*ಸಾಯುವ ಮುನ್ನ ಖಾಲಿಯಾಗೋಣ

ಶೂನ್ಯದಿಂದ ಶೂನ್ಯದೆಡೆಗೆ

ProfileImg
22 May '24
1 min read


image

ಸಭೆಯೊಂದರಲ್ಲಿ ಭಾಗವಹಿಸಿದ್ದಾಗ ಸಭಿಕರೊಬ್ಬರು  ಪ್ರಶ್ನಿಸಿದರು -
ಇಡೀ ವಿಶ್ವದಲ್ಲೇ ಅತ್ಯಂತ ದುಬಾರಿ ಭೂಮಿ ಎಲ್ಲಿದೆ, ಯಾವುದು?' 
ಗಲ್ಫ್ ದೇಶಗಳು ಅಂತ ಒಬ್ಬರು, ವಜ್ರದ ಗಣಿಗಳಿರುವ ಆಫ್ರಿಕಾ ಎಂದು ಇನ್ನೊಬ್ಬರು ಉತ್ತರಿಸುತ್ತಾರೆ.
ಆಗ ಅಲ್ಲೊಬ್ಬರು ಎಲ್ಲರನ್ನು ಅಚ್ಚರಿಗೊಳಿಸುವ ಉತ್ತರ ನೀಡುತ್ತಾರೆ.
-ಸ್ಮಶಾನ ಈ ಜಗತ್ತಿನ ಅತ್ಯಂತ ದುಬಾರಿ ಸ್ಥಳ!'
ಏಕೆಂದರೆ...
ಅವರೇ ವಿವರಣೆ ನೀಡುತ್ತಾರೆ.
ಅನಾದಿ ಕಾಲದಿಂದಲೂ ಈ ಜಗತ್ತಿನಲ್ಲಿ ಲಕ್ಷಾಂತರ ಜನರು ಹುಟ್ಟಿ ಸತ್ತಿದ್ದಾರೆ.  ಇನ್ನೂ ಹುಟ್ಟುತ್ತಿದ್ದಾರೆ, ಸಾಯುತ್ತಿದ್ದಾರೆ ..  ಹುಟ್ಟಿದವರಲ್ಲಿ ಕೆಲವೇ ಕೆಲವರು ತಮ್ಮ ಬುದ್ಧಿವಂತಿಕೆಯನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುತ್ತಾರೆ.  ಆದರೆ ಅವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮಲ್ಲಿರುವ ಬುದ್ಧಿಮತ್ತೆ, ಅದ್ಭುತ ಯೋಜನೆಗಳು,ಆಲೋಚನೆಗಳು ಮತ್ತು ಅದ್ಭುತವಾದ ವಿಚಾರಗಳನ್ನು ತಮ್ಮೊಳಗೇ ಅಡಗಿಸಿಕೊಂಡು ಇಹಲೋಕ ತ್ಯಜಿಸಿದ್ದಾರೆ. ಅವ್ಯಾವೂ ಬೆಳಕು ಕಂಡಿಲ್ಲ, ಅಂತಹ ಆಲೋಚನೆಗಳಿಂದಾಗಿ ಈ ಜಗತ್ತಿಗೆ ಸಿಗಬೇಕಾದ ತಕ್ಕ ಲಾಭ ಸಿಕ್ಕಿಲ್ಲ. ಅವುಗಳೆಲ್ಲವೂ ಸಮಾಧಿಗಳಲ್ಲಿ ಸಮಾಧಿಯಾಗಿವೆ.  ಇಂತಹ ಬೆಲೆಬಾಳುವ ಸಂಪತ್ತನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಸ್ಮಶಾನಕ್ಕಿಂತ ಬೆಲೆಬಾಳುವ ಭೂಮಿ ಬೇರೆ ಎಲ್ಲಿದೆ ಹೇಳಿ?' ಆ ಸಭಿಕರ ಮಾತುಗಳು ಟಾಡ್ ಹೆನ್ರಿಯ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದವು.
ಆ ಸ್ಫೂರ್ತಿಯಿಂದಲೇ ಟಾಡ್ ಹೆನ್ರಿ "Die Empty " ಪುಸ್ತಕವನ್ನು ಬರೆದು ಅತ್ಯುತ್ತಮ ಬರಹಗಾರ ಎಂದು ಹೆಸರಾದರು.
ಈ ಪುಸ್ತಕದಲ್ಲಿ ಅವನು ಒಂದು ಕಡೆ ಹೇಳುತ್ತಾನೆ...
- ನಿಮ್ಮ ಸೃಜನಶೀಲತೆಯನ್ನು ನಿಮ್ಮಲ್ಲಿ ಮರೆಮಾಡಿಕೊಂಡು  ಸಮಾಧಿಗಳಲ್ಲಿ ಶಾಶ್ವತವಾಗಿ ನಿದ್ರಿಸದಿರಿ, ಅದನ್ನು ಈ ಜಗತ್ತಿಗೆ ಹಂಚಲು ಮರೆಯದಿರಿ.

ಟಾಡ್ ಹೆನ್ರಿ ನಿಜವಾಗಿಯೂ ಹೇಳ ಬಯಸಿದ್ದು...
ನೀವು ಇಹಲೋಕ ತ್ಯಜಿಸುವ ಮುನ್ನ ನಿಮ್ಮಲ್ಲಿರುವ ಒಳ್ಳೆಯದನ್ನು ಜಗತ್ತಿಗೆ ಹಂಚಿಕೊಳ್ಳಿ. ನಿಮಗೆ ಒಳ್ಳೆಯ ಆಲೋಚನೆ ಇದ್ದರೆ, ಸಾಯುವ ಮೊದಲು ಅದನ್ನು ಆಚರಣೆಗೆ ತನ್ನಿ,ನಿಮ್ಮ ಜ್ಞಾನವನ್ನು ನಾಲ್ವರಿಗೂ ಹರಡಿ,ನಿಮಗೆ ಯಾವುದೇ ಗುರಿ ಇದ್ದರೆ ಸಾಯುವ ಮುನ್ನ ಅದನ್ನು ಸಾಧಿಸಿ. 
ಮಿತ್ರರೇ 
ಇಂದಿನಿಂದ ನಮ್ಮ,ನಿಮ್ಮಲ್ಲಿರುವ ಜ್ಞಾನವನ್ನು,ನಮಗೆ ತಿಳಿದುದನ್ನು ಎಲ್ಲರಿಗೂ ಹಂಚಲು ಆರಂಭಿಸೋಣ.  ನಮ್ಮ ಲ್ಲಿರುವ ಜ್ಞಾನದ ಪ್ರತಿ ಅಣುವನ್ನೂ ಎಲ್ಲರಿಗೂ ನೀಡೋಣ!
ಆಮೇಲೆ ಆರಾಮಾಗಿ...ಸದ್ದಿಲ್ಲದೆ....
   Let us *Die Empty*

Category:Spirituality



ProfileImg

Written by shambhu studio