ಪ್ರೇಮ ಸಾಫಲ್ಯ

ಎರಡು ಜೀವಗಳ ನಡುವಿನ ಮಧುರ ಪ್ರೇಮ

ProfileImg
17 May '24
2 min read


image

ನಿನಗಾಗಿ ಅದೆಷ್ಟು ಕಾದೆ ನಾನು ಈಗ ಹೇಳುವೆ ಆಗ ಹೇಳುವೆ ಎಂದು .ನನ್ನ ದ್ವನಿ ನಿನಗೆಂದು ಕೇಳುತ್ತಲೇ ಇರಲಿಲ್ಲ. ಆದರೂ ನಾನು ನನ್ನ ಅನಿಸಿಕೆ ನಿನಗೆ ಹೇಳುತ್ತಲೇ ದೀರ್ಘಕಾಲ ನಿನ್ನ ಪ್ರೀತಿಯ ಸಿಂಚನಕ್ಕೂ
ನಿನ್ನ ಮಾತಿಗೂ ಪ್ರತಿಕ್ರಿಯೆಗು ಕಾಯುತ್ತಲೇ ಇದ್ದೆ.

  ಅದೆಷ್ಟು ಬಾರಿ ನಾನು ನಿನಗೆ ಅವಲತ್ತು ಕೊಂಡೆ 
ಗೆಳೆಯ ಒಮ್ಮೆ ಹೇಳಿಬಿಡು ನಿನ್ನ ಮನದ ಮಾತನ್ನು
ತೆರೆದಿಡು ನಿನ್ನ ಹೃದಯವನ್ನು ಎಂದು.

      ಆ ದಿನ ಕಾಲೇಜು ಮುಗಿಯುವ ಹೊತ್ತು....
ನಾಲ್ಕರ ಸಮಯ ..ಇಳಿ ಬಿಸಿಲುಹೊಂಗೆ ಮರದಡಿ ಕುಳಿತು 
ನೀನು ಓದುತ್ತಿದ್ದೆ .ನಿನ್ನ ಆ ಮಗ್ನತೆ ಓದಿನಲ್ಲಿ ಇದದ್ಧು
ನೋಡಿ ನಾನು ಏನು ಹೇಳದೆ ಸುಮ್ಮನೆ ನಿನ್ನನ್ನು ನೋಡುತ್ತಿದ್ದೆ.ಅದೆಷ್ಟು ಮುಗ್ಧ ನೀನು ..ಆ ನಿನ್ನ 
ಕೆಂಪನೆಯ ಮುಖ ,ಸಣ್ಣ ಚಿಗುರು ಮೀಸೆಯ ಒಳಗೆ 
ನಗುತ್ತಿದ್ದ ಪುಟ್ಟ ತುಟಿ ಗಳು...ವಿದ್ಯಾಭ್ಯಾಸವೆ ನನ್ನ 
ಗುರಿ ಎಂದು ಸಾರಿ ಹೇಳುತ್ತಿದ್ದ ನಿನ್ನ ಕಪ್ಪು ಕಣ್ಣುಗಳು.
    ಮರದ ಎಲೆಗಳ ಸಪ್ಪಳ ,ಗಿಳಿಗಳ ಚಿವ ಗುಟ್ಟುವಿಕೆ
ಇದ್ಯಾವುದೂ ನಿನ್ನ ಕಿವಿಗೆ ಬೀಳುತ್ತಲೇ ಇರಲಿಲ್ಲ 
ಮುಂದಿನ ಪರೀಕ್ಷೆಯ ತಯಾರಿ ,ವಿದ್ಯಾಭ್ಯಾಸ ಮುಗಿದೊಡನೆ ಕೆಲಸಕ್ಕೆ ಹೋಗಲೇ ಬೇಕಾದ ಅನಿವಾರ್ಯತೆ ನಿನ್ನ ಮಾತ್ರ ನಿನ್ನ ಮುದ್ಧು 
ಮುಖದಲ್ಲಿ ನನ್ನ ಕಣ್ಣಿಗೆ ಕಾಣುತಿತ್ತು.
   ಹೀಗಿದ್ದ ಮೇಲೆ ನಾನು ತಾನೇ ಹೇಗೆ ಬಂದು ನಿನ್ನಲ್ಲಿ 
ಮತ್ತೆ ಮತ್ತೆ ನನ್ನ ಪ್ರೇಮ ನಿವೇದಿಸಲಿ ಎಷ್ಟು ಸಲ ಹೇಳಲಿ
ಈ ಸಲ ಮಾತ್ರ ಆ ಹೊಂಗೆ ಮರವೇ ನನ್ನ ಪ್ರೇಮ ಕ್ಕೆ 
ಸಾಕ್ಷಿಯಾಗಲಿ ಎಂದು ನಿರ್ಧರಿಸಿ ಕೊನೆ ಬಾರಿ ಹೇಳಿ
ನೋಡುತ್ತೇನೆ ಎಂದು ಬಂದೆ ಬಿಟ್ಟೆ.
   ನಾ ಬಂದದ್ಧು ನೋಡಿ ನೀನು ಗಾಬರಿಯು ಆದೆ 
ಆದರೆ ನನ್ನೆದುರು ತೋರಗೋಡಲಿಲ್ಲ.
ಏನು ಎಂದು ನೀನು ಕಣ್ಣಲ್ಲಿ ಕೇಳಿದ ಪ್ರಶ್ನೆಗೆ ನಾನು
ಉತ್ತರಿಸಿ ಕುಳಿತು ಬಿಟ್ಟೆ.
ಅಂತೂ ಇಂತೂ ಸುಮಾರು 2 ವರ್ಷ ದಿಂದ ಕಾಯುತ್ತಿದ್ದ 
ನನಗೆ ನೀನು ಉತ್ತರಿಸಿದ್ಧು ಹೀಗೆ....
  ರಶ್ಮಿ  ತಪ್ಪು ತಿಳಿಯಬೇಡ ,ನಮ್ಮ ಮನೆಯ ಪರಿಸ್ಥಿತಿ 
ನಿನಗೆ ಗೊತ್ತಿಲ್ಲ ,ಓದುತ್ತಿರುವ ಇಬ್ಬರು ತಂಗಿಯರು  ಇದ್ದಾರೆ
ಅಣ್ಣ ನಿಗೆ ಕೆಲಸವಿಲ್ಲ.
ಅಮ್ಮ ದುಡಿದು ಬಳಲಿದ್ದಾಳೆ ,ಈಗ ನಾನೇ ನಮ್ಮ್ 
ಕುಟುಂಬಕ್ಜೆ ಆಧಾರ.ನಿನ್ನ ಮೇಲೆ ಪ್ರೀತಿ ಇದೆ .ಆದರೆ
ಅದನ್ನು ತಿರಸ್ಕರಿಸಲು ಆಗುತ್ತಿಲ್ಲ...ಸ್ವೀಕರಿಸಿ ನನ್ನವರನ್ನು 
ಕೈ ಬಿಡಲು ಸಾಧ್ಯವಿಲ್ಲ.ನೀನು ಮೇಲ್ಮಧ್ಯಮ ವರ್ಗದವಳು
ನಾನು ಮದುವೆ ಯಾಗಲು ಕನಿಷ್ಠ 3 ವರ್ಷ ಬೇಕು 
ಅಲ್ಲಿವರೆಗೆ ನೀನು ಕಾಯಲು ಸಾಧ್ಯವಿಲ್ಲ ಹಾಗಾಗಿ
ನಾನು ನಿನಗೆ ಉತ್ತರ ಕೊಡಲಿಲ್ಲ ಈಗ ಹೇಳು ನಿನ್ನ ಉತ್ತರ.

    ರಾಜೀವ ,ಕೇಳು ಹೇಳುವೆ ನನ್ನದು ಹೃದಯದ ಪ್ರೀತಿ 
ಅದು ನಿಂಗೆ ಅರ್ಥವಾಗಿದೆ ...ಕಾಯಲು ಸಿದ್ದ ನಿನಗಾಗಿ
ಒಂದು ದೀರ್ಘ ಕಾಯುವಿಕೆಯ ನಂತರ ನನಗೆ ನೀನು
ನಿನ್ನ ಪ್ರೀತಿಸುವೆ ಹೇಳಿದೆಯಲ್ಲ ಅಷ್ಟು ಸಾಕು...
  ನಿನ್ನ ಹೃದಯದ ಅರಸಿ ನಾನೆಂಬ ತೃಪ್ತಿ ನನಗಿದೆ.
ಈ ದೀರ್ಘ ಕಾಯುವಿಕೆಯಲ್ಲೂ ಒಂದು ಮನಸ್ಸು 
ಆಹ್ಲಾದಕರ ವಾಯಿತಲ್ಲ... ರಾಜೀವ .....ನಾನು 
ನಿನ್ನ ಮನಸಾರೆ ಪ್ರೀತಿಸುವೆ ನೀನು ನಮ್ಮ ಮನೆಗೆ
ಬರುವೆ ಎಂದು ಮತ್ತೆ ಒಂದು ದೀರ್ಘ ಸಮಯ 
ಕಾಯುವೆ ರಾಜೀವ.
    
   ಆ ದಿನದ ನೆನಪು ಮತ್ತೆ ಕಾಡುತ್ತಿದೆ ರಾಜೀವ 
3 ವರ್ಷದ ನಂತರ ನೀನು ನಮ್ಮ ಮನೆಗೆ ಬಂದು ಕೇಳಿದ್ಧು ಮದುವೆಯಾದದ್ಧು...ಈಗೇಲ್ಲ ಅದು ಕನಸಿನಂತೆ 
ಭಾಸವಾಗುತ್ತಿದೆ...
ರಾಜೀವ ಇಂದು ಇದೆಲ್ಲ ನಿನಗೆ ಪತ್ರ ದ ಮೂಲಕ 
ತಿಳಿಸುವ ಮನಸ್ಸು ಆಯಿತು ..ಈ ಪತ್ರ ನೋಡಿ 
ಭಾವುಕನಾಗಿ ವಿಚಲಿತ ನಾಗಬೇಡ .
ದೇಶದ ಗಡಿಯಲ್ಲಿ ಕೊರೆಯುವ ಈ ಮಾಘ ಮಾಸದ ಚಳಿಯಲ್ಲಿ ,ದೇಶದೊಳಗೆ ನುಸುಳು ಕೋರರು 
ಬರದಂತೆ ತಡೆಯುವ ದೇಶ ಕಾಯುತ್ತ ಭಾರತಾಂಬೆಯ 
ಸೇವೆಯೊಂದೇ ನಿನ್ನ ಗುರಿಯಾಗಿರಲಿ..
ನಿನ್ನ ಮಗಳಿಗೆ ನಿನ್ನಂತೆ ಆಗಲು ನಿತ್ಯ ವು ಹೇಳುತಿರುತ್ತೇನೆ...
ನಿನ್ನ ಬರುವಿಕೆಗಾಗಿ...ನಿನ್ನವಳು
           ರಶ್ಮಿ ರಾಜೀವ.

            ಎಚ್ ಎಸ್ ಭವಾನಿ ಉಪಾಧ್ಯ.
 


 




ProfileImg

Written by H. S.Bhavani Upadhya

ನಾನು ಲೇಖಕಿ.ಬರೆಯುವುದು ನನಗೆ ಅತ್ಯಂತ ಇಷ್ಟ. ಓದು ಬರಹ ನನ್ನ ಬದುಕಿನ ಭಾಗ.6363008419