ರಾತ್ರಿ 9 ಗಂಟೆ ಅದೆಷ್ಟೋ ರಾಶಿ ರಾಶಿ ಕೆಲಸ ಮುಗಿಸಿ ಮೈ ಮನಸ್ಸೆಲ್ಲ ಭಾರವಾಗಿ ಆಫೀಸಿನ ಮೆಟ್ಟಿಳಿದು ಬೈಕ್ ಚಾವಿ ತಿರುಗಿಸಿ ಮನೆ ಕಡೆ ಹೊರಟರೆ ನೆಲ ಸಿಕ್ಕರೆ ಸಾಕು ಎನ್ನುವ ದಣಿವು ಬದುಕಿನ ಸುಂದರ ಕ್ಷಣಗಳನ್ನು ಪಕ್ಕಕೆ ಇಟ್ಟು ಕೇವಲ ಯಶಸ್ಸು ಹುಡುಕಿ ಹೊರಟ ನನಗಿಗಾ 30 ವರ್ಷ ಬೆಳೆಗ್ಗೆ ಇಂದ ಸಂಜೆವರೆಗೂ ದುಡಿದು ದಣಿದ ಜೀವಕ್ಕೆ ನೆಮ್ಮದಿ ಬೇಕು ಎಂದು ಬಯಸುವುದೇ ಒಂದು ಕನಸಾಗಿದೆ.
ನನ್ನ ಹೆಸರು ಜೀವ ಅದ್ ಯಾವ ಗಳಿಗೆಯಲ್ಲಿ ನನಗೆ ಈ ಹೆಸರಿಟ್ರೋ ನನಗೆ ಬುದ್ದಿ ಬಂದಾಗಿನಿಂದ ನನ್ನ ಜೀವಕ್ಕೆ ಪುರುಸೊತ್ತೇ ಇಲ್ಲದಂದೆ ಬದುಕ್ತಾ ಇದೀನಿ
ಪುಟ್ಟ ಹಳ್ಳಿಯಲ್ಲಿ ಮಿಡಿಲ್ ಕ್ಲಾಸ್ ಮನೆಯಲ್ಲಿ ಹುಟ್ಟಿದ ನಾನು ಅಪ್ಪನ ಕುಡಿತದ ಚಟದಿಂದ ಚಿಕ್ಕ ವಯಸ್ಸಿಗೆ ಮನೆ ಜವಾಬ್ದಾರಿ ಹೊತ್ತೆ ಹತ್ತನೇ ತರಗತಿಗೆ ಬರುವಾಷ್ಟ್ರಲ್ಲಿ ನನ್ನ ಬದುಕಿನ ಎಲ್ಲಾ ಖುಷಿಗಳು ಕಾಣೆಯಾಗಿ ಕೇವಲ ನೋವುಗಳು ಉಳಿದಿದ್ದವು ನನ್ನ ಪುಟಾಣಿ ತಂಗಿ ನನ್ನ ನೋವಿನ ಪರಿಹಾರವಾಗಿದ್ದಳು ನನ್ನ ಮುದ್ದು ಅಮ್ಮ ನನ್ನ ನೆಮ್ಮದಿಯಾಗಿದ್ದಳು.
ನಾನು ಪಿ ಯು ಸಿ ಗೆ ಬರುವಷ್ಟ್ರಲ್ಲಿ ಅಪ್ಪನ ದಿಡೀರ್ ಸಾವು ನನ್ನ ಇನ್ನಷ್ಟು ಕುಗ್ಗಿಸಿತು ಬದುಕು ಇನ್ನೊಂದು ಕವಲನ್ನು ಒಡೆಯಿತು ಹಾಗೂ ಹೀಗೋ ಕಷ್ಟ ಪಟ್ಟು ಬಿ.ಕಾಮ್ ಮುಗಿಸಿ ಗೊತ್ತಿದ್ದವರ ಬಳಿ ಸಹಾಯ ಕೇಳಿ ದುಡಿಮೆಯ ಬೆನ್ನು ಹತ್ತಿ ಬೆಂಗಳೂರಿನ ಬಸ್ಸು ಹತ್ತಿದೆ ಒಂದು ಪ್ರತಿಷ್ಠಿತ I T ಕಂಪನಿ ಕೆಲ್ಸಕ್ಕೆ ಸೇರಿ ಕಷ್ಟ ಪಟ್ಟು ದುಡಿದು ಬೆಂಗಳೂರಿನಲ್ಲಿ ಒಂದು ಸೈಟ್ ಹಿಡಿದು ಮನೆ ಕಟ್ಟುವಷ್ಟರಲ್ಲಿ ನನಗೆ 25 ವರ್ಷ ಆಗೇ ಹೋಯ್ತು " ಅಮ್ಮ ಆಗಾಗ ಮದುವೆ ಆಗೋ ಜೀವ " ಅಂದಾಗ "ಛೇ ಬೇಡಮ್ಮ ಈಗ್ಲೇ ಯಾಕ್ ಮದುವೆ ಮನೆ ಕಟ್ಟೋಕೆ ಲಕ್ಷ ಗಟ್ಲೆ ಸಾಲ ಆಗಿದೆ ಮೊದ್ಲು ಅದ್ನ ತೀರಿಸಿ ಪುಟಾಣಿ ಮದ್ವೆ ಮಾಡ್ತೀನಿ " ಅಂದೆ ಬದುಕಿನ ಸವಾಲುಗಳನ್ನ ಎದುರಿಸ್ತಾ ಬಂದ ಕಷ್ಟಗಳಿಗೆಲ್ಲ ಸಡ್ಡುಹೊಡೆದು ಮುಂದೆ ಸಾಗಿ ನನ್ನ ಇಡಿ ಬದುಕನ್ನ ವ್ಯವಸ್ಥಿತವಾಗಿ ಕಟ್ಟಿಕೊಳ್ಳುವಷ್ಟರಲ್ಲಿ ನನ್ನ ಎಷ್ಟೋ ಆಸೆ ಕನಸುಗಳು ಕಳೆದೆ ಹೋದವು.
ಇವತ್ತು ಸಂಜೆ ಮನೆಗೆ ಬೇಗ ಬಾ ಅಂತ ಅಮ್ಮ ಹೇಳುದ್ಲು ಯಾಕ್ ಅಂದ್ರೆ ನನ್ ಪುಟಾಣಿ ತಂಗಿ ಮದುವೆ ನಾಳೆ, ಆದ್ರೂ ನಾನು ಕೆಲ್ಸಕ್ಕೆ ರಜೆ ಹಾಕೋ ಹಾಗಿಲ್ಲ ಯಾಕ್ ಅಂದ್ರೆ ನಮ್ ಬಾಸ್ ನನಗೆ ರಜೆ ಕೊಡೋದಿಲ್ಲ ಆದ್ರೂ ಹೇಗಾದ್ರು ಮಾಡಿ ನಾಳೆ ರಜೆ ಹಾಕ್ಲೆ ಬೇಕು
ಬೆಳೆಗ್ಗೆ ಎದ್ರೆ ನನ್ನ ಮುದ್ದು ತಂಗಿ ಹಸೆ ಮಣೆ ಏರಿ ಮದುಮಗಳಾಗ್ತಾಳೆ ಈಗ್ಲೂ ನನ ಕಣ್ಣಿಗೆ ಮಗುವಾಗಿ ಕಾಣೋ ಅವಳು ಇನ್ನೊಂದು ಮನೆ ಬೆಳಗೋಕೆ ಹೋಗ್ತಾ ಇದಾಳೆ ತುಂಬಾ ನೋವಾಗ್ತಾ ಇದ್ರು ನಗ್ತಾ ಅವಳನ್ನ ಕಳ್ಸಿ ಕೊಡ್ಲೆ ಬೇಕು. ನಿನ್ನೆ ಮೊನ್ನೆವರೆಗೂ ಅಣ್ಣ ನಂಗ್ ಅದನ್ನ ತಗೋ ಬಾ ಇದನ್ನ ತಗೋ ಬಾ ಅಂತೆಲ್ಲ ಹಠ ಮಾಡ್ತಾ ನನ್ ಜೊತೆ ಜಗಳ ಆಡ್ತಾ ತರ್ಲೆ ಮಾಡ್ತಾ ಇದ್ದೋಳು ಈಗ ಒಂದು ಮನೆ ಜವಾಬ್ದಾರಿ ಹೊತ್ಕೊಂಳ್ಳೋವಷ್ಟು ಬೆಳೆದಿದಾಳೆ ಅಂದ್ರೆ ನಂಗ್ ನಂಬೋಕೆ ಆಗ್ತಾ ಇಲ್ಲ ಡಿಗ್ರಿ ಮುಗ್ಸಿ ಅಣ್ಣ ನಂಗ್ ಮುಂದೆ ಓದೋಕೆ ಇಷ್ಟ ಇಲ್ಲ ಮನೇಲೆ ಹೊಲಿಗೆ ಕಲಿತಿನಿ ನಿಂಗು ಸುಮ್ನೆ ಖರ್ಚು ಅಂತ ಹೇಳಿ ಅಮ್ಮನ ಜೊತೆ ಮನೆಯಲ್ಲಿ ಹೊಲಿಗೆ ಕಳಿತ ಕೆಲಸ ಮಾಡ್ತಾ ಇದ್ದೋಳಿಗೆ ಮದುವೆ ಮಾಡ್ತೀನಿ ಅಂತ ಗಂಡು ತೋರ್ಸಿದಾಗ್ಲೂ ಒಂದು ಮಾತಾಡ್ದೆ ಸುಮ್ನೆ ಒಪಿಕೊಂಡ್ಲು ಹುಡುಗಾನು ಒಳ್ಳೆಯವನು ಸಿವಿಲ್ ಇಂಜಿನಿಯರ್ ಒಳ್ಳೆ ಮನೆ ನನ್ ತಂಗಿ ಖಂಡಿತವಾಗಿ ಅಲ್ಲಿ ಸುಖವಾಗಿ ಇರ್ತಾಳೆ ಆದ್ರೂ ಯಾಕೋ ಅವಳ್ನ ಕಳ್ಸೋ ಮನಸ್ಸೇ ಇಲ್ಲ ಈ ಹೆಣ್ಣು ಮಕ್ಕಳೇ ಹೀಗೆ ಯಾವಾಗ ಇಷ್ಟು ದೊಡ್ಡೋರ್ ಆಗ್ಬಿಡ್ತಾರೋ ಗೊತ್ತೇ ಆಗಲ್ಲ
ಮೊನ್ನೆ ಅಮ್ಮ ಹೇಳ್ತಾ ಇದ್ಲು ನೀನು ಮದುವೆ ಆಗೋ ಅಂತ
ಆಗ್ಲೆ ಮತ್ತೆ ಅವಳು ನಂಗ್ ನೆನಪಾದ್ಲು ಏನು ಮಾತಾಡ್ದೆ ಕೋಣೆಗೆ ಹೋಗಿ ನನ್ನ ಮೆಚ್ಚಿನ ಹೇಳಿ ಹೋಗು ಕಾರಣ ಪುಸ್ತಕವನ್ನ ಮೆಲ್ಲಗೆ ತಿರುವಿ ಹಾಕಿದೆ ಅವಳು ಇಡಿ ಕ್ಲಾಸ್ಸಿಗೆ ಸುಂದರಿ ಸರಸ್ವತಿ ಪುತ್ರಿ ಎಲ್ಲಾ ಲಕ್ಚರ್ ಗಳಿಗು ಅವಳಂದ್ರೆ ಪ್ರೀತಿ ಅಪ್ಪ ಅಮ್ಮನ ಮುದ್ದಿನ ಮಗಳು ಲಿಖಿತ ಅಂದು ನನಗಾಗಿ ಬರೆದ ಪ್ರೇಮ ಪತ್ರ ನೋಡಿ ಕಣ್ಣಲ್ಲಿ ನೀರು ಬಂತು "ನಿನಗೋಸ್ಕರ ಎಷ್ಟು ವರ್ಷ ಬೇಕಾದ್ರು ಕಾಯ್ತಿನಿ ಕಣೋ ನೀನ್ ಅಂದ್ರೆ ನಂಗ್ ತುಂಬಾ ಇಷ್ಟ ನಮ್ ಮನೇಲಿ ನಮ್ ಅಪ್ಪನ್ನ ನಾನು ಒಪ್ಪಿಸ್ತಿನಿ ನೀನು ಒಳ್ಳೆ ಕೆಲ್ಸಕ್ಕೆ ಸೇರಿ ಸೆಟ್ಟಲ್ ಆಗೋವರಿಗೂ ನಾನು ಕಾಯ್ತಿನಿ ಬೇಕಿದ್ರೆ ನಾನು ನಿಂಗೆ ಹೆಲ್ಪ್ ಮಾಡ್ತೀನಿ ಪ್ಲೀಸ್ ಜೀವ ನನ್ ಪ್ರೀತಿನಾ ಒಪ್ಕೋ " ಅಂತ ಬಿ.ಕಾಮ್ ಫೈನಲ್ ಇಯರ್ ಅಲ್ಲಿ ಅವಳು ಬರೆದ ಪ್ರೇಮ ಪತ್ರಕ್ಕೆ ನಾ ಕೊಟ್ಟ ಉತ್ತರ " ಲಿಖಿತ ನೀನು ಅನ್ಕೊಂಡಷ್ಟು ಜೀವನ ಸುಲಭ ಇಲ್ಲ ಸುಮ್ನೆ ಲೈಫ್ ಬಗ್ಗೆ ಗಮನ ಕೊಡು ನಿಮ್ ಅಪ್ಪ ಅಮ್ಮ ತೋರಿಸೋ ಹುಡುಗನ್ನ ಮದ್ವೆ ಆಗಿ ಸುಖವಾಗಿರು ನನ್ ಜೊತೆ ನೀನು ಕಷ್ಟ ಪಡೋದು ಬೇಡ ಈ ಲವ್ ಎಲ್ಲಾ ಹೇಳೋಕ್ ಅಷ್ಟೇ ಚೆಂದ ಬಟ್ ರಿಯಾಲಿಟಿ ತುಂಬಾ ಕಷ್ಟ" ಎಂದು ಹೇಳಿ ಅವಳ ಕಣ್ಣುಗಳಿಂದ ಮರೆಯಾದ ನನ್ನ ಕಣ್ಣುಗಳಲ್ಲಿ ಕಣ್ಣೀರ ಮೆರವಣಿಗೆ ಅವಳಂದ್ರೆ ನಂಗು ಇಷ್ಟಾನೆ ಆದ್ರೆ ಅವಳ್ನ ಪ್ರೀತಿ ಮಾಡೋವಷ್ಟು ಯೋಗ್ಯತೆ ತಾಳ್ಮೆ ನನಗಿರ್ಲಿಲ್ಲ ಆಗ
ಈಗ ಅವಳಿಗೆ ಮದುವೆ ಆಗಿ ಎರಡು ವರ್ಷ ಒಂದು ಮುದ್ದಾದ ಹೆಣ್ಣು ಮಗು "ಯಾಶಿಕ" ಆಗಾಗ ಫೇಸ್ಬುಕ್ ಅಲ್ಲಿ ಹೇಗ್ ಇದ್ಯೋ ಅಂತ ಮೆಸೇಜ್ ಮಾಡ್ತಾಳೆ ಹೂ ಫೈನ್ ಕಣೆ ನೀನ್ ಹೇಗಿದ್ದೀಯ ಅಂದ್ರೆ ನಾನು ಚನಾಗಿದೀನಿ ಕಣೋ ಮದ್ವೆ ಊಟ ಯಾವಾಗ್ ಹಾಕ್ಸುತಿಯ ಮಾರಾಯ ನಾನು ನಿನ್ನ ಹುಡುಗಿನ ನೋಡ್ಬೇಕು ಅಂತಾಳೆ ನಾನು ನಕ್ಕು ಸುಮ್ನೆ ಆಗ್ತೀನಿ
ಜೀವನದಲ್ಲಿ ಯಶಸ್ಸನ್ನ ಹುಡುಕ್ತಾ ಹುಡುಕ್ತಾ ನಾನು ನೆಮ್ಮದಿಯನ್ನೇ ಕಳ್ಕೊಂಡು ಬಿಟ್ಟೆ ಆಡೋ ವಯಸ್ಸಲ್ಲಿ ಜವಾಬ್ದಾರಿ ಹೊತ್ತೆ ಎಂಜಾಯ್ ಮಾಡೋ ವಯ್ಸುಲ್ಲಿ ಒಂದಿಷ್ಟು ಕಾಸು ಕುಡಿಸಬೇಕು ಅಂತ ದುಡಿಯೋಕೆ ಶುರುಮಾಡ್ದೆ ಮದುವೆ ಆಗೋ ವಯ್ಸುಲ್ಲಿ ಪ್ರೀತಿ ಬಿಟ್ಟೆ
ಈಗ ಒಮ್ಮೆ ನನ್ನ ಬದುಕಿನ ದಾರಿಯಲ್ಲಿ ಹಿಂದೆ ತಿರುಗಿ ನೋಡಿದ್ರೆ ನನಗೆ ಅಂತ ಸುಮ್ಮನೆ ಕೂತು ಮೆಲಕು ಹಾಕೋಕು ಒಂದು ಸಿಹಿ ನೆನಪು ಕೂಡ ಇಲ್ಲ
ಹಣ ಆಸ್ತಿ ಅಂತಸ್ತು ಎಲ್ಲಾ ಈಗ ನನ ಬಳಿ ಇದೆ ಆದ್ರೆ ನೆಮ್ಮದಿ ಪ್ರೀತಿ ಸಂತೋಷ ಮಾತ್ರ ನನ್ನ ಕೈ ಬಿಟ್ಟು ಹೋಗಿದೆ ಇಷ್ಟೆಲ್ಲ ಯೋಚನೆ ಮಾಡ್ತಾ ಮನೆ ಮುಂದೆ ಬಂದು ಬೈಕ್ ನಿಲ್ಲಿಸಿದ್ರೆ ಈಗ್ಲೂ ನನಗೆ ಅಂತ ಊಟಕ್ಕೆ ಕಾಯೋ ಒಂದೇ ಒಂದು ಜೀವ ಅದು ನನ್ನ ಅಮ್ಮ ಅವಳಷ್ಟೇ ಈಗ ನನ್ನ ನೆಮ್ಮದಿಯ ತಾಣ
ಇದು ಕೇವಲ ನನ್ನ ಬದುಕಿನ ಕಥೆ ಅಲ್ಲ ಬದುಕಿನ ಹೋರಾಟದಲ್ಲಿ ತಮ್ಮ ಕನಸುಗಳನ್ನ ಸುಟ್ಟುಹಾಕಿಕೊಂಡ ಎಷ್ಟೋ ಮಿಡಲ್ ಕ್ಲಾಸ್ ಹುಡುಗರ ಬದುಕಿನ ಕಥೆ ಜೀವನ ಹೀಗೆ ಎಲ್ಲಿಂದಲೋ ಶುರುವಾಗಿ ಎಲ್ಲೊ ಹೋಗಿ ಕೊನೆಗೂಳ್ಳುತ್ತೆ ಬದುಕೂ ನಮ್ಗೆ ಸಾಕು ಅನ್ನಿಸಿದಾಗ ಕೊನೆ ಆಗಲ್ಲ ಆ ದೇವರಿಗೆ ಸಾಕು ಭೂಮಿ ಮೇಲೆ ಇವನು ಕಡ್ಡು ಗುಡ್ಡೆ ಹಾಕಿದ್ದು ಅನ್ನಿಸಿದಾಗ ನಮ್ ಲೈಫ್ಗೆ ಒಂದು ಪೂರ್ಣ ವಿರಾಮ ಬಿಳುತ್ತೆ ಸೊ ಬದುಕಿರೋವರೆಗೂ ಖುಷಿಯಾಗಿ ಲೈಫನ ಎಂಜಾಯ್ ಮಾಡಿ ಯಶಸ್ಸು ಲೈಫ್ ಅಲ್ಲಿ ಮುಖ್ಯನೇ ಆದ್ರೆ ನೆಮ್ಮದಿ ಪ್ರೀತಿ ಸ್ನೇಹಾ ವಿಶ್ವಾಸ ಇವೆಲ್ಲ ಕೊನೆ ಕಾಲಕ್ಕೆ ತುಂಬಾ ಮುಖ್ಯ ಅನ್ಸುತ್ತೆ ಅದಕ್ಕೆ ಬರಿ ದುಡ್ಡು ಮಾಡೋದ್ ಬಿಟ್ಟು ಒಂದಿಷ್ಟು ಸ್ನೇಹಾ ಸಂಬಂಧ ಗೆಳೆತನ ಪ್ರೀತಿಯನ್ನು ಸಹ ಗಟ್ಟಿಗೊಳ್ಸ್ಕೊಬೇಕು ನಾವ್ ಪ್ರೀತಿ ಮಾಡೋರಿಗಿಂತ ನಮ್ನ ಪ್ರೀತಿ ಮಾಡೋರ್ ಜೊತೆಗೆ ಜೀವನ ಹಂಚಿಕೊಂಡು ಬದುಕಿದ್ರೆ ಲೈಫ್ ಬ್ಯೂಟಿಫುಲ್ ಅನ್ನಿಸ್ಬಿಡುತ್ತೆ ಸೊ ಬದುಕನ್ನ ನಮ್ ಆಸೆಯಂತ ಇಷ್ಟ ಬಂದ ಹಾಗೆ ಜೀವಿಸೋಣ
ಹಾ ಹಾಗೆ ನಾಳೆ ನನ್ ತಂಗಿ ಮದ್ವೆಗೆ ಬರೋದು ಮರೀಬೇಡಿ….
ಧನ್ಯವಾದಗಳು….
Writter
0 Followers
0 Following