ll ಋತುಗಾನ ll
ಈ ಜೇವನ ಬೇವು ಬೆಲ್ಲ
ವಿಧಿಯಾಟವ ಬಲ್ಲವರಿಲ್ಲ
ಬಂದಿದೆ ಸಂಭ್ರಮ ಕಾಲ
ಇದು ಪ್ರಕೃತಿಯ ಪರ್ವ ಕಾಲ
ವಸಂತ ಬರುವ ಹರುಷ ತರುವ
ಬೇವು ಬೆಲ್ಲವ ನಗುತಾ ಹಂಚುವ
ಸಿಹಿಯಾ ಜೊತೆಗೆ ಕಹಿಯಾ ಕೊಡುವ
ಇದು ಯುಗಾದಿ ಹಬ್ಬವಾ
ಗಿಡಮರದಲಿ ಹೊಸ ಹೊಸ ಚಿಗುರು
ಎಲ್ಲೆಡೆ ಮಾವಿನ ತಳಿರು
ಕೊನೆಯಾಗಿದೆ ವರ್ಷದಾಖೈರು
ಹೊಸ ವರ್ಷವು ಆಗಲಿ ಹಸಿರು
ಪಂಚಮದಲಿ ಋತುಗಾನ
ಭುವಿಯಲಿ ಚೈತ್ರಾಗಮನ
ಮೊದಲಾಗಲಿ ದೇಹಕೆ ಸ್ನಾನ
ವಿಧ ವಿಧ ರಸಗಳ ಪಾನ
ಪಲ್ಲವಗಳು ಪಲ್ಲವಿಸಿರಲಿ
ಋತುಗಾನದ ಸಂಭ್ರಮದಲ್ಲಿ
ಮಳೆರಾಯನು ತಂಪನು ತರಲಿ
ಜನಜೀವನ ಹಸನಾಗಿಸಲಿ
✍🏻 ವಿಜಯ ಲಕ್ಷ್ಮಿ ನಾಡಿಗ್ ಮಂಜುನಾಥ್ ಕಡೂರು*