ಕುಂಬಳೆ ಸಮೀಪದ ಪೆರ್ನೆಯ ಮುಚ್ಚಿ ಲೋಟ್ ಭಗವತಿ ಕೂಡಾ ಮೂಲತಃ ಬ್ರಾಹ್ಮಣ ಕನ್ಯೆ

ಪೆರ್ನೆ ಭಗವತಿ ದೈವದ ಬಗ್ಗೆ ಬರಹ

ProfileImg
12 Jun '24
4 min read


image

ಕುಂಬಳೆ ಸಮೀಪದ ಪೆರ್ನೆಯ ಮುಚ್ಚಿ ಲೋಟ್ ಭಗವತಿ
ಭಗವತಿ ಎಂದರೆ ಒಂದು ದೈವವವಲ್ಲ.ಅನೇಕ ಭಗವತಿ ದೈವಗಳಿಗೆ ಆರಾಧನೆ ಇದೆ.
1 ಅಂಗಾಂಕುಳರ ಭಗವತಿ
2 ಅಟ್ಟುಕಲ್ ಭಗವತಿ 
3 ಅಡ್ಕದ ಭಗವತಿ
4 ಅರ್ಧ ಚಾಮುಂಡಿ ಭಗವತಿ
5 ಅರಾಯಿಲ್ ಭಗವತಿ
6 ಅಸ್ತಮಾಚಲ್ ಭಗವತಿ
7 ಆಯಿಟ್ಟಿ ಭಗವತಿ
8 ಆರ್ಯಕ್ಕರ ಭಗವತಿ
9 ಆರ್ಯ ಪೂಮಾಲಾ ಭಗವತಿ
10 ಉಚಿಲಿಕಡವತ್ ಭಗವತಿ
11 ಉಚ್ಚಿಟ್ಟ ಭಗವತಿ
12,ಉದಿರಾಲ ಭಗವತಿ
13 ಉನ್ನಂಗ ಭಗವತಿ 
14 ಉಲರ್ ಕುನ್ನಾತ್ ಭಗವತಿ
15 ಎಲ್ಲೆದುತ್ ಭಗವತಿ
16 ಎಳೆಯ ಭಗವತಿ
17 ಐವರ್ ಭಗವತಿ
18 ಒಯೋಲಾ ಭಗವತಿ
19 ಒಲಸ್ಸ ಪೂಮಾಲಾ ಭಗವತಿ
20 ಕಕ್ಕರ ಭಗವತಿ
21 ಕಣ್ಣಗಿ ಭಗವತಿ
22 ಕನ್ನಂಗಾಟ್ ಭಗವತಿ
23 ಕಮ್ಮಡತ್ ಭಗವತಿ.
24 ಕರಿಯ ಭಗವತಿ
25 ಕಳರಿ ಭಗವತಿ
26 ಕಳರಿವತುಕ್ಕಲ್ ಭಗವತಿ
27 ಕಾಪ್ಪಾಳತ್ತಿ ಭಗವತಿ 
28 ಕುರುತ್ತಿನಿಟ್ ಭಗವತಿ
29 ಕುಳಂಗಾರ ಭಗವತಿ
30,ಕೊರೋತ್ ನಾಗ ಭಗವತಿ
31 ಚಿರ್ಮ ಭಗವತಿ
32 ಚೀರುಂಬಾ ಭಗವತಿ 
33 ಚುಚಾಲಿ ಭಗವತಿ
34 ಚುರ್ಚೈಲ್ ಭಗವತಿ
35 ಚೂಲಿಯಾರ್ ಭಗವತಿ
36 ಚೆಂಬಿಲೋಟ್ ಭಗವತಿ
37 ಚೊನ್ನಮ್ಮ ಭಗವತಿ
38 ಚೋಟ್ಟಾನ್ನಿಕ ಭಗವತಿ 
39 ಚೋರ ಕಟ್ಟಿ ಭಗವತಿ
40 ತಲಪ್ಪನ್ ಭಗವತಿ
41 ತುಳುವನತ್ ಭಗವತಿ.
42 ತೊಟ್ಟಿಂಕರ  ಭಗವತಿ.
43 ಧೂಮ ಭಗವತಿ
44 ಧೂಲಿಯಂಗ ಭಗವತಿ
45 ನಂಗಲೊಲ್ಲಾರ್ ಭಗವತಿ
46 ನಾಗ ಭಗವತಿ
47 ನಾ/ ನರಂಬಿಲ್ ಭಗವತಿ.
48 ನೀಲಿಯಾರ್ ಭಗವತಿ
49 ನೆಲ್ಲಕಾಟ್ ಭಗವತಿ.
50 ಪಡಮಡಕ್ಕಿ ಭಗವತಿ
51 ಪಡಿನ್ಹಾಟ್ಟ ಭಗವತಿ
52 ಪಯ್ಯಕಾಲ್ ಭಗವತಿ
53 ಪಾಡಾರಾಂಕುಳರ ಭಗವತಿ.
54 ಪಾಚೆನಿ ಭಗವತಿ
55 ಪುದಿಯ ಭಗವತಿ.
56 ಪೂಂಕಣಿ ಭಗವತಿ
57 ಪೂಮಾಲಾ ಭಗವತಿ
58 ಪೊಸ ಭಗವತಿ
59 ಪೋರ್ಕಲಿ ಭಗವತಿ
60 ಬ್ರಹ್ಮಂಚೇರಿ ಭಗವತಿ
61 ಭದ್ರಕಾಳಿ ಭಗವತಿ 
62 ಮನದನ ಭಗವತಿ 
63 ಮನಯಿಲ್ ಪೋದಿ ಭಗವತಿ 
64 ಮಾಂಞಾಳಮ್ಮ ಭಗವತಿ
65 ಮಾಕ್ಕಾಂ ಭಗವತಿ
66 ಮಾತೃ ದೇವತಾ ಭಗವತಿ
67 ಮುಚ್ಚಿಲೋಟ್ ಭಗವತಿ
68  ಮೂಲಂಪೆರ್ರ ಭಗವತಿ
69  ರ/ ರಾಯರ ಮಂಗಲ ಭಗವತಿ 
70 ರುದ್ರಾಂಗ ಭಗವತಿ
71ವಡಕ್ಕತ್ತಿ ಭಗವತಿ
72 ವಸೂರಿ ಮಾಲಾ ಭಗವತಿ
73ವೆಳ್ಳಂಗರ ಭಗವತಿ

ಕುಂಬಳೆ ಪೆರ್ನೆಯ ಮುಚ್ಚಿಲೋಟ್ ಭಗವತಿ ಕೂಡಾ ಮೂಲತಃ ಬ್ರಾಹ್ಮಣ ಕನ್ಯೆ 
ಕುಂಬಳೆ ಸಮೀಪದ ಪೆರ್ನೆಯಲ್ಲಿ ಪ್ರಸಿದ್ಧವಾದ ಮುಚ್ಚಿಲೋಟ್ ಭಗವತಿಯ ದೈವಸ್ಥಾನವಿದೆ.ಮರದ ಗಾಣದ ಮೂಲಕ ಎಣ್ಣೆ ತೆಗೆದು ಮಾರಾಟ ಮಾಡಿ ಬದುಕುವ ವೈಶ್ಯ ವರ್ಗಕ್ಕೆ ಸೇರಿದ ವಾಣಿಯ ಸಮುದಾಯದವರ ಕುಲ ದೈವ ಮುಚ್ಚಿಲೋಟ್ ಭಗವತಿ.

ಭೂತಾರಾಧನೆ ಮತ್ತು ಭೂತಗಳಿಗೆ ಜಾತಿ ಧರ್ಮಗಳ ಹಂಗಿಲ್ಲ .ಇಲ್ಲಿ ಎಲ್ಲ ಜಾತಿ ಧರ್ಮ ಪಂಗಡಕ್ಕೆ ಸೇರಿದ ಜನರು ನಾನಾ ಕಾರಣಕ್ಕೆ ದೈವಗಳಾಗಿ ನೆಲೆ ನಿಂತು ಆರಾಧನೆ ಪಡೆಯುತ್ತಾರೆ.

 

ಇದಕ್ಕೆ ಬ್ರಾಹ್ಮಣರು ಹೊರತಲ್ಲ ಬ್ರಾಂದಿ ಭೂತ,ಬ್ರಾಣ ಭೂತ,ಮಾಣಿ ಬೂತ ಅಡ್ಕತ್ತಾಯ ಕಾರಿಂಜೆತ್ತಾಯ ಮೊದಲಾದವರು ಬ್ರಾಹ್ಮಣ ಮೂಲದ ದೈವಗಳು.

ಅಂತೆಯೇ ಮುಚ್ಚಿಲೋಟ್ ಭಗವತಿ ಕೂಡ ಮೂಲತಃ ನಂಬೂದಿರಿ ಎಂಬ ಮಲೆಯಾಳ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹುಡುಗಿ.ವಿವಾಹಕ್ಕೆ ಪೂರ್ವದಲ್ಲಿಯೇ ದುರಂತವನ್ನಪ್ಪಿ ದೈವತ್ವ ಪಡೆದು ಆರಾಧನೆ ಹೊಂದಿದ ಬ್ರಾಹ್ಮಣ ಕನ್ಯೆ .

 

ಇವಳ ಹುಟ್ಟಿಗೆ ಸಂಬಂಧಿಸಿದಂತೆ ಅಲೌಕಿಕತೆಯನ್ನು ಬೆರೆಸಿ ಭಗವತಿಯು ಬ್ರಾಹ್ಮಣ ಕನ್ಯೆ ರೂಪಿನಲ್ಲಿ ಜನಿಸಿದಳು ಎಂದು ಹೇಳಲಾಗಿದೆ.

ದೇವಿ ಭಗವತಿಯು ಪೆರಿಂಜೆಲ್ಲೂರ್ ಮಾಣಿಯೋಟ್ ಮನಯ್ಕಲ ಮುತ್ತ ನಂಬೂದಿರಿ ಎಂಬ ಬ್ರಾಹ್ಮಣ ನ ಮಗಳಾಗಿ ಜನಿಸಿದಳು .ಆಕೆಗೆ ಉಚ್ಚಿಲ ಎಂಬ ಹೆಸರಿಟ್ಟು ಕರೆದರು.ಸಕಲ ಗುಣ ಸಂಪನ್ನೆಯಾದ ಆ ಕನ್ಯೆಯು ಪೆರಿಂಜಲ್ಲೂರು ಗುರುಕುಲದಲ್ಲಿ ವೇದಾಂತ,ತರ್ಕ ತತ್ವ ಶಾಸ್ತ್ರ ಗಳನೆನಲ್ಲಾ ಕಲಿತು ಕೀರ್ತಿ ಪಡೆದಿದ್ದಳು.ಅವಳಿಗೆ ನಂಬೂದಿರಿ ಬ್ರಾಹ್ಮಣ ನ ಸೋದರಳಿಯನ ಜೊತೆ ವಿವಾಹ ನಿಶ್ಚಿತ ವಾಗಿತ್ತು.ಈ ಸಮಯದಲ್ಲಿ ಅವಳ ವಿದ್ವತ್ ಅನ್ನು ಸಹಿಸದ ಸ್ತ್ರೀ ಶಿಕ್ಷಣ ವಿರೋಧಿ ಪಂಡಿತರು ಅವಳಿಗೆ ಹೇಗಾದರೂ ಅವಮಾನ ಮಾಡಬೇಕೆಂದು ಉಪಾಯ ಮಾಡಿದರು.

ವಚ್ಚನಂಬಿ ತಿರುಮೇನಿ ಆ ಊರಿನ ಅರಸ.

ನೆರೆ ರಾಜ್ಯದಲ್ಲಿ  ಪೆರುಂಜಲ್ಲೂರು ಎಂಬ ಪಂಡಿತ ಪ್ರಖ್ಯಾತ ನಾಗಿದ್ದು ವಾದ ಪ್ರತಿವಾದದಲ್ಲಿ ಆತನನ್ನು ಎದುರಿಸುವವರು ಆ ಕಾಲದಲ್ಲಿ ಯಾರೂ ಇರಲಿಲ್ಲ. 

ಉಚ್ಚಿಲಳ ಮೇಲೆ ಮತ್ಸರವಿದ್ದ ಪಮಡಿತರು ಆ ವಿದ್ವಾಂಸನನ್ನು ಆಶ್ರಯಿಸಿದರು.ಅವನಿಗೆ ದುರ್ಬೋಧನೆ ಮಾಡಿ ಆತನು ವಚ್ಚಿನಂಬೆ ತಿರಿಮೇನಿ ಆಶ್ಥಾನಕ್ಕೆ ಬಂದು ತನ್ನನ್ನು ಸೋಲಿಸುವ ಪಂಡಿತರು ಇದ್ದರೆ ಬರಲಿ ಇಲ್ಲವಾದರೆ ತನಗೆ ಕಾಣಿಕೆ ಇರಿಸಿ ಕಳಹಿಸಿ ಎಂದು ಪಂಥಾಹ್ವಾನ ಮಾಡುವಂತೆ ಮಾಡಿದರು.

ಈಗ ವಚ್ಚಿಲಂಬಿ ಚಿಂತೆಗೊಳಗಾದ ಆಸ್ಥಾನ ಪಂಡಿತರು ಉಚ್ಚಿಲಳನ್ನು ಕರೆಸುವಂತೆ ತಿಳಿಸಿದರು.ಆದರೆ ಮದುವೆ ನಿಶ್ಚಿತವಾದ ವಧೂವನ್ನು ಕರೆಸಲು ಆತನಿಗೆ ಇಷ್ಟವಿರಲಿಲ್ಲ

 ಆದರೂ ಆಸ್ಥಾನ ಪಂಡಿಯರ ಒತ್ತಾಯಕ್ಕೆ ಆಕೆಯನ್ನು ಕರೆಸಿದನು .ತಾಯಿ ನಾಡಿನ ಗೌರವ ಉಳಿಸುವ ಸಲುವಾಗಿ ಆಕೆಯು ಪಂಡಿತರಲ್ಲಿ ವಾದಿಸಲು ಒಪ್ಪಿದಳು.ಇವರ ವಾದ ಪ್ರತಿವಾದ ಅಲಿಸಲು ದೊಡ್ಡ ವಿದ್ವತ್ ಸಭೆ ಆಯೋಜನೆಗೊಂಡಿತು.

ರಾಜನಿಗೂ ಗುರು ಹಿರಿಯರಿಗೂ ವಂದಿಸಿ ಉಚ್ಚಿಲ ಸಿದ್ದವಾದಳು.ಪಂಡಿತ ಅನೆಕ ಸವಾಲುಗಳನ್ನು ಹಾಕಿದನು.

 

ಅವೆಲ್ಲದಕ್ಕೂ ಸರಿಯಾದ ಉತ್ತರ ನೀಡಿದಳು ಹೀಗೆ ಮೂರು ದಿನ ನಡೆಯಿತು ಪಂಡಿತ ಸೋಲುವುದು ಖಚಿತವಾದ ಸಂದರ್ಭದಲ್ಲಿ ಆಸ್ಥಾನ ಪಂಡಿತರೆಲ್ಲಾ ರಹಸ್ಯವಾಗಿ ಚರ್ಚಿಸಿ ಪಂಡಿತನಿಗೆ ಸಹಕರಿಸಿದರು

 

ನಾಲ್ಕನೆಯ ದಿನದಂದು ಕ್ರೀಡೆಗಳಲ್ಲಿ ಪ್ರಧಾನವಾದುದು ಯಾವುದು ? ಕಲೆಗಳಲ್ಲಿ ಮುಖ್ಯವಾದುದು ಯಾವುದು? ವೇದನೆಗಳಲ್ಲಿ ಹೆಚ್ಚಿನದು ಯಾವುದು ಎಂದು ಕೇಳಿದನು.

 ಆಗ ಉಚ್ಚಿಲಳು ಕ್ರೀಡೆಗಳಲ್ಲಿ ರತಿ ಕ್ರೀಡೆ, ಕಲೆಗಳಲ್ಲಿ ಕಾಮ ಕಲೆ,ವೇದನೆಗಳಲ್ಲಿ ಪ್ರಸವ ವೇದನೆ ಹೆಚ್ಚಿನದು ಎಂಬ ಸರಿಯಾದ ಉತ್ತರ ನೀಡುತ್ತಾಳೆ. 

ಆಗ ಸ್ವ ಅನುಭವ ಇಲ್ಲದೆ ಇವನ್ನು ಉತ್ತರಿಸಲು ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದು ಆಸ್ಥಾನ ವಿದ್ವಾಂಸರು ಆಕೆಗೆ ಶಿಕ್ಷೆ ನೀಡಬೇಕೆಂದು ಅರಸನಿಗೆ ಒತ್ತಡ ಹೇರುತ್ತಾರೆ.

 

ತನ್ನ ಯಾವುದೇ ತಪ್ಪಿಲ್ಲದೆ ಇದ್ದಾಗಲೂ ಉಚ್ಚಿಲಳನ್ನು ರಾಜ್ಯದಿಂದ ಬಹಿಷ್ಕಾರ ಹಾಕುವ ಶಿಕ್ಷೆ ನೀಡಲಾಯಿತು.

 

ತನ್ನ ದೌರ್ಭಾಗ್ಯಕ್ಕೆ ದುಃಖಿಸುತ್ತಾ ಅವಳು ರಾಜ್ಯ ಬಿಟ್ಟು ಉತ್ತರ ದಿಕ್ಕಿಗೆ ನಡೆದಳು .ಅವಮಾನಿತಳಾದ ಅವಳು ಆತ್ಮಾಹುತಿ ಮಾಡಕೊಳ್ಳಲು ಬಯಸಿ ಅಗ್ನಿಕುಂಡ ತಯಾರಿ ಮಾಡಿದಳು.

ಆ  ದಾರಿಯಲ್ಲಿ  ಸೌದೆ  ಹೊತ್ತುಕೊಂಡು ಬಂದ ತೀಯಾ ಸಮುದಾಯದ ಯುವಕನಲ್ಲಿ ಕಟ್ಟಿಗೆ ಕೇಳಿದಾಗ ಅವನು ಆತ್ಮಹತ್ಯೆ ಮಹಾ ಪಾಪ ಎಂದು ತಿಳಿಸಿ ಕಟ್ಟಿಗ ನೀಡಲಿಲ್ಲ. 

ಸ್ವಲ್ಪ ಹೊತ್ತಿಗೆ ಎಣ್ಣೆಯ ಭಾಂಡ ಹಿಡಿದುಕೊಂಡು ಬಂದ ವಾಣಿಯ ಸಮುದಾಯದ ಯುವಕನೊಬ್ಬ ಅಲ್ಲಿ ಬರಲು ತನ್ನ ನೋವಿನ‌ಕಥೆಯನ್ನು ಹೇಳಿ ತನ್ನ ಆತ್ಮಹುತ್ತಿಗಾಗಿ ಸಾಕಷ್ಟು ಎಣ್ಣೆಯನ್ನು ಕೇಳಿದಾಗ ಆತನೂ ಆತ್ಮಹತ್ಯೆ ಮಹಾ ಪಾಪ ಎಂದು ಬುದ್ದಿವಾದ ಹೇಳಿದನು 

ಆದರೂ ಅವಳ ದೃಢ ನಿರ್ಧಾರ ತಿಳಿದು ಅಗ್ನಿ ರಾಶಿಗೆ ತಾನು ತಂದಿದ್ದ ಎಣ್ಣೆಯನ್ನು ಸುರಿದನು.ಅಗ ಬೆಂಕಿ ದೊಡ್ಡದಾಗೀ ಉರಿದು ಅದಕ್ಕೆ ಹಾರಿ ಆ ಬ್ರಾಹ್ಮಣ ಕನ್ಯೆ ಉಚ್ಚಿಲ ಆತ್ಮಾಹುತಿ ಮಾಡಕೊಳ್ಳುತ್ತಾಳೆ.

 

ಅಲ್ಲಿಂದ ಕೈಲಾಸ ಸೇರಿದಾಗ ಮಹಾದೇವನು" ನೀನು ಭೂಲೋಕದಲ್ಲಿ ಭಗವತಿ ತೆಯ್ಯಂ ಆಗಿ ನೆಲೆಸು ಎಂದು ಆಜ್ಞೆ ಮಾಡುತ್ತಾನೆ.

ಅಂತೆಯೇ ಅವಳು ಮೊದಲು ಬಂದು ತನ್ನ ಆತ್ಮಾಹುತಿ ಗೆ ಎಣ್ಣೆ ನೀಡಿ ಸಹಕರಿಸಿದ ವಾಣಿಯ ಸಮುದಾಯದ ಯುವಕನ ಮನೆಯ ನಡುವಿಗೆ ಬಂದು ನೆಲೆಸುತ್ತಾಳೆ.

ಆಗ ನೀರು ಸೇದುತ್ತಿದ್ದ ವಾಣಿಯ ಸಮುದಾಯದ ಮಹಿಳೆಯರು ನೀರಿನಲ್ಲಿ ಭಗವತಿಯ ರುಪನ್ನು ಕಂಡರು.ಅದನ್ನು ಅ ಯುವಕನಿಗೆ ತಿಳಿಸಿದಾಗ ಅವರಿಬ್ಬರೂ ಬಂದು ಬಾವಿಗೆ ಇಣುಕಿ ನೋಡಿದಾಗ ಬಾವಿ ನೀರು ಉಕ್ಕೇರಿ ಬಂತು.

 

ನಡು ಕೋಣೆಯಲ್ಲಿ ಖಾಲಿಯಾಗಿದ್ದ ಎಣ್ಣೆಯ ಭಾಂಡ ತುಂಬಿಕೊಂಡಿತ್ತು .ಆಗ ಅ ವಾಣಿಯನ್ ತನ್ನವರನ್ನೆಲ್ಲಾ ಸೇರಿಸಿ ದೇವ ಪ್ರಶ್ನೆ ಇಟ್ಟಾಗ ಭಗವತಿ ಯ ಸಾನ್ನಿದ್ಯ ತೋರಿ ಬಂತು .ಅವಳನ್ನು ನಡುಕೋಣೆಯಲ್ಲಿ ಪ್ರತಿಷ್ಠಾಪಿಸಿ ಆರಾಧಿಸಿದರು.

 

ಹೀಗೆ ಉಚ್ಚಿಲಳು ನೆಲೆಯೂರಿದ ಮನೆ ಮುಚ್ಚಿಲೋಟ್ ಆಯಿತು.ಆ ಯುವಕ ಮುಚ್ಚಿಲೋಡನ್ ಆದ. 

ಈ ಸ್ಥಳ ಕರಿವೆಳ್ಲೂರ್ ಎಂಬಲ್ಲಿ ಇದೆ.ಮುಂದೆ ವಾಣಿಯ ಸಮುದಾಯದವರು ಆರಾಧಿಸುವ ಭಗವತಿ ಕ್ಷೇತ್ರಗಳಿಗೆಲ್ಲದಕ್ಕೂ ಮುಚ್ಚಿಲೋಟ್ ಎಂದು ಹೆಸರಾಯಿತು .

 

ಈ ಭಗವತಿಯನ್ನು ತಂಬುರಾಟಿ ಎಂದು ಕರೆಯುತ್ತಾರೆ. ಈಕೆ ವಿವಾಹ ಪೂರ್ವದಲ್ಲಿ ಆತ್ಮಾಹುತಿ ಮಾಡಿ ದೈವತ್ವ ಪಡೆದ ಕಾರಣ ಕನ್ನಿಕೆಯಾಗಿಯೆ ನೆಲೆಸಿ ಅರಾಧನೆ ಪಡೆಯುತ್ತಾಳೆ.

ದುರಂತ ಮತ್ತು ದೈವತ್ವ ಭೂತಾರಾಧನೆಯಲ್ಲಿ ಅಲ್ಲಲ್ಲಿ ಕಂಡು ಬರುವ ವಿಶಿಷ್ಟವಾದ ವಿದ್ಯಮಾನವಾಗಿದೆ .

ಅಂತೆಯೇ ಸ್ತ್ರೀ ಶಿಕ್ಷಣ ವಿರೋಧಿಗಳಿಂದ ಆಸ್ಥಾನ ಪಂಡಿತರ ದ್ಷೇಷಾಸೂಯೆಗೆ ಬಲಿಯಾಗಿ ದುರಂತವನ್ನಪ್ಪಿದ ಬ್ರಾಹ್ಮಣ ಕನ್ಯೆ ಉಚ್ಚಿಲ ದೈವತ್ವ ಪಡೆದು ಮುಚ್ಚಿಲೋಟ್ ಭಗವತಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾಳೆ 

 

Category:Stories



ProfileImg

Written by Aravinda S