ವಿಶ್ವ ಪರಿಸರ ದಿನದ ಶುಭಾಶಯಗಳು
ಮನೆಗೊಂದು ಮರ ಇರಲಿ
ದೆಹಲಿಯಲ್ಲಿ ಉಷ್ಣತೆ 50 ಡಿಗ್ರಿಗೆ ತಲುಪಿದೆ ಉಷ್ಣತೆ 50 ಡಿಗ್ರಿಗಿಂತ ಹೆಚ್ಚಿದ್ದರೆ ಮನುಷ್ಯನಿಗೆ ತಾಳಿಕೊಳ್ಳಲು ಅಸಾಧ್ಯವಾಗಿ ಮರಣವುಂಟಾಗುತ್ತದೆ ಎಂದು ಎಲ್ಲೋ ಓದಿದ ನೆನಪು
ಉಷ್ಣತೆ ಹೆಚ್ಚಾಗಲು ಕಾರ್ಬನ್ ಡೈ ಓಕ್ಸೈಡ್ ಅನಿಲ ಕಾರಣ,
ಇಂಧನ ಉರಿದಾಗ ವಾಹನಗಳಿಂದ ಫಾಕ್ಟರಿಗಳಿಂದ ಅಪಾರ ಪ್ರಮಾಣದ ಕಾರ್ಬನ್ ಡೈ ಓಕ್ಸೈಡ್ ಬಿಡುಗೆಯಾಗುತ್ತದೆ ಜೊತೆಗೆ ಮನುಷ್ಯ ಸೇರಿದಂತೆ ಎಲ್ಲ ಪ್ರಾಣಿ ಪಕ್ಷಿಗಳು ಉಸಿರಾಡಿದಾಗ ಬಿಡುವ ಗಾಳಿಯಲ್ಲಿ ಕಾರ್ಬನ್ ಡೈಆಕ್ಸೈಡ್ ಇರುತ್ತದೆ.ಇದು ಉಷ್ಣತೆಯನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ
ಆದ್ದರಿಂದ ಇದರ ಪ್ರಮಾಣ ಹೆಚ್ಚಾದಾಗ ವಾತಾವರಣದ ಉಷ್ಣತೆ ಹೆಚ್ಚಾಗುತ್ತದೆ .ಇದರ ಪ್ರಮಾಣವನ್ನು ಕಡಿಮೆ ಮಾಡಲು ಮರಗಳಿಂದ ಮಾತ್ರ ಸಾಧ್ಯ ಮರಗಿಡಗಳು ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಂಡು ಆಕ್ಸಿಜನ್/ ಆಮ್ಲಜನಕವನ್ನು ವಾತಾವರಣಕ್ಕೆ ಕೊಡುತ್ತದೆ
ದೆಹಲಿಯ ಉಷ್ಣತೆ ಬೆಂಗಳೂರು ತಲುಪಲು ಹೆಚ್ಚು ದಿನ ಬೇಕಾಗಿಲ್ಲ ನಿರಂತರ ಮರ ಕಡಿಯುತ್ತಾ ಕಾಂಕ್ರೀಟ್ ಕಾಡನ್ನು ಬೆಳೆಸುತ್ತಾ ಸಾಗಿದರೆ ಡೆಲ್ಲಿಯ ಉಷ್ಣತೆ ಬೆಂಗಳೂರಿಗೆ ಕೆಲವು ವರ್ಷಗಳಲ್ಲಿ ಬರಬಹುದು ಇದನ್ನು ತಡೆಯುವ ಸಲುವಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ ಮುಂದೆ ಗಿಡ ನೆಟ್ಟು ಮರ ಮಾಡಿ ಮರ ಆಕ್ಸಿಜನ್ ಅನ್ನು ಮಾತ್ರ ಕೊಡುವುದಲ್ಲ ತಂಪು ನೆರಳು,ತಣ್ಣಗಿನ ಗಾಳಿ ಕಣ್ಣಿಗೆ ಸುಂದರ ಹಸಿರು ಎಲೆ ಬಣ್ಣದ ಹೂಗಳನ್ನು ರುಚಿಯಾದ ಹಣ್ಣುಗಳನ್ನು ಕೊಡುತ್ತವೆ .ಒಂದು ಮರ ತನ್ನ ಜೀವಿತಾವಧಿಯಲ್ಲಿ ಐದುನೂರು ಕೋಟಿ ರೂ ಬೆಲೆಬಾಳುವ ಆಕ್ಸಿಜನ್ ಅನ್ನು ನೀಡುತ್ತದೆ ಎಂದರೆ ಅದು ನೀಡುವಷ್ಟು ಆಕ್ಸಿಜನ್ ಅನ್ನು ಕೃತಕವಾಗಿ ತಯಾರಿಸಲು ಅಷ್ಟು ಖರ್ಚಾಗುತ್ತದೆ
ಇಂದೇ ಗಿಡ ನೆಡಿ ಪರಿಸರ ಸಂರಕ್ಷಣೆಯಲ್ಲಿ ಕೈ ಜೋಡಿಸೋಣ
(ಚಿತ್ರ ನಮ್ಮ ಮನೆ ಅಂಗಳದ ಮೀಸೆ ಹೂವಿನ/ ರತ್ನ ಗಂಟಿ ಮರ)
0 Followers
0 Following