ಬದುಕೆಷ್ಟು ಸುಂದರ.…
ಈ ಬದುಕು ಎಷ್ಟು ಸುಂದರ,
ಈ ಬದುಕು ಎಷ್ಟು ಆಹ್ಲಾದಕರ,
ಅದೆಷ್ಟು ಖುಷಿಯ ನೀಡುವ ಆಗರ,ಬದುಕು ಅದೆಷ್ಟು ಸು:ಖಕರ,
ಈ ಬದುಕು ಆನಂದ ಸಾಗರ,
ಬದುಕಿನ ಪ್ರತೀ ಕ್ಷಣ ಆಹಾ! ರಸಪಾಕಗಳ ರಸದೌತಣ…
ಹಾಗೇ ಈ ಬದುಕು ಬಲು ಭಯಂಕರ,
ಬದುಕು ಕಷ್ಟಕರ,
ಬದುಕಿನಲ್ಲಿ ಸಾಲು-ಸಾಲು ನೋವಿನಲೆಗಳ ಅಬ್ಬರ,
ಬದುಕೆಷ್ಟು ಕ್ರೂರ,
ಪ್ರತೀಕ್ಷಣ ಭಯದ ವಾತಾವರಣ..
ಏನಿದು ಬದುಕು,
ಸುಂದರ ಸೃಷ್ಟಿಯೊಳಗೆ ನಿನ್ನದೂ ಒಂದು ಬದುಕು,
ಈ ಬದುಕನ್ನು ಕೊಟ್ಟ ಭಗವಂತನಿಗೆ ಕೃತಜ್ಞನಾಗಿರು.
ಬದುಕಿಗಾಗಿ ಬದುಕುವುದೇ ಬದುಕು,
ಹೇಗಾದರೂ ಬದುಕು…
ಬೇರೆಯವರಿಗೆ ತೊಂದರೆಯಾಗದಂತೆ,
ನಿನ್ನಿಷ್ಟದಂತೆ ಸ್ವತಂತ್ರವಾಗಿ ಬದುಕು,
ನಿನ್ನ ಜೊತೆಗಿರುವವರ ಜೊತೆ ಖುಷಿಯಾಗಿ ಬದುಕು…
ಬದುಕೆಂದರೆ ಹೇಗೆ ಎನ್ನುವ ಪ್ರಶ್ನೆಗೆ ಒಬ್ಬಬ್ಬರದ್ದು ಒಂದೊಂದು ರೀತಿಯ ವಿಭಿನ್ನ ಯೋಚನೆಗಳು,
ಹಲವು ನಿಲುವುಗಳು…
ಬದುಕಿನ ಬಗ್ಗೆ ಪ್ರತೀಯೊಬ್ಬರದ್ದು ಒಂದೊಂದು ರೀತಿಯ ಅನುಭವ…
ಬದುಕು ಮಾತಲ್ಲಿ ಹೇಳುವಷ್ಟು ಸುಲಭವಲ್ಲ..
ಭೂಮಿಯ ಮೇಲೆ ಜೀವವಿರುವ ಪ್ರತೀ ಜೀವಿಗೂ /ಮನುಷ್ಯನಿಗೂ ಅದರದೇ ಆದ ಬದುಕು ಇರುತ್ತದೆ.
ಭಗವಂತನೆಂಬುವವನು ಸುಂದರವಾದ ಬದುಕನ್ನೇ ಕೊಟ್ಟಿದ್ದಾನೆ.
ಬದುಕನ್ನು ಸುಂದರವಾಗಿಸಿಕೊಳ್ಳುವ ಶಕ್ತಿಯನ್ನು ಸಹ ಕೊಟ್ಟಿದ್ದಾನೆ.
ನಡುವೆ ಕಷ್ಟಗಳು,ದು:ಖಗಳು,ನೋವುಗಳು,ಕಣ್ಣೀರುಗಳು,ಮೇಲು-ಕೀಳುಗಳು, ಶ್ರೇಷ್ಠ-ಕನಿಷ್ಟಗಳು, ಅಸಹನೀಯ ಪರಿಸ್ಥಿತಿಗಳು ಉಡುಗೊರೆಯಾಗಿ ನೀಡಿದ್ದಾನೆ.
ಪ್ರತೀಯೊಬ್ಬ ಮನುಷ್ಯನೂ ಸಹ ಚರ್ಮದ ಹೊದಿಕೆಯನ್ನೇ ಹೊಂದಿರುತ್ತಾನೆ.
ಆದರೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಬದುಕಿನ ನೋಟ.
ಬದುಕು ಸುಂದರವಾಗಿ ನಿಜವಾಗಿಯೂ ಇರುತ್ತಾ…
ಎನ್ನುವುದು ಪ್ರಶ್ನೆ…
ಹೂ ಇರುತ್ತೇ, ನಾವು ಅದನ್ನು ಸ್ವೀಕರಿಸಿದ ಹಾಗೆ.
ನಮ್ಮ ಪರಿಸ್ಥಿತಿಗಳು ಹೇಗೆಯೇ ಇರಲಿ ಮನಸ್ಥಿತಿ ಬದಲಾಗದಿರಲಿ.
ಆದರೂ ಕೆಲವೊಂದು ಪರಿಸ್ಥಿತಿಗಳು, ಸನ್ನಿವೇಶಗಳು ಈ ಬದುಕು ಯಾಕೆ ಬೇಕು ಎನ್ನುವ ಹಾಗೇ ಮಾಡಿಬಿಡುತ್ತದೆ.
ಆ ಕ್ಷಣವೇ ಹಲವರು ಮಾನಸಿಕ ಹಿಡಿತ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿಬಿಡುತ್ತಾರೆ.
ಈ ಪರಿಸ್ಥಿತಿಯ ಕ್ಷಣವನ್ನ ಹೇಗಾದರು ಮಾಡಿ ದಾಟಿಕೊಂಡುಬಿಡಿ ನಂತರದ ಬದುಕು ನಿಜವಾಗಿಯು ಸುಂದರವಾಗಿಯೇ ಇರುತ್ತದೆ.
ಬದುಕಿನ ಪ್ರತೀಕ್ಷಣ ಯಾರೂ ನಮ್ಮ ಜೊತೆ ಇರುತ್ತಾರೋ ಗೊತ್ತಿಲ್ಲ.
ಆದರೆ ನಮ್ಮ ಬದುಕಿನ ಜೊತೆ ಕೊನೆಯವರೆಗೂ ನಾವೇ ಇರಬೇಕು.
ಪ್ರತೀಕ್ಷಣ ಸಂತೋಷದಿಂದ ಕಳೆಯಬೇಕು ಅಂತಾ ಮನಸ್ಸಿರುತ್ತೆ ಆದರೆ ಪರಿಸ್ಥಿತಿಗಳು ಹತಾಶರನ್ನಾಗಿಸುತ್ತದೆ.
ಇದ್ದುದರಲ್ಲಿಯೇ ತೃಪ್ತಿ ಇದ್ದರೆ ಬದುಕು ಸುಂದರ,
ನಮ್ಮ ಅವಶ್ಯಕತೆ ಬಿಟ್ಟು ಅನುಕರಣೆಯ ಹಿಂದೆ ಬಿದ್ದರೆ ಬದುಕು ಕಷ್ಟಕರ.
ನಮ್ಮ ಬದುಕು ಸುಂದರವಾಗಿ,ಸಂತೋಷವಾಗಿ ಇರಬೇಕೋ ನಮಗಿಂತ ಕೆಳಗಿನವರ ಬದುಕನ್ನು ನೋಡಬೇಕಂತೆ ಆಗ ಅವರಿಗಿಂತ ನಮ್ಮ ಬದುಕು ಚೆನ್ನಾಗಿ ಇಟ್ಟಿದಿಯಲ್ಲಾ ಅಂತಾ ಆ ಭಗವಂತನಿಗೆ ಕೃತಜ್ಞತೆ ಸಲ್ಲಿಸಲಿಕ್ಕೆ ಉಂಟು.…
ಯಾರು ನಮ್ಮ ಜೊತೆ ಇರುತ್ತಾರೋ,ಇರಲ್ವೋ,ಬರುತ್ತಾರೋ,ಬರಲ್ವೋ,ಮಾತಾಡ್ತಾರೋ,ಮಾತಾಡಲ್ವೋ, ಅವೆಲ್ಲಾ ಗೊತ್ತಿಲ್ಲ.
ನಮ್ ಜೊತೆ ನಾವಿದಿವಲ್ಲಾ,
ನಮ್ಮ ಬದುಕಿನ ಹೀರೋ ನಾವೇ ಅಲ್ವಾ,
ಬದುಕ್ರಿ ನಿಮ್ಮಿಷ್ಟದಂತೆ ಬೇರೆಯವರಿಗೆ ಕಷ್ಟಕೊಡದಂತೆ,
ಪರಿಶುದ್ಧ ಮನಸು, ಪರಿಶುದ್ಧ ಆತ್ಮ,ಒಳ್ಳೆಯ ಕೆಲಸಗಳಿಂದ,
ಒಳ್ಳೆಯ ವ್ಯಕ್ತಿತ್ವದಿಂದ ಬದುಕನ್ನ ಆಲಂಗಿಸಿಕೊಳ್ಳಿ.
ಪ್ರತೀಯೊಬ್ಬರೂ ಸಹ ಸಿಕ್ಕಿರುವ ಬದುಕನ್ನು ಖುಷಿಯಿಂದ ಕಳೆಯಿರಿ, ಮೊಗದಲ್ಲಿ ನಗುವೊಂದು ಚಿಮ್ಮಿಸುತ್ತಿರಿ…
ಶಾಂತಾರಾಮ ಹೊಸ್ಕೆರೆ,
ತಾ- ಶಿರಸಿ,ಉತ್ತರ ಕನ್ನಡ…
ಬರಹಗಾರ...
0 Followers
0 Following