ಪುಸ್ತಕ ವಿಲ್ಲದೇ ಬದುಕು ಇಲ್ಲ.ಅಷ್ಟರ ಮಟ್ಟಿಗೆ ನನಗೆ ಈ ಪುಸ್ತಕ ದೊಡನೆ ನಂಟು .ಸಾಹಿತ್ಯ ಈ ಪದವೇ ಅದೆಷ್ಟು ಚೆನ್ನ ಅಲ್ಲವೇ.
ಸಂಗೀತ ಮತ್ತು ಸಾಹಿತ್ಯ ಒಂದು ನಾಣ್ಯದ ಎರಡು ಮುಖ ಗಳು.
ಸಂಗೀತದ ಸಪ್ತಸ್ವರ ಹುಟ್ಟಿದ್ಹು ಗಾಯತ್ರಿ ಮಂತ್ರ ದಿಂದ .
ಹಾಗಿದ್ದರೆ ಈ ಸಂಗೀತಕ್ಕೂ ಸಾಹಿತ್ಯವೆ ಮೂಲ ಕಾರಣ .
ಗಾಯಿತ್ರಿ ಮಂತ್ರ ಸಾಹಿತ್ಯ ವೇ ಎನ್ನಬಹುದು ಆದರೆ ಅಕ್ಷರ ರೂಪ ದಿಂದ ಬಂದಿದ್ಧು ತಾನೇ.
ಸಾಹಿತ್ಯ ಇಂದು ನಿನ್ನೆ ಯದು ಅಲ್ಲಪೌರಾಣಿಕ ಕಾಲದಿಂದಲೂ
ಇದೆ .ಅಂದಿನ ಋಷಿ ಮುನಿಗಳ ಕಾಲದಲ್ಲಿ ಎಲ್ಲವನ್ನೂ ತಾಳೆ ಗರಿಯಲ್ಲಿ ಬರೆದಿದ್ದರು .ಅವೆಲ್ಲ ಇಂದು ಪುಸ್ತಕ ರೂಪ ಪಡೆದಿವೆ.
ಪುಸ್ತಕ ಗೆಳೆಯನಿಗಿಂತ ಹೆಚ್ಚು .ನಮ್ಮೆಲ್ಲ ಭಾವನೆಗಳ ಪ್ರತಿ ರೂಪವೇ ಸಾಹಿತ್ಯ.
ಪುಸ್ತಕ ಪ್ರೀತಿಸದವರು ಕಡಿಮೆ ಇಂತಹ ಅಕ್ಷರ ಪ್ರಿಯರಿಗೆ
ಜೀವನದಲ್ಲಿ ಕಷ್ಟ ಬಂದಾಗ ನೋವು ತಿಂದಾಗ ಈ ಪುಸ್ತಕ
ವೈದ್ಯರಂತೆ ಕೆಲ್ಸ ಮಾಡ ಬಲ್ಲದು .
ನಾನು ಅದೆಷ್ಟೋ ಬಾರಿ ಒಂಟಿ ಯಾದಗ ನನಗೆ ನೆರವಿಗೆ ಬಂದ ದ್ದು ಪುಸ್ತಕ ಗಳು .ತುಂಬಾ ನೋವುಂಡು ಖಿನ್ನತೆ ಗೆ ಹೋದಾಗ .
ಮತ್ತೆ ನನ್ನ ಮೇಲೆತ್ತಿದ್ಧು ಅಧ್ಯಾತ್ಮ ಸಾಹಿತ್ಯ.
ಕಷ್ಟ ಎಂದು ಕಣ್ಣೀರು ಇಟ್ಟಾಗ ಭೈರಪ್ಪನವರ ಕಾದಂಬರಿಗಳೇ
ಸ್ಫೂರ್ತಿ ಯಾದವು .ಎಲ್ಲ ರಿಗೂ ಒಳಿತು ಬಯಸಿದೆ
ಕೊನೆಗೆ ನನ್ನ ಒಳ್ಳೆಯತನ ನನಗೆ ಮುಳುವಾಯಿತು .ಆಗ
ಸಾಂತ್ವನ ಕೊಟ್ಟಿದ್ದು ಒಳ್ಳೆಯ ಸಾಹಿತಿಗಳ ಲೇಖನಗಳು.
ಮದುವೆ ಯ ವಿಷಯದಲ್ಲಿ ನೊಂದಿದ್ದೆ ಆಗ ನನಗೆ ಸ್ಫೂರ್ತಿ
ತುಂಬಿ ದ ಪುಸ್ತಕ ಕಲಾಂ ಅವರ" ಅಗ್ನಿಯ ರೆಕ್ಕೆಗಳು".
ಗುರು ಗುರಿ ಎರಡು ಇಲ್ಲದೆ ಒದ್ದಾಡುವಾಗ ಸಹಾಯ ಮಾಡಿ
ದ್ದು ಶ್ರೀಭಾರತಿ ತೀರ್ಥರು ಎಂಬ ಪುಸ್ತಕ.ಅದರೊಳಗಿದ್ದ ಅಕ್ಷರ
ವೆಲ್ಲ ನನಗೆ ಬರೆದಂತೆ ಇತ್ತು.
ಚಿಕ್ಕವಳಿದಾಗ ಕಾಡಿನ ನಡುವೆ ಇದ್ದ ಮನೆಯಲ್ಲಿ ಮನರಂಜನೆ ಯೇ ಇಲ್ಲದಾಗ ಬೇಸಿಗೆ ರಜೆಯಲ್ಲಿ ಮೇಷ್ಟ್ರು ಕೊಟ್ಟ ಬಾಲ
ಸಾಹಿತ್ಯ ದ ಪುಸ್ತಕ ನನ್ನ ಜೊತೆಯಾದವು.
ಇತ್ತೀಚಿನ ವರ್ಷಗಳಲ್ಲಿ ಅಪಾರ್ಟ್ಮೆಂಟ್ ಎಂಬ ಜೈಲಿನಲ್ಲಿ
ಒಂಟಿ ಕುಳಿತಾಗ ಲೆಲ್ಲ ನನ್ನ ಗೆಳೆಯರಾಗಿ ಮಾರ್ಗದರ್ಶನ ನೀಡಿ
ನೆಡೆ ಮುಂದೆ ನುಗ್ಗಿ ನೆಡೆ ಮುಂದೆ ಎನ್ನುವುದು ಕಪಾಟಿನಲ್ಲಿ
ಸದಾ ಹಸನ್ಮುಖಿಯಾದ ನೂರರು ಪುಸ್ತಕ ಗಳೇ .
ಪದವಿ ಪಡೆದು ಮನೆಯಲ್ಲಿ ಕೂತಾಗ ನನ್ನ ಜ್ಞಾನದ ಹಸಿವು
ನೀಗಿಸಿದ್ಧು ನಮ್ಮೂರಿನ ಗ್ರಂಥಾಲಯ ದ ಹತ್ತಾರು ಕಾದಂಬರಿ ಗಳು,ಲೇಖನಗಳು, ಕಥೆ ಪುಸ್ತಕಗಳು.
ಕರಾವಳಿ ಗೆ ಕಾಲಿಟ್ಟಾಗ ಅಕ್ಕ ಪಕ್ಕದ ವರು ಮಾತಾನಾಡ ದ
ಬಿಗುಮಾನ ದ ಜನರು ಎಂದು ತಿಳಿದು ನೋವಾದಾಗ
ನನ್ನ ಬೇಸರಕ್ಕೆ ನನ್ನವರು ಕೊಟ್ಟ ಮದ್ಧು ವಾರಪತ್ರಿಕೆಗಳು
ಮತ್ತು ದಿನಪತ್ರಿಕೆ ,ಚಿತ್ರ ಜಗತ್ತಿನ ಪುಸ್ತಕಗಳನ್ನು.
ಈಗ ಎರಡು ವರ್ಷದಿಂದ ಬರವಣಿಗೆ ಯಲ್ಲಿ ತೊಡಗಿಸಿಕೊಳ್ಳಲು ನನ್ನ ಬದುಕು ಬದಲಾಗಲು ,
ಮತ್ತು ಓದುವ ನನ್ನ ಅಭ್ಯಾಸ ಮತ್ತು ಇಷ್ಟದ ಕೆಲಸಕ್ಕೆ
ನೀರೆರೆದು ಪೋಷಿಸಿ ಬದುಕು ಬದಲಿಸಿ ಜ್ಞಾನದ ಹಸಿವು
ನೀಗಿಸಿ ಬದುಕು ಉತ್ತಮ ಗೊಳ್ಳಲು ಅಂತರ್ಜಾಲ ಸಾಹಿತ್ಯ ಸಂಸ್ಥೆ ಗಳು
ಈ ಸಾಹಿತ್ಯ ಪ್ರಪಂಚ ಇದೀಗ ಅದೆಷ್ಟು
ಜನರನ್ನು ಕವಿಯಾಗಿಸಿದೆ ಕಾದಂಬರಿ ಕಾರ ರನ್ನು ಆಗಿಸಿದೆ.
ಕತೆಗಾರರು ಲೇಖಕರು ವಿಮರ್ಶಕರು ವೈದ್ಯಸಾಹಿತಿಗಳು
ಪತ್ತೇದಾರಿ ಕಾದಂಬರಿಕಾರರು ಅದೆಷ್ಟು ವಿಭಿನ್ನ ರೀತಿಯ
ಸಾಹಿತಿಗಳ ಪರಿಚಯಕ್ಕೂ ಮತ್ತು ಈ ಸಾಹಿತ್ಯ ಬರವಣಿಗೆ
ಮತ್ತು ಓದುವ ಹಂಬಲಕ್ಕೂ ಬದುಕು ಬದಲಿಸಲು
ಉತ್ತಮಗೊಳ್ಳಲು ಈ ಅಂತರ್ಜಾಲದ್ಲಲಿ ವೇದಿಕೆಯು ಕಾರಣವಾಗಿದೆ.
ಹೀಗೆ ಹತ್ತಾರು ಭಿನ್ನ ರುಚಿಯ ಸಾಹಿತ್ಯ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ದೇ.
ಎಚ್ ಎಸ್ ಭವಾನಿ ಉಪಾಧ್ಯ.
ನಾನು ಲೇಖಕಿ.ಬರೆಯುವುದು ನನಗೆ ಅತ್ಯಂತ ಇಷ್ಟ. ಓದು ಬರಹ ನನ್ನ ಬದುಕಿನ ಭಾಗ.6363008419
0 Followers
0 Following