ಅಮ್ಮಾ..! ಈ ಪದವನ್ನು ತುದಿನಾಲಗೆಯಲ್ಲಿ ಹೊರಳಾಡಿಸುವಾ್ ಏನು ಹರ್ಷ ಅಲ್ವಾ?? ಹೌದಮ್ಮ, ಮಗು ಬದುಕಲ್ಲ ಬೆಳವಣಿಗೆಯ ಕೊಂಡಿ ಕಡಿಮೆಯಾಗಿದೆಯೆಂದು ಎಂದು ಡಾಕ್ಟರಮ್ಮ ಹೇಳಿದಾಗ,ನಿನ್ನ ಗರ್ಭದಿಂದ ಹೊರಬರಲು ಹಾತೊರೆಯುತ್ತಿದ್ದ ನಾನು ಬದುಕಬೇಕೆಂದು ಕಾಣದ ದೇವರಿಗೆ,ಕಲ್ಲಿನ ಮುಂದೆ ನಿಂತು ಪ್ರಾರ್ಥಿಸಿದಾಕೆ ನೀನು.ನಾನು ಹುಟ್ಟಿದ ಮೇಲೆ ಕಿಲೋಮೀಟರ್ಗಟ್ಟಲೆ ನನ್ನ ಮದ್ದಿಗಾಗಿ ಹೊತ್ತುಕೊಂಡು ಹೋದಾಕೆ ನೀನು. ನಿನ್ನ ತ್ಯಾಗವೆಲ್ಲವನ್ನು ಈ ಪತ್ರದಲ್ಲಿ ಬರೆಯುತ್ತಾ ಹೋದರೆ ಒಂದು ಕಾದಂಬರಿ ನಿನ್ನ ಹೆಸರಲ್ಲಿ ಬಂದಾಗಿರುತ್ತೆ ಅನಿಸುತ್ತೇ.ನನ್ನ ಓದಿಗಾಗಿ ಇನ್ನೊಬ್ಬರ ಮನೆ ಮುಸುರೆ ತಿಕ್ಕಿ ನನ್ನ ಹಂತ-ಹಂತವಾಗಿ ಬೆಳೆಸಿ, ಉನ್ನತ ಮಟ್ಟದ ಕೆಲಸ ನನಗೆ ದೊರೆಯುವಂತೆ ಮಾಡಿತು ಅದು ವಿದೇಶದಲ್ಲಿ. 6 ತಿಂಗಳಿಗೊಮ್ಮೆ 1ವರ್ಷಗೊಮ್ಮೆ ಊರಿಗೆ ನಿನ್ನ ಕಾಣಲು ಬರುತ್ತಿದ್ದವ ನಾನು. ದಿನದಲ್ಲಿ ಪ್ರತಿಬಾರಿಯು ನಿನ್ನ ಮಾತನ್ನು ಜಂಗಮವಾಣಿಯಲ್ಲಿ ಕೇಳುತ್ತಿದ್ದೆ. ಸರಿಯಾಗಿ ನೆನಪಿದೆ ಕರೋನ ಸಮಯ ಒಂದು ವರ್ಷವಾಗ್ತ ಬಂತು. ಹುಷಾರ್ ಮಗಳೇ. ಮಾರಕ ವೈರಸ್ ಇದೇ ಎಂದು ಪ್ರತಿದಿನ ಎಚ್ಚರಿಸುತ್ತಿದ್ದೆ ನೀನು. ಅದೊಂದು ದಿನ ನೀನೇ ಹೇಳಿದೆ ನನಗೆ ಜ್ವರ ಮಗಳೇ. ಡಾಕ್ಟರ್ ಬಳಿ ಹೋಗುವಂತೆಯು ಇಲ್ಲ.ಆಸ್ಪತ್ರೆ ತುಂಬಿ ಹೋಗಿದೆ ಎಂದು.ನನಗೆ ವಿದೇಶದಿಂದ ಬರುವಂತೆಯೂ ಇಲ್ಲ.
ಅಂತರರಾಷ್ಟ್ರೀಯ ವಿಮಾನವನ್ನು ಸ್ತಬ್ಧಗೊಳಿಸಲಾಗಿತ್ತು.ಮರುದಿನ ಪಕ್ಕದ ಮನೆ ಆಂಟಿ ಪೋನ್ ಮಾಡಿದಾಗ ಜೀವನವಿಡಿ ಕತ್ತಲೆಯ ಮಬ್ಬು ಆವರಿಸಿಯಾಗಿತ್ತು. ನಿನ್ನ ಅಮ್ಮ ಇನ್ನಿಲ್ಲ ಎಂದು ಹೇಳಿದಾಗ. ಕಡೆಗಳಿಗೆಯಲ್ಲಿ ಅಮ್ಮನ ಮುಖ ನೋಡುವಂತೆಯೂ ಇರಲಿಲ್ಲ. ಗಂಡುದಿಕ್ಕಿಲ್ಲದ ಮನೆಯಲ್ಲಿ ಹೆಣ್ಣು ಮಗಳನ್ನು ಗಂಡು ಮಗನಂತೆ ಬಲಿಷ್ಟವಾಗಿ ಬೆಳೆಸಿದ ನೀನು ಇಂದು ನನ್ನೊಂದಿಗೆ ಇಲ್ಲ.ನಿನ್ನ ಬರಿ ನೆನಪು, ಧೈರ್ಯದ ಮಾತು ಮಾತ್ರ ನನ್ನೊಂದಿಗೆ ಇದೆ. ಕಲ್ಲಿನ ದೇವನಲ್ಲಿ ಬೇಡುವುದು ಇಷ್ಟೇ.ಇನ್ನೊಂದು ಜನ್ಮವಿದ್ದರೆ ನೀನೇ ನನ್ನ ತಾಯಿಯಾಗು. ನಿನ್ನ ಮಡಿಲಲ್ಲಿ ನಲಿದಾಡೋ ಕೂಸು ನನಾಗಬೇಕೆಂದು.
Neethu_bedra Insta name.. Story and script writter
0 Followers
0 Following