ಒಂಟಿ ಬಾಳು



image

ಹೆಣ್ಣು ಸಮಾಜದ ಕಣ್ಣು, ಹೆಣ್ಣು ಒಬ್ಬಳು ಕಲಿತರು ಶಾಲೆಯೊಂದು ತೆರೆದಂತೆ… ಇದು ನಮ್ಮ ಕಿವಿಗೆ ಆಗಾಗ ಬಂದಪ್ಪಳಿಸುವ ಮಾತುಗಳು ಮತ್ತು ಆಗಿನಿಂದಲೂ ಚಾಲ್ತಿಯಲ್ಲಿರುವ ಗಾದೆ ಮಾತುಗಳು ಎನ್ನಬಹುದು.  

 ಅದೇ ಹೆಣ್ಣಿಗೆ ಯಾವ ಸ್ಥಾನ ಇದೆ ಈ ಸಮಾಜದಲ್ಲಿ? ಹಣವಂತರಾಗಿ ಇದ್ದ ಹೆಣ್ಣುಮಕ್ಕಳಿಗೆ ಒಂದು ರೀತಿಯ ಗೌರವ ಇದ್ದರೆ, ಬಡವರ ಮನೆಯ ಹೆಣ್ಣುಮಕ್ಕಳಿಗೆ ಅವಮಾನ, ಅಗೌರವವೇ ಆಕೆಗೆ ಸನ್ಮಾನ! ಎಲ್ಲವನ್ನೂ ದುಡ್ಡಿನಿಂದ ಅಳೆಯುವ ಈ ಯುಗದಲ್ಲಿ ಬಡ ಹೆಣ್ಣುಮಕ್ಕಳ ಒಳ್ಳೆತನ ಯಾರಿಗೂ ಬೇಡವಾಗಿದೆ. ದುಡ್ಡು ಮತ್ತು ಸೌಂದರ್ಯ ಎರಡೂ ಒಂದೇ ಕಡೆ ಇದ್ದರಂತೂ ಹೇಳುವುದೇ ಬೇಡ, ಅಂತಹ ಹೆಣ್ಣುಮಕ್ಕಳನ್ನು ಆಕಾಶದಲ್ಲಿ ಇಟ್ಟು ಪೂಜಿಸುತ್ತದೆ ಈ ಸಮಾಜ. 

ಪಾಪ ಯಾವುದೋ ಹೆಣ್ಣು ಮಗು ಅಸಹಾಯಕತೆಯಿಂದ ಅಥವ ಕಷ್ಟದಲ್ಲಿ ನರಳಾಡಲಿ ನೋಡೋಣ, ಆಕೆಯ ಕಡೆ ತಿರುಗಿ ನೋಡುವ ಒಬ್ಬನೇ ಒಬ್ಬ ವ್ಯಕ್ತಿ ಕಾಣಿಸಲಾರ. ಬದಲಾಗಿ ಆಕೆಯಿಂದ ಏನಾದರೂ ನಮಗೆ ಲಾಭವಾಗಬಹುದೇನೋ ಎಂಬ ವಿಕೃತ ಮನೋಭಾವ ಹೊಂದಿರುವ ಜನರೇ ತುಂಬಿದ್ದಾರೆ ಈ ಹಾಳು ಸಮಾಜದಲ್ಲಿ. ಹೆಣ್ಣುಮಗು ಹುಟ್ಟಿದರೆ ಅಸಹ್ಯ ಪಡುವ ತಂದೆಯಂದಿರು… ಇನ್ನೊಂದು ಮನೆಯ ಹೆಣ್ಣು ಮಗಳ ಮೇಲೆ ಕೆಟ್ಟ ದೃಷ್ಟಿ ಹಾಕುತ್ತಾನೆ ಏಕೆ? ಹೆಣ್ಣು ಮಕ್ಕಳು ಎಲ್ಲರೂ ಒಂದೇ ಅಲ್ಲವೇ? ಹೆಣ್ಣು ಮಕ್ಕಳನ್ನು ಕೀಳಾಗಿ ನೋಡುವಿರೇಕೆ?

ಸಹಾಯ ಮಾಡುವ ನೆಪದಲ್ಲಿ ಅಸಹಾಯಕ ಹೆಣ್ಣನ್ನು ತಮ್ಮ ತೃಷೆಗಾಗಿ ಬಳಸಿಕೊಳ್ಳಲು ಗುಳ್ಳೇನರಿಗಳಂತೆ ಹೊಂಚು ಹಾಕುತ್ತಿರುತ್ತಾರೆ! ಎಲಾ! ಪಾಪಿಗಳಾ…..!! ಆಕೆಗೂ ಒಂದು ಮನಸ್ಸಿದೆ. ಅವಳಾಸೆ ಏನೆಂದು ಮೊದಲು ತಿಳಿದುಕೊಳ್ಳಿ. ಅವಳಿಗೂ ಈ ಸಮಾಜದಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಅವಳನ್ನು ಬದುಕಲು ಬಿಡಿ…… ಒಂಟಿ ಹೆಣ್ಣೆಂದು ನಿಮ್ಮಿಷ್ಟದಂತೆ ಆಕೆಯನ್ನು ಬಳಸಿಕೊಳ್ಳದಿರಿ.  

 

 

 

Category:Personal Experience



ProfileImg

Written by ಬೆಳದಿಂಗಳ 'ಬಾಲೆ'

0 Followers

0 Following