ಬದುಕು ಬದಲಿಸುವ ಮಾರ್ಗದರ್ಶಿ

ಲೈಫ್ ಈಸ್ ಜಿಂಗಾಲಾಲ

ProfileImg
02 Jun '24
2 min read


image

 ಲೈಫ್ ಇಸ್ ಜಿಂಗಲಾಲ ಈ ಹೆಸರೆ ಸಾಕು ಪುಸ್ತಕವನ್ನು ಓದುವುದನ್ನ ಶುರುಮಾಡುವುದಕ್ಕೆ ಈ ಪುಸ್ತಕದಲ್ಲಿ ನಾವು ಯಾವ ರೀತಿಯ ಆಭ್ಯಾಸಗಳನ್ನು ರೂಢಿಸಿಕೊಳ್ಳಬೇಕುˌ ನಮ್ಮ ದಿನಚರಿ ಹೇಗಿರಬೇಕು?ಯಾಕೆ ಓದಬೇಕು ಬದುಕಿನಲ್ಲಿ ಸೋತೆವೂ ಎಂದ ಕೂಡಲೇಯಾಕೆ ಬದುಕಿನಿಂದ ವಿಮುಕ್ತರಾಗಬಾರದು.ಬೆಳಗ್ಗೆ ಎದ್ದಕೂಡಲೆ ಏನು ಮಾಡಬೇಕು. ನಮ್ಮ ಸುಪ್ತಮನಸಿನ ಮಾತನ್ನ ಯಾಕೆ ಕೇಳಬೇಕು ಹಾಡನ್ನು ಕೇಳುವುದರಿಂದ ಏನು ಲಾಭ? ಸಂಬಂಧಗಳನ್ನ ಉಳಿಸಿಕೊಳ್ಳುವುದಕ್ಕೆ ಏನು ಮಾಡಬೇಕುನಮ್ಮದೆ ಕಷ್ಟ ಎನ್ನುವ ಮೊದಲು ಬೇರೆಯವರ ಬದುಕನ್ನ ಯಾಕಾಗಿ ಗಮನಿಸಬೇಕುಈ ರೀತಿಯ ಆನೇಕ ವಿಷಯಗಳು ಇಲ್ಲಿವೇ ಇಲ್ಲಿ ರಿಚರ್ಡ್ ಬ್ರಾನ್ಸನ್ ವಿಜಯ್ ಸಂಕೇಶ್ವ‌ರ್,ಸುಧಾ ಮೂರ್ತಿ ಮಾಲತಿ ಹೊಳ್ಳ ಮುಂತಾದವರು ತಮ್ಮ ಕಥೆಯನ್ನ ನಿಮಗೆ ಹೇಳುತ್ತಾರೆ,ಯಾರು ಓದಬಹುದು ಇದನ್ನು ನೀವು ಜೀವನದಲ್ಲಿ ಸೋತವರ ಒಂದು ಗುರಿ ಇಲ್ವಾ ಸಂಬಂಧಗಳ ಮೇಲೆ ನಂಬಿಕೆ ಇಲ್ಲವೆ,ಜೀವನದಲ್ಲಿ ಯಶಸ್ಸು ಕಾಣಬೇಕು ಎಂಬ ಬಯಕೆಯೆ ಖಂಡಿತವಾಗಿ ಇದನ್ನ ಓದಿ
ಬದುಕಿಗೆ ಒಂದು ಪ್ರೇರಣೆ ಕೊಡುವ ಪುಸ್ತಕˌ
ಈ ಪುಸ್ತಕದಲ್ಲಿ ಏನು ಸಿಗುತ್ತೆ ಅಂದರೆ ನಾವು ಹೇಗೆ ಬದುಕಬೇಕು ಮತ್ತು ಯಾವ ರೀತಿ ಬದುಕುತ್ತಿದ್ದೆವೆ ಅನ್ನುವುದು ತಿಳಿಯುತ್ತೆˌನಮ್ಮ ಸೋಲಿಗೆ ಕಾರಣವೇನೂ ಯಾಕೆ ನಾವು ಸೋಲ್ತಿವಿˌಯಾಕೆ ನಾವು ಗುರಿಯನ್ನ ಇಟ್ಟುಕೊಂಡು ಜೀವನ ನಡೆಸಬೇಕು ನಮ್ಮ ಸಣ್ನ ಸಣ್ಣ ತಪ್ಪುಗಳು ನಮ್ಮನ್ನ ಯಾವ ರೀತಿ ಸಮಸ್ಯೆಗೆ ತೆಗೆದುಕೊಂಡು ಹೋಗುತ್ತೆˌನಾವು ಮಾಡುವ ಕಾರ್ಯಗಳು ಹೇಗೆ ಇರಬೇಕುˌನಾವು ಎಡವುದು ಎಲ್ಲಿ ಅನ್ನುವುದು ಈ ಪುಸ್ತಕವನ್ನ ಓದುವಾಗ ನಮಗೆ ಸ್ಪಷ್ಟವಾಗುತ್ತೆˌಎಷ್ಟೊ ಸಲ ನಾವು ನಮ್ಮದೆ ಕಷ್ಟ ನಮ್ಮಷ್ಟು ಕಷ್ಟ ಪಟ್ಟವರು ಯಾರು ಇಲ್ಲ ಅಂತ ಹೇಳುವುದು ನಮ್ಮ ಸಹಜ ಸ್ವಭಾವ' ಆದರೆ ಈ ಪುಸ್ತಕದಲ್ಲಿ ನಮಗಿಂತ ಅನ್ನುವುದು ದೂರದ ಮಾತುˌನಾವು ಆ ರೀತಿಯ ಕಷ್ಟಗಳನ್ನ ಯೋಚಿಸಿದರು ಹೃದಯ ಕಂಪಿಸಬೇಕು ಅಂತಹ ಅನೇಕರ ಉದಾಹರಣೆಯನ್ನ ನಮ್ಮ ಬದುಕಿಗೆ ಪ್ರೇರಕ ರೂಪವಾಗಿ ಇಲ್ಲಿ ಕೊಟ್ಟಿದಾರೆˌˌಇಲ್ಲಿ ಹೇಳುವ ವಿಷಯಗಳು ಸಣ್ಣ ಸಣ್ಣ ವಿಷಯಗಳು ಅನ್ನಿಸಬಹುದು ಆದರೆ ಈ ಸಣ್ಣ ಸಣ್ಣ ವಿಷಯಗಳಿಂದ ನಾವು ಪಾಠ ಕಲಿಯುತ್ತ ಬಂದರೆ ನಮ್ಮ ಬದುಕಿನಲ್ಲಿ ನಾವು ಯಶಸ್ಸು ಸಾಧಿಸುವುದು ಖಂಡಿತˌಯಶಸ್ಸಿನ ಜೊತೆಯಲ್ಲಿ ನಮ್ಮನ್ನ ಇತರರು ಪ್ರೇರಣೆಯಾಗಿ ತೆಗೆದುಕೊಳ್ಳುತ್ತಾರೆ ಅನ್ನುವುದರಲ್ಲಿ ಯಾವುದೆ ಅನುಮಾನವಿಲ್ಲˌಇಷ್ಟಕ್ಕೂ ಲೇಖಕರು ಹೇಳುವ ವಿಷಯಗಳು ಓದುವಾಗ ಅಷ್ಟು ಗಂಭೀರ ಅನಿಸುವುದಿಲ್ಲˌಆದರೆ ಅದರ ಪರಿಣಾಮಗಳು ಮಾತ್ರ ಗಂಭೀರˌನಮ್ಮ ಸೋಮಾರಿತನ ಬಟ್ಟೆಯನ್ನ ನಾವು ತೊಳೆಯದೆ ಹಾಗೆ ಬಿಡುವುದರ ಬಗ್ಗೆ ಹೇಳುತ್ತಾರೆˌನಾವು ಭಾನುವಾರ ತೊಳೆದರೆ ಸಾಕು ಅಂತ ಸುಮ್ಮನೆ ಆಗುತ್ತೇವೆ ಭಾನುವಾರ  ಸಮಯ ಸಿಕ್ಕಿದರೆ ಸರಿ ಇಲ್ಲದೆ ಹೋದರೆ ಹಾಕುವುದಕ್ಕೆ ಬಟ್ಟೆ ಇರುವುದಿಲ್ಲˌನಾವು ಗಂಡನ ಬಗ್ಗೆಯೊ ಹೆಂಡತಿಯ ಬಗ್ಗೆಯೊ ಮಾಡಿಕೊಳ್ಳುವ 
ಒಂದು ಸಣ್ಣ ಅನುಮಾನದಿಂದ ಯಾವ ರೀತಿ ಸಂಬಂಧ ನಾಶವಾಗುತ್ತೆ ಅಂತ ತಿಳಿಸಿಕೊಡುತ್ತೆˌಅಷ್ಟೆ ಯಾಕೆ ನಾವು ಯಾವ ಕೆಲಸವನ್ನು ಮಾಡಬಾರದುˌಯಾವುದನ್ನ ಮಾಡಬೇಕುˌಮಾಡುವ ಕೆಲಸಗಳು ಯಾಕೆ ಮಾಡಬೇಕುˌಇಂತಹ ಕೆಲಸವನ್ನು ಯಾಕೆ ಮಾಡಬಾರದು ಅನ್ನುವುದು ನಮಗೆ ಸ್ಪಷ್ಟವಾಗುತ್ತೆˌಇದು ನಿಜ ಹೇಳಬೇಕೆಂದರೆ ಯಾವುದೋ ಪುಸ್ತಕ ಓದುತ್ತಿದ್ದೇವೆ ಅಂತ ಅನಿಸುವುದಿಲ್ಲ ನಮ್ಮನ್ನ ನಮಗೆ ಯಾರೋ ಪರಿಚಯ ಮಾಡಿಕೊಡುತ್ತಿದ್ದಾರೆ ಅನಿಸುತ್ತೆˌಇನ್ನೊಂದು ಕೂಡ ಹೌದು ನಾನು ಇದೆ ತಪ್ಪನ್ನ ಮಾಡುತ್ತಿರುವೆˌಅನ್ನುವುದು ಸ್ಪಷ್ಟವಾಗುತ್ತೆ ಆ ತಪ್ಪುಗಳನ್ನ ಸರಿಮಾಡಿಕೊಂಡರೆ ಪುಸ್ತಕ ಬರೆದುದಕ್ಕೆ ಲೇಖಕನು ಸಾರ್ಥಕˌನಮ್ಮ ಜೀವನವು ಸಾರ್ಥಕ್ಯವನ್ನು ಕಾಣುತ್ತೆˌಇಲ್ಲಿ ಸೋಲಿನ ಬಗ್ಗೆ ಗೆಲುವಿನ ಬಗ್ಗೆˌನಮ್ಮ ತಪ್ಪುಗಳˌಮಹನೀಯರ ಬಗ್ಗೆ  ಅವರು ಹೇಗೆ ಮಹನೀಯರು ಆದರು ಅನ್ನುವುದರ ಬಗ್ಗೆ ಈ ರೀತಿ ಆನೇಕ ವಿಷಯಗಳು ನಮಗೆ ಸಿಗುತ್ತೆˌಯಾಕೆ ಓದಬೇಕು ಹಾಡು ಯಾಕೆ ಕೇಳಬೇಕುˌಮನೆಯಲ್ಲಿ ಹೇಗಿರಬೇಕುˌಈ ರೀತಿಯ ಆನೇಕ ಜೀವನ ಪಾಠಗಳನ್ನ ನಮಗೆ ತಿಳಿಸುತ್ತೆˌ

Category:Books



ProfileImg

Written by Muruli Aldur

0 Followers

0 Following