ಗಿಳಿ ಬಾಗಿಲು: ಹವ್ಯಕ ಕನ್ನಡದ ಗಾದೆ ಮತ್ತು ನುಡಿಗಟ್ಟುಗ
ಒಂದು ರೆಚ್ಚೆಂದ ಬಿಡ ಇನ್ನೊಂದು ಗೂಂಜಿಂದ ಬಿಡ
ಹಲಸಿನ ಹಣ್ಣಿನ ಬಗ್ಗೆ ಎಲ್ಲೊರಿಂಗೂ ಗೊತ್ತಿದ್ದು
ಅದೇನೂ ಹೊಸ ವಿಚಾರ ಅಲ್ಲ.
ಈ ಹಣ್ಣಿನ ಕೊರವಲೂ ಒಳ್ಳೆ ನ್ಯಾಕ್ ಬೇಕು.
ಸಾಮಾನ್ಯವಾಗಿ ಎತ್ತ,ಂದ ಮೆಟ್ಟು ಕತ್ತಿಗೆ ಬಡಕ್ಕ ಹೇಳಿ ಬಲವಾಗಿ ಹಾಕುತ್ತವು.
ಅಂಬಗ ಅದು ಬಿಚ್ಚುತ್ತು
ಮತ್ತೆ ತುಂಡು ಮಾಡಿ ತೆಗವದು.ನಂತರ ಗೂಂಜಿಗ ತುಂಡು ಮಾಡಿ ತೆಗದು ,ರೆಚ್ಚೆಗೆ ಅಂಟಿಕೊಂಡು ಇಪ್ಪ ಸೊಳೆಯ ಎಳಕ್ಕಿಸಿ ತೆಗದು ಹೂಸರೆ ಹೊದುಂಕುಳು ಬೇಳೆಯ ತೆಗದು ತಿಂಬದುಎಲ್ಲೊರಿಂಗೂ ಗೊಂತಿಪ್ಪದೇ
ಇದರಲ್ಲಿ ಕೆಲವು ಜಾತಿಯ ಹಲಸಿನ ಹಣ್ಣುಗಳ ಗೂಂಜಿನ ತುಂಡು ಮಾಡುಲೆ ಕಷ್ಟ ಕೆವದರಿಂದ ಎಳಕ್ಕುಲೆ ಕಷ್ಟ ಆವುತ್ತು
ಎರಡೂ ಒಟ್ಟಿಗೆ ಕಷ್ಟ ಇಪ್ಪದೂ ಇದ್ದು.ಅದರಲ್ಲಿ ರೆಚ್ಚೆಂದ ಬಿಡ್ಸುಲೂ ಎಡ್ತಿಲ್ಲೆ.ಗೂಂಜಂದ ಬಿಡುಸುಲೂ ಎಡ್ತಿಲ್ಲೆ .ಇದು ಒಂದು ಗಾದೆಯ ವಸ್ತು ಆಯಿದು
ಮಕ್ಕೊಗೆ ಆಡುಲೆ ಎಷ್ಟೇ ಸಾಮಾನುಗ ಇರಲಿ,ಒಬ್ಬ ತೆಕ್ಕೊಂಡದೇ ಇನ್ನೊಬ್ಬಂಗೆ ಬೇಕು.ಅದೇ ಬೇಕು ಹೇಳಿ ಇಬ್ರುದೆ ಹಠ ಮಾಡುತ್ತವು.ಅಷ್ಟಪ್ಪಗ ಅಲ್ಲಿಪ್ಪೆ ಹೆರಿಯೋರು ದೊಡ್ಡೋನತ್ರೆ ಅವ ನಿನ್ನ ತಮ್ಮ ಅಲ್ಲದಾ ಅವಂಗೆ ಕೊಡು ಹೇಳಿರೆ ಅವ ಕೇಳುತ್ತಾ ಇಲ್ಲ ,ಸಣ್ಣೋನ ಹತ್ತರೆ ಬಾ ನಿನಗೆ ಬೇರೆ ಕೊಡ್ತೆ ಅದರ ಅಣ್ಣಂಗೆ ಕೊಡ್ತೆ ಹೇಳಿರೆ ಅವಂದೆ ಒಪ್ಪುತ್ತಾ ಇಲ್ಲೆ.ಇಬ್ರನ್ನು ಒಪ್ಪುಸುಲೆ ಎಡಿಯದ್ದ ಸಂದರ್ಭಲ್ಲಿ ಒಂದು ರಚ್ಚೆಂದ ಬಿಡ,ಒಂದು ಗೂಂಜಿಂದ ಬಿಡ ಹೇಳುವ ಮಾತಿನ ಬಳಕೆ ಮಾಡುತ್ತವು.
ರೆಚ್ಚೆ ಗೂಂಜು ಇಪ್ಪದು ಹಲಸಿನ ಹಣ್ಣಿಂಗೆ.ಇಬ್ರುದೆ ಒಂದೇ ಹಣ್ಣಿಂಗೆ ಎಳದಾಡುತ್ತವು ಹೇಳಿ ಭಾವಿಸಿರೆ ಒಬ್ಬ ಗೂಂಜಿನ ಗಟ್ಟಿಯಾಗಿ ಹಿಡಿತ್ತ.ಇನ್ನೊಬ್ಬ ರೆಚ್ಚೆಯ ಗಟ್ಟಿಯಾಗಿ ಹಿಡಿತ್ತ.ಒಟ್ಟಿಲಿ ಹಣ್ಣು ಇಬ್ರಿಂಗೂ ಸಿಕ್ಕುತ್ತಿಲ್ಲೆ ಹೇಳಿ ಅರ್ಥ .
ಹಾಂಗೆಯೇ ಒಂದೇ ವಿಷಯಕ್ಕೆ ಸಂಬಂಧಿಸಿ ಅವರವರದ್ದೇ ಸರಿ ಹೇಳಿ ವಾದ ಮಾಡುವೋರ ಬಗ್ಗೆದೆ ಈ ಮಾತಿನ ಬಳಕೆ ಮಾಡುತ್ತವು.
ಡಾ.ಲಕ್ಷ್ಮೀ ಜಿ ಪ್ರಸಾದ