ಬದುಕು...?

-ಡಾ.ಉಮೇಶ ವೀರಕ್ಯಾತಯ್ಯ

ProfileImg
22 Jun '24
1 min read


image

ಸೋಲೆಂದರೆ ಸೋಲೆ, ವಿರೋಚಿತವಾಗಲಿ,ವಿಚಲಿತವಾಗಲಿ
ಸಾವೆಂದರೇ ಸಾವೇ, ಆಕಸ್ಮಿಕವಾಗಲಿ, ಹಣೆಬರಹವಾಗಲಿ

ಶತ್ರುವಿನ‌ ಬೆನ್ನತ್ತರಸನ ರಥದ ಗಾಲಿಯೇ ಕಳಚಿದರೇಗೆ..!
ಫಲವಿತ್ತ ಸತ್ತ ಬೇರಿನ ಮರವನ್ನು ಬಳ್ಳಿ ತಬ್ಬಿದರೆ ಹೇಗೆ..?
ಅಂಬಿಗನ ಹುಟ್ಟನು ಪ್ರವಾಹದೋಳು‌ ಸುಳಿ ಸೆಳೆದರೇಗೆ..!
ಬಯಸದೇ ಬಂದ ಬವಣೆಯ ಬೇಲಿ ಬಂದುಗಳೇ ಆದರೆ ಹೇಗೆ..?

ನೀರಡಿಕೆಗೆ ನದಿನೀರ‌ ಬಯಸೇ ನೀರಲ್ಲೇ ಸಿಲುಕಿದರೇಗೆ..!
ಕನಿಕರದೋಳು‌ ಕೈ ಚಾಚೆ ಕೈಯನ್ನೇ ನುಂಗಿದರೇಗೆ..?
ಬೇಟೆ ನಾಯಿಗಂಜಿ ಓಡಲು ಎಡವಿ‌‌  ಬಿದ್ದರೇಗೆ..!
ನಂಬಿಕೆಯೇ ಹುಸಿ‌ನುಡಿಯೇ ನಂಬಿಕೆ‌ ಇನ್ನೇಕೆ..?

ಕವಿದಿರುವ ಕಾರ್ಮೋಡಕ್ಕೆ‌‌ ಬಿರುಗಾಳಿಯ ಪಟ್ಟು.,
ಹಂಬಲಸಿದ‌ ಮನಕೀಗ ಅಲೆದಾಟವೇ ಪೆಟ್ಟು..!
ಕಡಲೋಳಗೊಂದು‌ ದ್ವಂದ್ವ..! ಸೆಳೆಯವುದೋ? ಬಡಿಯುವುದೋ?
ಬದುಕಿನೋಳೊಂದು‌ ದ್ವಂದ್ವ..! ಬೆಳೆದಿಹೆನೋ? ಬಳಲಿದೆನೋ?

Category:Poem



ProfileImg

Written by Dr.Umesha Veerakyathaiah

0 Followers

0 Following