ಮಾತಿನಲ್ಲಿ ಹಿಡಿತವಿರಲಿ

ProfileImg
12 Jul '24
1 min read


image

ಬರೆ ಬರೆ ಬರೆ ಎಂದು ನಿತ್ಯವೂ ಬರಯಲು ನೆನಪಿಸುವ ನಾ  ಹೆತ್ತಮಗಳ ಮತ್ತು   ಶ್ರೀಗುರುಕೃಪೆಯ ಎನ್ನಣ್ಣ ಇವರೀರ್ವರ  ಒತ್ತಾಯ ಕ್ಕೆ ಶುರುಮಾಡದೆ ಸುಮ್ಮನಿರಲಾರೆ...

ಸಮಾಜದಲ್ಲಿ  ಅತ್ಯಂತ ಹೆಚ್ಚು ಮಾತನಾಡುವ ವಿಷಯ 
ಇನ್ನೊಂದು ಮನೆಯ ವಿಚಾರವನ್ನು ಎತ್ತಿ ಆಡುವಂಥದ್ದು... ಯಾಕೆ ಬೇಕು?!
ಘಟನೆಗಳು ಘಟಿಸಿದವು ...ಬರವಣಿಗೆ ಯನ್ನು ನೆನಪಿಸಿಯೇ ಹೋಗುವವು...
ಮತ್ಯಾವುದೋ ಕರ್ತವ್ಯ ನೆನಪಾದಾಗ ಮರೆತವುಗಳು ಹಲವು!
ಆ ಮನೆಯ ಪರಿಸ್ಥಿತಿ ಪೂರ್ತಿಯಾಗಿ ನಮಗೆ ಗೊತ್ತೇ?!
ಕಣ್ಣಾರೆ ಕಂಡಿದ್ದೇವೆಯೇ?!
ಒಂದು ಪಕ್ಷ ಹಾಗಿದ್ದಲ್ಲಿ ಪರಾಂಬರಿಸಿ ನೋಡಿದ್ದೇಯೇ!?

ಆ ಮನೆಯ ಒಬ್ಬ ಸದಸ್ಯನ ಮಾತನ್ನು ಕೇಳಿ ಊರಿಡೀ ಡಂಗುರ ಸಾರಿ ಏನು ಚಂದ ನೋಡಬೇಕು ನಾವು?! ಆ ಮನೆಯ ಇತರ ಸದಸ್ಯರಿಗೆ ನಾವು ಊರಿಡೀ ಡಂಗುರ ಸಾರಿದ್ದು ತಿಳಿದು ನೊಂದರೆ ಅದು ನಮಗೆ ತಟ್ಟದೇ?!
ಅಂಥಾ ಪಾಪ ನಾವ್ಯಾಕೆ ಮಾಡಬೇಕು?!

ನಮ್ಮ ನಮ್ಮ ಮನೆಗಳಲ್ಲಿಲ್ಲವೇ ಹಾಸಿ ಹೊದೆಯುವಷ್ಟು ಸಮಸ್ಯೆಗಳು!? ಅದರ ಪರಿಹರಿಸುವ ಕಡೆ ನಮ್ಮ ಗಮನ ಇದೆಯೆ!?
ಕಷ್ಟವಿರಲಿ ಸುಖವಿರಲಿ ಆಯಾಯ ಪರಿಸ್ಥಿತಿಗಳಲ್ಲಿ ನಮ್ಮನ್ನು  ಕಂಡುಕೊಂಡರೆ ಎಲುಬಿಲ್ಲದ ನಾಲಿಗೆ ಬೇಕಾಬಿಟ್ಟಿ ಹೊರಳಾಡದು!
ಎಚ್ಚರವಿರಲಿ...

ಅಷ್ಟಕ್ಕೂ ನಮ್ಮ ಮನೆಯವರ , ನಮ್ಮ ಮಕ್ಕಳನ್ನು  ಇತರರು ಆಡಿದರೆ ನಮಗೆ ನೋವಾಗದೇ?!
ಯಾಕೆಬೇಕು?! ನೋಯಿಸಕಲಸ…ಅ…ಅಷ್ಟು ಮಾತ್ರವೇ... ನಮ್ಮ ಮನೆಯವರ ಜೊತೆಯೇ ನಾವು ಬದುಕಬೇಕು! ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬೇಕೇ ವಿನಹ ಮತ್ಯಾರೋ ಬಂದು ನಮ್ಮ ಸಮಸ್ಯೆಯನ್ನು ಬಗೆ ಹರಿಸಲಾರರು!
ಹಾಗಂತ ನಮ್ಮಮ‌ನೆಯ ಸಮಸ್ಯೆಗಳನ್ನು ಮನೆಯಿಂದ ಹೊರ ಹಾಕುವುದು ಬಿಡುವುದು ಮೂರ್ಖತನ.

ಮನೆ ಎಂದ ಮೆಲೆ ಒಂದು ಮಾತು ಬರುವುದು ಹೋಗುವುದು ಸಹಜ!
ಒಂದೇ ಅಮ್ಮನ ಮಕ್ಕಳ ಮನಸ್ಸೇ ವಿಭಿನ್ನವಿರುವಾಗ ಮನೆಯ ಸದಸ್ಯರ ನಡೆಯೂ ವಿಭಿನ್ನ ...ಅಷ್ಟು ಅರಿತು ನಡೆದರೆ ಮಾತ್ರ ಬದುಕು ಸುಂದರ…ವಿಜಯಾ ನೀರ್ಪಾಜೆ.

Category:Relationships



ProfileImg

Written by Vijayalakshmi Neerpaje

0 Followers

0 Following