ತಬ್ಬಿಕೊಂಡಳು. ಮಂಕು ಬಡಿದಿದ್ದ ಜಾನಕಮ್ಮಳ ಗಮನ ಆಕೆಯನ್ನು ತಬ್ಬಿದ ಆ ಬಿಳಿ ಆಂಗ್ಲ ಹುಡುಗಿಯ ಉಸಿರು ತಾಗಿದಾಗಲೇ ಕಲ್ಪನಾ ಲೋಕದಿಂದ ಹೊರಬಂದಿದ್ದು.

ಜಾನಕಮ್ಮಳ ಖುಷಿಗೆ ಪಾರವೇ ಇಲ್ಲದಂತಿದ್ದಾಗ, ಆಂಗ್ಲ ಹುಡುಗಿಯ ಆಗಮನ ಅವಳನ್ನು ಚಿಂತೆಗೆ ದೋಡಿದ್ದು ಅಕ್ಷರಶ: ನಿಜ. ಚಹಾ ಮಾಡಿ ಕೊಡಲು ಹೋದ ಜಾನಕಮ್ಮಳ  ಕಣ್ಣಲ್ಲಿ ದಳ ದಳನೆ ಕಣ್ಣೀರು ಹರಿದಿದ್ದು ಅವಳಿಗೆ ತಿಳಿಯಲೇ ಇಲ್ಲ, ಕಣ್ಣ ಅಂಚಿನಲ್ಲಿ ಕಣ್ಣೀರನ್ನು ಪಟಪಟನೆ ರೆಪ್ಪೆ ಬಡಿದು ಸಾವರಿಸಿಕೊಂಡಳು. 

ಅಷ್ಟಕ್ಕೂ ಅಳುವಂತದ್ದು ಆಗಿದ್ದಾದರೂ ಏನು?. ಚಹಾ ಕೊಡಲು ಹೋದ ಜಾನಕಮ್ಮಮಗನ ಹಾಗೂ ಆಂಗ್ಲ ಸೊಸೆಯ ಸಂಭಾಷಣೆಯಲ್ಲಿ ಕೇಳಿದ್ದು ಹೀಗೆ, " ನೋಡು Dasy ಅಮ್ಮನನ್ನು ಇಲ್ಲೇ ಯಾವುದಾದರೊಂದು ವೃದ್ಧಾಶ್ರಮಕ್ಕೆಸೇರಿಸೋಣ ಹಾಗೂ ಈ ಪೂರ್ವಾರ್ಜಿತ ಆಸ್ತಿಯನ್ನು ಇಲ್ಲೇ ಯಾರಾದರೂ ಒಳ್ಳೆ ಗಿರಾಕಿ ಸಿಕ್ಕರೆ ಮಾರಿ ಬಿಡೋಣ " , ಎಂಬ ಮಾತುಗಳನ್ನು ಕೇಳಿದ್ದಳು. 

ಮೊದಲೇ ಗಾಯಗೊಂಡಿದ್ದ ಜಾನಕಮ್ಮಳ ಮನಸ್ಸಿನ ಮೇಲೆ ಈ ಹರಿತವಾದ ಮಾತುಗಳು ಮತ್ತಷ್ಟು ಬರೇ ಎಳೆದಂತೆ ಇದ್ದವು. ಆದರೆ ವಿಧಿಯ ಆಟ ಜಾನಕಮ್ಮಳ ಬದುಕಿನಲಿ ಸಂಚಲನವನ್ನೇ ಹುಟ್ಟುಹಾಕಿತ್ತು. ಚಿಕ್ಕ ವಯಸ್ಸಿನಲ್ಲಿ Dasy ತನ್ನ ತಾಯಿಯನ್ನು ಕಳೆದುಕೊಂಡಿದ್ದರಿಂದ ತಾಯಿ ಪ್ರೀತಿಯನ್ನು ಕಾಣಲು ಅವಳ ಮನ ಹಂಬಲಿಸಿತ್ತು, ಆದರೆ ವಿನೋದ್ ಏಲ್ಲಿ ತನ್ನ ತಾಯಿಯನ್ನು Dasy ಹೊಂದಿಸಿಕೊಳ್ಳುವುದಿಲ್ಲ ಎಂಬ ಅನುಮಾನದಿಂದ ವೃದ್ಧಾಶ್ರಮಕ್ಕೆ ತಾಯಿಯನ್ನು ಸೇರಿಸುವ ಮಾತುಗಳನ್ನು ಆಡಿದ್ದ, ಆದರೆ Dasy ಇದನ್ನು ಖಡಾ ಖಂಡಿತವಾಗಿ ನಿರಾಕರಿಸಿದ್ದಳು. 

ರಾತ್ರಿ ಊಟದ ನಂತರ ಹಾಸಿಗೆ ಹಾಸುತ್ತಿದ್ದಾಗ ಜಾನಕಮ್ಮ ಆಂಗ್ಲ ಸೊಸೆಯನ್ನು ದಿಟ್ಟಿಸಿ ಅಸಹಾಯಕ ಸ್ಥಿತಿಯಿಂದ ನೋಡುತ್ತಿದ್ದಳು, ಏಲ್ಲಿ ಈ ಬಿಳಿ ಸೊಸೆ ತನ್ನ ಮಗನನ್ನು ಶಾಶ್ವತವಾಗಿ ತನ್ನಿಂದ ದೂರ ಮಾಡುತ್ತಾಳೆ ಎಂಬ ನೋವು ಅವಳದ್ದು. ಕಣ್ಣಲ್ಲಿ ನೀರು ತುಂಬಿಕೊಂಡಿದ್ದ ಅವಳು ಈ ಪರದೇಶದ ಅನ್ಯಭಾಷಿಕ ಸೊಸೆಯು ತನ್ನ ಮಗನನ್ನು ಗಂಟು ಹಾಕಿಕೊಂಡಿದ್ದಕ್ಕೆ ಗಂಟಲು ಕಿತ್ತು ಹೋಗುವವರೆಗೂ ಕೂಗಬೇಕು ಎನ್ನುವಷ್ಟು ಕೋಪವಿದ್ದರೂ ಅವೆಲ್ಲವನ್ನೂ ಮನಸಿನಲ್ಲಿ ಅದುಮಿಕೊಂಡಿದ್ದಾಳೆ. 

ಅಲ್ಪ ಸ್ವಲ್ಪ ಕನ್ನಡ ಕಲಿತ Dasyಯು ಜಾನಕಮ್ಮಳಿಗೆ " ಅಮ್ಮ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ, ನೀವು ನಮ್ಮೊಂದಿಗೆ ಬಂದುಬಿಡಿ. ಇಲ್ಲಿ ಒಬ್ಬರೇ ಇದ್ದು ಕಷ್ಟ ಅನುಭವಿಸುವುದು ಬೇಡ" ಎಂದಾಗ ಜಾನಕಮ್ಮ ಅವಳನ್ನು ಬಾಚಿ ತಬ್ಬಿ ಆಳುತ್ತಾಳೆ. ಹೀಗೆ  ಜಾನಕಮ್ಮಳ ಜೀವನದಲ್ಲಿ  ಆರಿ ಹೋದ ದೀಪಕ್ಕೆ ಮತ್ತೇ ಜೀವಕಳೆ ಬಂದಂತಾಗುತ್ತದೆ. 

Category:Stories



ProfileImg

Written by Mohan Badiger

Love for everyone

0 Followers

0 Following