ಸಾಹಿತ್ಯ ಮತ್ತು ಬದುಕು

ಸಾಹಿತ್ಯ ಬದುಕನ್ನೇ ಬದಲಿಸುವುದು

ProfileImg
13 Jun '24
2 min read


image

ಬದುಕನ್ನು ಅರ್ಥ ಮಾಡಿಸಿದ ಕೃತಿಗಳು ನೂರಾರು .
ಬಾಲ್ಯದಿಂದಲೇ ಅಣ್ಣ ಹೇಳುತ್ತಿದ್ದ (ಅಪ್ಪ) ಹತ್ತಾರು ಕಥೆಗಳನ್ನುಕೇಳುತ್ತ ಬೆಳೆದ ನನಗೆ ಮುಂದೆ ಓದುವ ಅಭ್ಯಾಸ ಚೆನ್ನಾಗಿಆಯಿತು.
ಬಾಲ್ಯದಲ್ಲಿ ಅಣ್ಣ ತಂದು ಕೊಟ್ಟ ಅಕ್ಬರ್ ಬೀರ್ಬಲ್ ಮತ್ತು ತೆನಾಲಿರಾಮನ ಕಥೆಗಳು ,ಹಾಸ್ಯರಸದೌತಣ ನೀಡುವುದರ ಜೊತೆಗೆ ,ನೀತಿಯನ್ನುಹೇಳುತ್ತಿತ್ತು.
3 ನೆ ತರಗತಿಗೆ ಕಾಲಿಟ್ಟಾಗ ,ನನ್ನ ಗುರುಗಳಾದ ಷಣ್ಮುಖ ಮೇಷ್ಟ್ರು ,ನನಗೆ ಶಾಲೆಯಲ್ಲಿ ಇರುತ್ತಿದ್ದ ಚಿತ್ರ ಸಹಿತ ಕಥೆ ಪುಸ್ತಕಗಳನ್ನುಕೊಡುತ್ತಿದ್ದರು.
ಬೇಸಿಗೆಯಲ್ಲಿ ಹಳ್ಳಿ ಮನೆಯಲ್ಲಿ ಕುಳಿತು ಮಾಡುವುದಾದರು ಏನು ಹೇಳಿ ಮೂವತ್ತು ವರ್ಷಗಳಹಿಂದೆ.
   ಹಾಗಾಗಿ ಈ ಕತೆ ಪುಸ್ತಕಗಳು ಓದುವ ಅಭ್ಯಾಸವನ್ನು ಹೆಚ್ಚಿಸಿತು.
ಹೀಗೆಯೇ ಅಭ್ಯಾಸಗಿದ್ದು ನಾವು ಪಕ್ಕದ ಊರಿಗೆ ಹೋಗಿನೆಲೆ ನಿಂತ ಮೇಲೆ ಅಲ್ಲಿದ್ದ ಗ್ರಂಥಾಲಯ ,ನನಗೂ ನನ್ನತಂಗಿ ತಮ್ಮನಿಗೂ ,ನೆಚ್ಚಿನತಾಣವಾಗಿ ಹೋಯಿತು.
ಇಲ್ಲಿ ಓದುತ್ತಿದ್ದ ಸಾಮಾಜಿಕ ಕಾದಂಬರಿಗಳು ,ಕಥೆಗಳು ಕೇವಲ ನನ್ನ ಪ್ರೌಢಾವಸ್ಥೆಯಯವ್ವನಾವಸ್ಥೆಯ ಹದಿಹರೆಯದ ಕನಸುಗಳಿಗೆ ನೀರು ಉಣಿಸಿತ್ತು ಅಷ್ಟೇ.
ಆದರೆ ಎಂ ಕೆ ಇಂದಿರಾ ಅವರ "ತೆಗ್ಗಿನ ಮನೆ ಸೀತೆ "ಎಂಬ 
ಸ್ವಾತಂತ್ರ್ಯಪೂರ್ವದ ಮಲೆನಾಡಿನಹೆಣ್ಣು ಮಕ್ಕಳಕಥೆ ನಿಜಕ್ಕೂನಾನು ಸೀತೆಯಾಗುವಂತೆ ಪ್ರೇರೇಪಿಸಿದ್ದು ಸುಳ್ಳಲ್ಲ.
ಈ ಪುಸ್ತಕ ನನ್ನ ಆತ್ಮೀಯ ಗೆಳತಿ ನನಗಾಗಿ ಕೊಟ್ಟಿದ್ದಳು.
   ಮುಂದೆ ತಮ್ಮ ಬೇಲೂರಿನ ಗ್ರಂಥಾಲಯದಿಂದ ತರುತ್ತಿದ್ದ 
ಬೇರೆ ಬೇರೆ ದೊಡ್ಡ ದೊಡ್ಡ ಬರಹಗಾರರ ಕಾದಂಬರಿ ಗಳು ಮನದಲ್ಲಿ ಅಚ್ಚುಕಟ್ಟಾಗಿ ನೆಲೇ ನಿಂತವು.
ಡಾ !!ಎಸ್ ಎಲ್ ಭೈರಪ್ಪನವರ ಕಾದಂಬರಿಗಳು ನನ್ನ ಮೇಲೆ ಸಾಕಷ್ಟು ಪ್ರಭಾವಬೀರಿದೆ.
ಮದುವೆಯ ನಂತರ ದಲ್ಲಿ ಪತ್ರಿಕೋದ್ಯಮ ದಲ್ಲಿದ್ದ ಯಜಮಾನರು ಅನೇಕ ಕಾದಂಬರಿಗಳನ್ನು ನನಗಾಗಿ ತಂದು ಕೊಟ್ಟರು.
ಅದರಲ್ಲಿ ಭೈರಪ್ಪನವರ" ಜಲಪಾತ "ಬದುಕಿನಲ್ಲಿ ಭರವಸೆಯನ್ನು ,ನೀಡಿತು.
  ಹಾಸನಜಿಲ್ಲೆಯ ಬಯಲುಸೀಮೆಯ ಲ್ಲಿ ಆರಂಭವಾಗುವ ಶ್ಯಾನುಭೋಗರ ಮನೆಯ ಕಥೆ ,ಮುಂದೆ ಇಡೀ ಮುಂಬೈಯ ಬದುಕನ್ನು ಚಿತ್ರಿಸಿ ಕೊಡುತ್ತದೆ.
ಭೂಪತಿ ,ಮತ್ತು ಭೂದೇವಿ ಎಂಬ ಪತಿ ಪತ್ನಿಯ ನಡುವಿನ ಸಂಬಂಧ ,ಅವರ ಮುಂಬೈನ ವಾಸ ,ಸೋದರ ಮಾವನಆಶ್ರಯದಲ್ಲಿಬೆಳೆದ ಭೂಪತಿ ,ಮಾವನಿಂದ ಕಲಿತ ,ವಿದ್ಯೆ ,ವಿವೇಕ,ಜ್ಞಾನ ಮತ್ತು ಅನ್ನದ ಮಹತ್ವ ,ಹೀಗೆ ಹಲವುವಿಷಯಗಳನ್ನು ಕಾದಂಬರಿಒಳಗೊಂಡಿರುವುದರ ಜೊತೆಗೆ ,ಭೂಪತಿ ಒಬ್ಬ ಚಿತ್ರಕಲಾವಿದನಾಗಿ ಮುಂಬೈ ಶಹರ ದಲ್ಲಿ ,ವಾಸ ಮಾಡುವ,ಬಯಲುಸೀಮೆಯ ದೊಡ್ಡ ಕುಟುಂಬಕ್ಕೂ,ಮುಂಬೈನ ಸಣ್ಣ ಸಣ್ಣ ಅಪಾರ್ಟಮೆಂಟ್ ಬದುಕು 60 70 ರ ದಶಕದಲ್ಲಿ ಹೇಗಿತ್ತು ,ಎನ್ನುವುದನ್ನು 
ಕಾಣುತ್ತೇವೆ.
  ಅಲ್ಲಿ ಬರುವ ಸುಧಾ ,ಮತ್ತು ಅವಳ ಪತಿ ಪಶು ವೈದ್ಯನಾದ ನಾಡಗೌಡರ ಚಿತ್ರಣ ಬೆರೆಯದೇ ಕಥೆ ಹೇಳುತ್ತದೆ.
   ಸೋದರ ಮಾವ ತೀರಿದ ನಂತರ ಕಾಲಕ್ಕೆ ತಕ್ಕಂತೆಬದಲಾದ ಮಾವನಮಗ ಸುಬ್ಬಣ್ಣ ನ ಪಾತ್ರ ,ಮನಸ್ಸಿಗೆಕಸಿ ವಿಸಿ ಮಾಡುತ್ತದೆ.
     ಭೈರಪ್ಪನವರ "ಮಂದ್ರ " ಕಾದಂಬರಿ,ಕಲಾವಿದರ ಬದುಕಿನಲ್ಲಿ ಆಗುವ ಘಟನೆಗಳು ಮತ್ತು ಸುತ್ತಮುತ್ತಲಿನ ಬದುಕುಕಟ್ಟಿಕೊಳ್ಳಲು ಪರದಾಡುವ ಚಿತ್ರಣವನ್ನು ನೀಡುತ್ತದೆ.
ಈ ಕಾದಂಬರಿ ಯು ನಿಜಕ್ಕೂ ನಮಗೆ ಗೊತ್ತಿಲ್ಲದ ಕಲಾವಿದರ ಬದುಕಿನಲ್ಲಿ ನೆಡೆಯುವ ಘಟನೆಗಳನ್ನು 
ಕಣ್ಣಿಗೆಕಟ್ಟುವಂತೆ ಬರೆದಿದ್ದಾರೆ. 
    ಭೈರಪ್ಪನವರ "ಉತ್ತರಕಾಂಡ "ನನ್ನ ಬದುಕಿನಲ್ಲಿ ಅರ್ಥ ಕೊಟ್ಟ ಕಾದಂಬರಿ ಅಥವಾಕೃತಿ.
ಇಲ್ಲಿ ಉತ್ತಮಪುರುಷ ದ ಮೂಲಕ ಕಾದಂಬರಿ ಆರಂಭವಾಗುತ್ತದೆ.
ರಾಮ ಸೀತೆಯರ ಸ್ವಗತ ನಮಗೆ ತ್ರೇತಾಯುಗದಲ್ಲಿ ನೆಡೆದ ರಾಮಾಯಣವನ್ನು ಹೇಳುತ್ತಾ ಹೋಗುವ ಪಾತ್ರಗಳು.
      ರಾಮನ ಇಲ್ಲಿ ಮರ್ಯಾದಾ ಪುರುಷೋತ್ತಮ ಎನಿಸುವುದಕ್ಕಿಂತ,ತುಂಬಿದಬಸುರಿ ಸೀತೆಯನ್ನು ಕಾಡಿಗೆ 
ಕಳಿಸಿದ್ದು ಅಕ್ಷಮ್ಯ ಅಪರಾಧವಾಗಿ ತೋರುತ್ತದೆ.
     ತ್ರೇತಾಯುಗದಲ್ಲಿನೆಡೆದ ಘಟನೆಗಳನ್ನು ಭೈರಪ್ಪನವರು ಆಯಾ ಪ್ರದೇಶದಸುತ್ತಮುತ್ತಹೋಗಿ ಅಧ್ಯಯನಮಾಡಿ ಕಾದಂಬರಿ ಬರೆದಿರುವುದು ವಿಶೇಷವಾಗಿದೆ.
    ರಾಮ ,ಲಕ್ಷ್ಮಣ,ಸೀತೆ ಜೊತೆಗೆ ಊರ್ಮಿಳಾ ಪಾತ್ರವೂ ವಿಭಿನ್ನವಾಗಿದೇ.

 

 

ಸೀತೆ ಇಲ್ಲಿ ಕೃಷಿಕಳಾಗಿ ನೋಡುತ್ತೇವೆ ,ಅದೇ ವಿಶೇಷ ,ಅಯೋನಿಜೆ ಯಾದ ಜಾನಕಿ,ರಾಮನಿಂದ ಪರಿತ್ಯಕ್ತಲಾದ ಮೇಲೆ ಭೂಮಿಯನ್ನು ನಂಬಿ ಬದುಕು ಕಟ್ಟಿಕೊಳ್ಳುತ್ತಾಳೆ.
ಚೊಚ್ಚಲ ಹೆರಿಗೆ ಮಾಡಿಸಲು ಅಯೋದ್ಯೆಯಿಂದ ಬರುವ "ಸುಕೇಶಿ "ಎಂಬ ಹೆಣ್ಣು ,ಅವಳನ್ನು ಎಂದು ಮರೆಯಬಾರದು.
   ಈಕೆ ಸೀತೆಯ ಸಖಿ.ಸೀತಕ್ಕ ಎನ್ನುತ್ತಾ ಮಾತಾಡುವ ಹಳ್ಳಿಯ ಭಾಷೆ ತುಂಬಾ ಚೆನ್ನಾಗಿಮೂಡಿದೆ.
ಊರ್ಮಿ,ಆಹಾ ,ಸೀತೆಯ ತಂಗಿ ಲಕ್ಷಣ ವಲ್ಲಭೆ,ಅಲಂಕಾರ ಆಸಕ್ತಳು ಊರ್ಮಿಳೆ ಎಂದು ಬಣ್ಣಿಸಿರುವುದು ,ನಮಗೂ ಹಾಗೆ ಇರಬೇಕೆಂದು ಬಯಕೆ ಹುಟ್ಟಿಬಿಡುತ್ತದೆ.
    ಊರ್ಮಿಳಾ ,ಸೀತೆ ಇಬ್ಬರು  ನಮ್ಮ ಬದುಕಿಗೆ ಸ್ಫೂರ್ತಿ ಇದ್ದಂತೆ.ತವರು ಬಿಟ್ಟು ಬಂದ ಸೀತೆಗೆ ,ತವರಿನ ನೆನಪೇ ಬೇಡ  ಯಾಕೆ ಎಂದರೆ, ಅವಳ ಕಣಕಣದಲ್ಲೂ ರಾಮನೆ ಇದ್ದಾನೆ ಇನ್ನೇನು.
ಮುಂದುವರೆಯುವುದು.
ಎಚ್ ಎಸ್ ಭವಾನಿ ಜಿ ಉಪಾಧ್ಯ
ಬೆಂಗಳೂರು.


 

  

   
  

Category:Literature



ProfileImg

Written by H. S.Bhavani Upadhya

ನಾನು ಲೇಖಕಿ.ಬರೆಯುವುದು ನನಗೆ ಅತ್ಯಂತ ಇಷ್ಟ. ಓದು ಬರಹ ನನ್ನ ಬದುಕಿನ ಭಾಗ.6363008419