ಜೀವನ ನಾವು ಎಣಿಸಿದಂತೆಯೇ ಸಾಗಬಹುದು ಸಾಗದೆಯೂ ಇರಬಹುದು! ಒಂದು ಸಮಯದಲ್ಲಿ ತಳಮಟ್ಟದಲ್ಲಿ ಬದುಕಿ ಮುಂದೇ ಅದೆಷ್ಟೋ ಎತ್ತರಕ್ಕೆ ಹೋಗಬಹುದು..
ಅಥವಾ ಎತ್ತರದಲ್ಲಿದ್ದು ಮತ್ತೆ ಕೆಳಗೂ ಬರಬಹುದು...
ನಮ್ಮೆಣಿಕೆಯಂತೆ ಅಂತೂ ಸಾಗುವುದು ಅಪರೂಪದಲ್ಲಿ ಅಪರೂಪ...
ವಿಧಿನಿಯಮ ಅನ್ನುವುದಿದೆಯಲ್ಲಾ! ಅದನ್ನು ಕಂಡವರಿಲ್ಲ, ಕೇಳಿದವರಷ್ಟೇ ನಾವೆಲ್ಲ!
ಎಷ್ಟೋ ಕಷ್ಟ ಪಟ್ಟು ಒಂದು ಉತ್ತಮಸ್ಥಿತಿಗೆ ಬಂದಿರ್ತೇವೆ! ಅದನ್ನು ಮೆಚ್ಚಿ ನಾವು ಸಂತೋಷದಿಂದಿದ್ದರೆ ಅದನ್ನು ನೋಡಿ ಖುಷಿ ಪಡುವ ಸಂಬಂಧಿಗಳು ,ಹಿತೈಷಿಗಳು ನಮ್ಮ ಬೆನ್ನೆಲುಬಾಗಿ ನಿಲ್ಲುವವರಾದರೆ, ಮತ್ತೆ ಕೆಲವರ ಮನಸ್ಸು ನಾವು ಮೆಚ್ಚಿ ಖುಷಿಯಿಂದಿರುವುದನ್ನೂ,ನಮ್ಮ ಇಂದಿನ ಸ್ಥಿತಿಯನ್ನು ಒಪ್ಪಿಕೊಳ್ಳದು!
ಕೊಂಕು ಮಾತನಾಡದೆ ತೃಪ್ತಿಯಾಗದು!
ಉದಾಹರಣೆ : ಸದ್ಯವಷ್ಟೆ ನಮ್ಮ ಮನೆಗೆ ಬಂದ ಹಿರಿಯರು ( ನಿವೃತ್ತ ಶಿಕ್ಷಕರು ನಾವು ಅದೆಷ್ಟೋ ಗೌರವದಿಂದ ಕಂಡಂತಹ ವ್ಯಕ್ತಿ ) ಇದು ನಿಮ್ಮದು ಸ್ವಂತ ಮನೆಯೇ?!
ಅಲ್ಲಾ ಬಾಡಿಗೆದಾ?!
ಮನೆಯಲ್ಲಿ ಅದು ಇದೆಯೇ?!
ಪೇಟೆಯಿಂದ ಕೊಂಡು ತರುವುದೇ!?
ಮನೆಯಲ್ಲಿ ನೀವೇ ಮಾಡುವುದೆ?!
ಅದೆಲ್ಲದಕ್ಕೂ ಸಮಾಧಾನದಿಂದಲೆ ಉತ್ತರಿಸಿಯಾಯ್ತು...
ಅಂತೂ ಅವರಿಗೆ ತೃಪ್ತಿ ಆಗಿಲ್ಲ...
ಅಲ್ಲಾ...ನಿಮ್ಮ ಮಗಳು ಇರುವುದು?!ಇಲ್ಲಿಗೆ ಬರುವುದಿಲ್ಲವೇ?! ರಜದಲ್ಲಿ?!
ಮನಸ್ಸಿಂದ ದೇವರಲ್ಲಿ ಸದ್ಭುದ್ಧಿ ಕೊಡಪ್ಪಾ ಎಂದು ಬೇಡಿದೆ...
ಇಂಥವು ಹಲವು ಪ್ರಶ್ನೆಗಳು !?
ನನ್ನಜ್ಜಿ ಹೇಳ್ತಿದ್ದರಂತೆ , ನಮ್ಮಮ್ಮ ಹೇಳಿದ್ದರು ನಂಗೆ,ನಾನು ಏನು ಟೀಕೆ ಟಿಪ್ಪಣಿ ಮಾಡದೆ ಕೂರಬಹುದು ,ಆದರೆ ಎದುರಿನ ವ್ಯಕ್ತಿಯ ಟೀಕೆ ಟಿಪ್ಪಣಿಗಳನ್ನು ಕೇಳೆನೆಂದು ಕೂರಲಾದೀತೇ!?
ಎಂದು .
ಎಷ್ಟು ಸತ್ಯ ಅಲ್ವಾ?!
ಇದ್ದ ಗೌರವ ಎಲ್ಲಿಹೋಯ್ತೋ...ಗೊತ್ತಿಲ್ಲ! ಹುಡುಕಿ ತರಬೇಕಷ್ಟೆ !
ಇಂಥಹ ಮನಸ್ಸುಳ್ಳವರು, ಇನ್ನೊಬ್ಬರ ಏಳಿಗೆಯ ಸಹಿಸದೆ ಅವರ ಮನೆಯಲ್ಲೇ
ಉಂಡುಕೊಂಡು ನಯವಾಗಿ ಕೊಂಕು ಕೆಣಕುವವರು, ಎಂತಹ ಶಿಕ್ಷಣ ಮಕ್ಕಳಿಗೆ ನೀಡಿರಬಹುದು?! ಕನಿಷ್ಠ ಪಕ್ಷ ವಯೋ ಸಹಜ ಮನಸ್ಸು ಮಾಗಬೇಡವೇ?!
ಹೋಗಲಿ ಬಿಡಿ...ನಮಗೆ ಅರಿವಿರಲಿ!
ವಿಜಯಾ ನೀರ್ಪಾಜೆ.
0 Followers
0 Following