ಭಾರತ ಒಂದು ಸುಸಂಸ್ಕೃತ ದೇಶ ಇಲ್ಲಿ ಆಚರಿಸಲ್ಪಡುವ ಪ್ರತೀ ಆಚರಣೆಗಳ ಹಿಂದೆ ಒಂದು ಉತ್ತಮವಾದ ಸಂದೇಶದೊಂದಿಗೆ ಸಂಸ್ಕಾರ ,ಕೃತಜ್ಞತೆ ಹಾಗೂ ದೈವೀಕತೆ ಇರುತ್ತದೆ !
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂಯೇನ ತಸ್ಮೈಶ್ರೀ ಗುರವೇ ನಮಃ ||
ನಿರ್ಮಲ ಜ್ಞಾನ ಬೋಧಾಯ |
ನಿರಂಜನ ಲೀಲಾ ಧರಾಯ ಚ ||
ಕೋಟಿ ಸ್ರೋಯ ಪ್ರಕಾಶಾಯ |
ತಸ್ಮೈ ಶ್ರೀ ಗುರವೇ ನಮಃ ||
ಅಂದರೆ ಅಜ್ಞಾನದ ಕತ್ತಲಿನಿಂದ ಕುರುಡಾಗಿದ್ದವನ ಕಣ್ಣನ್ನು ಜ್ಞಾನವೆಂಬ ದೀಪದಿಂದ ತೆರೆಸಿದ ಗುರುವಿಗೆ ಪ್ರಣಾಮಗಳು.ನಿರ್ಮಲವಾದ ಶ್ರೇಷ್ಠ ಜ್ಞಾನ ಭೋದಿಸಿದ ,ಸೃಷ್ಟಿಕರ್ತನ ಲೀಲೆಯನ್ನು,ಸಕಲ ಚರಾಚರ ಜಗತ್ತನ್ನು ವ್ಯಾಪಿಸಿರುವ ತತ್ವವನ್ನು ತೋರಿಸಲ್ಪಟ್ಟ ಸೂರ್ಯನ ಪ್ರಕಾಶದಂತೆ ಧರೆಯಲ್ಲಿ ಪ್ರಕಾಶಿಸುತ್ತಿರುವರುವ ಗುರುವಿಗೆ ನನ್ನ ನಮಸ್ಕಾರಗಳು!
ಇಂದು ಗುರು ಪೂರ್ಣಿಮಾ ನಮ್ಮ ಪೂರ್ವಿಕರು ಆಷಾಢ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ "ಗುರು ಪೂರ್ಣಿಮೆ" ಎಂದು ಆಚರಿಸುತ್ತಾರೆ,ಇದೊಂದು ಧಾರ್ಮಿಕ ಆಚರಣೆಯಾಗಿದ್ದು ಈ ದಿನದಂದು ತಮ್ಮ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಗುರುಗಳನ್ನು ಗೌರವಿಸುವ ಸಲುವಾಗಿ ಆಚರಿಸಲಾಗುತ್ತದೆ. ಇದನ್ನು ಹಿಂದೂಗಳು, ಬೌದ್ಧರು ಮತ್ತು ಜೈನರು ತಮ್ಮ ಗುರುವಿಗೆ ಪೂಜೆ ಸಲ್ಲಿಸುವದರು ಮೂಲಕ ಆಚರಿಸುತ್ತಾರೆ,ಈ ಗುರುಪೂರ್ಣಿಮೆಯ ದಿನದಂದು ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿ ಯಾಗಿರುತ್ತದೆ ಎಂದು ನಂಬಲಾಗುತ್ತದೆ ಹಿಂದೂಗಳ ಯೋಗ ಸಂಪ್ರದಾಯದ ಪ್ರಕಾರ, ಈ ದಿನವು ಶಿವ ಸುಪ್ತಋಷಿಗಳಿಗೆ ಯೋಗವನ್ನು ಕಲಿಸಲು ಪ್ರಾರಂಭಿಸಿದ ದಿನವೆಂದು ಮತ್ತು ಅಧಿಕೃತವಾಗಿ ಶಿವ ಮೊದಲ ಗುರುವಾಗ ಕ್ಷಣವನ್ನು ಸೂಚಿಸುತ್ತದೆ. ಹಾಗೆಯೇ ಇನ್ನೊಂದು ಪುರಾಣದ ಪ್ರಕಾರ ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ಬ್ರಹ್ಮರ್ಷಿ ಬಿರುದಾಂಕಿತ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಅಲ್ಲದೆ ಅವರು ಮಹಾಭಾರತವನ್ನು ರಚಿಸಿದ ಕವಿಯೂ ಹೌದು. ವೇದಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಕೀರ್ತಿಯು ಇವರಿಗೆ ಸಲ್ಲುತ್ತದೆ. ಗುರು ಪೂರ್ಣಿಮೆಯು ಬುದ್ಧಿವಂತಿಕೆ, ಆಧ್ಯಾತ್ಮಿಕ, ಸಾಹಿತ್ಯಿಕ ಜ್ಞಾನಕ್ಕೆ ವ್ಯಾಸ ಮಹರ್ಷಿಗಳು ನೀಡಿದ ಕೊಡುಗೆಗಳನ್ನು ಗೌರವಿಸುವ ದಿನವಾಗಿದೆ. ವೇದವ್ಯಾಸ ಮಹರ್ಷಿಗಳು ಹುಟ್ಟಿದದಿನದ ಜೊತೆಗೆ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದ ದಿನವಾಗಿಯೂ ಈ ದಿನ ಮಹತ್ವ ಪಡೆದುಕೊಂಡಿದೆ. ಜೊತೆಗೆ ಈ ದಿನದಿಂದ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗಾಗಿ ಈ ದಿನವನ್ನು ವ್ಯಾಸಪೂರ್ಣಿಮ ಎಂದೂ ಕರೆಯಲಾಗುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಈ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಗುತ್ತದೆ.ಇನ್ನೂ ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಹಾಗೆಯೇ ಜೈನ ಸಂಪ್ರದಾಯದಲ್ಲಿ ಗುರು ಪೂರ್ಣಿಮವನ್ನು ಟ್ರಿನೋಕ್ ಗುಹಾ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ ಪ್ರತಿಯೊಬ್ಬರ ಜೀವನದಲ್ಲೂ ಗುರು ಪ್ರಮುಖ ಪಾತ್ರ ವಹಿಸುತ್ತಾರೆ. ನಮ್ಮ ನಮ್ಮಗುರುವಿನ ಕಾರಣದಿಂದಲೇ ನಾವು ಪ್ರಾಪಂಚಿಕ ಜ್ಞಾನದ ಜೊತೆ ಒಂದು ಗುರಿ ಮುಟ್ಟಲು ಸಾಧ್ಯವಾಗಿದೆ, ಹಾಗಾಗಿ ನಮ್ಮ ಜ್ಞಾನಕ್ಕೆ ಹಾಗೂ ನಮ್ಮಗುರಿಗೆ ಕಾರಣರಾದ ಗುರುಗಳಿಗೆ ಕೃತಜ್ಞತೆಸಲ್ಲಿಸ ಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಹಾಗಾಗಿ ಮೊದಲಿಗೆ ನಾವು ಕೃತಜ್ಞತೆ ಸಲ್ಲಿಸಬೇಕಾದದ್ದು ದೇವರಿಗೆ.ಪ್ರಪಂಚದ ಸೃಷ್ಟಿಕರ್ತನು ಎಲ್ಲವನ್ನೂ ಸುಂದರವಾಗಿ ಸೃಷ್ಟಿಸಿ ನಮಗೊಂದು ಸುಂದರ ಬದುಕನ್ನು ಕೊಟ್ಟ ಆ ದೇವರಿಗೆ ಮೊದಲು ನಮಿಸಿ ಕೃತಜ್ಞತೆ ಸಲ್ಲಿಸುತ್ತಾ ನಮ್ಮಜೀವನದಲ್ಲಿ ಮೊದಲ ಗುರುವಾಗಿ ಬರುವ ಜನ್ಮನೀಡಿದ ತಂದೆ ತಾಯಿಗಳನ್ನು ಸ್ಮರಿಸಬೇಕು ಪ್ರತಿಯೊಬ್ಬ ವ್ಯಕ್ತಿಗೂ ಮನೆಯೇ ಮೊದಲ ಪಾಠಶಾಲೆಯಾಗಿರುತ್ತದೆ ಆಟ ಪಾಠದ ಜೊತೆ ಪೋಷಕರು ಬದುಕಿನ ನೈತಿಕ ಮೌಲ್ಯಗಳ ಮಹತ್ವವನ್ನು ಕಲಿಸುತ್ತಾರೆ , ಪ್ರಾಪಂಚಿಕ ಜೀವನದ ಜೊತೆ ಬದುಕಿನ ಅರ್ಥ, ಗುರಿ ಹಾಗೂ ಸನ್ಮಾರ್ಗ ತೋರಿಸುವ ಮಾರ್ಗದರ್ಶಿಯಾಗಿ ನಮಗೆ ವಿದ್ಯೆ ಬುದ್ದಿ ಜ್ಞಾನ ಕೊಟ್ಟ ಗುರುಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತ ಎಲ್ಲಾ ಗುರುವರ್ಯರಿಗೂ ನಮಿಸುತ್ತಾ ಧನ್ಯವಾದಗಳನ್ನು ಹೇಳೋಣ .
ಓಂ ಗುರುಭ್ಯೋ ನಮಃ !
ಗೀತಾಂಜಲಿ ಎನ್, ಎಮ್
Author ✍️
0 Followers
0 Following