ಬದುಕು ಆಗಾಗ ಸುಕ್ಕುಗಟ್ಟುತ್ತದೆ
ಮುದುರಿ ಮೂಲೆ ಸೇರುತ್ತದೆ
ಇಸ್ತ್ರಿ ಪೆಟ್ಟಿಗೆಯೊಳಗಿನ ಕೆಂಡ ಕಾವೇರಬೇಕು
ಬದುಕಿನ ಬಟ್ಟೆಯನು ನಯಗೊಳಿಸಬೇಕು..!
ಬಟ್ಟೆಯುಟ್ಟ ಮೇಲೆ ಕಳೆ ಹೊಳೆಯುತ್ತದೆ
ಮುಖದ ಮೇಲೆ ಬೆಡಗು ಬೆಳಗುತ್ತದೆ
ಆತ್ಮವಿಶ್ವಾಸದ ಅನಾವರಣವಾಗಬೇಕು
ಬದುಕಿನ ದೃಷ್ಟಿ ಬದಲಾಗಬೇಕು..!
ಇಚ್ಛೆಗಳು ಉಚ್ಚ ಸ್ಥಾನದಲ್ಲಿರುತ್ತವೆ
ಅಂಧಕಾರ ಅಹಂಕಾರ ಪಟ್ಟವೇರುತ್ತವೆ
ಚಿಂತನೆಗಳ ಘರ್ಷಣೆ ಕಿಡಿಯಾಗಬೇಕು
ಆ ಕಿಡಿ ಜ್ಞಾನದೀಪವನ್ನು ಹೊತ್ತಿಸಬೇಕು..!
ಅಮೂರ್ತಗಳು ರೂಪ ತಳೆಯುತ್ತವೆ
ಅಂತರಂಗದ ಆಳದೊಳಗೆ
ತತ್ವ -ಸತ್ವಗಳ ಸಮಾಗಮವಾಗಬೇಕು
ಆತ್ಮದ ಅಧ್ಯಯನವಾಗಬೇಕು..!
- ರೂಪಾ ಹೊಸದುರ್ಗ
Writer
0 Followers
0 Following