ಜಗತ್ತು ತನ್ನ ಒಡಲಲ್ಲಿ ಹಲವು ವಿಸ್ಮಯಗಳನ್ನು ತುಂಬಿಕೊಂಡಿದೆ. ಅದರಲ್ಲಿ ಇಂದು ಹೇಳಲು ಹೊರಟಿರುವುದು ಬರ್ಮುಡಾ ಟ್ರೈ ಆ್ಯಂಗಲ್ ಜಗತ್ತಿನ ಅಪಾಯಕಾರಿ ಭಾಗದ ಬಗ್ಗೆ. ನಾರ್ವೆ ಕಡಲ ತೀರದ ಬೆರೆಂಟ್ಸ್ ಸಮುದ್ರ ವ್ಯಾಪ್ತಿಯಲ್ಲಿ ಬರುವ ಸಮುದ್ರ ಪ್ರದೇಶವೇ ಈ ಬರ್ಮುಡಾ ಟ್ತೈ ಆ್ಯಂಗಲ್. ಈ ನಿಗೂಢ ಸ್ಥಳದ ಬಗ್ಗೆ ಅನೇಕ ಚಲನಚಿತ್ರಗಳನ್ನು ಸಹ ಮಾಡಲಾಗಿದೆ. ಇಲ್ಲಿ ಸಾಕಷ್ಟು ಗುರುತ್ವಾಕರ್ಷಣೆ ಇದೆ. ಅದರ ಮೇಲೆ ಏನಾದರೂ ಹಾದು ಹೋದರೆ, ಈ ತ್ರಿಕೋನವು ಅದನ್ನು ತನ್ನೊಳಗೆ ಸೆಳೆದುಕೊಳ್ಳುತ್ತೆ. ಹಲವಾರು ಅಪಘಾತಗಳು ಸಹ ಇಲ್ಲಿ ನಡೆದಿವೆ.
ಡೆವಿಲ್ಸ್ ಟ್ರಯಾಂಗಲ್ (ಭೂತಗಳ ತ್ರಿಕೋನ) ಎಂದೂ ಕರೆಯಲ್ಪಡುವ ಇದು ಅಟ್ಲಾಂಟಿಕ್ ಮಹಾಸಾಗರದ ನಕ್ಷೆಯನ್ನು ಹರಡಿ ಫ್ಲೋರಿಡಾದಿಂದ ಬರ್ಮುಡಾ ದ್ವೀಪಗಳು, ಅಲ್ಲಿಂದ ಪ್ಯೂರ್ಟೋ ರೀಕೋ ಮತ್ತು ಅಲ್ಲಿಂದ ತಿರುಗಿ ಫ್ಲೋರಿಡಾ ಪ್ರದೇಶವನ್ನು ಮೂರು ಸರಳ ರೇಖೆಗಳಿಂದ ಕೂಡಿಸಿದರೆ ಮೂಡುವ ತ್ರಿಕೋನಾಕೃತಿಯ ನಡುವಣ ಭಾಗವೇ ಈ ಬರ್ಮುಡಾ ಟ್ರಯಾಂಗಲ್. ಈ ಪ್ರದೇಶ ಏಕೆ ಇಷ್ಟು ಕುಖ್ಯಾತಿಗಳಿಸಿದೆ ಎನ್ನಲು ಹಲವು ಉದಾಹರಣೆಗಳನ್ನು ನೀಡಬಹುದು. ಇಲ್ಲಿ ಹಾರಾಟ ಮಾಡಿದ ಹಲವು ವಿಮಾನಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದವು. ಈ ಜಲಭಾಗದಲ್ಲಿ ಸಂಚರಿಸಿದ ಅದೆಷ್ಟೋ ಹಡಗುಗಳು ನಿಗೂಢ ಅಪಘಾತಕ್ಕೀಡಾಗಿ ಅವುಗಳ ಅವಶೇಷಗಳು ಕೂಡ ಸಿಗಲಾರದ ಹಾಗೆ ಕಣ್ಮರೆಯಾಗಿವೆ.
ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಬರ್ಮುಡಾ ದ್ವೀಪಗಳಿಂದ ಅಮೆರಿಕ ದೇಶದ ಮಿಯಾಮಿ, ಅಲ್ಲಿಂದ ಪ್ಯೂರ್ಟೋ ರೀಕೋ ನಂತರ ಮತ್ತೆ ಬರ್ಮುಡಾಕ್ಕೆ ಎಳೆದ ರೇಖೆಗಳ ನಡುವಣ ಪ್ರದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹಡಗುಗಳು ಮತ್ತು ವಿಮಾನಗಳು ಮಾಯವಾಗಿವೆ. ಈ ನಿಗೂಢತೆಗೆ ಸೂಕ್ತ ಉತ್ತರ ಇನ್ನೂ ದೊರೆತಿಲ್ಲವಾದರೂ ಕೆಲ ವಿಜ್ಞಾನಿಗಳು ಮತ್ತು ಪತ್ರಕರ್ತರು ಈ ಬಗ್ಗೆ ಬೆಳಕು ಚೆಲ್ಲಲು ಮುಂದಾಗಿದ್ದರು. 1952ರಲ್ಲಿ ಜಾರ್ಜ್ ಎಕ್ಸ್, ಸಾಂಡ್ಸ್ ಎಂಬುವರು ತಮ್ಮ ಫೇಟ್ ಎಂಬ ಪತ್ರಿಕೆಯಲ್ಲಿ ಈ ಪ್ರದೇಶದಲ್ಲಿ ಹಲವಾರು ಅಪಘಾತಗಳಾಗುತ್ತಿರುವ ಬಗ್ಗೆ ಉಲ್ಲೇಖಿಸಿದ್ದರು. ಆದರೆ ಇದಕ್ಕೆ ನಿಜವಾದ ಪ್ರಚಾರ ಸಿಕ್ಕಿದ್ದು ಮಾತ್ರ 1969ರಲ್ಲಿ. ಜಾನ್ ವ್ಯಾಲ್ಲೇಸ್ ಸ್ಪೆನ್ಸರ್ ಎಂಬುವರು ಬರೆದ ಲಿಂಬೋ ಎಂಬ ಪುಸ್ತಕದ ಮೂಲಕ. ಈ ಪುಸ್ತಕವನ್ನು ಆಧರಿಸಿ ತಯಾರಿಸಿದ 'ದ ಡೆವಿಲ್ಸ್ ಟ್ರಯಾಂಗಲ್' ಎಂಬ ಸಾಕ್ಷ್ಯಚಿತ್ರ ಎರಡು ವರ್ಷಗಳ ಬಳಿಕ ಬಿಡುಗಡೆಗೊಂಡಿತು.
ಸಾಕ್ಷ್ಯಚಿತ್ರದಲ್ಲಿ ವಿಮಾನ ಮತ್ತು ಹಡಗುಗಳು ನಿಗೂಢವಾಗಿ ಕಾಣೆಯಾಗುತ್ತಿರುವ ಮಾಹಿತಿ ಇತ್ತೇ ವಿನಃ ಏತಕ್ಕಾಗಿ ಮಾಯವಾಗುತ್ತಿವೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇರಲಿಲ್ಲ. ಈ ಬಗ್ಗೆ ತಲೆಕೆಡಿಸಿಕೊಂಡ ಹಲವು ಲೇಖಕರು ಈ ಪ್ರದೇಶದಲ್ಲಿ ಪ್ರಬಲವಾದ ಆಯಸ್ಕಾಂತೀಯ ಕ್ಷೇತ್ರವಿದ್ದು ಹಡಗು ಮತ್ತು ವಿಮಾನಗಳನ್ನು ದಿಕ್ಕು ತಪ್ಪಿಸಲು ಕಾರಣವಾಗಿವೆ ಎಂದು ಅಭಿಪ್ರಾಯ ಪಟ್ಟರು. ಬಳಿಕ ನಡೆದ ಹಲವು ಸಂಶೋಧನೆಗಳು ಈ ಟ್ರಯಾಂಗಲ್ ನಲ್ಲಿನ ದುರಂತಗಳಿಗೆ ಕಾರಣವಾದ ಅಂಶಗಳು ಬಯಲಾಗಿವೆ.
ಬರ್ಮುಡಾ ಟ್ರಯಾಂಗಲ್ ಎಂಬ ತ್ರಿಕೋನ ಚಿಕ್ಕದಾಗೇನೂ ಇಲ್ಲ. ಸುಮಾರು 4, 40,000ಚದರ ಮೈಲಿಗಳಷ್ಟು ವಿಶಾಲವಾದ ಸಾಗರವನ್ನು ಈ ಪ್ರದೇಶ ಒಳಗೊಂಡಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ದೇಶದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಒಟ್ಟು ಗೂಡಿಸಿದರೆ ಉಂಟಾಗುವ ಪ್ರದೇಶವನ್ನು ಇದು ಒಳಗೊಂಡಿದೆ. ಇನ್ನು ಬರ್ಮುಡಾ ಟ್ರಯಾಂಗಲ್ ತ್ರಿಕೋನಾಕೃತಿ ಪ್ರದೇಶ ಮಾತ್ರವಲ್ಲದೇ ಇದರ ಹೊರಗಿನ ಪ್ರದೇಶಗಳಲ್ಲಿಯೂ ಹಲವು ದುರಂತಗಳು ಸಂಭವಿಸಿದೆ. ಆದರೆ ಈ ತ್ರಿಕೋನಾಕೃತಿ ಪ್ರದೇಶದಲ್ಲಿಯೇ ಅತಿ ಹೆಚ್ಚು ಅಪಘಾತಗಳು ಸಂಭವಿಸಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಬರ್ಮುಡಾ ಟ್ರಯಾಂಗಲ್ ನಲ್ಲಿ ನಾಪತ್ತೆಯಾಗುವ ಹಡಗು ಮತ್ತು ವಿಮಾನಗಳ ಅವಶೇಷಗಳೇಕೆ ಪತ್ತೆಯಾಗುವುದಿಲ್ಲ ಎಂಬುದಕ್ಕೆ ಇದೀಗ ವಿಜ್ಞಾನಿಗಳು ಉತ್ತರ ನೀಡಿದ್ದಾರೆ. ಬರ್ಮುಡಾ ಟ್ರಯಾಂಗಲ್ ತ್ರಿಕೋನಾಕೃತಿ ವ್ಯಾಪ್ತಿಯ ಪ್ರದೇಶದಲ್ಲಿ ಗಲ್ಫ್ ಸ್ಟ್ರೀಮ್ ಅತ್ಯಂತ ರಭಸವಾಗಿ ಹರಿಯುತ್ತದೆ. ಇದರ ಪ್ರವಾಹ ಅತ್ಯಂತ ಪ್ರಭಾವಶಾಲಿಯಾಗಿದ್ದು, ತೇಲುವ ವಸ್ತುಗಳನ್ನು ಸುಲಭವಾಗಿ ಒಳಗೆ ಸೆಳೆದುಕೊಳ್ಳುತ್ತದೆ. ಅಲ್ಲದೆ ಪುಟ್ಟ ವಿಮಾನಗಳನ್ನೂ ಕೂಡ ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಈ ಪ್ರಭಾವಿ ಪ್ರವಾಹದ ಅಲೆಗಳಿಗಿದೆ. ಸಮುದ್ರದ ಒಳಗೆ ಉತ್ಪತ್ತಿಯಾಗುವ ನೈಸರ್ಗಿಕ ಅನಿಲಗಳೂ ಇಂಥಹ ಕಣ್ಮರೆಗೆ ಕಾರಣವೆಂದು ಹೇಳಲಾಗುತ್ತದೆ. ಇಲ್ಲಿನ ಕಣ್ಮರೆ ಪ್ರಕರಣಕ್ಕೆ ಇಲ್ಲಿ ಬೃಹತ್ತಾಗಿ ಹರಿಯುವ ಬಿಸಿನೀರಿನ ಬುಗ್ಗೆಗಳೂ ಕೂಡ ಕಾರಣ ಎಂದು ಕೆಲ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬರ್ಮುಡಾ ಟ್ರಯಾಂಗಲ್ ನಲ್ಲಿ ಇದುವರೆಗೂ ಪ್ರಾಣತೆತ್ತ ಮಂದಿಯ ಸಂಖ್ಯೆ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. 100 ವರ್ಷದ ಅಂತರದಲ್ಲಿ ಈ ಪ್ರದೇಶದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಜೀವಗಳು ಬಲಿಯಾಗಿವೆ ಎಂದು ಅಂಕಿ-ಅಂಶಗಳು ತಿಳಿಸುತ್ತವೆ. ಈ ಅಂಕಿ- ಅಂಶಗಳಂತೆ ಈ ನಿಗೂಢ ಪ್ರದೇಶದಲ್ಲಿ ವಾರ್ಷಿಕ ಸರಾಸರಿ 4 ವಿಮಾನಗಳು ಮತ್ತು 20 ಹಡಗುಗಳು ದುರಂತಕ್ಕೀಡಾಗಿವೆ ಎಂದು ತಿಳಿಯುತ್ತದೆ. ಈ ಪ್ರದೇಶದಲ್ಲಿ ಸಂಚರಿಸುವ ವಿಮಾನ ಮತ್ತು ಹಡಗುಗಳ ನಾಪತ್ತೆ ಪ್ರಕರಣಕ್ಕೆ ಅನ್ಯಗ್ರಹ ಜೀವಿಗಳ ಸಂಬಂಧ ಕಲ್ಪಿಸಲಾಗುತ್ತಿದೆ. ಈ ಹಿಂದೆ ಸಮುದ್ರ ತಳ ಸೇರಿರುವ ಐತಿಹಾಸಿಕ ಅಟ್ಲಾಂಟಿಸ್ ನಗರದ ತಳದಲ್ಲಿ ಅನ್ಯಗ್ರಹ ಜೀವಿಗಳಿರುವಿಕೆಯ ಊಹಾಪೋಹಗಳಿದ್ದು, ಈ ಜೀವಿಗಳೇ ಇಲ್ಲಿನ ದುರಂತಗಳಿಗೆ ಕಾರಣ ಎನ್ನಲಾಗುತ್ತಿದ್ದು, ಇದಾವುದಕ್ಕೂ ಪುರಾವೆ ಇಲ್ಲ.
ಈ ನಿಗೂಢ ಪ್ರದೇಶದಲ್ಲಿ ಸಂಚರಿಸುವ ಕೆಲ ವಿಮಾನ ಸಿಬ್ಬಂದಿಗಳು & ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ ಹೇಳುವಂತೆ, ಬರ್ಮುಡಾ ಟ್ರಯಾಂಗಲ್ ಪ್ರದೇಶ ಸಮೀಪಿಸುತ್ತಿದ್ದಂತೆಯೇ ಒಂದು ವಿಧವಾದದ ಎಲೆಕ್ಟಾನಿಕ್ ರೂಪದ ಇಬ್ಬನಿ ಕವಿಯುತ್ತದೆ. ಇದು ಒಂದು ಅಡ್ಡಲಾಗಿ ನಿಲ್ಲಿಸಿರುವ ಲಾಲಿಕೆಯ ಆಕೃತಿ ಪಡೆಯುತ್ತದೆ. ಇದನ್ನು ಪ್ರವೇಶಿಸಿದರೆ ಇದ್ದಕ್ಕಿದ್ದಂತೆಯೇ ವಿಮಾನ ಹಿಂದಕ್ಕೆ ಚಲಿಸಲಾರಂಭಿಸುತ್ತದೆ. ವಿಚಿತ್ರವೆಂದರೆ ವಿಮಾನ ರಾಡಾರ್ ನಿಂದ ಕಾಣೆಯಾಗಿ ಮತ್ತೆ ಮಿಯಾಮಿಯ ತೀರದಲ್ಲಿ ಪ್ರತ್ಯಕ್ಷವಾಗುವಾಗ ನೈಜ ಸಮಯಕ್ಕಿಂತ ಇಪ್ಪತ್ತೆಂಟು ನಿಮಿಷ ಹಿಂದಿತ್ತು ಎಂದು ಬ್ರೂಸ್ ಗೆರ್ನಾನ್ ಎಂಬ ಪೈಲಟ್ ತನ್ನ ದಿ ಫಾಗ್ ಬೈ ಬ್ರೂಸ್ ಜೀರ್ನೋನ್ ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಮಿಲಟರಿ ಮತ್ತು ವೈಜ್ಞಾನಿಕ ತಂತ್ರಜ್ಞಾನದಲ್ಲಿ ಮುಂದಿರುವ ಅಮೆರಿಕಕ್ಕೆ ಇದೇ ಬರ್ಮುಡಾ ಟ್ರಯಾಂಗಲ್ 1945ರಲ್ಲಿ ಭಾರಿ ಹೊಡೆತವನ್ನು ನೀಡಿತ್ತು. 1945ರಲ್ಲಿ ಅಮೆರಿಕದ ಐದು ಯುದ್ಧ ವಿಮಾನಗಳು ಬಿಮಿನಿ ಎಂಬ ದ್ವೀಪದ ಮೇಲೆ ದಾಳಿ ನಡೆಸಬೇಕಿತ್ತು. ಹೀಗಾಗಿ ಫೋರ್ಟ್ ಲಾಡರ್ಡೇಲ್ ಎಂಬಲ್ಲಿಂದ ಅಮೆರಿಕದ ಐದು ಬಾಂಬರ್ ವಿಮಾನಗಳು ಅವೆಂಜರ್ ಟೋರ್ಪೆಡೋ ಎಂಬ ಬಾಂಬುಗಳನ್ನು ಹೊತ್ತು ಇದೇ ಬರ್ಮುಡಾ ಟ್ರಯಾಂಗಲ್ ಮಾರ್ಗವಾಗಿ ಪ್ರಯಾಣ ಆರಂಭಿಸಿದ್ದವು. ಈ ಯಾತ್ರೆಯಲ್ಲಿ ಒಟ್ಟು ಹದಿನಾಲ್ಕು ಯೋಧರಿದ್ದರು. ಆದರೆ ಹೊರಟ ಒಂದೂವರೆ ಗಂಟೆಯ ಬಳಿಕ ನಿಯಂತ್ರಣ ಕೇಂದ್ರದಲ್ಲಿದ್ದವರಿಗೆ ಆ ಬಾಂಬರು ವಿಮಾನಗಳಲ್ಲಿ ದಿಕ್ಸೂಚಿ ಕೆಲಸ ಮಾಡುತ್ತಿಲ್ಲ ಎಂಬ ಸಂಕೇತ ದೊರಕಿತು. ಇದಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಐದು ವಿಮಾನಗಳು ನಾಪತ್ತೆಯಾದವು. ಇವುಗಳನ್ನು ಹುಡುಕಿ ಬಂದ ಮೂರು ಶೋಧನಾ ವಿಮಾನಗಳು ಕೂಡ ನಾಪತ್ತೆಯಾದವು.
ಇದರ ಬಗ್ಗೆ ಮೊದಲು ತಿಳಿಸಿದ್ದೆ ಕ್ರಿಸ್ಟೋಫರ್ ಕೊಲಂಬಸ್. ಇಡೀ ವಿಶ್ವಕ್ಕೇ ನಿಗೂಢ ರಹಸ್ಯವಾಗಿ ಉಳಿದಿರುವ ಈ ಬರ್ಮುಡಾ ಟ್ರಯಾಂಗಲ್ ಕುರಿತಂತೆ ಮೊದಲ ಬಾರಿಗೆ ಮಾಹಿತಿ ನೀಡಿದ್ದು ಕ್ರಿಸ್ಟೋಫರ್ ಕೊಲಂಬಸ್. ಈ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ತನ್ನ ಹಡಗಿನ ದಿಕ್ಸೂಚಿ ನಿಂತೇ ಬಿಟ್ಟಿತ್ತು ಹಾಗೂ ಆಕಾಶದಲ್ಲಿ ಬೆಂಕಿಯ ಉಂಡೆಯೊಂದು ಭಾರೀ ವೇಗದಲ್ಲಿ ಸಾಗುತ್ತಿತ್ತು ಎಂದು ತನ್ನ ದಿನಚರಿಯಲ್ಲಿ ಬರೆದಿದ್ದ.
ಇಡೀ ವಿಶ್ವದ ವಿವಿಧ ಪ್ರದೇಶಗಳ ದಿಕ್ಕನ್ನು ಗುರುತಿಸುವ ದಿಕ್ಸೂಚಿ ಕೆಲಸ ಮಾಡದೇ ಸ್ಥಗಿತಗೊಳ್ಳವ ನಿಗೂಢ ಪ್ರದೇಶಗಳಲ್ಲಿ ಈ ಬರ್ಮುಡಾ ಟ್ರಯಾಂಗಲ್ ಪ್ರಮುಖವಾದದ್ದು. ಭೂಮಿಯ ಆಯಸ್ಕಾಂತೀಯ ಕ್ಷೇತ್ರದ ಕಾರಣ ಯಾವುದೇ ಸಡಿಲವಾಗಿ ನೇತುಹಾಕಿದ ಆಯಸ್ಕಾಂತ ಉತ್ತರ ದಕ್ಷಿಣ ಧೃವಕ್ಕನುಗುಣವಾಗಿ ನಿಲ್ಲುತ್ತದೆ. ಆದರೆ ಇದು ನಿಲ್ಲದ ಸ್ಥಳಗಳೆಂದರೆ ಮೂರು. ಉತ್ತರ ಮತ್ತು ದಕ್ಷಿಣ ಧೃವ ಪ್ರದೇಶಗಳು ಮತ್ತು ಬರ್ಮುಡಾ ಟ್ರಯಾಂಗಲ್. ಭೂಮಿಯ ಆಯಸ್ಕಾಂತೀಯ ಉತ್ತರಕ್ಕೂ ನೈಜ ಉತ್ತರ ಧೃವಕ್ಕೂ ಕೊಂಚ ವ್ಯತ್ಯಾಸವಿದೆ. ಈ ಸ್ಥಳದಲ್ಲಿ ದಿಕ್ಸೂಚಿಗಳು ನೈಜ ಉತ್ತರವನ್ನೇ ತೋರಿಸುತ್ತಿದ್ದು ಹಡಗು ಮತ್ತು ವಿಮಾನಗಳ ದಿಕ್ಕು ತಪ್ಪಿಸುತ್ತಿದ್ದು ಅಪಘಾತಕ್ಕೆ ಕಾರಣ ಎಂದು ಅಂದಾಜಿಸಲಾಗುತ್ತಿದೆ.
ಭೂಮಿಯ ಆಯಸ್ಕಾಂತೀಯ ಕ್ಷೇತ್ರದ ಕಾರಣ ಯಾವುದೇ ಸಡಿಲವಾಗಿ ನೇತುಹಾಕಿದ ಆಯಸ್ಕಾಂತ ಉತ್ತರ ದಕ್ಷಿಣ ಧೃವಕ್ಕನುಗುಣವಾಗಿ ನಿಲ್ಲುತ್ತದೆ. ಇದು ನಿಲ್ಲದ ಸ್ಥಳಗಳೆಂದರೆ ಮೂರು. ಉತ್ತರ ಮತ್ತು ದಕ್ಷಿಣ ಧೃವ ಪ್ರದೇಶಗಳು ಮತ್ತು ಬರ್ಮುಡಾ ಟ್ರಯಾಂಗಲ್. ಇದು ಏಕೆಂದು ಇದುವರೆಗೆ ಕಂಡುಹಿಡಿಯಲಾಗಿಲ್ಲ. ಭೂಮಿಯ ಆಯಸ್ಕಾಂತೀಯ ಉತ್ತರಕ್ಕೂ ನೈಜ ಉತ್ತರ ಧೃವಕ್ಕೂ ಕೊಂಚ ವ್ಯತ್ಯಾಸವಿದೆ. ಈ ಸ್ಥಳದಲ್ಲಿ ದಿಕ್ಸೂಚಿಗಳು ನೈಜ ಉತ್ತರವನ್ನೇ ತೋರಿಸುತ್ತಿದ್ದು ಹಡಗು ಮತ್ತು ವಿಮಾನಗಳ ದಿಕ್ಕು ತಪ್ಪಿಸುತ್ತಿದ್ದು ಅಪಘಾತಕ್ಕೆ ಕಾರಣ ಎಂದು ಸ್ಥೂಲವಾಗಿ ಅಂದಾಜಿಸಬಹುದು. ಆದರೆ ಇದು ಏಕಾಗಿ ಹೀಗೆ ಮತ್ತು ಕಾಣೆಯಾದ ಹಡಗುಗಳು ಎಲ್ಲಿ ಹೋದವು ಎಂಬುದಕ್ಕೆ ಇದುವರೆಗೆ ಉತ್ತರ ಸಿಕ್ಕಿಲ್ಲ.
ಇದುವರೆಗೂ ಈ ಪ್ರದೇಶದಲ್ಲಿ ಹೀಗೆ ಕಾಣೆಯಾದ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಈ ರಹಸ್ಯವನ್ನು ಬೆನ್ನಟ್ಟಿದ ಆರ್ಕಟಿಕ್ ಯುನಿವರ್ಸಿಟಿ ಆಫ್ ನಾರ್ವೆ ಸಂಶೋಧಕರು ಕಾರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ತಿಳಿಸಿದ ಹಾಗೆ ಸಮುದ್ರದಲ್ಲಿನ ಹೈಡ್ರೇಟ್ ಗ್ಯಾಸ್ ಪ್ರಬಲ ಪ್ರತಿಕ್ರಿಯೆಗಳಿಂದ ಈ ವ್ಯಾಪ್ತಿಯಲ್ಲಿ ಬರುವ ಹಡಗು, ವಿಮಾನಗಳು ಒಮ್ಮಿಂದೊಮ್ಮೆಲೆ ಸಂಭವಿಸುವ ಮಹಾ ನೀರಿನ ಬುಗ್ಗಿಗಳ ಅಬ್ಬರಕ್ಕೆ ಸಿಲುಕಿ ನೀರಿನಾಳಕ್ಕೆ ತಲುಪುತ್ತವೆ. ಈ ಮೂಲಕ ಅವು ಮುಂದೆ ಸಂಚರಿಸಲಾರದೆ, ಹೊರಗೆ ಬರಲಾಗದೇ ಅಲ್ಲೇ ಉಳಿದು ಬಿಡುತ್ತವೆ ಎಂಬ ಊಹೆಯನ್ನು ಸಂಶೋಧಕರು ಮಾಡಿದ್ದಾರೆ.
ಸಂಪದ್ಭರಿತ ಅನಿಲ ಸಂಗ್ರಹ ಹೊಂದಿರುವ ನಾರ್ವೆಯ ಈ ಪ್ರದೇಶದಲ್ಲಿ ಸುಮಾರು 800 ಮೀಟರ್ ಅಗಲ ಹಾಗೂ 45 ಮೀಟರ್ ಆಳದ ಕುಳಿಗಳಿದ್ದು, ಮಿಥೇನ ಸಂಚಯನಗಳ ಕೇಂದ್ರ ನಿರ್ಮಾಣಗೊಂಡಿದೆ. ಸಮುದ್ರದ ನೆಲದ ಆಳ ಹಾಗೂ ನೀರಿನ ಮೇಲ್ಮೈನ ಒಳಗಡೆ ಈ ಮಿಥೇನ್ ಸೋರಿಕೆ ಆಗುತ್ತದೆ ಎನ್ನಲಾಗುತ್ತಿದೆ. ಈ ಆಳವಿಲ್ಲದ ಸಮುದ್ರಗಳಲ್ಲಿ ಮಿಥೇನ್ ಸೋರಿಕೆಯಿಂದ ಬಿಸಿ ಕುಳಿಗಗಳಲ್ಲಿ ಇದ್ದಕ್ಕಿದ್ದಂತೆ ದೊಡ್ಡ ನೀರಿನ ಬುಗ್ಗಿಗಳು ಸೃಷ್ಟಿಯಾಗುತ್ತವೆ. ಇಂತಹ ಸಂದರ್ಭದಲ್ಲಿ ಬರುವ ಹಡಗುಗಳು ಈ ದೊಡ್ಡ ನೀರಿನ ಬುಗ್ಗಿಗಳ ಪ್ರಪಾತದಲ್ಲಿ ಸಿಲುಕಿ ಹೊರಗೆ ಬರದೇ ಅಲ್ಲೇ ಹೂತು ಹೋಗುತ್ತವೆ ಎಂದು ವಿವಿ ಸಂಶೋಧಕರು ಅಧ್ಯಯನ ತಿಳಿಸಿದೆ. ಈ ಹೈಡ್ರೇಟ್ ಪ್ರತಿಕ್ರಿಯೆಗಳು ಇದ್ದಕ್ಕಿದ್ದಂತೆ ಸಂಭವಿಸುವುದರಿಂದ ಅಗಾಧ ಪ್ರಮಾಣದ ಹಾನಿ ಮಾಡುತ್ತವೆಯಂತೆ. ಅಷ್ಟೇ ಅಲ್ಲ ಇದೊಂದು ಪರಮಾಣು ವಿದಳನ ಪ್ರಕ್ರಿಯೆಯಂತೆ ಅಗಾಧ ಶಕ್ತಿ ಹೊಂದಿದೆ ಎಂದು ವರದಿ ತಿಳಿಸಿದೆ. ಹೀಗೆ ಭೂಮೀಯ ಮೇಲೆ ಇಂತದ್ದೇ ಮನುಷ್ಯರ ತರ್ಕಕ್ಕೆ ನಿಲುಕದಂತೆ ಹಲವಾರು ವಿಸ್ಮಯಗಳು, ಪ್ರದೇಶಗಳು ಇವೆ.
0 Followers
0 Following