ಓದು ಮುಗಿಯಿತಂತೆ,
ಮದುವೆ ಮಾತುಕತೆಯಂತೆ,
ವಧುವಿನ ಅಭಿಪ್ರಾಯವೇಕಂತೆ?
ಅವಳಿನ್ನು ಚಿಿಿಕ್ಕ ಮಕ್ಕಳಂತೆ,
ಬುದ್ದಿ ಬಲಿತಿಲ್ಲವಂತೆ,
ಆದರೂ…
ಓದು ಮುಗಿಯಿತಂತೆ,
ಮದುವೆ ಮಾತುಕತೆಯಂತೆ,
ರಾಶಿಯಂತೆ ನಕ್ಷತ್ರವಂತೆ,
ಕುಲವಂತೆ ಗೋತ್ರವಂತೆ,
ಎಲ್ಲ ಹೊಂದಾಣಿಕೆಯಂತೆ…
ಮನುಷ್ಯ ಸ್ವಲ್ಪ ಕಟುವಂತೆ,
ಮನಸ್ಸು ಸ್ವಲ್ಪ ವಿಷವಂತೆ,
ಚಟಗಳ ಸಂತೆಯಂತೆ,
ಆದರೂ…
ರಾಶಿಯಂತೆ ನಕ್ಷತ್ರವಂತೆ,
ಕುಲವಂತೆ ಗೋತ್ರವಂತೆ,
ಎಲ್ಲ ಹೊಂದಾಣಿಕೆಯಂತೆ…
ಮದುವೆ ಮಾಡಿದರಂತೆ,
ಸಂಭ್ರಮವೋ ಸಂಭ್ರಮವಂತೆ,
ಕೆಲ ವರ್ಷಗಳು ಕಳೆದವಂತೆ,
ಹೊಂದಾಣಿಕೆಯೇ ಇಲ್ಲವಂತೆ,
ಮದವೆಯಂಬುದು ಸ್ವರ್ಗದಲೇ ನಿಶ್ಚಯವಂತೆ…
ಮದವೆಯಂಬುದು ಸ್ವರ್ಗದಲೇ ನಿಶ್ಚಯವಂತೆ…
ಕರ್ತವ್ಯವೋ ಜವಾಬ್ದಾರಿಯೋ ಅರಿಯರಂತೆ…
ಮುಂದೋಂದು ದಿನ ಪರಿತಪಿಸುವ ಮುುಂಚೆ,