ಬಡತನ ಕಲಿಸಿದ ಬದುಕಿನ ಪಾಠ

ProfileImg
18 May '24
1 min read


image

ಜಗದೀಶ, ಹಳ್ಳಿಯ ವಿದ್ಯಾರ್ಥಿ. ಅವನ ಕನಸುಗಳು ದೊಡ್ಡವು, ಶ್ರೀಮಂತನಾಗಿ ಉತ್ತಮ ಜೀವನವನ್ನು ನಡೆಸುವುದು ಅವನ ಕನಸು. ಒಂದು ದಿನ, ಜಗದೀಶ ತನ್ನ ಸ್ನೇಹಿತನಾದ ರಾಮನಿಗೆ ಹೇಳಿದನು, "ನಾನು ದೊಡ್ಡ ಉದ್ಯಮಿಯಾಗಿ ಬಹು ಶ್ರೀಮಂತನಾಗಬೇಕೆಂದ." ಆದರೆ ರಾಮನು ನಕ್ಕು, 

ಬಡತನವು ನಮಗೆ ಬದುಕಿನ ಸತ್ಯವನ್ನು ಕಲಿಸುತ್ತದೆ." ಆದರೆ, ಇದಕ್ಕೊಪ್ಪದ ಜಗದೀಶ, ಇದನ್ನು ಕೇಳಿ ಅಸಹನೀಯತೆಯಿಂದ, "ನಾನೇನು ಕಲಿಯಬೇಕು?. ಬಡತನವು ನಮಗೆ ಉತ್ತಮ ಜೀವನವನ್ನು ಕೊಡುವುದಿಲ್ಲ" ಎಂದು ಮೌನವಾದನು.

ಅಂದು ಸಂಜೆ, ಜಗದೀಶ ಊರಿಗೆ ಹಿಂತಿರುಗುತ್ತಿದ್ದಾಗ, ಹಾದಿಯಲ್ಲಿದ್ದ ತಾಯಿಯನ್ನು ಗಮನಿಸಿದನು. ಆಕೆ ಬಡವಳಾದರೂ ತನ್ನ ಮಗಳಿಗೆ ಬಾಳೆಹಣ್ಣು ಕೊಡುವುದಕ್ಕಾಗಿ ಸ್ವಲ್ಪ ಹಣವನ್ನು ಮೀಸಲಿಟ್ಟಿದ್ದಳು. ಜಗದೀಶನು ಇದನ್ನು ನೋಡಿದಾಗ, ಆ ತಾಯಿಯ ತ್ಯಾಗ ಮತ್ತು ಪ್ರೀತಿಯು ಅವನಿಗೆ ಆಶ್ಚರ್ಯವಾಗಿತ್ತು.

ಮತ್ತೊಂದು ದಿನ, ಜಗದೀಶನ ತಂದೆ ರಮೇಶನು, ತನ್ನ ಮಿತ್ರನಾದ ಶಂಕರ್ ಬಾಗಿಲಿಗೆ ಬಂದಾಗ ಕಂಡುಬಂದ. ಶಂಕರ್, ಹಸಿದಿದ್ದಾಗ, ರಮೇಶನು ತನ್ನ ಮನೆಯಲ್ಲಿದ್ದ ಕುಚ್ಚಲಕ್ಕಿ ಅನ್ನವನ್ನು ಶಂಕರ್‌ಗೆ ನೀಡಿದ. ಶಂಕರ್ ಅದನ್ನು ಸ್ವೀಕರಿಸಿ, "ನಿನ್ನಂತಹ ಸ್ನೇಹಿತರಿದ್ದರೆ, ನಾನು ಬಡವನು ಅಲ್ಲವೇ ಅಲ್ಲ" ಎಂದನು. ರಮೇಶನಿಗೆ ಇದರಿಂದ ಹರ್ಷ ಉಂಟಾಯಿತು.

ಈ ಘಟನೆಯು ಜಗದೀಶನ ಮನಸ್ಸನ್ನು ಬದಲಿಸಿತು. ಅವನು ಬಡತನದ ಕಷ್ಟಗಳು ಜೀವನದ ನಿಜವಾದ ಮೌಲ್ಯಗಳನ್ನು ಕಲಿಸುತ್ತವೆ ಎಂಬುದನ್ನು ಅರಿತುಕೊಳ್ಳಲು ಪ್ರಾರಂಭಿಸಿದ. ಬಡತನವು ದುಃಖವನ್ನು ತರಬಹುದಾದರೂ, ಅದರಿಂದ ತ್ಯಾಗ, ಪ್ರೀತಿ, ಮೌಲ್ಯಗಳನ್ನು ಕಲಿಯಬಹುದಾಗಿದೆ. ಶ್ರೀಮಂತನಾಗುವ ಕನಸುಗಳಲ್ಲ, ಬದುಕಿನ ಸತ್ಯವನ್ನು ಅರಿಯುವ ಪ್ರಯತ್ನವನ್ನೂ ಮಾಡಬೇಕು ಎಂದು ಜಗದೀಶನು ನಿರ್ಧರಿಸಿದನು.

ಆದರೂ ಅವನು ತನ್ನ ಕನಸುಗಳನ್ನು ತ್ಯಜಿಸಿಲ್ಲ, ಆದರೆ ಅವನು ಬಡತನದ ತ್ಯಾಗ, ಮೌಲ್ಯ, ಮತ್ತು ಪ್ರೀತಿಯ ಪಾಠಗಳನ್ನು ಮರೆಯದೆ ಬದುಕಲು ಪ್ರಾರಂಭಿಸಿದನು. ಈ ಪಾಠಗಳೇ ಅವನನ್ನು ಯಶಸ್ವಿ ಮತ್ತು ಸಂತೃಪ್ತ ಜೀವನದ ಹಾದಿಯಲ್ಲಿಟ್ಟವು. ಜಗದೀಶನಿಗೆ ಈಗ ಶ್ರೀಮಂತಿಕೆಯ ಅರ್ಥ ಹೊಸದಾಯಿತು.

ಅಂತೂ, ಜಗದೀಶನು ತನ್ನ ಕನಸುಗಳನ್ನು ಸಾಫಲ್ಯಗೊಳಿಸಿದರೂ, ಅವನು ಯಾವಾಗಲೂ ಬಡತನದಲ್ಲಿ ಕಲಿತ ಜೀವನದ ಪಾಠಗಳನ್ನು ಹೃದಯದಲ್ಲಿ ಉಳಿತಾಯ ಮಾಡಿಕೊಳ್ಳುತ್ತಿದ್ದನು. 

Category:Stories



ProfileImg

Written by Vasanth kumar R