ಒಲವಿನ ಪ್ರಿಯಲತೆ❤️

ನಿಜವಾದ ಪ್ರೀತಿಗೆ ಎಂದಿಗೂ ಸೋಲಿಲ್ಲ 😊

ProfileImg
18 Apr '24
31 min read


image

        ಸ್ಪಂದನ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್, ಆ ಊರಿನ ದೊಡ್ಡ ಆಸ್ಪತ್ರೆ ಅದು. ಅದರ ಮೂರನೆಯ ಮಹಡಿಯಲ್ಲಿರುವ ಎಮರ್ಜೆನ್ಸಿ ವಾರ್ಡಿನಿಂದ ನರ್ಸಗಳು ಅತ್ತಿಂದ ಇತ್ತ ಓಡಾಡುತ್ತಿದ್ದಾರೆ. ವಾರ್ಡಿನ ಮುಂದೆ ಸುಮಾರು ಇಪ್ಪತು ಜನ ಸೇರಿದ್ದರು, ಎಲ್ಲರ ದುಬಾರಿ ವಸ್ತ್ರ ಆಭರಣಗಳು ತೊಟ್ಟಿದ್ದರೂ, ಮುಖದ ಮೇಲಿ ದುಃಖ, ಗಾಬರಿಯಿಂದ ಕೂಡಿದೆ. ಎಲ್ಲರದ್ದು ಒಂದೇ ಬೇಡಿಕೆ ಒಳಗಿರುವ ಜೀವಕ್ಕೆ ಏನು ತೊಂದರೆ ಆಗದಿರಲಿ ಎನ್ನುವುದು. 

              ಇಷ್ಟು ಹೊತ್ತು ಆಸ್ಪತ್ರೆಯಲ್ಲಿರುವ ಗಣೇಶನ ಮೂರ್ತಿಯ ಮುಂದೆ ಕೈಮುಗಿದು ಬೇಡಿಕೊಳ್ಳುತ್ತಿದ್ದವ, ಭಾರದ ಹೆಜ್ಜೆಗಳನ್ನೀಡುತ್ತ ವಾರ್ಡ್ನ ಪಕ್ಕದಲ್ಲಿರುವ ಕುರ್ಚಿಯಲ್ಲಿ ತಲೆ ಕೆಳಗೆ ಮಾಡಿ ಮುಖ ಮುಚ್ಚಿ ಕೂರುತ್ತಾನೆ. ಎಲ್ಲರಿಗೂ ಅವನ ನೋಡಿ ಮರುಕವೆ, ಮದುಮಗನಾಗಿ ಹಸೆಮಣೆ ಏರಿಬೇಕಾದವ ಇಲ್ಲಿ ಆಸ್ಪತ್ರೆಯಲ್ಲಿ ಮುಖದಮೇಲೆ ಕಳೆಯೇ ಇಲ್ಲದೆ ಜೀವನವೇ ಮುಗಿದು ಹೋದ ಹಾಗೆ ಕೂತಿದ್ದಾನೆ. 

             ಎಲ್ಲರು ಬಂದು ಅವನನ್ನು ಸಮಾಧಾನದ ಮಾತುಗಳಾಡಿ ಹೋದರು, ಆದರೆ ಅವನ ನೋವು ದುಃಖ ಅವ್ನಿಗಷ್ಟೆ ಗೊತ್ತು. ಆಸ್ಪತ್ರಗೆ ಬಂದವನು ಒಂದು ಮಾತನ್ನು ಸಹ ಆಡಿರಲಿಲ್ಲ. ಅವನಿಗೆ ಅಲ್ಲಿ ಕೊಡಲಾಗಲಿಲ್ಲ, ಎದ್ದವ ಒಮ್ಮೆ ವಾರ್ಡ್ನ ಬಾಗಿಲ ಬಳಿ ಹೋಗಿ ಪುಟ್ಟ ಗಾಜಿನಿಂದ  ಒಳನೋಡಿ ನಿಟ್ಟುಸಿರ ಬಿಟ್ಟು ತನಗೆಂದೆ ಮಿಸಿರುವ ಕೋಣೆಗೆ ಹೋಗುತ್ತಾನೆ. 

          ದಪ್ಪನೆ ಅವನ ಮೆತ್ತನೆಯ ಕುರ್ಚಿ ಮೇಲೆ ಕುತವ ಇನ್ನೂ ತಾಳಲಾರದೆ ಅವನ ದುಃಖವೆಲ್ಲ ಕಣ್ಣೀರಿನ ರೂಪದಲ್ಲಿ ಹೊರಬಂತು. ಎದುರಿರುವ ಟೇಬಲ್ ಮೇಲೆ ತಲೆ ಇಟ್ಟು ಜೋರಾಗಿ ಅತ್ತ. ಅವನ ಅಳು ಸ್ವಲ್ಪ ಮಟ್ಟಿಗೆ ಕಮ್ಮಿಯಾದ ನಂತರ ತನ್ನ ಪರ್ಸ್ನಲಿರುವ ಅವಳ ಪೋಟನ ಸವರುತ್ತಾ

               "ಯಾಕೂ ಹೀಗೆ ಮಾಡಿದಿ, ನನ್ನ ಮೇಲೆ ನಿನಗೆ ನಂಬಿಕೆ ಇರ್ಲಿಲ್ವಾ?"…... "ನಾ ಹೇಳಿದ್ದೆ ಅಲ್ವಾ ಈ ವೈದೇಹಿ ಎಂದಿಗೂ ಈ ರಾಮನರಸಿ ಎಂದು, ನನ್ನ ಮಾತು ಸುಳ್ಳು ಮಾಡ್ಬೇಡವೆ" ಎನ್ನುತ ಅವಳ ಪೋಟೋವಿಗೆ ಮುತ್ತಿಟ್ಟು ಕಣ್ಮುಚ್ಚಿ ಸೀಟಿಗೆ ಒರಗಿ ಅವಳ ಬಗ್ಗೆ ನೆನಪನ್ನು ಹಸಿರಾಗಿಸುತ್ತಾನೆ.  

           ನಾಯಕ ನಾಯಕಿ ಹೆಸರು ಹೇಳದೆ ಎನ್ ಇದು ಕತೆ ಹೇಳುತ್ತಿದ್ದಾಳೆ ಅಂತನಾ? ಬನ್ನಿ ಅವ್ನು ಸ್ವಲ್ಪ ಹೊತ್ತು ರೆಸ್ಟ್ ಮಾಡಿಲಿ ಈ ರಾಮ್ ಯಾರು ವೈದೇಹಿ ಯಾರು ಇನ್ನೂ ಈ ಮದುವೆಗೆ ಬಂದವರು ಯಾಕೆ ಇಲ್ಲಿ ಇದ್ದರೆ ಅಂತ ತಿಳಿಯುವ...…

           ಸೋ ಎಲ್ಲರು ಫ್ಲಾಶ್ ಬ್ಯಾಕ್ ಗೆ ಹೋಗೋಣ. ಯಾರು ಬ್ಲಾಕ್ ಆಂಡ್ ವೈಟ್ ಇಮ್ಯಾಜಿನೇಶನ್ ಮಾಡ್ಕೋಬೇಡಿ ಕಲರ್ಫುಲ್ ಆಗಿಯೇ ಇರಲಿ ನಿಮ್ಮ ಇಮ್ಯಾಜಿನೇಶನ್😁

😍💐😍💐😍💐😍💐😍💐😍💐😍💐😍💐

        

ರವಿ ನೀನು ಆಗಸದಿಂದ

ಮರೆಯಾಗಿ ಹೋಗದೆ ನಿಲ್ಲೂ…

ಬಾಳಲ್ಲಿ ಕತ್ತಲೆ ತುಂಬಿ

ನೀ ಓಡದೆ...…

ರವಿ ನೀನು ಆಗಸದಿಂದ

ಮರೆಯಾಗಿ ಹೋಗದೆ ನಿಲ್ಲೂ…

ಬಾಳಲ್ಲಿ ಕತ್ತಲೆ ತುಂಬಿ

ನೀ ಓಡದೆ...…

          ಸುಮಧುರ ಗೀತೆ ಬಸ್ಸಿನಲ್ಲಿ ಕೇಳಿ ಬರುತ್ತಿತ್ತು. ಕಿಟಿಕಿ ಪಕ್ಕದ ಸೀಟಿಗೆ ತಲೆ ಆನಿಸಿ ಕಣ್ಣ ಮುಚ್ಚಿ ಕೇಳುತು ಹಾಡನ್ನು ಆಸ್ವಾಧಿಸುತ್ತಿದ್ದಳು ವೈದೇಹಿ. ಅವಳಿಗೆ ಹಳೆಯ ಕನ್ನಡದ ಚಲನಚಿತ್ರ ಗೀತೆಗಳು ಎಂದರೆ ಪ್ರೀತಿ. ಆರ್ ಟಿ ಸರ್ಕಲ್ ಎಂದು ಮೂರು ಬಾರಿ ಕಂಡಕ್ಟರನ ಕೂಗಿಗೆ ಕಣ್ಣು ಬಿಟ್ಟು ಬಾಗಿಲ ಕಡೆ ನೋಡುವ ವೈದೇಹಿ, ಪ್ರಯಾಣಿಕರು ಹತ್ತಿ ಬಸ್ಸು ಮುಂದೆ ಚಲಿಸದ್ದರು, ಇನ್ನೂ ಅವಳ ಲಕ್ಷ ಅಲ್ಲೆ ಇತ್ತು. ಸ್ವಲ್ಪ ಮುಂದೆ ಹೋದ ಮೇಲೆ ಸಮಾಧಾನದ ಉಸಿರು ದಬ್ಬಿ ಮತ್ತೆ ಹಾಡು ಆಲಿಸುತ್ತ ಕಣ್ಣು ಮುಚ್ಚಿ ಸೀಟಿಗೆ ಒರಗುತ್ತಾಳೆ. 

            ವೈದೇಹಿ, ಇವಳೇ ನಮ್ಮ ಕಥಾ ನಾಯಕಿ. ಬೆಳ್ಳನೆಯ ಉದ್ದನೆಯ ಸುಂದರ ಯುವತಿ. ಈಗಷ್ಟೇ ಇಪ್ಪತ್ನಾಲ್ಕರ ಹರೆಯದವಳು. ಮಾಸಿದ ಸೀರೆ, ಸೊಂಟದ ವರೆಗೂ  ಹೆಣೆದ ಹೇರಳು, ಕೊರಳಲ್ಲಿ ಒಂದೇಳೆಯ ಬೆಳ್ಳಿಯ ಚೈನ್, ಹಣೆಯ ಮೇಲೆ ಸಣ್ಣ ಬೊಟ್ಟು, ಕಾಡಿಗೆ ಹಚ್ಚದೆಯೆ ಹೊಳೆಯುವ ಕಣ್ಣುಗಳು,ಪುಟ್ಟ ಮೂಗಿಗೆ ಒಂದೇ ಹರಳಿನ ಮೂಗುತಿ, ಕೈಗಳಿಗೆ ಗಾಜಿನ ಬಳೆ, ಗೆಜ್ಜೆಯಿಲ್ಲದ ಕಾಲುಗಳಿಗೆ ಹರಕು ಚಪ್ಪಲಿ..... ಇಷ್ಟೇ ಇವಳ ಅಲಂಕಾರ ಆದರೆ ಅವಳ ಮುಖದಲ್ಲಿರುವ ಕಳೆ ಎಂತವರಿಗಾದರು ಆಕರ್ಷಿಸುತ್ತದೆ. ಒಂದೇ ಮಾತಿನಲ್ಲಿ ಹೇಳುವದಾದರೆ ನಿರಾಭರಣ ಸುಂದರಿ ಇವಳು. ಯಾರಾದರೂ ಜೋರು ದ್ವನಿಯಲ್ಲಿ ಮಾತಾಡಿದರು ಸಾಕು ಹೆದರುವ ಸೌಮ್ಯ ಸ್ವಭಾವದಳು.

           ಚಿಕ್ಕಮಲ್ಲಿಗೆ  , ಮಲೆನಾಡು ಮತ್ತು ಬಯಲು ಸೀಮೆಯ ಗಡಿಯಲ್ಲಿರುವ ಊರು. ಬೇಸಿಗೆಯಲ್ಲಿ ಬಯಲು ಸಮೆಯಂತೆ ಸುಡುವ ಬಿಸಿಲು ಇದ್ದರೆ ಮಳೆಗಾಲದಲ್ಲಿ ಮಲೆನಾಡಿನ ಹಾಗೆ ಸುರಿವ ಮಳೆ ಇರುತ್ತೆ. 

          ಇದೇ ಊರಿನ ವಿವೇಕಾನಂದ ಇಂಟ್ನ್ಯಾಷನಲ್ ಸ್ಕೂಲಿನಲ್ಲಿ ಭರತನಾಟ್ಯದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು ವೈದೇಹಿ. ಅವಳ ಉರು ಹೊಸಳ್ಳಿ, ಅಲ್ಲೇ ಹದಿನೈದು ಕಿಲೋಮೀಟರ್ ದೂರದಲ್ಲಿದೆ. ದಿನವೂ ಅವಳು ಅನ್ನಪೂರ್ಣ ಟ್ರಾವೆಲ್ಸ್ ಬಸ್ಸಿನಲ್ಲಿ ಓಡಾಡುವುದು. 

ರವಿ ನಿನ್ನ ಕಾಂತಿಯ ಜೀವ 

ನೀ ನನ್ನ ಬಾಳಿನ ದೈವ

ನೀ ದೂರವಾದರೆ ಹೇಗೆ

ನಾ ತಾಳಲಾರೆನು ನೋವ

ಈ ನನ್ನ ಪ್ರೇಮದ ಹೂವ ಮರೆವೆನೆ

ಈ ನನ್ನ ಪ್ರೇಮದ ಹೂವ ನಾ ಮರೆವೆನೆ

ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲೋ

ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ.....…

        ಮನದಲ್ಲೇ ಹಾಡು ಮೆಲಕು ಹಾಕುತ್ತಾ ಕಣ್ಮುಚ್ಚಿ ಕುಳಿತ ವೈದೇಹಿ ಬಳಿ ಸಣ್ಣದಾಗಿ "ಕಂದ" ಎಂಬ ಕೂಗು ಕೇಳಿ ಪಟ್ಟನೆ ಕಣ್ಣು ತೆರದು ನೋಡಲು, ಪಕ್ಕದಲ್ಲಿ ಖಾಲಿಯಿದ್ದ ಜಾಗದಲ್ಲಿ ಎಂದೂ ಮಾಸದ ನಗುವನ್ನು ಹೊದ್ದು ಅವಳನ್ನೇ ಪ್ರೀತಿ ತುಂಬಿದ ಕಂಗಳಿಂದ ನೋಡುತ್ತಿದ್ದಾನೆ ಸುರದೃಪಿ ಹುಡುಗ. 

           ಅವನನ್ನು ನೋಡಿ ಮುಖದಲ್ಲಿ ಮಂದಹಾಸ ಮೂಡುವ ಮುನ್ನವೇ ಬೇಸರದ ಮುಖ ಮಾಡಿ "ಛೇ" ಎನ್ನುತ್ತ ಹೆಬ್ಬರಳಿಂದ ಹಣೆ ತಿಕ್ಕುತ್ತಾಳೆ ವೈದೇಹಿ. 

            ಅವಳ ಈ ತಿರಸ್ಕಾರ ನೋಡಿ ಬೇಸರವಾದರೂ ಅವಳು ಇವನನ್ನು ನೋಡಿದ ಕೂಡಲೇ ಅವಳ ಕಣ್ಣುಗಳಲ್ಲಿ ಕಂಡ ಖುಷಿ ಅವನ ಮನಸನ್ನು ಹುವಾಗಿಸಿತ್ತು.

               "ಎನ್ ಆಯಿತು ಕಂದ, ಆರ್ ಟಿ ಸರ್ಕಲ್ ಬಳಿ ಸ್ಟಾಪ್ ಆದಾಗ ನನ್ನ ಹುಡುಕುತ್ತಿದ್ದೆ ಈಗ ನನ್ನ ನೋಡಿ ಸಿಟ್ಟು ಬಂತ?"..... ಎಂದು ಚೆಡಿಸುತ್ತ ಪ್ರಶ್ನಿಸಿದವಗೆ, ಬೆಚ್ಚಿ ಬಿದ್ದು ಅವನ ಕಡೆ ನೋಡದೆ ತಲೆ ಬಗ್ಗಿಸಿ  ಸೆರಗನ್ನು ಮುದುಡಿ ಮಾಡುತ್ತಾ, 

          "ರಾಮವರೆ ದಯವಿಟ್ಟು ನನ್ನ ವೈದೇಹಿ ಅಂತ ಕರೆಯಿರಿ ಈ ರೀತಿ ಬೇರೆ ಹೆಸರಿಂದ ಕರೆದರೆ ನೋಡಿದವರು ಏನು ತಿಳಿತಾರೆ".....  "ಹಾಗೆ ನಾನೇನು ನಿಮ್ಮನ್ನ ಹುಡುಕುತ್ತಾ ಇರಲಿಲ್ಲ ಸುಮ್ನೆ ಅತ್ತ ಇತ್ತ ನೋಡುತ್ತಿದೆ ಈಗ ನಿದ್ದೆ ಬಂದಂತಾಗಿ ಕಣ್ಣು ಮುಚ್ಚಿದೆ ಅಷ್ಟೇ" ಎಂದು ಸಣ್ಣ ದ್ವನಿಯಲ್ಲಿ ಹೇಳುತ್ತಾಳೆ. 

             ಎಂದೂ ಯಾರ ಮುಂದೆ ದ್ವನಿ ಏರಿಸಿ ಮಾತಾಡಿದ ಹೆಣ್ಣಲ್ಲ, ಸಣ್ಣ ಮಕ್ಕಳಿಗೂ ಗದರಿಸಿ ಗೊತ್ತಿಲ್ಲ ಆದರೆ ಎಲ್ಲರನ್ನೂ ತನ್ನ ಮುಗ್ಧತೆ ಮತ್ತು ಒಳ್ಳೆತನದಿಂದ ಸೆಳೆಯುತ್ತಾಳೆ. ಕಷ್ಟವೆಲ್ಲ ತನಲ್ಲೆ ನುಂಗಿ ಸುಖವೆಲ್ಲ ಬೇರೆಯವರಿಗೆ ಹಂಚಿ ಅವರ ಖುಷಿಯಲ್ಲೇ ತನ್ನ ಖುಷಿಯನ್ನು ಕಾಣುವವಳು ನಮ್ಮ ವೈದೇಹಿ. 

             ಅವಳ ಈ ಪರಿಯೇ ಅವನನ್ನು ಸೇಳದಿದ್ದು, ಅವಳ ಮಾತು ಕೇಳಿ "ಸರಿ ವೈದೇಹಿ ಅದು ನನ್ನ ಮನದಲ್ಲಿ ಪ್ರತಿ ಕ್ಷಣ ನಿನ್ನ ಜೊತೆ ಮಾತಾಡುತ್ತಾ ಇರ್ತೀನಿ ಅಲ್ವಾ ಆವಾಗ ಕಂದ ಅಂತ ಕರದು ರೂಢಿ ಅದ್ಕೆ ಹಾಗೆ ಅಂದಿದ್ದು....""ಈಗೇನೋ ನಿಂಗ ಬೇಜಾರು ಆಗ್ಬಾರ್ದು ಅಂತ ವೈದೇಹಿ ಅಂತ ಕರೀತೀನಿ ಆದರೆ ಮುಂದೆ ನಮ್ಮ ಮದುವೇ ಆದಮೇಲೆ ನಾನು ಕಂದ ಅಂತಾನೆ ಕರಿಯೋದು ಆವಾಗ ನೀನೇನು ತಕರಾರು ತಾಗಿಯೋ ಹಾಗಿಲ್ಲ ನೋಡು" ಎಂದು ಅವಳಿಗೆ ಕಣ್ಣು ಹೊಡೆದು ಹೇಳುತ್ತಾನೆ ರಾಮ್. 

             ಅವನ ಮಾತಿಗೆ ವಿಷಾದದಿಂದ ನಗುವ ವೈದೇಹಿ "ಅಷ್ಟೆಲ್ಲ ಅದೃಷ್ಟ ಇಲ್ಲ ರಾಮ್ ಅವರೇ, ನನಗೆ ನಿನ್ನೆ ತಾನೇ ಮದುವೆ ನಿಶ್ಚಯ ಆಗಿದೆ.... ನಮ್ಮ ಚಿಕ್ಕಮ್ಮ ನೋಡಿದ ಸಂಬಂಧ ಅದು, ಇನ್ನೂ  ಒಂದು ವಾರದಲ್ಲಿ ನನ್ನ ಮದುವೆ ಮಾಡ್ತಾರೆ. ಪ್ಲೀಸ್ ನೀವು ನಾಳೆಯಿಂದ ನನ್ನ ಹಿಂದೆ ಬಂದು ಸಮಯ ವ್ಯರ್ಥ ಮಾಡ್ಕೋಬೇಡಿ.... ನಿಮ್ಮಿ ಕನಸು ಕನಸಾಗಿಯೇ ಉಳಿಯುತ್ತೆ. ಯಾವುದಾದರೂ ನಿಮಗೆ ತಕ್ಕ ಹುಡುಗಿ ನೋಡಿಕೊಂಡು ಸುಖವಾಗಿರಿ" ಎಂದು ಕಿಟಿಕಿ ಕಡೆ ಮುಖ ಮಾಡಿ ಕೂಡುತ್ತಾಳೆ. 

             ಎರಡು ದಿನಗಳ ನಂತರ ಅವಳನ್ನು ನೋಡಲು ಆತುರದಿಂದ ಬಂದ ರಾಮನಿಗೆ ವೈದೇಹಿಯ ಮಾತುಗಳನ್ನು ಕೇಳಿ  ಗಾಳಿಗೆ ತೂರಿದ ಬಲೂನ್ ಹಾಗೆ ಆಗಿತ್ತು ಅವನ ಮುಖ. ಒಂದೈದು ನಿಮಿಷ ಕಣ್ಣು ಮುಚ್ಚಿ ಕುಳಿತು ಬಿಟ್ಟನವ. 

              ಏನೋ ನಿರ್ಧರಿಸಿ ತಲೆಯೆತ್ತಿ ಮತ್ತೆ ಹಳೆಯ ಮಂದಹಾಸ ಬೀರುತ್ತಾ,

         "ಎ ಕಂದ, ಸೋರಿ ವೈದೇಹಿ ನೋಡಿಲ್ಲಿ" ಎಂದು ಅತಿ ಮೃದುವಾಗಿ ಕರೆಯುತ್ತಾನೆ. 

           ಇಷ್ಟು ಹೊತ್ತು ಕಿಟಿಕಿಯ ಕಡೆ ಮುಖ ಮಾಡಿ ಕುತಿದ್ದವಳು, ಅವನ ಕೂಗಿಗೆ ಅವನ ಕಡೆ ತಿರುಗುತ್ತಾಳೆ, ಆದರೆ  ಅವಳ ತಲೆ ಮಾತ್ರ ಯಾವತ್ತಿಗೂ ಕೆಳಗೆ ಇರುತ್ತೆ. 

        "ವೈದೇಹಿ ಒಮ್ಮೆ ಆದ್ರೂ ತಲೆ ಎತ್ತಿ ನೋಡು, ಯಾಕೆ ಚೆನ್ನಾಗಿಲ್ಲವಾ ನಾನು?".... "ಪ್ಲೀಜ್ ಒಮ್ಮೆ ಆದ್ರೂ ಸರಿಯಾಗಿ ನನ್ನ ಕಣ್ಣು ನೋಡೋ, ಅಂದ್ರೆ ಅಲ್ವಾ ನಿನಗೆ ನನ್ನ ಪ್ರೀತಿ ಅರ್ಥ ಆಗೋದು.... ಪ್ರಾಮಾಣಿಕವಾಗಿ ಪ್ರೀತಿಸ್ತಾ ಇದ್ದೀನಿ ನಿನ್ನನ್ನ. ನಿನ್ನನ್ನು ನಾನು ನನ್ನ ಲವ್ ಮಾಡು ಅಂತಾ ಇಲ್ಲ.... ನನ್ನ ಮದುವೆಯಾಗಿ ನನ್ನ ಕತ್ತಲೆಯ ಬದುಕಿಗೆ ಬೆಳದಿಂಗಳಾಗಿ ಬಾ ಅಂತ ಬೇಡ್ಕೋತಾ ಇದ್ದೀನಿ" ಎಂದು ಭಾವುಕತೆಯಲ್ಲಿ ಹೇಳುತ್ತಾನೆ.

           ಇಬ್ಬರು ಬೇಟಿಯಾಗಿ ತುಂಬಾ ದಿನಗಳೆನು ಕಳೆದಿಲ್ಲ, ಇಷ್ಟು ದಿನಗಳಲ್ಲಿ ತುಂಬಾನೇ ಜಾಲಿಯಾಗಿ ಸದಾ ನಗುತ್ತ ನಗಿಸುತ್ತಿರುವ ರಾಮನನ್ನು ನೋಡಿದ್ದ ವೈದೇಹಿ ಅವನು ಈ ರೀತಿ ಭಾವುಕತೆಯಿಂದ ಅವನ್ನನ್ನು ನೋಡಿರಲಿಲ್ಲ ಅವಳು. 

         ತಟ್ಟನೆ ತಲೆ ಎತ್ತಿ ಅವನ ಕಣ್ಣುಗಳನ್ನು ನೋಡಲು ಅದರಲ್ಲಿ ತನಗಾಗಿ ಹಾತೊರೆಯುತ್ತಿದ್ದ ಪ್ರೀತಿ ಮತ್ತು ತನ್ನನ್ನು ಕಳೆದುಕೊಳ್ಳುವ ಭಯ  ಗಮನಿಸುತ್ತಳೆ ವೈದೇಹಿ. 

           ಇಬ್ಬರ ಕಣ್ಣುಗಳು ಬೇರೆತ್ತಿದವು, ಮನಸ್ಸುಗಳ ಮೀಲನವೊಂದೆ ಬಾಕಿಯಿತ್ತು. ಇಬ್ಬರು ಮತ್ತೊಬ್ಬರ ಕಣ್ಣುಗಳಲ್ಲೇ ಮುಳುಗಿ ಜಗತ್ತನ್ನೇ ಮರೆತ್ತಿದ್ದರು ಅವರನ್ನು ವಾಸ್ತವಕ್ಕೆ ತಂದಿದ್ದು ಬಸ್ಸಿನ ಹಾರ್ನ್ ಶಬ್ದ.  ಆ ಶಬ್ದಕ್ಕೆ ಮೊದಲು ಎಚ್ಚರಗೊಂಡ ವೈದೇಹಿ ಮತ್ತೆ ಸೀಟಿನ ನೇರಕ್ಕೆ ತಲೆ ಬಗ್ಗಿಸಿ ಕುಡುತ್ತಾಳೆ. 

         ಅವನು ನೇರವಾಗಿ ಕೂತು ಮನದಲ್ಲೇ , "ಏನಿದು ಇವಳ ಮನಸಲ್ಲಿ ಎನ್ ಇದೆ ಅಂತ ಗೊತ್ತು ಮಾಡ್ಕೋಬೇಕು ಅಂದ್ರೆ ಆಗ್ತಾ ಇಲ್ಲ ಅಲ್ವಾ... ಅದು ಹೇಗೆ ಇವರ ಕಣ್ಣು ನೋಡಿ ಅದರ ಭಾವನೆ ತಿಳಿಯಲು ಆಗಲಿಲ್ಲ ನನಗೆ" ಎಂದು ಯೋಚಿಸುತ್ತಾನೆ. 

            ಆದರೆ ಅವಳು ಭಾವನೆಗಳನ್ನು ಹಿಡಿದಿಟ್ಟು ಕೊಳ್ಳುವಲ್ಲಿ ನಿಸ್ಸಿಮಳು ಎಂದು ಅವನಿಗಿನ್ನು ತಿಳಿದಿಲ್ಲ. 

          ಇನ್ನೈದು ನಿಮಿಷ ಸಮಯ ಹೀಗೆ ಕಳೆದಿತ್ತು. ಇನ್ನೇನು ರಾಮ ಮಾತನಾಡಬೇಕು ಎನ್ನುವಷ್ಟರಲ್ಲಿ,  "ಯಾರಿ ಅದು ಹೊಸಳ್ಳಿ ಸ್ಟಾಪ್ ಬನ್ನಿ" ಎಂದು ಕಂಡಕ್ಟರ್ ಕೂಗಲು ತನ್ನ ಕೈಯಲ್ಲಿರುವ ಬ್ಯಾಗ್ ಹಿಡಿದು ಎಳೆಯುತ್ತಾ ಅವನನ್ನು ನೋಡಲು ಅವಳ ನೋಟ ಅರ್ಥವಾದಂತೆ ಅವಳಿಗೆ ಹೋಗಲು ದಾರಿ ಮಾಡಿ ಕೊಡುತ್ತಾನೆ ರಾಮ. 

                ಒಂದೇ ಹೆಜ್ಜೆ ಮುಂದೆ ಇಟ್ಟವಳು ಮತ್ತೆ ಹಿಂದುಗಿ ತಲೆ ಬಗ್ಗಿಸಿ "ಹೋಗ್ತೀನಿ ರಾಮಯವರೆ, ಮತ್ತೆ ನನ್ನ ಹಿಂದೆ ಬರಲ್ಲ ಅಂತ ಭಾವಸ್ತಿನಿ.... ನಿಮ್ಮ ಮುಂದಿನ ಜೀವನ ಹಸನಾಗಿರಲಿ" ಎಂದವಳು ಕೊನೆಯ ಬಾರಿಯಂತೆ ಅವನ ಮುಖ ನೋಡಿ ಬಸ್ಸ್ ಇಳಿದು ಅವಳ ಮನೆಯ ದಾರಿ ಹಿಡಿಯುತ್ತಾಳೆ ವೈದೇಹಿ. 

            ಅವಳ ಮಾತು ಕೇಳಿ ಮುಗುಳ್ನಗುತ್ತಾ ಕೆಳಗಿಳಿದು ದೂರದಲ್ಲೇ ನಿಂತ ಅವನ ಕಾರಿನಲ್ಲಿ ಹತ್ತಿ ಮನೆಗೆ ತೆರಳುತ್ತಾನೆ. 

💐😍💐😍💐😍💐😍💐😍💐😍💐😍💐😍

             ದಯಾನಂದ ಮತ್ತು ಸರಸ್ವತಿ ಇಬ್ಬರದ್ದೂ ಪ್ರೇಮ ವಿವಾಹ. ಮದುವೆಗೆ ಯಾರದ್ದು ಅಡ್ಡಿ ಇರಲಿಲ್ಲ. ದಯಾನಂದರು ಸರಕಾರಿ ನೌಕರರು. ಹೊಸಳ್ಳಿಯಲ್ಲಿ ತಮ್ಮದೇ ಸ್ವಂತ ಮನೆ, ಎರಡು ಎಕರೆ ಭೂಮಿ ಇಷ್ಟೇ ಇವರ ಆಸ್ತಿ. ಸರಸ್ವತಿ ಅದೇ ಊರಿನವರು, ತಂದೆ ತಾಯಿಯ ಒಬ್ಬಳೇ ಮಗಳು. ಇದೆ ಊರಲ್ಲಿ ಮದುವೆ ಮಾಡಿದರೆ ಕಣ್ಣ ಮುಂದೆ ಇರುತ್ತಾಳೆ ಎಂದುಕೊಂಡವರು ಯಾವ ವಿರೋಧವಿಲ್ಲದೆ ಮದುವೆ ಮಾಡಿ ಕೊಟ್ಟಿದ್ದರು. 

           ದಯಾನಂದರ ತಂದೆ ರಾಮಸ್ವಾಮಿ ಮತ್ತು ತಾಯಿ ಕುಸುಮಾ ಒಳ್ಳೆಯ ಜನ, ಬಂದ ಸೊಸೆಯನ್ನು ಮಗಳ ಹಾಗೆ ನೋಡಿ ಕೊಳ್ಳುತ್ತಿದ್ದರು. ಅವರ ಸುಖ ಸಂಸಾರಕ್ಕೆ ಯಾವುದೇ ಕೊರೆತೆ ಇರಲಿಲ್ಲ ಆದರೆ ಮದುವೆಯಾಗಿ ಮೂರು ವರ್ಷಗಳ ಕಳೆದರೂ ಮನೆಯಲ್ಲಿ ತೊಟ್ಟಿಲು ತೂಗುವ ಅವಕಾಶ ಬಂದಿರಲಿಲ್ಲ. ಇದೆ ಸರಸ್ವತಿಯವರ ಚಿಂತೆಗೀಡು ಮಾಡಿತ್ತು. ಕಂಡ ಕಂಡ ದೇವರಿಗೆ ಹರಿಕೆ ಹೊತ್ತು ಇರುವ ಎಲ್ಲ ವೈದ್ಯರಿಗೂ ತೋರಿಸಿ ಬೇಸತ್ತವರು ಕೊನೆಯಲ್ಲಿ ನೆರೆಮನೆಯ ಅಜ್ಜಿಯೊಬ್ಬರು ಹೇಳಿದ ಕಠಿಣ ವೃತವನ್ನು ಊರಿನ ದೇವಿಗೆ ಹರಕೆ ತೀರಿಸಿದ ಎರಡೇ ತಿಂಗಳಲ್ಲಿ ಗರ್ಭವತಿ ಆದರು. 

         ಎರಡು ಮನೆಯಲ್ಲಿ ಹೇಳಿ ತೀರದ ಸಂಬ್ರಮ. ದಯಾನಂದರು ತುಂಬಾ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು. ಹೆರಿಗೆ ಬಾಣಂತನ ಕೂಡ ತಮ್ಮ ಮನೆಯಲ್ಲೇ ಮಾಡುವ ಮಾತಾಗಿತ್ತು. ಅಷ್ಟು ಒಲವು ಸರಸ್ವತಿಯವರ ಮೇಲೆ. 

           ಎಂಟು ತಿಂಗಳು ಇರುವಾಗ ಸೀಮಂತ ಮಾಡಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು. ಒಂಬತ್ತು ತಿಂಗಳ ಕೊನೆಯಲ್ಲಿ ಹೆರಿಗೆ ನೋವು ಕಂಡು ಆಸ್ಪತ್ರೆಗೆ ದಾಖಲಿಸಿದ ಕೆಲವೇ ಗಂಟೆಗಳಲ್ಲಿ  ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಾಣಂತನ ಎಲ್ಲವೂ ಆಗಿ ಮಗುವಿಗೆ ಮೂರು ತಿಂಗಳು ಇರುವಾಗ ನಾಮಕರಣ ಮಾಡಿ ವೈದೇಹಿ ಎಂದು ಹೆಸರಿಟ್ಟರು. 

     ವೈದೇಹಿ ಸರಸ್ವತಿಯ ಇನ್ನೊಂದು ರೂಪ ಎಂದರು ತಪ್ಪಾಗದು. ನೋಡುವುದಕ್ಕೆ ಅಮ್ಮನ ಪಡಿಯಚ್ಚು. ಎರಡು ಮನೆಯ ಕಣ್ಮಣಿ ಅವಳು. ಮಗಳ ಆಗಮನದಿಂದ ದಯಾನಂದರ ಮನೆ ಇನ್ನಷ್ಟು ಸುಖ ಸಮೃದ್ಧಿ ಹೆಚ್ಚಿತ್ತು.

        ಇವರ ಸುಖಿ ಸಂಸಾರ ಕಂಡು ಆ ದೈವಕ್ಕು ಹೊಟ್ಟೆ       ಕಿಚ್ಚಾಯಿತೆನೋ ವೈದೇಹಿ  ಐದು ವರ್ಷ ಇರುವಾಗ ಸರಸ್ವತಿಯವರು ಹೃದಯ ಅಪಘಾತದಿಂದ ತೀರಿಕೊಂಡರು. ಅವರ ಸಾವು ಎರಡು ಮನೆಯಲ್ಲಿ ಭರಿಸಲಾಗದ ನಷ್ಟ ಆಗಿತ್ತು. ಮಧ್ಯ ದಾರಿಯಲ್ಲೇ ಕೈ ಬಿಟ್ಟ ಹೆಂಡತಿ, ಇನ್ನೂ ತಿಳುವಳಿಕೆ ಇಲ್ಲದ ಕೂಸು, ವಯಸ್ಸಾದ ತಂದೆ ತಾಯಿಯ ಜವಬ್ದಾರಿ ಇವೆಲ್ಲವೂ ದಯಾನಂದರನ್ನು ಹೈರಾಣಾಗಿಸಿತ್ತು. ಸರಸ್ವತಿವರು ಹೋದ ವರ್ಷದಲ್ಲೇ ಅವರ ಸರಸ್ವತಿಯ ತಂದೆ ತಾಯಿ ಕೂಡ ಅದೇ ಕೊರಗಿನಿಂದ ವಿಧಿವಶವಾದರು. ಈಗಂತೂ ದಯಾನಂದರು ಕಂಗಾಲಾಲಿ ಹೋದರು. ಕೆಲಸ ಮಾಡುತ್ತಾ ವೈದೇಹಿಯನ್ನು ನೋಡಿಕೊಂಡು ಹೋಗುವುದು ಕಷ್ಟ ಆಗಿತ್ತು. ಹಾಗಂತ ಯಾವುದೇ ಕೆಲಸವನ್ನು ಬೇಕಾಬಿಟ್ಟಿ ಮಾಡುತ್ತಿರಲಿಲ್ಲ.  ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದರು.  ರಾಮಸ್ವಾಮಿ ಮತ್ತು ಕುಸುಮಾರು ವಯಸ್ಸಾದವರು ಏಷ್ಟು ತಾನೇ ಮಾಡುತ್ತಾರೆ. 

       ಯಾರು ಎಷ್ಟೇ ಹೇಳಿದರೂ ಮರು ಮದುವೆಗೆ ಒಪ್ಪದ ದಯಾನಂದರು ಕೊನೆಗೆ ಸಣ್ಣ ಮಗುವಿನ ಮುಖ ನೋಡಿ ಒಪ್ಪಿ ಸರಸ್ವತಿಯ ದೂರದ ಸಂಬಂಧದಲ್ಲಿ ತಂಗಿಯಾದ ರಾಧಿಕಾರನ್ನು ಮದುವೆ ಆಗುತ್ತಾರೆ. ರಧಿಕಾರಿಗೂ ಇದು ಎರಡನೆಯ ಮದುವೆ, ಅವರು ಮದುವೆ ಆಗಿ ಸ್ವಲ್ಪ ದಿನದಲ್ಲೇ ಗಂಡನನ್ನು ಕಳೆದುಕೊಂಡವರು.

          ಮದುವೆಯಾಗಿ ಆರು ತಿಂಗಳಿನವರೆಗೂ ಎಲ್ಲವೂ ಸರಿಯಾಗಿಯೆ ಇತ್ತು. ಮಗುವಿನ ಲಾಲನೆ ಪಾಲನೆ, ಗಂಡನ ಕೆಲಸ, ಆತ್ತೆ ಮಾವರ ಸೇವೆ ಮಾಡುತ್ತಿದ್ದರು. ಈಗ ದಯಾನಂದರ ಮನ ಕೊಂಚ ಶಾಂತಿ ನೆಲೆಸಿತ್ತು, ಆದರೂ ಸರಸ್ವತಿಯವರ ಮೇಲಿನ ಪ್ರೀತಿ ಹಾಗೆಯೇ ಇತ್ತು, ಅದು ಎಂದೂ ಮಾಸುವುದಿಲ್ಲ ಬಿಡಿ. 

         ಎಲ್ಲ ಸರಿಯಾಗಿ ನಡೆಯುತ್ತಿದೆ ಎನ್ನುವ ಹೊತ್ತಿಗೆ ರಾಧಿಕಾರು ಗರ್ಭವತಿ ಆಗುತ್ತಾರೆ. ಆಗ ಶುರುವಾಯಿತು ನೋಡಿ ಅವರ  ಆಟ. ಮಗುವಿಗೆ ಬೈಯುವುದು ಹೊಡೆಯುವುದು, ಅತ್ತೆ ಮಾವನ ಕಡೆ ಕೆಲಸ ಮಾಡಿಸುವುದು ಅವರಿಗೂ ಹಂಗಿಸುವುದು. ಆದರೆ ಗಂಡನ ಕೆಲಸ ಮಾಡುತ್ತಿದ್ದರು. ಗಂಡನ ಮುಂದೆ ಇನ್ನೂ ಇವರು ಸತಿ ಶಿರೋಮಣಿಯೇ. 

         ಕೆಲ ದಿನಗಳು ಇದೆ ರೀತಿ ಮುಂದು ಒರೆಯಿತು. ಸೊಸೆಯ ಬೆದರಿಕೆಗೆ ಹೆದರಿ ದಯಾನಂದರ ಮುಂದೆ ಏನು ಬಾಯಿ ಬಿಡುತ್ತಿರಲಿಲ್ಲ ಯಾರು. 

       ಆದರೊಂದು ದಿನ ಆ ಪುಟ್ಟ ಕೂಸು ನೋವು ತಾಳಲಾರದೆ ತಂದೆ ಒಬ್ಬರೇ ಇರುವಾಗ ಚಿಕ್ಕಮ್ಮ ಮಾಡುವ ಕೆಲಸವೆಲ್ಲ ಹೇಳುತ್ತದೆ. 

        ಮಗಳ ಮಾತಿಗೆ ಆಶ್ಚರ್ಯ ಪಡುವ ದಯಾನಂದರು ನಂಬಲು ಕಷ್ಟವಾಗುತ್ತದೆ, ಆದರೆ ಮಗಳ ಮಾತು ಕಡೆಗಣಿಸಲಿಲ್ಲ ಅವರು. 

        "ಸರಿ ವೈದೇಹಿ ನಾನು ನೋಡ್ಕೋತೀನಿ.ಆದರೆ ಇಷ್ಟು ದಿನ ಅಮ್ಮ ಅಂತ ಕರಿತಿದ್ದೊಳು ಈಗ ಚಿಕ್ಕಮ್ಮ ಅಂತ ಅಂದೆಯಲ್ಲ ಯಾಕೆ" ಎಂದು ದಯಾನಂದರು ಪ್ರಶ್ನಿಸಲು ವೈದೇಹಿ,

        "ಅದು ಚಿಕ್ಕಮ್ಮನೆ ಹೇಳಿತು ಅಪ್ಪ ಅವ್ರು ನನ್ನ ಅಮ್ಮ ಅಲ್ವಂತೆ ನಮ್ಮ ಅಮ್ಮ ಸತ್ತು ಹೋಗಿದ್ದರಂತೆ.... ಯಾರದೋ ಮಗಳಿಂದ ನಾ ಯಾಕೆ ಅಮ್ಮ ಅನಸ್ಕೊಳಿ ಅಂತ ಹೊಡದ್ರು ಅಪ್ಪ ನೋಡಿಲ್ಲಿ" ಎಂದು ಅವಳ ಕೈ ಮೇಲಿದ್ದ ಗಾಯವನ್ನು ತೋರಿಸುತ್ತಾಳೆ. 

       ಅವಳ ಕೈ ಗಾಯ ನೋಡಿ ಕಣ್ಣೀರಿಡುತ್ತಾ ಮಗಳನ್ನು ಅಪ್ಪುತ್ತಾರೆ. "ಅಲ್ಬೇಡಿ ಅಪ್ಪ ನೀವು ಬೇಜಾರು ಆಗ್ತೀರಿ ಅಂತ ಅಜ್ಜಿ ತಾತ ಈ ವಿಷಯ ಹೇಳಿಲ್ವಂತೆ" ಎಂದು ಅವರ ಕಣ್ಣೀರು ಒರೆಸುತ್ತಾಳೆ ಆ ಮುದ್ದು ಹುಡುಗಿ. 

       "ಅಪ್ಪ ಸತ್ತು ಹೋಗೋದು ಅಂದ್ರೆ ಏನು? .... ನಂಗೆ ಅಮ್ಮನ ನೋಡ್ಬೇಕು, ನಾನು ಸತ್ತು ಹೊದ್ರೆ ಅವಳನ್ನ ನೋದ್ಭೋದ ಅಪ್ಪ" ಎಂದು ಏನು ಅರಿಯದ ಕಂದ ಕೇಳಲು ದಯಾನಂದರ ಕರಳು ಚುರುಕ್ ಎನ್ನುತ್ತದೆ. ಇನ್ನು ಬಿಗಿಯಾಗಿ ಅಪ್ಪುತ್ತ,

        " ಹಾಗೆಲ್ಲ ಮಾತಾಡ್ಬೇಡ ಮಗಳೆ ನೀನು ಈ ಅಪ್ಪನ ಜೊತೆ ಇರು ಕಂದ ಇನ್ನೊಮ್ಮೆ ಸಾಯೋದರ ಬಗ್ಗೆ ಮಾತಾಡಬಾರದು ನೀನು ಸರಿ ನಾ" ಎನ್ನಲು. 

      ಸರಿ ಎನ್ನುವಂತೆ ತಲೆ ಆಡಿಸುತ್ತೆ ವೈದೇಹಿ. 

       "ನೀನು ನನಗೆ ಹೇಳಿದ್ದ ವಿಷಯ ಚಿಕ್ಕಮ್ಮನಿಗೆ ಹೇಳಬೇಡ,ಮುಂದೆ ನಾ ನೋಡ್ತೀನಿ" ಎನ್ನುತ್ತಾ ಅವಳನ್ನು ಕೆಳಗಿಳಿಸಿ, ದುಂಡು ಕೆನ್ನೆಗಳಿಗೆ ಸಿಹಿ ಮುತ್ತು ಕೊಟ್ಟು ಕಳುಹಿಸುತ್ತಾರೆ. 

          ಸರಸ್ವತಿಯವರ ಫೋಟೋ ಮುಂದೆ ನಿಂತ ದಯಾನಂದರು "ನೋಡು ಸರು  ನಮ್ಮಗಳಿಗೆ ಈ ಅಪ್ಪ ಬೇಡವಂತೆ ದೂರದಲಿರೋ ನೀನು ಬೇಕು ಅಂತೆ.... ಇದು ತಂದೆಯಾಗಿ ನಾ ಸೋತ ಹಾಗೆ ಅಲ್ವಾ" ಎಂದು ದುಃಖಿಸುತ್ತಾರೆ. 

          ಮರುದಿನ ಕೆಲಸಕ್ಕೆ ಹೋದವರು ಮರಳಿ ಒಂದೇ ತಾಸಿನಲ್ಲಿ ಬರುವ ದಯಾನಂದರು ಮನೆಯ ಸ್ಥಿತಿ ಕಂಡು ಬೆರಗಾದರು. ಕುಸುಮಾರು ಅಡುಗೆ ಕೆಲಸ ಮಾಡುತ್ತಿದ್ದಾರೆ, ರಾಮಸ್ವಮಿಯವರು ಮನೆ ಸ್ವಚ್ಛ ಮಾಡುತ್ತಿದ್ದಾರೆ, ಇನ್ನೂ ಆ ಪುಟ್ಟ ಮಗಳು ಪಾತ್ರೆ ತೊಳೆಯುತ್ತಿದೆ. ರಾಧಿಕಾರು ಮಾತ್ರ ಕಾಲು ಮೇಲೆ ಕಾಲು ಹಾಕಿ ಸೋಫಾದಲ್ಲಿ ಕುಳಿತು ತಮ್ಮ ಕೈ ಉಗುರುಗಳಿಗೆ ಬಣ್ಣ ಬಳೆಯುತ್ತಿದ್ದಾರೆ. 

            ಸಿಟ್ಟಿಗೆದ್ದ ದಯಾನಂದರು ಗಟ್ಟಿಯಾಗಿ "ರಾಧಿಕಾ" ಎಂದು ಅರಚುತ್ತಾರೆ. ಅವರ ದನಿಗೆ ರಾಧಿಕಾರು ಉಗುಳು ನುಂಗುತ್ತ ಎದ್ದು ನಿಂತರೆ ಉಳಿದವರು ಮಾಡುವ ಕೆಲಸ ಬಿಟ್ಟು ಹಾಲಿಗೆ ಬರುತ್ತಾರೆ. 

           ನೇರ ರಾಧಿಕಾರ ಬಳಿ ಬಂದು ಗಟ್ಟಿಯಾಗಿ ಅವರ ತೋಳುಗಳ ಹಿಡಿದು "ಏನೇ ಇದು, ನಿನ್ನ ನಂಬಿ ಮನೆಯ ಜವಾಬ್ದರಿಯನ್ನು ನಿನಗೆ ಕೊಟ್ಟರೆ ಅದನ್ನ ನಡೆಸೋದು ಹೀಗಾ" ಎಂದು ಹಲ್ಲು ಮಸೆಯುತ್ತ ಹೇಳಲು, ಇಷ್ಟು ದಿನದ ಅವರ ಈ ಪರಿಯ ಕೋಪ ನೋಡದ ರಾಧಿಕಾರು ನಡುಗುತ್ತ ತಲೆ ಬಗ್ಗಿಸಿ ನಿಲ್ಲುತ್ತಾರೆ. 

                 "ಅದು ನಾನು ಬಸುರಿ ಹೆಂಗಸು ಅಲ್ವಾ ರಿ ಅದಕ್ಕೆ ನಿ ಯಾಕ ಕಷ್ಟ ಪಡ್ತಿ ನಾವೆ ಕೆಲಸ ಮಾಡ್ತಿದಿ ಅಂತ ಅತ್ತೆ ಮಾವನೆ ಬಿಡಿಸಿದರು ರಿ, ಅಲ್ವಾ ಅತ್ತೆ" ಎನ್ನುತ್ತ ದೊಡ್ಡ ಕಣ್ಣು ಮಾಡಿ ಸನ್ನೆಯಲ್ಲಿ ಹು ಎನ್ನುವಂತೆ ಮೆತ್ತನೆಯ ದ್ವನಿಯಲ್ಲಿ ಹೇಳುತ್ತಾರೆ ರಾಧಿಕರು.

             ಅವಳ ಕಣ್ಣು ಸನ್ನೆಗೆ ಹೆದರಿ ಕುಸುಮಾರು "ಹೌದು ಮ..." ಎಂದು ಮಾತಾಡುವ ಮೊದಲೇ ತಡೆಯುವ ದಯಾನಂದರು,

            "ಸಾಕು ಅಮ್ಮ ನೀವೆಲ್ಲ ಹೇಳಿದನ್ನ ನಂಬೋ ಅಷ್ಟು ದಡ್ಡ ಅಲ್ಲ ನಾನು....." "ನೋಡು ರಾಧಿಕಾ ಇದೆ ಕೊನೆ ಸರಿ ಇನ್ನೊಮ್ಮೆ ಹೀಗಾದರೆ ಪರಿಣಾಮ ನೆಟ್ಟಗೆ ಇರೋದಿಲ್ಲ" ಎಂದು ವೈದೇಹಿಯನ್ನು ಕರೆದುಕೊಂಡು ಹೋದರು. ಸಿಟ್ಟಿನಿಂದ ಕುದ್ದು ಹೋಗುತ್ತಾರೆ ರಾಧಿಕರು ಆದರೆ ಗಂಡನೆದರು ಮಾತಾಡುವ ಧೈರ್ಯ ಇಲ್ಲ. 

             ಇದಾದ ನಂತರ ದಯಾನಂದರು ರಾಧಿಕಾರಿಂದ ಅಂತರ ಕಾಯ್ದುಕೊಂಡರು. ರಾಧಿಕಾರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ, ಅವರ ದರ್ಪವೇನು ಕಡಿಮೆ ಆಗಿರಲಿಲ್ಲ. ಹೀಗೆ ದಿನಗಳು ಸಾಗಿ ಅವರಿಗೆ ಹೆರಿಗೆ ಆಯಿತು. ಗಂಡು ಮಗುವಿಗೆ ಜನ್ಮ ನೀಡಿದ್ದರು. 

         ಮಗುವಿನ ಆಗಮನದಿಂದ ಎಲ್ಲ ಮರೆತು ಖುಷಿಯಾಗಿದ್ದ ದಯಾನಂದರು,  ಆಸ್ಪತ್ರೆಯಿಂದ ಬೈಕಿನಲ್ಲಿ ಮನೆಗೆ ಹೋಗುವ ಸಮಯದಲ್ಲಿ ಒಂದು ಲಾರಿ ಬಂದು ಡಿಕ್ಕಿ ಹೊಡೆದ ಕಾರಣ ಅವರು ತಮ್ಮ ಕಾಲುಗಳನ್ನು ಕಳೆದುಕೊಂಡರು. 

          ಇದರಿಂದ ರಾಮಸ್ವಾಮಿ, ಕುಸುಮಾ ಮತ್ತು ವೈದೇಹಿ ಕುಗ್ಗಿ ಹೋದರು. ಆದರೆ ರಧಿಕಾರಿಗೆ ಮನೆ ಅವರ ಸುಪರ್ದಿಗೆ ತೆಗೆದುಕೊಳ್ಳುವ ಮೂಲಕ ತಮ್ಮ ಅಸಲಿ ಆಟ ಶುರುಮಾಡಿದ್ದರು. 

          ದಿನವೂ ಮನೆಯವರಿಗೆ ಕಿರುಕುಳ ಕೊಡುವುದು, ಸಣ್ಣ ಹುಡುಗಿ ಶಾಲೆ ಬಿಡಿಸಿ ಅವಳ ಕೈಯಲ್ಲಿ ಎಲ್ಲ ಕೆಲಸ ಮಾಡಿಸುತ್ತಿದ್ದರು. ಹಾಸಿಗೆ ಹಿಡಿದಿದ್ದ ದಯಾನಂದರು ಇದನ್ನೆಲ್ಲ ನೋಡಿ ಏನು ಮಾಡದ ಸ್ಥಿತಿಯಲ್ಲಿದ್ದರು. 

           ದಯಾನಂದರದ್ದು ಸರಕಾರಿ ನೌಕರಿ ಆಗಿದ್ದರಿಂದ ತಿಂಗಳು ಇಂತ್ತಿಷ್ಟು ಹಣ ಬರುತ್ತಿತ್ತು, ಆ ಹಣದಿಂದ ಮನೆ ನಡೆಸಲು ಆಗದಿದ್ದ ಕಾರಣ ರಾಮಸ್ವಮಿಯವರನ್ನು ಹೊಲದ ಕೆಲಸಕ್ಕೆ ದಬ್ಬುತ್ತಿದರು ರಾಧಿಕಾರು. ಮನೆ ಕೆಲಸಕ್ಕೆ ಕುಸುಮಾರು ಮತ್ತು ವೈದೇಹಿಗೆ ವಹಿಸಿ ತಾವು ಮಾತ್ರ ತಮ್ಮ ಮಗನ ಜೊತೆ ಆರಾಮಗಿದ್ದರು. 

          ಇದೇ ದಿನಚರಿ ಒಂದು ವರ್ಷ ಕಾಲ ಕಳೆಯುವ ವೇಳೆ ಕುಸುಮಾರು ಅಸುನೀಗಿದ್ದರು. ಈಗಂತೂ ಮನೆಯ ಪೂರ್ತಿ ಕೆಲಸ ವೈದೇಹಿಯ ಮೇಲೆಯೆ. ಹೊಲ ನೋಡಿಕೊಳ್ಳುತ್ತಾ ಅಷ್ಟೂ ಇಷ್ಟೂ ಕೂಡಿಟ್ಟ ಹಣದಲ್ಲಿ ರಧಿಕಾರಿಗೆ ಕಾಡಿ ಬೇಡಿ  ವೈದೇಹಿಯನ್ನು ಭಾರತನಾಟ್ಯ ಕಳಿಸಿದರು. ಈಗ ಅದೇ ಅವಳ ವೃತ್ತಿ ಹಾಗೂ ಮನೆಗೆ ಆಧಾರ.

             ರಾಧಿಕಾರ ಬೈಗುಳ ಹೊಡೆತದಿಂದ ಬೆಳೆದ ವೈದೇಹಿ ಮಾತನ್ನೇ ಮರೆತಿದ್ದಳು. ಮೂರನೆಯ ತರಗತಿಯಿಂದ ಓದು ನಿಲ್ಲಿಸಿದವಳು ಭರತನಾಟ್ಯ ಕಲಿತು, ಚಿಕ್ಕಮ್ಮನ ಆದೇಶದಂತೆ ಶಾಲೆಗೆ ಭರತನಾಟ್ಯ ಕ್ಲಾಸ್ ಹೇಳಿಕೊಡಲು ಹೋಗುತ್ತಿದ್ದಾಳೆ. ಆದರೆ ಇದರಿಂದ ಅವಳ ಮನೆಯ ಕೆಲಸಗಳು ರಾಧಿಕಾರ ಬೈಗುಳದಲ್ಲಿ ಯಾವ ವ್ಯತ್ಯಾಸ ಇರಲಿಲ್ಲ. 

💐😍💐😍💐😍💐😍💐😍💐😍💐😍💐😍

                   ಹಸಿರು ಬಣ್ಣದ ಮಾಸಿದ ಕಾಟನ್ ಸೀರೆ ಅದಕ್ಕೆ ಕೆಂಪು ರವಿಕೆ ಉಟ್ಟು ಹೆಗಲಮೇಲೆ ಪುಟ್ಟ ಬ್ಯಾಗು ಹಾಕಿಕೊಂಡು ತಲೆ ಬಗ್ಗಿಸಿ ಮನೆಗೆ ಬಂದಳು ವೈದೇಹಿ. ಮನೆಗೆ ಬರುತ್ತಿದ್ದ ಹಾಗೆ ಶುರುವಾಗಿತ್ತು ರಾಧಿಕಾರ ಅರಚಾಟ, 

         "ಏನೇ ಯಾಕೆ ಲೇಟು... ಇವತ್ತು ಸಂಬಳ ಬಂತು ತಾನೇ. ಏನಾದರೂ ತಿರುಗೋಕೆ ಹೋಗಿ ಬಂದೇನೆ ಮುದೇವಿ...." "ಅಂತೂ ನೀನು ಮನೆ ಬಿಟ್ಟು ತೊಲಗೂ ಹೊತ್ತು ಬಂತು ನೋಡು ಅದೇ ಖುಷಿ ನಂಗೆ... ಕೆಲ್ಸಕ್ಕೆ ಬರಲ್ಲ ಅಂತ ಹೇಳಿ ಬಂದಿಲ್ಲೋ" ಎಂದು ವ್ಯಂಗವಾಗಿ ಹೇಳುತ್ತಾರೆ. 

            ಈ ರೀತಿ ಚುಚ್ಚು ಮಾತುಗಳನ್ನು ಕೇಳಿ ಅಭ್ಯಾಸವಿದ್ದ ವೈದೇಹಿಗೆ ಯಾವ ಬೇಸರವೂ ಇಲ್ಲ. 

        "ಹಾ ಚಿಕ್ಕಮ್ಮ ಸಂಬಳ ಬಂದಿದೆ, ಅದರಿಂದ ಅಪ್ಪನಿಗೆ ಮತ್ತು ತಾತಾಗೆ ಔಷದಿ ತಂದೆ ಉಳಿದ ಹಣ ಇಲ್ಲಿದೆ ನೋಡಿ" ಎಂದು ಅವರ ಕೈಗೆ ದುಡ್ಡು ಕೊಟ್ಟು 

         "ಇನ್ನು  ಮೂರು ದಿನ ಕಳೆದು ಶಾಲೆ ಹೋಗುವುದು ಬಿಡ್ತೀನಿ ಚಿಕ್ಕಮ್ಮ " ಎಂದು ತಲೆ ತಗ್ಗಿಸಿ ಹೇಳುತ್ತಾಳೆ. 

         "ಸರಿ ಹೋಗು " ಎನುತ್ತ ದುಡ್ಡು ಎಣಿಸುತ್ತ ಕೋಣೆಗೆ ಹೋಗುತ್ತಾರೆ. 

         ಮೊದಲು ಸೀರೆ ಬದಲಿಸಿ ಸಾದಾ ಚೂಡಿದರ್ ಹಾಕಿ ಕೈ ಕಾಲು ಮುಖ ತೊಳೆದು ಕಾಫಿ ಮತ್ತು ಕಷಾಯ ಮಾಡಿ ಕಾಫಿ ಚಿಕ್ಕಮ್ಮನಿಗೆ ಕೊಟ್ಟು ಕಷಾಯ ತಾತನಿಗೆ ಕೊಟ್ಟು, ಅಪ್ಪನ ಕೋಣೆಗೆ ಹೋಗಿ ಅವರಿಗೂ ಕಷಾಯ ಕೊಟ್ಟವಳು ಇವಳ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದವರ ಸಮಾಧಾನ ಪಡಿಸಿ ಮತ್ತೆ ಮನೆ ಕೆಲಸದಲ್ಲಿ ತೊಡಗಿದಳು. 

          ಎಲ್ಲ ಕೆಲಸ ಮುಗಿಸಿ ಮಲಗಲು ಕೋಣೆಗೆ ಬಂದಾಗ ಹನ್ನೊಂದು ಗಂಟೆ. ಮಂಚದ ಮೇಲೆ ಮಲಗಿದ್ದ ಮುದ್ದು ತಮ್ಮ ರಿಷಿ ತಲೆಯನ್ನು ಪ್ರೀತಿಯಿಂದ ಸವರಿ ಕೆಳಗಡೆ ಹಾಸಿಗೆ ಹಾಸಿ ಅಡ್ಡಾಗುತ್ತಾಳೆ. ರಾಧಿಕಾರ ಮಗನಾದರೂ ಅವರ ಬುದ್ಧಿ ಬಂದಿರಲಿಲ್ಲ ರಿಷಿಗೆ ಅಕ್ಕ ಎಂದರೆ ಎಲ್ಲಿಲ್ಲದ ಅಕ್ಕರೆ ಅವನಿಗೆ, ಆದರೆ ಇವನು ಕೂಡ ಅಮ್ಮನೆದರು ಮಾತಾಡಲಾರ. ಅವರ ಕಣ್ಣು ತಪ್ಪಿಸಿ ಅಕ್ಕನಿಗೆ ಸಹಾಯ ಮಾಡುತ್ತಿದ್ದ. ಒಂದು ರೀತಿ ಈ ಮದುವೆಗೆ ರಾಧಿಕಾರು ಒಪ್ಪಿದ್ದು ಇವನಿಂದಲೆ. 

                ಏಷ್ಟು ಹೊರಳಾಡಿದರು ನಿದ್ದಿಯೆ ಸುಳಿವಿಲ್ಲ ಅವಳಿಗೆ. ಇನ್ನೂ ಒಂದು ವಾರದಲ್ಲಿ ಮದುವೆ ಎಂದು ನೆನೆದು ದುಃಖ ಆವರಿಸಿತು... "ಬುದ್ಧಿ ಬಂದಾಗಿನಿಂದ ಚಿಕ್ಕಮ್ಮನ ಮಾತು ಕೇಳಿದ ಬೇಳದ ನಂಗೆ ಈಗ ಅವರು ತೋರಿಸಿದ ಹುಡುಗನನ್ನೇ ಮದುವೆ ಆಗಬೇಕು. ಅವರ್ಯಾರು ಹೇಗಿದ್ದಾರೆ ಏನೊಂದೂ ಗೊತ್ತಿಲ್ಲ. ಇಷ್ಟು ದಿನ ನರಕ ನೋಡಿದ ನನಗೆ ಈಗಲಾದರೂ ಒಳ್ಳೆ ಬದುಕು ಸಿಗಬಹುದಾ?..."   "ಇಲ್ಲ ನಾನು ನತದೃಷ್ಟೆ ಅಳುವೊಂದೆ ನನ್ನ ಜೀವನ" ಎಂದು ಬಾಯಿಗೆ ಕೈ ಅದ್ದವಿಡಿದು ಅಳುವಾಗ ಒಮ್ಮೆ ಕಣ್ಣ ಮುಂದ ರಾಮ ಚಿತ್ರವು ಸುಳಿಯುತ್ತದೆ. 

                ಕಣ್ಣೋರೆಸಿ ಎದ್ದವಳು ತನ್ನ ಬ್ಯಾಗಿನಲ್ಲಿದ ಕಿ ಚೈನ್ ಕೈಯಲ್ಲಿ ಹಿಡಿದು ಕಿಟಿಕಿಯ ಬಳಿ ನಿಂತು ಹುಣ್ಣಿಮೆಯ ಚಂದ್ರನನ್ನು ನೋಡುತ್ತ ಅದರಲ್ಲಿ ರಾಮನ ನಗು ಮುಖ ಕಂಡವಳು,

            "ಸೋರಿ ರಾಮವರೆ ನಿಮಗೆ ತಕ್ಕನಾದವಳಲ್ಲ ನಾನು. ಇಲ್ಲಿ ನನ್ನ ಆಯಿಕೆಗೆ ಯಾವುದೇ ಮಹತ್ವವಿಲ್ಲ, ನಿಮ್ಮ ಜೊತೆ ಜೀವನ ಮಾಡುವ ಭಾಗ್ಯವಿಲ್ಲ" ಎನ್ನುತ್ತಾ ಕಣ್ಣಿರಿಡುತ್ತಲೇ ಕಿಟಿಕಿ ಮುಚ್ಚಿ ಬಂದು ಹಾಸಿಗೆ ಮೇಲೆ ಕಣ್ಣ ಮುಚ್ಚಿ ಮಲಗಿದಳು.

😍💐😍💐😍💐😍💐😍💐😍💐😍💐😍💐

          ತನ್ನದೇ ಕೋಣೆಯ ಬಾಲ್ಕಾನಿಯಲಿ ಕುಳಿತ ರಾಮ ಅದೇ ಹುಣ್ಣಿಮೆ ಚಂದ್ರನನ್ನು ನೋಡುತ್ತ, "ಅದು ಹೇಗೆ ಕಂದ ನಿನ್ನನು ಮರೆತು ಬಿಡು ಅಂತ ಹೇಳಿದೆ... ಅದು ಅಷ್ಟು ಸುಲಭ ಅಂತ ಅಂಕೊಡ್ಯ?"... "ಇಷ್ಟು ದಿನದಲ್ಲಿ ಒಂದು ಕ್ಷಣವೂ ನಿನಗೆ ನನ್ನ ಪ್ರೀತಿಸಬೇಕು ಅಂತ ಅನಿಸಲಿಲ್ವ ಕಂದ... ನಿನ್ನ ಮನಸ್ಸಲ್ಲಿ ನನ್ನ ಮೇಲೆ ಯಾವ ಭಾವನೆ ಇಲ್ವಾ?....  ಯಾವ ಭಾವನೆಯನ್ನು ವ್ಯಕ್ತ ಪಡಿಸದೆ ಸಹಜವಾಗಿ ಇರುವುದು ನಿನಗೊಬ್ಬಳಿಗೆ ಒಲಿದು ಬಂದ ಕಲೆ ಇರಬೇಕು. ಆದರೆ ನಾನು ನಿನ್ನ ಬಿಡಲ್ಲ ಕಂದ.. ಈ ಜೀವಕ್ಕೆ ನೀನು ಬೇಕೆ ಬೇಕು. ಆ ನರಕದಿಂದ ನಿನ್ನ  ಕರೆದುಕೊಂಡು ಬರುತ್ತೇನೆ...ಮದುವೆ ಗೊತ್ತು ಆಗಿರೋದು ಅಷ್ಟೇ ತಾನೇ, ಆದ್ರೆ ಮದುವೆ ಗಂಡು ನಾನೇ ನೋಡುತ್ತಾ ಇರು" ಎಂದು  ತಮ್ಮಿಬ್ಬರ ಮೊದಲ ಭೇಟಿ ನೆನೆಯುತ್ತಾನೆ ರಾಮ್.

💐😍💐😍💐😍💐😍💐😍💐😍💐😍💐

            ರಾಮನು ವಿವೇಕಾನಂದ ಇಂಟ್ನ್ಯಾಷನಲ್ ಸ್ಕೂಲಿಗೆ ತಮ್ಮ ಆಸ್ಪತ್ರೆಯವತಿಯಿಂದ ಮಕ್ಕಳಿಗೆ ಉಚಿತ ತಪಸಣೆ ಕ್ಯಾಂಪ್ ಮಾಡುವದರ ಬಗ್ಗೆ ಮೀಟಿಂಗಿಗೆ ಬಂದವ ಪ್ರಾಂಶುಪಾಲರ ಕೋಣೆಗೆ ಹೋಗುವ ದಾರಿಯಲ್ಲಿ ಸುಮಧುರ ಹಾಡು ಕೇಳಲು ಅಲ್ಲೇ ನಿಂತು ಕಿಟಿಕಿ ಇಂದ ಇಣುಕಿ ನೋಡಿದವನಿಗೆ ಕಂಡಿದ್ದು  ಮಕ್ಕಳಿಗೆ ಭರತನಾಟ್ಯ ಹೇಳಿ ಕೊಡುತ್ತಿದ್ದ ವೈದೇಹಿ. ಆದರೆ ಇವನಿಗೆ ಅವಳ ಬೆನ್ನು ಮತ್ತು ಉದ್ದ ಜಡೆ ಅಷ್ಟೇ ಕಾಣುತ್ತಿತ್ತು. ಅವಳ ನೃತ್ಯಕ್ಕೆ ಮನಸೋತವ ಅವಳ ಮುಖ ದರ್ಶನ ಪಡೆಯಲು ಅಲ್ಲೇ ಕಾದು ನಿಲ್ಲಲು, ಆಫೀಸ್ ಪೂನ್ ಬಂದು ರಾಮನನ್ನು ಪ್ರಾಂಶುಪಾಲರ ಕೋಣೆಗೆ ಕರೆದುಕೊಂಡು ಹೋಗುತ್ತಾನೆ.

             "ಹಲೋ ಮಿ. ರಾಮ್ ಸರ್, ಬನ್ನಿ ಕುತ್ಗೊಳಿ" ಎನ್ನುತ್ತಾ ತಮ್ಮ ಮುಂದಿನ ಕುರ್ಚಿಯನ್ನು ತೋರಿಸುತ್ತಾರೆ ರಂಗನಾಥ ಶರ್ಮ. ಅವರು ವಿವೇಕಾನಂದ ಇಂಟ್ನ್ಯಾಷನಲ್ ಸ್ಕೂಲಿಗೆ ಪ್ರಾಂಶುಪಾಲರು, ಸುಮಾರು ಐವತ್ತು ವರ್ಷದವರು. 

             ರಾಮ ಬಂದ ಮೇಲೆ ಶಾಲೆಯ ಕೆಲವು ಮುಖ್ಯ ಶಿಕ್ಷಕರು ಬರುತ್ತಾರೆ. ಮೂವತ್ತು ನಿಮಷಗಳ ಕಾಲ ಚರ್ಚೆ ನಡೆಯುತ್ತಿದೆ. ಎಲ್ಲರಿಗು ಟಿ ವ್ಯವಸ್ಥೆ ಆದನಂತರ ಪೂನನನ್ನು ಕರೆದ ರಂಗನಾಥರು "ಹೋಗಿ ಮಿಸ್ ವೈದೇಹಿಯವರನ್ನು ಬರಲು ಹೇಳು" ಎಂದುವರು ರಾಮನ ಕಡೆ ತಿರುಗಿ, 

        "ಸರಿ ಸರ್ ನಾಳೆ ಕ್ಯಾಂಪ್ ನಡೆಯಲಿ ಎಲ್ಲ ವ್ಯವಸ್ಥೆ ನಾವು ನೋಡ್ಕೋತಿವಿ" ಎನ್ನುತ್ತಾರೆ. 

        ರಾಮ ಉತ್ತರಿಸುವ ಮುನ್ನವೇ "ಎಕ್ಸ್‌ಕ್ಯೂಸ್ ಮೀ ಸರ್" ಎನ್ನುವ ಮಧುರ ಧ್ವನಿಗೆ ಸುಮ್ಮನಾಗುತ್ತೇನೆ. 

         "ಎಸ್ ಬನ್ನಿ ಮೇಡಂ" ಎನ್ನುವ ಶರ್ಮಾರ ಮಾತಿಗೆ ಒಳಬರುವ ವೈದೇಹಿ ರಾಮನ ಕುರ್ಚಿಯ ಪಕ್ಕ ಇರುವ ಖಾಲಿ ಜಾಗದಲ್ಲಿ ನಿಲ್ಲುತ್ತಾಳೆ. ಇಬ್ಬರು ಇನ್ನೂ ಇನ್ನೋಬರ ಮುಖವನ್ನು ನೋಡಿಲ್ಲ. 

             "ರಾಮ್ ಸರ್ ನಾಳೆಯ ಕ್ಯಾಂಪಿಗೆ ಉಳಿದ ಎಲ್ಲಾ ಅಧ್ಯಾಪಕರಿಗೆ ತರಗತಿ ಇರುವ ಕಾರಣ ನಮ್ಮ ಭರತನಾಟ್ಯ ಕಲಿಸುವ ಶಿಕ್ಷಕಿ  ವೈದೇಹಿ ಮೇಡಂ ನಿಮಗೆ ಸಹಾಯಕ್ಕಾಗಿ ನಿಮ್ಮ ಜೊತೆ ಇರುತ್ತಾರೆ" ಎಂದು ಶರ್ಮಾರು ಹೇಳಲು ಆತುರದಿಂದ ಪಕ್ಕಕ್ಕೆ ತಿರುಗಿ ನೋಡುವ ರಾಮ್ ಅವಳ ಮುಖ ನೋಡಿ ಕಳೆದು ಹೋಗುತ್ತಾನೆ. 

       ತಿಳಿ ನೀಲಿ ಬಣ್ಣದ ಕಾಟನ್ ಸೀರೆ, ದುಂಡನೆಯ ಮುಖಕ್ಕೆ ದೊಡ್ಡ ಕಣ್ಣುಗಳು, ಚಿಕ್ಕ ಮೂಗು, ಪುಟ್ಟ ತುಟಿಗಳು, ಕೈಯಲ್ಲಿ ಎರಡು ಗಾಜಿನ ಬಳೆಗಳು, ಹಣೆಯ ಮೇಲೆ ಸಣ್ಣ ಬೊಟ್ಟು ಅವಳ ಮುಖದಲ್ಲಿರುವ ಮುಗ್ಧತೆ ಹಾಗೂ ಭಯ ಇವೆಲ್ಲವೂ ರಾಮನ ಹೃದವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. 

           ಅವಳಲ್ಲೆ ಕಳೆದು ಹೋದವನು ಎಚ್ಚರಗೊಂಡಿದ್ದು ಅವಳು ಇವನ ಕಡೆ ತಿರುಗಿ "ನಮಸ್ತೆ ಸರ್" ಎಂದಾಗ. 

      ಗಲಿಬಿಲಿ ಗೊಂಡವ ನಗುತ್ತಾ "ನಮಸ್ತೆ" ಎಂದುತ್ತರಿಸುತ್ತಾನೆ ರಾಮ್.

      ವೈದೇಹಿಗು  ನಾಳಿನ ಕ್ಯಾಂಪ್ ಬಗ್ಗೆ ತಿಳಿಸಿದ ಶರ್ಮಾರು ಅವಳನ್ನು ಹೊರಡಲು ಹೇಳಿದಾಗ ಮತ್ತೊಮ್ಮೆ ಇಬ್ಬರಿಗೂ ವಿಶ್ ಮಾಡಿ ಹಿಂದಿರುಗಿ ಹೋಗುವಳನ್ನು ನೋಡುವ ರಾಮ ಅವಳ ಉದ್ದು ಜಡೆ ಅದಕ್ಕೆ ಮೂಡಿದ ಸಂಪಿಗೆ ಹೂ ನೋಡಿ ತಾನು ನೋಡಿದ ಹುಡುಗಿ ಇವಳೇ ಎಂದು ಸಂಪೂರ್ಣ ಖಾತರಿ ಆದ ಮೇಲೆ ಅವನ ಖುಷಿಗೆ ಪಾರವೇ ಇರಲಿಲ್ಲ. 

         ಅವನು ಕೂಡ ಮತ್ತೈದು ನಿಮಿಷ ಮಾತನಾಡಿ ಹೊರಡುತ್ತಾನೆ. ಶಾಲೆಯ ಗೇಟ್ ತಲಪುವ ತನಕವೂ ಅವನ ಕಣ್ಣು ಇವಳಿಗೆ ಹುಡುಕುತ್ತಿತ್ತು ಆದರೆ ವೈದೇಹಿ ಇವನ ಕಣ್ಣಿಗೆ ಬೀಳಲಿಲ್ಲ. 

         ಕಾರ್ ಹತ್ತಿ ಆಸ್ಪತ್ರೆ ಕಡೆ ಹೋದವನು ತನ್ನ ಕೆಲಸ ಮುಗಿಸಿ ಮನೆಗೆ ಹೋಗಿ ನಾಳೆಯ ದಿನಕ್ಕೆ ಕಾತುರದಿಂದ ಕಾಯುತ್ತಿದ್ದ. ಇತ್ತ ಇವಳ ದಿನಚರಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. 

         ರಾಮ್, ಸ್ಪಂದನ ಮಲ್ಟಿಸ್ಲೆಷಲ ಹಾಸ್ಪಿಟಲಲಿನ ಎಮ್ ಡಿ. ತಂದೆ ಅವಿನಾಶ್ ತಾಯಿ ಸ್ಪಂದನ. ಮನೆಯಲ್ಲಿ ತಂದೆ ತಾಯಿ ಅಕ್ಕ ರಮ್ಯಾ ಅವಳ ಗಂಡ ರಮಣ್ ಒಟ್ಟಿಗೆ ಇರುತ್ತಾರೆ. ಒಂದು ಸುಖಿ ಕುಂಟುಬ ಎಂದರು ತಪ್ಪಾಗದು. ರಾಮ್ ಎಂದರೆ ಎಲ್ಲರಿಗು ಜೀವ. ಸಣ್ಣ ವಯಸ್ಸಿನಲ್ಲಿ ಆಸ್ಪತ್ರೆಯ ಜವಾಬ್ದಾರಿ ಹೊತ್ತವ ಅದನ್ನು ಸಮರ್ಪಕ ರೀತಿಯಲ್ಲಿ ನಿಭಾಯಿಸುತ್ತಿದ್ದ. ಆರು ಅಡಿಗಿಂತ ಸ್ವಲ್ಪ ಕಮ್ಮಿ ಎತ್ತರ, ಗೋದಿ ಮೈಬಣ್ಣ, ನೀಳ ನಾಸಿಕ, ಎತ್ತರಕ್ಕೆ ತಕ್ಕ ಮೈಕಟ್ಟು,  ನಗು ಮುಖದವ, ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯಕ್ತಿವ ಅವನದ್ದು. ಅವನ ಹಿಂದೆ ಹುಡುಗೀರ ಸಾಲೇ ಇದ್ದರೂ ಯಾರನ್ನು ನೋಡಿ ಹುಟ್ಟದ ಭಾವಾನೆಗಳು ವೈದೇಹಿಯನ್ನು ನೋಡು ಉದಯಿಸಿದ್ದವು. 

       ಅವಳನ್ನು ನೋಡುವ ಕಾತುರಕ್ಕೆ ರಾತ್ರಿಯಲ್ಲಿ ಸರಿಯಾಗಿ ನಿದ್ದಿ ಮಾಡದೆ ಬೇಳಗ್ಗೆ ಬೇಗ ಎದ್ದು ಆಸ್ಪತ್ರೆಗೆ ಹೋಗಿ ಅಲ್ಲಿಂದ ತನ್ನ ಸಿಬ್ಬಂದಿ ಕರೆದುಕೊಂಡು ಶಾಲೆಗೆ ಬರುತ್ತಾನೆ. 

           ಅವನು ಬರುವ ಮೊದಲೇ ವೈದೇಹಿ ಬಂದು ಎಲ್ಲ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಳು. ಇನ್ನುವನ ದಿನ ಇವಳ ಹಿಂದೆ ಅಂದರು ತಪ್ಪಾಗದು ಬಿಡಿ. 

      ಶಾಲೆ ಶುರುವಾಗುವ ಹೊತ್ತಿಗೆ ಒಂದು ತಾಸಿನ ಉದ್ಘಾಟನಾ ಸಮಾರಂಭ ನಡೆಸಿ ತಪಾಸಣೆ ಶುರು ಮಾಡಿದರು. ಒಂದಾದ ಮೇಲೆ ಇನ್ನೊಂದು ತರಗತಿಯ ಹುಡುಗರು ತಪಾಸಣೆಗೆ ಬರುತಿದ್ದ ಕಾರಣ ಉಳಿದ ತರಗತಿ ನಡೆಯುತ್ತಿದ್ದವು. ಅದಕ್ಕೆ ವೈದೇಹಿಗೆ ಇಲ್ಲಿನ ಜವಾಬ್ದಾರಿ ವಹಿಸಿದ್ದರು. 

          ಯಾವುದೇ ಕ್ಯಾಂಪ್ ಇದ್ದರೂ ರಾಮ್ ಸ್ವಲ್ಪ ಹೊತ್ತು ಇದ್ದು ತನ್ನ ಕೆಲ್ಸಕ್ಕೆ ಹೊರಡುತ್ತಿದ್ದ, ಅವ ಡಾಕ್ಟರ್ ಅಲ್ಲ ಅಲ್ವಾ ಅವನದ್ದು ಅಲ್ಲಿ ಮಾಡುವ ಕೆಲಸ ಏನು ಇರುತ್ತಿರಲಿಲ್ಲ. ಆದರೆ ಈ ಬಾರಿ ವೈದೇಹಿ ಹಿಂದ ಮುಂದೆ ತಿರುಗುವ ಕೆಲಸ ಬಿಟ್ಟು ಬೇರೇನೂ ಮಾಡಲಿಲ್ಲ ಅವ. ಮಾತನಾಡಿಸುವ ಅವಕಾಶ ಎಲ್ಲಿ ಸಿಕ್ಕರೂ ಅದನ್ನು ನೂರಕ್ಕೆ ನೂರರಷ್ಟು ಉಪಯೋಗ ಮಾಡಿಕೊಂಡಿದ್ದ. ಆದರೆ ಇವನ ಈ ವರ್ತನೆ ಯಾರಿಗೂ ಅತಿಯಾಗಿ ಅನಿಸಿರಲಿಲ್ಲ, ಸ್ವತಃ ವೈದೇಹಿಗೆ ಇದರ ಕಡೆ ಲಕ್ಷವಿರಲಿಲ್ಲ. ಅವನ ಜೊತೆ ಮಾತಾಡುತ್ತಾ ತನ್ನ ಕೆಲಸ ಮಾಡುತ್ತಿದ್ದಳು. ಇವರ ನಡುವೆ ಒಳ್ಳೆ ಸ್ನೇಹ ಅನ್ನುವುದಕಿಂತ ಒಳ್ಳೆಯ ಪರಿಚಯ ಬೇಳದಿತ್ತು. ಬೇರೆಯವರ ಜೊತೆ ಸ್ನೇಹ ಮಾಡುವ ಧೈರ್ಯ ಇರಲಿಲ್ಲ ವೈದೇಹಿಗೆ ಅವಳ ಚಿಕ್ಕಮ್ಮದೆ ಹೆದರಿಕೆ ಅವಳಿಗೆ. 

             ಸಂಜೆ ಆರಕ್ಕೆ ಕೆಲಸ ಮುಗಿದಿತ್ತು. ಅವಳ ಊರಿಗೆ ಹೋಗುವ ಕೊನೆಯ ಬಸ್ಸಿಗೆ ಇನ್ನೂ ಹತ್ತೆ ನಿಮಿಷ ಬಾಕಿಯಿತ್ತು. ಪಟ ಪಟನೆ ಎಲ್ಲ ಮುಗಿಸಿದ ವೈದೇಹಿ ಇನ್ನೇನು ಹೊರಡುವಾಗ ರಾಮ ಅವಳನ್ನು ಬಸ್ಸು ನಿಲ್ದಾಣದ ತನಕ ಬಿಡುವೇನೆಂದು ಕರೆಯಲು ಬೇಡ ಎಂದು ನಿರಾಕರಿಸುತ್ತಾಳೆ, ಅದು ತಲೆ ಬಗ್ಗಿಸಿ ಸಣ್ಣ ದ್ವನಿಯಲ್ಲೆ ಅವಳ ಮಾತು.

           ರಾಮ ಮತ್ತಷ್ಟು ಒತ್ತಾಯಿಸಿದ ಕಾರಣ ಮನಸ್ಸಿಲ್ಲದೆ ಅವನ ಕಾರ್ ಎರುತ್ತಾಳೆ. ಶಾಲೆ ಇಂದ ನಿಲ್ದಾಣದವರೆಗು ಅವಳ ಬಗ್ಗೆ ಕೇಳುವ ರಾಮ ಅವಳು ಇವನ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುತ್ತಾ ತಲೆ ಕೆಳಗಡೆ ಹಾಕಿಯೇ ಇರುತ್ತಾಳೆ. 

       ಸರಿಯಾದ ಸಮಯಕ್ಕೆ ನಿಲ್ದಾಣಕ್ಕೆ ತಲಪುವ ರಾಮ್ ಅವಳ ಬಸ್ಸು ಹತ್ತಿ ಹೋಗುವವರೆಗೂ ಅಲ್ಲೇ ಕಾದು ನಂತರ ಆಸ್ಪತ್ರೆಗೆ ಹೋಗುತ್ತಾನೆ.

  😍💐😍💐😍💐😍💐😍💐😍💐😍💐😍 

            ಸದ್ದಿಲ್ಲದೆ ಎರಡು ದಿನ ಕಳೆದಿತ್ತು. ಇಬ್ಬರು ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ರಾಮ ಮಾತ್ರ ತನ್ನ ಕೆಲಸದಲ್ಲೂ ವೈದೇಹಿಯ ನೆನಪು ಕಾಡುತ್ತಿತ್ತು. ಈ ಎರಡು ದಿನದಲ್ಲಿ ತನ್ನ ಪಿ.ಯೆ ಸುರೇಶ್ ಕಡೆಯಿಂದ ವೈದೇಹಿಯ ಬಗ್ಗೆ ಪೂರ್ತಿ ಮಾಹಿತಿ ಕಲೆ ಹಾಕ್ಕಿದ್ದನವ. ಅವಳ ಬಗ್ಗೆ ತಿಳಿದ ಮೇಲೆ ಅವಳನ್ನು ಮದುವೆಯಾಗುವ ನಿರ್ಧಾರ ಇನ್ನೂ ಗಟ್ಟಿ ಆಗಿತ್ತು.

               ಮರುದಿನ ಸಂಜೆ ಬೇಗ ಕೆಲಸ ಮುಗಿಸಿದವ, ಶಾಲೆ ಬಿಡುವ ಸಮಯಕ್ಕೆ ಸರಿಯಾಗಿ ಅವಳು ದಿನ ಹತ್ತುವ ಬಸ್ಸು ನಿಲ್ದಾಣದಲ್ಲಿ ನಿಂತಿದ್ದ. ಅವ ಬಂದು ಐದು ನಿಮಷಕ್ಕೆ ವೈದೇಹಿ ಬಂದಳು. ಎರಡು ದಿನಗಳ ನಂತರ ಇವಳನ್ನು ನೋಡಿ ಅವನ ತುಟಿಗಳು ಬಿರಿದಿದ್ದವು. 

          ಕೇಸರಿ ಕಾಟನ್ ಸೀರೆ ಉಟ್ಟ ಪುಟ್ಟ ಬ್ಯಾಗ್ ಹಿಡಿದು ನೆಲ ನೋಡುತ್ತ ಬಂದು ನಿಂತವಳಿಗೆ ಇವನೇನು ಬೇರೆ ಯಾರ ಕಡೆಗೂ ಲಕ್ಷವಿಲ್ಲ. ಬುದ್ಧಿ ಬಂದಾಗಿನಿಂದ ಮನೆಯಲ್ಲೇ ಉಳಿದ ಹೆಣ್ಣಿಗೆ ಹೇಗೆ ತಾನೇ ಹೊರಗಡೆ ಜಗತ್ತನ್ನು ಎದುರಿಸುವ ಧೈರ್ಯ ಬರುವುದು. ಹಾಗಾಗಿ ಅವಳು ಕೆಲಸಕ್ಕೆ ಹೊರ ಬಂದರು ಯಾರಲ್ಲೂ ಹೆಚ್ಚು ಬೆರೆಯುತ್ತಿರಲಿಲ್ಲ. 

         ಅವಳನ್ನು ಇನ್ನೇನು ಮಾತನಾಡಿಸಬೇಕು ಎನ್ನುವ ಹೊತ್ತಿಗೆ ಸರಿಯಾಗಿ ಬಸ್ಸು ಬರುತ್ತದೆ. ಅವಳು ಹತ್ತಿದ್ದನು ನೋಡಿ ತಾನೇ ಅದೇ ಬಸ್ಸು ಹತ್ತಿ ತನ್ನ ಪಿಯೆಗೆ ಕರೆ ಮಾಡಿ ಅವನ ಕಾರನ್ನು ಹೊಸಳ್ಳಿಗೆ ತರಲು ಹೇಳಿ ತಾನು ಅವಳ ಪಕ್ಕದಲ್ಲೇ ಖಾಲಿ ಇದ್ದ ಜಾಗದಲ್ಲಿ ಕೂರುತ್ತಾನೆ. 

ಎಂದು ನಿನ್ನ ನೋಡುವೆ ,ಎಂದು ನಿನ್ನ ಸೇರುವೆ ,

ಎಂದು ನಿನ್ನ ನೋಡುವೆ ,ಎಂದು ನಿನ್ನ ಸೇರುವೆ ,

ನಿಜ ಹೇಳಲೇನು,ನನ್ನ ಜೀವ ನೀನು

ನೂರಾರು ಬಯಕೆ ಆತುರ ತಂದಿದೆ,

ನೂರಾರು ಕನಸು ಕಾತರ ತುಂಬಿದೆ,

ಮುಗಿಲಿಗಾಗಿ ಬಾನು,ದುಂಬಿಗಾಗಿ ಜೇನು

ನನಗಾಗಿ ನೀನು,ನಿನಗಾಗಿ ನಾನು, ನನಗಾಗಿ ನೀನು,ನಿನಗಾಗಿ ನಾನು,

              ಬಸ್ಸಿನಲ್ಲಿ ಬರುತ್ತಿರುವ ಹಾಡು ಗುನುಗುತ್ತಾ ಕಿಟಿಕಿ ಕಡೆ ನೋಡುತ್ತಾ ಕುಳಿತಿದ್ದವಳಿಗೆ ಇವನು ಬಂದು ಕುಳಿತ ಪರಿವಿಲ್ಲ. 

        ಹಾಡಿನ ಸಾಲು ಕೇಳಿ ತನ್ನ ಪರಿಸ್ಥಿತಿಗೆ ತಕ್ಕಂತೆ ಇದ್ದಿದು ಕಂಡು ಮೆಲ್ಲನೆ ನಕ್ಕವ, ತಾನೇ ವೈದೇಹಿಯನ್ನು ಮಾತಡಿಸುತ್ತಾನೆ. 

          "ಹಾಯ್ ವೈದೇಹಯವರೆ" ಎನ್ನುವ ದ್ವನಿಗೆ ತಿರುಗಿದ ವೈದೇಹಿ ರಾಮನನ್ನು ನೋಡಿ ಆಶ್ಚರ್ಯದಲ್ಲಿ "ನಮಸ್ತೆ ಸರ್ ನೀವೇನು ಇಲ್ಲಿ" ಎಂದು ಪ್ರಶ್ನಿಸುತ್ತಾಳೆ. ಆ ಹಾಡಿನ ಶಬ್ದಕ್ಕೆ ಇವಳ ಮೆಲ್ಲ ಮಾತು ಇವನ ಕಿವಿಗೆ ಬಿದ್ದಿದ್ದು ಅವನ ಪುಣ್ಯವೇ ಸರಿ. 

          "ಬಳ್ಳಾಪುರದಲ್ಲಿ ಕೆಲಸ ಇತ್ತು ರಿ ಅದಕ್ಕೆ ಹೋಗ್ತಿದ್ದೆ" ಎಂದವನನ್ನು ಅನುಮಾನದಲ್ಲಿ "ನಿಮ್ಮ ಕಾರ್?..." ಎಂದು ಕೇಳಿದಳು ವೈದೇಹಿ. 

        ಮೊದಲ ಮಾತಿಗಷ್ಟೆ ಅವಳು ಅವನ ಮುಖ ನೋಡಿದ್ದು ಬಿಟ್ಟರೆ ಬೇರೆ ಕಡೆ ನೋಡುತ್ತಾ ಅವಳು ಮಾತನಾಡುತ್ತಿದ್ದಳು. 

          "ಆಹಾ ಪರ್ವಾಗಿಲ್ಲ ನನ್ನ ಹುಡುಗಿ ನಾ ಅಂದುಕೊಂಡಷ್ಟು ದಡ್ಡಿ ಏನು ಅಲ್ಲ..... ಆದರೆ ಸಂಕೋಚ ಭಯ ಜಾಸ್ತಿ ಅಷ್ಟೇ" ಎಂದು ಮನದಲ್ಲೇ ಅಂದುಕೊಳ್ಳುತ್ತಾ,

      "ಅದು ಗಾಡಿನ ಸರ್ವಿಸ್ಗೆ ಕೊಟ್ಟಿದೆ ಅದಕ್ಕೆ ಬಸ್ಸಿನಲ್ಲಿ ಹೋಗ್ತಾ ಇರೋದು" ಎನ್ನುತ್ತಾನೆ. 

     ಸರಿಯೆಂದು ತಲೆ ಆಡಿಸಿ ಸುಮ್ಮನೆ ಕುಳಿತರೆ, ಇವನು ತಕ್ಷಣ ಏನು ಮಾತಾಡುವುದು ಎಂದು ಹೊಳೆಯದೆ ಸುಮ್ಮನೆ ಕೂರುತ್ತಾನೆ…

  

ಕಂಗಳ ಕಾಂತಿ ನಿನಾಗಿರುವೆ,

ಮೈ ಮನವೆಲ್ಲಾ ನೀ ತುಂಬಿರುವೆ,

ನನ್ನೀ ಬಾಳಿಗೆ ಬೆಳಕಾಗಿರುವೆ,

ಜನುಮ ಜನುಮದಾ ಜೋಡಿ ನೀನು

ನನಗಾಗಿ ನೀನು,ನಿನಗಾಗಿ ನಾನು,ಆ ಹಾ ಆ ಆ,

ನನಗಾಗಿ ನೀನು,ನಿನಗಾಗಿ ನಾನು.…

      ಈ ಬಾರಿ ನೇರ ಮುಖ ಮಾಡಿ ಕುಳಿತಿದ್ದವಳು ತನಗರಿವಿಲ್ಲದೆ ಹಾಡು ಗುನಗುತ್ತಿದ್ದಾಳೆ. ಅದು ಅವಳ ತುಟಿ ಸಂಚಲನದಿಂದ ಗೊತ್ತು ಮಾಡಿಕೊಂಡವನು, ಮಾತಾಡಲು ಅವಕಾಶ ಸಿಕ್ಕಿತು ಎನ್ನುತ್ತಾ ಅವಳ ಕಡೆ ತಿರುಗಿ,

         "ನಿಮಗೆ ಹಳೆ ಕಾಲದ ಕನ್ನಡ ಚಿತ್ರಗೀತೆ ಎಂದರೆ ಇಷ್ಟನ?...." ಎಂದು ಪ್ರಶ್ನಿಸಲು ಸಂಕೋಚದಿಂದಲೇ "ಹೌದು" ಎಂದು ಉತ್ತರಿಸುತ್ತಾಳೆ. 

         ಅವಳ ಊರು ತಲುಪವವರೆಗು ಅದು ಇದು ಎಂದು ಮಾತನಾಡುವಾನಿಗೆ ಅವಳಿಂದ ಬಂದ ಉತ್ತರ ಮಾತ್ರ ಹು, ಇಲ್ಲ, ಸರಿ ಎಂದು ಅಷ್ಟೆ. 

                  ಹೊಸಳ್ಳಿ ಸ್ಟಾಪ್ ಬಂದಾಗ "ಸರಿ ಸರ್ ಬರ್ತೀನಿ" ಎಂದು ಹೇಳಿ ಮುಂದಿನ ಬಾಗಿಲಿನಿಂದ ಇಳಿದರೆ ಇವನು ಹಿಂದಿನ ಬಾಗಿಲಿನಿಂದ ಇಳಿದು ಅವಳು ಕಣ್ಮರೆ ಆಗುವ ತನಕ ಅಲ್ಲೇ ಇದ್ದು ಆ ನಂತರ ತನ್ನ ಕಾರ್ ಹತ್ತಿ ಹೋಗುತ್ತಾನೆ. ಮುಂದಿನ ಊರಿಗೆ ಹೋಗುತ್ತೇನೆ ಎಂದವ ಇಲ್ಲೆ ಯಾಕೆ ಇಳಿದ ಎಂದು ಅನುಮಾನ ಬರಬೇಕೆಂದರೆ ಅವಳು ತಲೆ ಎತ್ತಿ ನೋಡಿದರೆ ಅಲ್ವಾ, ಕುದರೆಯ ಹಾಗೆ ನೇರ ದಾರಿ ಬಿಟ್ಟು ಬೇರೇನೂ ನೋಡುವುದಿಲ್ಲ, ಹಾಗಾಗಿ ಇವಳಿಗೆ ರಾಮನ ಸುಳ್ಳು ತಿಳಿಯದಾಯಿತು. 

          ಇದೇ ರೀತಿ ಅವಳನ್ನು ಬಸ್ಸಿನಲ್ಲಿ ಭೇಟಿ ಆಗುವುದನ್ನು ಒಂದು ವಾರ ಮಾಡಿದ ಆದರೆ ಅವಳಿಂದ ಯಾವುದೇ ಬದಲಾವಣೆ ಆಗಿರಲಿಲ್ಲ. 

         ಇನ್ನು ಹೀಗೆ ಬಿಟ್ಟರೆ ಆಗದು ಎಂದು ಒಂದು ದಿನ ಬಸ್ಸಿನಲ್ಲಿ ಮಾತಾಡುವಾಗ ಧೈರ್ಯ ಮಾಡಿ ಅವನ ಪ್ರೀತಿ ವಿಷಯ ವೈದೇಹಿಗೆ ತಿಳಿಸಿದ ರಾಮ್.

            "ವೈದೇಹಿಯವರೆ ನಾನು ನಿಮ್ಮನ್ನು ಮನಸಾರೆ ಪ್ರೀತಿಸ್ತಾ ಇದ್ದೀನಿ ನೀವು ನನ್ನ ಮದುವೆ ಆಗ್ತೀರಾ" ಎಂದು ಕೇಳಿದ ರಾಮನ ಮಾತಿದೆ ಬೆಚ್ಚಿದ ವೈದೇಹಿ,

       "ಇಲ್ಲ ಸರ್ ನಾನು ನನ್ನ ಇಚ್ಛೆಯ ಮೇರೆಗೆ ಮದುವೆ ಆಗುವುದಿಲ್ಲ ಅದು ಏನಿದ್ದರೂ ನಮ್ಮ ಚಿಕ್ಕಮ್ಮನ ನಿರ್ಧಾರ.... ನೀವು ಹೀಗೆ ಪ್ರೀತಿ ಅಂತ ಇಷ್ಟು ದಿನ ನನ್ನ ಹಿಂದೆ ಬಂದಿದ್ದು ಅಂತ ತಿಳಿದಿದ್ದರೆ  ನಾನು ನಿಮ್ಮ ಜೊತೆ ಮಾತಾಡುತ್ತಿರಲಿಲ್ಲ....ಪ್ಲೀಜ್ ಸರ್ ಇದನ್ನ ಇಲ್ಲಿಗೆ ಬಿಟ್ಟು ಬಿಡಿ"  ಎಂದು ಉತ್ತರಿಸುತ್ತಾಳೆ ವೈದೇಹಿ. ಅದು ಕೂಡ ಮೆಲ್ಲ ಧ್ವನಿಯಲ್ಲಿ. 

          ಅವನು ಪರಿಪರಿಯಾಗಿ ಅವನ ಪ್ರೀತಿ ವ್ಯಕ್ತಪಡಿಸಿದರು ಅವಳ ಉತ್ತರ ಒಂದೆ ಏಕೆಂದರೆ ಅವಳಿಗೆ ಗೊತ್ತು ಅವಳ ಜೀವನ ನಿರ್ಧಾರ ಅವಳ ಕೈಯಲ್ಲಿಲ್ಲ ಎಂದು. 

          ಅದನ್ನು ರಾಮನಿಗೂ ಕೂಡ ಸೂಕ್ಷ್ಮವಾಗಿ ತಿಳಿಸಿ ಕಿಟಕಿ ಕಡೆ ಮುಖ ಮಾಡಿ ಕೂಡುತ್ತಾಳೆ. ಅವಳ ಮಾತಿಗೆ ಬೇಸರಗೊಂಡವ ಮುಂದಿನ ಸ್ಟಾಪಿನಲ್ಲಿ ಏನೊಂದೂ ಮಾತನಾಡದೆ ಇಳಿದು ಹೋಗುತ್ತಾನೆ. ಅವನ ನಡೆ ಇವಳಿಗೆ ಬೇಸರ ತಂದರು ಸುಮ್ಮನಾಗುತ್ತಾಳೆ. 

           ಮತ್ತೆರಡು ದಿನ ಅವನು ಇವಳಿಗೆ ಕಾಣಿಸುವುದಿಲ್ಲ ನನ್ನ ಮಾತಿಂದ ಬೇಸರವಾಯಿತು ಎಂದುಕೊಂಡ ವೈದೇಹಿ ಬಹಳ ಬೇಸರಪಟ್ಟುಕೊಳ್ಳುತ್ತಾಳೆ. 

          ಮರುದಿನ ಸಂತೋಷದಲ್ಲಿ ಬಂದು ಮತ್ತೆ ಪ್ರೀತಿಯನ್ನು ವ್ಯಕ್ತ ಪಡಿಸಿದ  ರಾಮನಿಗೆ ದೊರೆತಿದ್ದು ಮತ್ತದೇ ತಿರಸ್ಕಾರ ಮತ್ತು ಹೊಸ ವಿಷಯವೇನೆಂದರೆ, ವೈದೇಹಿಯ ಮದುವೆ ನಿಶ್ಚಯವಾದದ್ದು.

          ಇಷ್ಟೆಲ್ಲಾ ನೆನೆಸಿಕೊಂಡವನು ದೊಡ್ಡದಾದ ಉಸಿರು ಡಬ್ಬಿ ಜೋಕಾಲಿಯಿಂದ ಮೇಲೆದ್ದು ಗಾಳಿಗೆ ಕೈಯೊಡ್ಡಿ ನಿಲ್ಲುತ್ತಾ ಐ ಲವ್ ಯು ಕಂದ ಎಂದು ಉಸುರಿ ಮಲಗಲು ಹೋಗುತ್ತಾನೆ.

💐😍💐😍💐😍💐😍💐😍💐😍💐😍💐

            ರಾತ್ರಿ ತಡವಾಗಿ ಮಲಗಿದರೂ ಬೆಳಿಗ್ಗೆ ಬೇಗ ಎದ್ದು ತನ್ನೆಲ್ಲ ಕೆಲಸ ಮುಗಿಸಿ ಶಾಲೆಗೆ ಹೋಗಿ ಅಲ್ಲಿಯೂ ಸಂಜೆಯ ವರೆಗೂ ಶಾಲೆಯ ಎಲ್ಲಾ ಕೆಲಸವನ್ನು ಮುಗಿಸಿ ಮನೆಗೆ ತಲುಪಿದಳು. ಆ ಎರಡು ದಿನ ಮತ್ತೆ ರಾಮನ ದರ್ಶನವಾಗಲಿಲ್ಲ ಅವಳಿಗೆ.  ಮದುವೆ ಕರ್ಚು ವೆಚ್ಚ ಗಂಡಿನವರೆ ವಹಿಸಿದ್ದರಿಂದ ಹೆಚ್ಚೇನೂ ಇರಲಿಲ್ಲ. 

        ಅದು ಅವಳ ಶಾಲೆಯ ಕೊನೆಯ ದಿನ. ಎಲ್ಲರು ಅವಳಿಗೆ ಬೀಳ್ಕೊಡುವ ಸಭಾರಂಬ ಮಾಡಿ ತುಂಬು ಮನಸ್ಸಿಂದ ಮದುವೆಯ ಶುಭಾಶಯ ತಿಳಿಸಿದ್ದರು. 

       ತಾನು ಯಾರಲ್ಲೂ ಹೆಚ್ಚು ಮಾತನಾಡದಿದ್ದರು ಇವರ ಪ್ರೀತಿ ಕಂಡು ಖಷಿಯಾಗಿದ್ದಳು ವೈದೇಹಿ. 

          ಎಲ್ಲ ಕೆಲಸ ಮುಗಿಸಿ ಕೊನೆಯ ಬಾರಿ ಶಾಲೆಯೊಮ್ಮೆ ಕಣ್ಣ್ತುಂಬಿ ಕೊಂಡು ಬಸ್ಸು ನಿಲ್ದಾಣಕ್ಕೆ ಬಂದು ತನ್ನ ಊರಿನ ಕಡೆ ಹೊರಟಳು ಬಿಟ್ಟು ಬಿಡದೆ ರಾಮನ ನೆನಪು ಕಾಡಿತು. 

ಒಲಿದರು ಚೆನ್ನ ಮುನಿದರು ಚೆನ್ನ..…

ನಿನ್ನಾಸರೆಯೇ ಬಾಳಿಗೆ ಚೆನ್ನ.…

ನಾ ನಿನ್ನ ಪಾದದ ಧೂಳಾದರೂ ಚೆನ್ನ,

ಸ್ವೀಕರಿಸು ನನ್ನಾ…ಸ್ವಾಮಿ

ತೆರೆಯೋ ಬಾಗಿಲನು ರಾಮ…..

ಪೂಜಿಸಲೆಂದೇ ಹೂಗಳ ತಂದೆ

ದರುಶನ ಕೋರಿ ನಾ ನಿಂದೇ…

ತೆರೆಯೋ ಬಾಗಿಲನು ರಾಮ

           

           ಹಾಡು ಕೇಳುತ್ತಾ ಕಣ್ಣು ಮುಚ್ಚಿ ಕುಳಿತ ವೈದೇಹಿಗೆ ಅರ್ ಟಿ ಸರ್ಕಲ್ ಸ್ಟಾಪ್ ಬಂದ ಕೂಡಲೇ ರಾಮ್ ನೆನಪಾದ ಆದರೆ ಈ ಬಾರಿ ಕಣ್ಣು ಬಿಟ್ಟು ಹುಡುಕಲಿಲ್ಲ ಬಸ್ಸು ಮುಂದೆ ಸಾಗಿ ಬಹಳ ಸಮಯದವರೆಗೂ ಕಣ್ಣು ಮುಚ್ಚಿ ಇದ್ದವಳು ರಾಮ್ ತನ್ನ ಪ್ರೀತಿ ಹೇಳಿದ ದಿನ ನೆನಪಾದೊಡನೆ ತನ್ನ ಮದುವೆ ಮಾತುಕೆತೆ ಕೂಡ ನೆನಪಿಗೆ ಬಂತು. 

              ರಾಮ ಪ್ರೀತಿಯನ್ನು ನಿರಾಕರಿಸಿ ಬಂದ ವೈದೇಹಿಗೆ ಮನೆಯಲ್ಲಿ ಅಚ್ಚರಿ ಕಾದಿತ್ತು. ಅವಳ ಚಿಕ್ಕಮ್ಮ ಮೃದುವಾಗಿ ಮಾತನಾಡುತ್ತಾ ಎರಡು ದಿನ ಶಾಲೆಗೆ ರಜೆ ತೆಗೆದುಕೋಳಲ್ಲು ಹೇಳಿದರು. 

       ಅವರ ಮಾತಿಗೆ ಸರಿ ಎಂದವಳು ತನ್ನ ಮನೆಯ ಕೆಲಸಕ್ಕೆ ಹೋಗುತ್ತಾಳೆ. ರಾತ್ರಿ ಯಾರದ್ದೋ ಕರೆ ಬಂದು ಮಾತನಾಡಿ ಬಂದ ಮೇಲೆ ಖುಷಿಯಿಂದ ವೈದೇಹಿ ಹತ್ತಿರ ಬಂದವರು, 

     "ವೈದೇಹಿ ಬಾಮ್ಮ ಇಲ್ಲಿ" ಎನ್ನುತ್ತ ಬಂದ ರಾಧಿರಾಕರನ್ನು ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದ ರಿಷಿ. 

        "ಎನ್ ಅಮ್ಮ ಇದು ನೀನಾ, ನಿನ್ನ ಟೋನ್ ಯಾವಾಗ ಇಷ್ಟು ಮೆತ್ತಗೆ ಆಯಿತು... ಗಂಟಲಿಗೆನಾದರು ತೊಂದರೆ ನಾ?..." ಎಂದು ಆಶ್ಚರ್ಯದಿಂದ ಕೇಳಿದ. 

          "ಅಯ್ ಸುಮ್ನೆ ಇರೋ, ನಿನ್ನ ಕೆಲಸ ನೋಡು" ಎಂದು ರಾಧಿಕಾರು ವೈದಿಹಿಯ ಕೈ ಹಿಡಿದು ಹಾಸಿಗೆ ಮೇಲೆ ಕೂಡಿಸಿ ತಲೆ ಸವರುತ್ತಾ, 

       "ನೋಡಮ್ಮ ನಾಳೆ ಬೆಳಿಗ್ಗೆ ಬೇಗ ಎದ್ದು ಮೊನ್ನೆ ನಾನು ತಂದ  ಹೊಸ ಸೀರೆ ಇದೆಯಲ್ಲ ಅದನ್ನೇ ಉಟ್ಟು ರೆಡಿ ಆಗು..." ಎನ್ನಲು 

     "ಸರಿ ಚಿಕ್ಕಮ್ಮ" ಎಂದು ತಲೆ ಆಡಸಿದಳು ವೈದೇಹಿ. 

             ಅವಳು ಕಾರಣ ಕೆಳದಿದ್ದದ್ದು ನೋಡಿ ರಿಷಿ "ಅಕ್ಕ ಸುಮ್ನೆ ತಲೆ ಆಡಿಸಿದರೆ ಆಯಿತಾ? ಯಾಕೆ ಅಂತ ಕೇಳೆ" ಎಂದು ಅವರ ಪಕ್ಕ ಕೂರುತ್ತಾನೆ. 

           "ಅಹಾ ಅವಳೇನು ನಿನ್ನ ಹಾಗೆ ಅಲ್ವೋ, ಈ ಚಿಕ್ಕಮ್ಮನ ಮಾತು ಮಿರಲ್ಲ ಅವಳು, ನಾ ಏನೇ ಮಾಡಿದರು ಅವಳ ಒಳ್ಳೆದಕ್ಕೆ ಅಂತ ಗೊತ್ತು ಅವಳಿಗೆ" ಎಂದು ಗದರಿಸುತ್ತಾರೆ ರಾಧಿಕಾರು. 

       "ಹೌದು ಹೌದು ಅವಳು ಕೇಳಿ ಬಿಡ್ಲಿ ನೀನೆಲ್ಲಿ ಬಿಡ್ತಿಯ ಅವಳ ಪಾಲಿನ ಹಿಟ್ಲರ್ ಅಲ್ವಾ ನೀನು" ಎಂದು ರಿಷಿ ತನ್ನಲ್ಲೇ ಗೋಣಗಲು, 

       "ಏನೋ ಅದು ನಿನ್ನ ವಟ ವಟ" ಎಂದು ಕಣ್ಣು ಬಿಡುವ ರಾಧಿಕಾರಿಗೆ,

        "ಅಯ್ಯೋ ಏನು ಇಲ್ಲ ಅಮಿ ಜಾನ್ ಅವಳಿಗಂತು ಹೇಳಲ್ಲ ನನಗಾದರೋ ಹೇಳು ನಾಳೆ ಅಕ್ಕ ಯಾಕೆ ರೆಡಿ ಆಗ್ಬೇಕು ಅದು ನಿನ್ನ ಸೀರೆ ಉಟ್ಟು" ಎಂದು ಅಣುಕಿಸಿ ಕೇಳಿದ ರಿಷಿ. 

        ಇವರಿಬ್ಬರ ಸಂಭಾಷಣೆಯಲ್ಲಿ ನಮ್ಮ ನಾಯಕಿ ಮೌನ ಗೌರಿಯೇ, ಬೇರೆ ಅವರ ಮುಂದೆ ಮಾತನಾಡದವಳು ಇನ್ನೂ ಅವಳ ಹಿಟ್ಲರ್ ಚಿಕ್ಕಮ್ಮನ ಮುಂದೆ ದ್ವನಿ ಬರುವುದಾ? ನೋ ಚಾನ್ಸ್

          "ಅದೇ ಕಣೋ ನಿನ್ನೆ ಒಂದು ಸಂಬಂಧ ಬಂದಿದೆ ಅಂತ ಹೇಳಿದ್ದೆ ಅಲ್ವಾ ಅವರು ನಾಳೆ ಬಂದು ಚಿಕ್ಕದಾಗಿ ನಿಶ್ಚಿತಾರ್ಥ ಶಾಸ್ತ್ರ ಮುಗಿಸೋಣ ಹೇಳಿದರು... ಅದಕ್ಕೆ ಈ ತಯಾರಿ" ಎಂದು ಬಹಳ ಸಂತಸ ವ್ಯಕ್ತಪಡಿಸಿದರು. 

         ವೈದೇಹಿ ತಟ್ಟನೆ ರಾಧಿಕಾರ ಮುಖ ನೋಡಿ ಅಷ್ಟೇ ವೇಗದಲ್ಲಿ ತಲೆ ಬಗ್ಗಿಸುತ್ತಾಳೆ. ರಿಷಿಯಂತು ಖುಷಿಗೆ ಅಕ್ಕನಿಗೆ ಪ್ರೀತಿಯಿಂದ ಮುತ್ತು ಕೊಟ್ಟ. 

       ಅವನಿಗೆ ಈ ಸಂಬಂಧದ ಕೇಳಿ ಬಂದಿದ್ದು ರಾಧಿಕಾರು ತಿಳಿಸಿದ್ದರು. ಹೀಗಾದರೂ ಅವಳ ಅಕ್ಕ ಈ ನರಕದಿಂದ ಪಾರಾಗುತ್ತಾಳೆ  ಅನ್ನುವುದು ಅವನ ಸಂತಸಕ್ಕೆ ಕಾರಣ. 

     ಆದರೆ ಸ್ವಾರ್ಥ ಬುದ್ಧಿಯಳ್ಳ ರಾಧಿಕಾರು ತಮ್ಮ ಸವತಿ ಮಗಳು ವೈದೇಹಿಯ ಮದುವೆ ಮಾಡುವಲ್ಲಿ ಇಷ್ಟು ಸಂಭ್ರಮ ಪಡುತ್ತಿದ್ದಾರೆ ಅಂದ್ರೆ ಏನಾದ್ರೂ ಇರ್ಬೇಕು ಅಲ್ವಾ?🤔 ಇಷ್ಟು ದಿನ ತವರು ಮನೆಯಲ್ಲಿ ಕಷ್ಟಗಳನ್ನು ಎದುರಿಸಿದ ಹುಡುಗಿಗೆ ಗಂಡನ ಮನೆ ಹೂವೂ? ಮುಳ್ಳೋ? 

          "ವೈದೇಹಿ ಮಲಗು ನಾಳೆ ಬೇಗ ಏಳಬೇಕು" ಎನ್ನುವ ರಾಧಿಕಾರು ಹೊರಗೆ ಹೋಗುತ್ತಾರೆ. 

        ವೈದೇಹಿಯನ್ನು ಅಪ್ಪುವ ರಿಷಿ "ಅಕ್ಕ ನನಗೆ ತುಂಬಾ ಖುಷಿ ಆಗ್ತಾಯಿದೆ ಕಣೆ, ಮುಂದೆ ಆದ್ರೂ ನೀನು ಆರಾಮಾಗಿ ಇದ್ದರೆ ಸಾಕು...."  "ಆದರೂ ಈ ಅಮ್ಮನ ಮಾತು ಕೇಳಬೇಡ ಹುಡುಗನ್ನ ನೋಡಿ ಅವನ ಜೊತೆ ಮಾತಾಡಿ ಆದ್ಮೇಲೆ ಒಪ್ಪು... ಅಮ್ಮ ನಿನಗೆ ಸಂಬಂಧ ತಂದ್ದಿದ್ದಾಳೆ ಅಂದ್ರ ನನಗ ಅನುಮಾನ ಕಣೆ, ಸುಮ್ನೆ ಅವಳ ಮಾತಿಗೆ ತಲೆ ಆಡಿಸಬೇಡ್ವೆ" ಎಂದು ಬುದ್ಧಿ ಮಾತುಗಳನ್ನು ಹೇಳಿ ಮಲಗಲು ಹೋಗುತ್ತಾನೆ. 

         ಕೆಳಗೆ ಹಾಸಿಗೆ ಹಾಸಿಕೊಂಡು ಅಡ್ಡಾದವಳಿಗೆ ನಿದ್ರೆ ದೂರವಾಗಿತ್ತು. ಚಿಕ್ಕಮ್ಮನ ಮಾತು, ತಮ್ಮನ ಖುಷಿ, ತರಾತುರಿಯ ನಿಶ್ಚಿತಾರ್ಥ ಎಲ್ಲವೂ ತಲೆಯಲ್ಲಿ ಒಮ್ಮೆಗೇ ಕೊರೆಯುತ್ತಿರಲು,   

          "ವೈದೇಹಿಯವರೆ ನಾನು ನಿಮ್ಮನ್ನು ಮನಸಾರೆ ಪ್ರೀತಿಸ್ತಾ ಇದ್ದೀನಿ ನೀವು ನನ್ನ ಮದುವೆ ಆಗ್ತೀರಾ" ಎನ್ನುವ ರಾಮನ ಮಾತು ನೆನಪಾದೊಡನೆ ಮನ ತಿಳಿಯಾಗಿತ್ತು. 

       ನನ್ನ ಹಣೆಯ ಬರಹವೇ ಇಷ್ಟು ಎನ್ನುತ್ತಾ ನಿದ್ರೆ ಮಾಡುವ ಪ್ರಯತ್ನ ಮಾಡುತ್ತಾಳೆ. 

          ವೈದೇಹಿ ಬೆಳೆಗೆ ಬೇಗ ಏಳುವ ಹೊತ್ತಿಗೆ ಮನೆಯ ಎಲ್ಲ ಕೆಲಸಗಳು ಮುಗಿದಿದ್ದವು. ತಯಾರಾಗಿದ್ದ ರಾಧಿಕಾರು ವೈದೇಹಿಯ ಬಳಿ ಬಂದು ಅವರ ಸೀರೆ ಕೊಟ್ಟು ಸ್ನಾನ ಮಾಡಿ ತಯಾರಾಗಲು ಹೇಳಿದರು. ಇವಳು ಅವರು ಹೇಳಿದ್ದನ್ನು ಚಾಚೂ ತಪ್ಪದೆ ಮಾಡುವಳಲ್ಲವೆ... ಬೇಗ ಬೇಗ ಸ್ನಾನ ಮುಗಿಸಿ ಸೀರೆಯುಟ್ಟು ದಿನದಂತೆ ತಯಾರಾಗಿ ಬಂದವಳನ್ನು ರಾಧಿಕಾರು ತಮ್ಮ ಕೋಣೆಗೆ ಕರೆದುಕೊಂಡು ಹೋಗಿ ಅವರ ಒಡವೆ ಹಾಕಿ ಅಲಂಕಾರ ಮಾಡಿ ಉದ್ದ ಜಡೆಗೆ ಹೂ ಮೂಡಿಸಿ ಅಡುಗೆ ಮನೆಗೆ ಕರೆತಂದು ಉಪ್ಪಿಟ್ಟು ಕೇಸರಿಬಾತ್ ಮಾಡಲು ಹೇಳಿ  ಮುಂದಿನ ತಯಾರಿಗೆ ಹೋದರು. 

         ಸುಮಾರು ಹತ್ತು ಗಂಟೆಗೆ ಬಂದ ಬೀಗರು ರಾಧಿಕಾರು ಮತ್ತು ದಯಾನಂದರು ಸ್ವಾಗತಿಸಿದರು. ದಯಾನಂದರನ್ನು ವಿಲ್ಹ್ ಚೇರ್ ಮೇಲೆ ಕೂರಿಸಿದ್ದರು. ಮದುವೆ ಗಂಡು ಅವರ ಅಪ್ಪ ಅಮ್ಮ ಅಕ್ಕ ಭಾವ ಚಿಕ್ಕಪ್ಪ ಚಿಕ್ಕಮ್ಮ ಬಂದಿದ್ದರು. ಎಲ್ಲರನ್ನೂ ನಗುತ್ತಾ ತಮ್ಮ ಮಾವ, ಗಂಡ, ಮಗನನ್ನು ಪರಿಚಯಿಸಿದ ರಾಧಿಕಾರು ಬೀಗರಿಗೆ ಕೂಡಲು ಹೇಳಿ ಅಡುಗೆ ಮನೆಗೆ ಹೋಗಿ ವೈದೇಹಿಯನ್ನು ಕರೆ ತಂದರು. 

            ನಿಂಬೆ ಪಾನಕ ಹಿಡಿದು ತನ್ನ ವೈದೇಹಿ ನವಿಲು ಬಣ್ಣದ ಸೀರೆ ಉಟ್ಟು ತನ್ನ ಸಹಜ ಸೌದರ್ಯದಲ್ಲೆ ಎಲ್ಲರ ಗಮನ ಸೆಳೆದವಳು, ತಲೆ ಬಗ್ಗಿಸಿ ಎಲ್ಲರಿಗೂ ಪಾನಕ ಕೊಟ್ಟು ಅವಳ ಅಪ್ಪನ ಪಕ್ಕ ನಿಂತಳು. 

         ಗಂಡಿನ ಮನೆಯವರು ಕಣ್ಣಸನ್ನೆಯಲ್ಲೆ ತಮ್ಮಲ್ಲೇ ಹುಡುಗಿ ಒಪ್ಪಿಗೆ ಎಂದು ಮಾತಾಡಿಕೊಂಡವರು.  ಮದುಮಗನ ತಾಯಿ " ಜಯ್ ಹುಡುಗಿ ತುಂಬಾ ಲಕ್ಷಣವಾಗಿದ್ದಾಳೋ, ನಮಗೆಲ್ಲರಿಗೂ ಒಪ್ಪಿಗೆ ಇದೆ... ಇಬ್ಬರು ಹು ಅಂದ್ರೆ ನಿಶ್ಚಿತಾರ್ಥ ಅಲ್ಲ ಇವತ್ತೇ ಮದುವೆ ಮಾಡಿಕೊಂಡು ಹೋಗೋಣ" ಎಂದು ತಮಾಷೆ ಮಾಡುತ್ತಾರೆ. 

            ಅವರ ಮಾತಿಗೆ ಎಲ್ಲರು ನಕ್ಕರೆ ಮದುವೆಯ ಹುಡುಗ ಜಯ್ ಕೂಡ ತುಟಿ ಬಿರಿದು "ನಂಗೆ ಒಪ್ಪಿಗೆ ಅಮ್ಮ ಅವರನ್ನು ಒಂದು ಮಾತು ಕೇಳಿ ಹು ಅಂದರೆ ಇವತ್ತೇ ನಿಶ್ಚಿತಾರ್ಥ ಮಾಡಿ ಇನ್ನೂ ಒಂದು ವಾರದಲ್ಲಿ ಮದುವೆ ಮಾಡಬಹುದು" ಎನ್ನುತ್ತಾನೆ. 

        ಜಯ್ ಮಾತಿಗೆ ಖುಷಿಯಾದ ಮನೆಯವರು, "ನೋಡಿ ದಯಾನಂದರೆ ನನಗೆ ನಿಮ್ಮ ಮಗಳು ಒಪ್ಪಿಗೆ ಅವಳನ್ನು ಒಂದು ಮಾತು ಕೇಳಿ, ಅವಳಿಗೂ ಇಷ್ಟ ಇದ್ದರೆ ನಮ್ಮ ಜಯ್ ಹೇಳಿದಂತೆ ಇನ್ನೂ ಒಂದು ವಾರದಲ್ಲಿ ಮದುವೆ ಮಾಡೋಣ... ಮದುವೆ ತಯಾರಿಯಲ್ಲ ನಮ್ಮದೇ ನೀವು ಬಂದು ಕನ್ಯಾದಾನ ಮಾಡಿಕೊಟ್ಟರೆ ಸಾಕು" ಎಂದು  ಜಯ್ನ  ತಂದೆಯ ಮಾತು ಕೇಳಿ ದಯಾನಂದರಿಗೆ ಹಾಗೂ ರಾಮಸ್ವಮಿಯವರಿಗೆ ಹುಡುಗನ ಮನೆಯವರ ಬಗ್ಗೆ ಒಳ್ಳೆ ಅಭಿಪ್ರಾಯ ಮೂಡುತ್ತದೆ. 

          "ನಮ್ಮದೇನೂ ಇಲ್ಲ ಬೀಗರೆ ಮಗಳು ಒಪ್ಪಿದರೆ ಆಯಿತು" ಎನ್ನುವ ದಯಾನಂದರ ಮಾತಿಗೆ ರಾಧಿಕಾರು ತಮ್ಮ ಮತ್ತು ಸೇರಿಸುತ್ತ,

          “ಹೌದು ಅಣ್ಣ ನಮ್ಮ ಮಗಳು ನಿಮ್ಮ ಮನೆ ಸೋಸೆಯಾಗೊದಕ್ಕೆ ಪುಣ್ಯ ಮಾಡಿದ್ಲು... ನೀವು ಹೇಳಿದಂತೆ ಮಾಡೋಣ ನಾವು ಎಲ್ಲಾ ತಯಾರಿ ಮಾಡಿದ್ದೇವೆ, ನೀವು ಹು ಅಂದ್ರೆ ತಾಂಬೂಲ ಮತ್ತು ಉಂಗುರ ಬದಲಾಯಿಸೋಣ.... ಅಲ್ವಾ ವೈದೇಹಿ ಪುಟ್ಟ ನಿಂಗೆ ಒಪ್ಪಿಯಲ್ಲ ಎನ್ನಲು”

           ವೈದೇಹಿ ಹು ಎನ್ನುವಂತೆ ತಲೆ ಆಡಿಸುತ್ತಾಳೆ. 

     "ಅಯ್ಯೋ ನನ್ನ ಬಂಗಾರಿ ನಾಚಿಕೆ ನೋಡು" ಎಂದು ವೈದೇಹಿಗೆ ನೇಟಿಕೆ ಮುರಿಯುವ ರಾಧಿಕಾರು ಬಂದವರಿಗೆ ಫಲಾಹಾರ ಕೊಟ್ಟು ನಿಶ್ಚಿತಾರ್ಥಕ್ಕೆ ತಯಾರಿ ಮಾಡುತ್ತಾರೆ. ಅವರಿಗೆ ರಿಷಿ ಸಹಾಯ ಮಾಡುತ್ತಾನೆ. 

        ಹುಡುಗನ ತಾಯಿ ಅಕ್ಕ ಚಿಕ್ಕಮ್ಮ ವೈದೇಹಿಯನ್ನು ಕೂಡಿಸಿಕೊಂಡು ಅದು ಇದು ಎಂದು ಮಾತಾಡುತ್ತಾ ಇದ್ದರೆ ಇವಳು ಸಂಕೋಚದ ಮುದ್ದೆಯ ಹಾಗೆ ಕೂತು ಹು, ಹಾ ಎನ್ನುತ್ತಿದ್ದಳು. 

         ಇತ್ತ ಕಡೆ ಹುಡುಗನ ತಂದೆ ಚಿಕ್ಕಪ್ಪ ಭಾವ ದಯಾನಂದರು ರಾಮಸ್ವಮಿಯವರು ಮದುವೆ ಗಂಡು ಜಯ್ ಮಾತಾಡುತ್ತಾ ಕುಳಿತಿದ್ದರೆ ಜಯ್ನ ಕಣ್ಣುಗಳು ಮಾತ್ರ ವೈದೇಹಿಯನ್ನು ಬಿಟ್ಟು ಸರೆಯುತ್ತಿಲ್ಲ.  ಮೊದಲನೆಯ ನೋಟದಲ್ಲೇ ಇಷ್ಟವಾಗಿದ್ದಳು. ಆದರೆ ವೈದೇಹಿ ಮಾತ್ರ ಇನ್ನೂ ಹುಡುಗನ ಮುಖ ನೋಡುವಲ್ಲಿ ಮನಸ್ಸು ಮಾಡಿಲ್ಲ. 

        ಒಳ್ಳೆಯ ಸಮಯ ನೋಡಿ  ತಾಂಬೂಲ ಬದಲಿಸಿಕೊಂಡರು, ನಂತರ ಗಂಡು ಹೆಣ್ಣು ಉಂಗುರ ಬದಲಿಸಿಕೊಂಡರು.... ಮೊದಲು ಜಯ್ ವೈದೇಹಿಯ ಬೆರಳಿಗೆ ವಜ್ರದ ಉಂಗುರ ತೊಡಿಸಿ ಅದರ ಜೊತೆ ತನ್ನ ಮನಸ್ಸನ್ನು ಅವಳಿಗೆ ಅರ್ಪಿಸಿದ್ದ. ನಂತರ ವೈದೇಹಿ ಹುಡುಗನ ಬೆರಳಿಗೆ ಉಂಗುರ ಹಾಕಿದಳು ಆದರೆ ಅವಳ ಮನಸ್ಸು? ಅವಳೇ ಬಲ್ಲಳು…

         ಎಲ್ಲ ಶಾಸ್ತ್ರವು ಮುಗಿದ ನಂತರ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು ರಾಧಿಕಾರು, ಊಟಕ್ಕೂ ಸಹ ಜಯ್ ಮತ್ತು ವೈದೇಹಿಯನ್ನು ಒಟ್ಟಿಗೆ  ಕುಳಿತಿದ್ದರು. ಜಯ್ ಖುಷಿಯಲ್ಲಿ ತೆಲಾಡುತಿದ್ದರೆ ವೈದೇಹಿ ಉಂಗುರ ಹಾಕಬೇಕಾದರೆ ಜಯ್ನ ಕೈ ಬಿಟ್ಟು ಅವನ ಮುಖ ಕೂಡ ನೋಡಿಲ್ಲ. ಮದುವೆಯ ಗಂಡನ್ನು ನೋಡದೆ ಒಪ್ಪಿದೆ ಹೆಣ್ಣಿವಳು. 

            ಎಲ್ಲರ ಊಟ ಮುಗಿದ ಬಳಿಕ ಹೊಡರಲು ತಯಾರಾದ ಬೀಗರು "ಮದುವೆಯ ತಯಾರಿ ನಮ್ಮದೇ ನೀವು ಹಿಂದಿನ ದಿನ ಬಂದರೆ ಸಾಕು ನಾಡಿದ್ದು ಹುಡುಗಿಗೆ ನಿಮಗೆಲ್ಲ ಬಟ್ಟೆ ಒಡವೆಯಲ್ಲ ಕಲಿಸುತ್ತೇವೆ" ಎಂದು ಹುಡುಗನ ತಂದೆ ಹೇಳುತ್ತಾರೆ. 

        ಹುಡುಗಿಯ ತಾಯಿ ಅಕ್ಕ ಚಿಕ್ಕಮ್ಮ  ವೈದೇಹಿಯ ತಲೆ ಸವರಿ "ಹುಷಾರು" ಎಂದು ಹೇಳಿ ಹೊರಡುತ್ತಾರೆ. ಇನ್ನು ನಮ್ಮ ಮದುಮಗ ಹುಡುಗಿಯ ಜೊತೆ ಮಾತಾಡಲು ಕಾತರದಿಂದ ಕಾಯುತ್ತಿದ್ದರೆ ಇವಳ ಸಂಕೋಚ ನೋಡಿ ಹೇಗಿದ್ದರೂ ಮದುವೆ ಆದಮೇಲೆ ಜೀವನವಿಡೀ ನನ್ನ ಜೊತೆ ಇರುತ್ತಾರಲ್ಲ ಎಂದು ಅವಳಲ್ಲಿ ಏನು ಮಾತನಾಡದೆ, ಒಂದು ವಾರಕ್ಕಾಗುವಷ್ಟು ಅವಳನ್ನು ಕಣ್ಣ್ತುಂಬಿಕೊಂಡವ ಎಲ್ಲರಿಗು ನಮಸ್ಕರಿಸಿ ಹೋಗುತ್ತಾನೆ.  

           ಎಲ್ಲರ ಕಳುಹಿಸಿ ಬಂದ ರಾಧಿಕಾರು ವೈದೇಹೀಗೆ ನೇಟಿಗೆ ತಗೆದು ಅವಳ ಹಣೆಗೆ ಮುತ್ತಿಟ್ಟು, "ಈ ಸಂಭಂದ ಒಪ್ಪಿದ್ದು ತುಂಬಾ ಖುಷಿ ಆಯಿತು ವೈದೇಹಿ... ಆದಷ್ಟು ಬೇಗ ನೀನು ಕೆಲಸಕ್ಕೆ ರಾಜೀನಾಮೆ ಕೊಡು" ಎಂದು ಹೇಳಿ ಅಡುಗೆ ಮನೆಗೆ ಹೋಗುತ್ತಾರೆ. 

           ದಯಾನಂದರು ಮತ್ತು ರಾಮಸ್ವಮಿಯವರು ಪ್ರೀತಿಯಿಂದ ಕಣ್ಣ್ತುಂಬಿಕೊಂಡು ಅವಳ ಕೆನ್ನೆ ಸವರಿ "ಇನ್ನಾದರೂ ನಿನ್ನ ಜೀವನ ಆನಂದದಿಂದ ತುಂಬಿರಲಿ" ಎನ್ನುತ್ತಾ ರಾಮಸ್ವಮಿಯವರು ದಯಾನಂದರನ್ನು ಕರೆದುಕೊಂಡು ಅವರ ರೂಮಿಗೆ ಹೋಗುತ್ತಾರೆ. 

         ರಿಷಿಯಂತು ಖುಷಿಯಲ್ಲಿ ಅವಳ ಎತ್ತಿ ತಿರುಗಿಸಿದನು. "ಅಕ್ಕ ಭಾವ ಒಳ್ಳೆ ಹೀರೋ ಹಂಗೆ ಇದ್ದಾರೆ ಕಣೆ, ಅಬ್ಬಾ ಅವರ ಸ್ಟೈಲ್ ಏನು ಲುಕ್ ಏನು ನಾನೆನಾದರೂ ಹೆಣ್ಣಾಗಿದ್ರೆ ನಿನ್ನ ಬದಲು ನಾನೇ ಮದುವೆ ಆಗ್ತಿದ್ದೆ....ಅಮ್ಮ ನೋಡಿದ ಹುಡುಗ ಹೇಗಿರ್ತಾನೋ ಅಂತ ಭಯ ಇತ್ತು ನಂಗೆ ಆದ್ರೆ ಭಾವನ ಕಣ್ಣಲ್ಲಿ ನಿನ್ನ ಮೇಲೆ ಇರೋ ಪ್ರೀತಿ ನೋಡಿ ನನಗೆ ಭರವಸೆ ಬಂತು ಕಣೆ... ಅವ್ರೇ ನಿಂಗೆ ಸರಿ ಅಕ್ಕ" ಎಂದವನು ಹೊರಗಡೆ ಹೋಗುತ್ತಾನೆ.  

           ನೆನಪಿನ ದೋಣಯಲ್ಲಿ ವಿಹರಿಸುತ್ತಿದ್ದವಳಿಗೆ ಎಚ್ಚರವಾಗಿದ್ದು ಬಸ್ಸು ಹಾರ್ನ್ ಕೇಳಿ. ಎಚ್ಚೇತ್ತವಳು ಕೆಳಗಿಳಿದು ಮನೆಯ ಕಡೆ ಹೋಗುತ್ತಾಳೆ. ಮನೆಗೆ ಬಂದ ವೈದೇಹಿಗೆ ಸ್ವಾಗತಿಸಿದ್ದು ನಗುತ್ತಾ ಮಾತಾಡುತ್ತಿದ್ದ ಅವಳ ಚಿಕ್ಕಮ್ಮ ಮತ್ತು ಜಯ್ನ ಅಕ್ಕ. 

          ವೈದೇಹಿಯನ್ನು ನೋಡಿ ಒಳಗೆ ಕರೆದು ಕೂಡಿಸಿದ ರಾಧಿಕಾರು ಜಯ್ನ ಅಕ್ಕ ತಂದಿದ್ದ ಮದುವೆಯ ಸೀರೆ ಒಡವೇನೆಲ್ಲ ತೋರಿಸಿದರು. ಅದಲೆಲ್ಲವು ನಿನ್ನ ಗಂಡನದ್ದೆ ಆಯ್ಕೆ ಎಂದು ಛೇಡಿಸಿದರು. ಮದುಮಗಳಿಗಲ್ಲದೆ ಮನೆಯ ಎಲ್ಲರಿಗೂ ಬಟ್ಟೆ, ಒಡವೆ ತಂದಿದ್ದರು. 

          ಸ್ವಲ್ಪ ಹೊತ್ತು ಇದ್ದು ಹೋದರು ಜಯ್ನ ಅಕ್ಕ.        

          ಶ್ರೀಮಂತ ಕುಟುಂಬ, ಅವಳಿಗಲ್ಲದೆ ನಮ್ಗೂ ಕೂಡ ಒಡವೆ ಹಣ ಸಿಗುತ್ತದೆ.... ಆಮೇಲೆ ಮದುವೆ ಆದ ಮೇಲೂ ವೈದೇಹಿಯ ಮೂಲಕ ಅವಳ ಗಂಡನ ಮನೆಯಯಿಂದ ದುಡ್ಡು ಹೊಡೆಯಬಹುದು ಎನ್ನುವುದು ರಾಧಿಕಾರ ಪ್ಲಾನ್ ಅದಕ್ಕೆ ಅವರು ಇಷ್ಟು ಖುಷಿಯಿಂದ ಮದುವೆಗೆ ಒಪ್ಪಿದ್ದರು. 

💐😍💐😍💐😍💐😍💐😍💐😍💐😍💐😍💐

               ಮದುವೆಯ ಹಿಂದಿನ ದಿನ ಛತ್ರಕ್ಕೆ ಬಂದಿದ್ದರು ಹೆಣ್ಣಿನ ಕಡೆಯವರು. ಎಲ್ಲ ವ್ಯವಸ್ಥೆ ಗಂಡಿನ ಕಡೆಯವರು ಮಾಡಿದ್ದರಿಂದ ಚಿಕ್ಕಮಲ್ಲಿಗೆಯಲ್ಲಿ ಎಸಿ ಹಾಲಿನಲ್ಲಿ ಮದುವೆಯ ತಯಾರಿ ಮಾಡಿದ್ದರು. ಹೆಣ್ಣಿನ ಕಡೆಯವರು ಐವತ್ತು ಜನ ಬಂದಿದ್ದರು. ಅಂದು ರಾತ್ರಿ ವಾಗ್ನಿಚ್ಚಯದ ಶಾಸ್ತ್ರ ಮಾಡಿ ಸಣ್ಣದಾಗಿ ರಿಸೆಪ್ಷನ್ ಇಟ್ಟುಕೊಂಡಿದ್ದರು. 

            ಗುಲಾಬಿ ಬಣ್ಣದ ಡಿಸೈನರ್ ಸೀರೆಗೆ ಸಿಲ್ವರ್ ಬಣ್ಣದ ಚಿತ್ತಾರ ಅದಕ್ಕೆ ತಕ್ಕಂತೆ ವಜ್ರದ ಆಭರಣಗಳನ್ನು ಹಾಕಿಕೊಂಡ ವೈದೇಹಿ ಸ್ವರ್ಗ ಲೋಕದ ಅಪ್ಸರೆ ಹಾಗೆ ಕಾಣುತ್ತಿದ್ದರೆ,  ಅದೇ ಬಣ್ಣದ ಶರ್ವಾನಿ ತೊಟ್ಟು ಮನ್ಮಥನಂತೆ  ಮಿಂಚುತ್ತಿದ್ದ ರಾಮ್. ​​ 

        ಇಬ್ಬರ ಜೋಡಿ ನೋಡಿದ ಎಲ್ಲರ ಬಾಯಲ್ಲೂ ಬಂದಿದ್ದು ಒಂದೇ ಮಾತು "ಮೇಡ್ ಫಾರ್ ಈಚ್ ಅದರ್" ಎಂದು. 

         ಇಷ್ಟಾದರೂ ವೈದೇಹಿ ಸಂಕೋಚದ ಮುದ್ದೆಯೇ. ಜಯ್ ಅವಳನ್ನು ನೋಡುವುದರಲ್ಲೆ ಕಳೆದು ಹೋಗಿದ್ದರೆ ಇವಳಿಗೆ ಅವನ ಕಡೆ ಏನು ಜಗದ ಪರಿವೆ ಇಲ್ಲ.  ಪ್ರತ್ಯೇಕವಾಗಿ ವೈದೇಹಿ ಜೊತೆ ಮಾತಾಡಬೇಕು ಎಂದು ಪ್ರಯತ್ನಿಸಿದ ಜಯ್ಗೆ ಜನರ ಗದ್ದಲಲ್ಲಿ ಆಗಲೇ ಇಲ್ಲ. ಪಾಪ ಅವನು ಅವಳನ್ನು ಮಾತನಾಡಿಸಿದ್ದರೆ ಮುಂದೆ ಆಗುವ ಅನಾಹುತ ತಪ್ಪಿಸ ಬಹುದಿತ್ತು. 

💐😍💐😍💐😍💐😍💐😍💐😍💐😍💐😍

        

         ಬಿಳಿ ಪಂಚೆ ಬಿಳಿ ಶರ್ಟ್ ತೊಟ್ಟು ತಲೆಗೆ ಪೇಟ ಬಾಸಿಂಗ ಹಾಕಿ ಕೈಯಲ್ಲಿ ಜೀರಿಗೆ ಬೆಲ್ಲ ಹಿಡಿದು ನಾರಾಯಣನ ಸ್ವರೂಪನಾಗಿ ಅಂತರಪಟದ ಒಂದು ಕಡೆ ಜಯ್ ನಿಂತ್ತಿದ್ದರೆ, ಅವನ ಎದುರಿಗೆ ಅವನೇ ಆರಿಸಿದ್ದ ಕೇಸರಿ ಬಣ್ಣಕ್ಕೆ ನೇರಳೆ ಬಣ್ಣದ ಅಂಚಿನ ರೇಶಿಮೆ ಸೀರೆ ಉಟ್ಟು ಅದಕ್ಕೆ ತಕ್ಕ ಹಾಗೆ ಬಂಗಾರದ ಒಡವೆಗಳನ್ನು ಧರಿಸಿ, ಸಂಪಿಗೆ ಹೂವಿನಿಂದ ಜಡೆ ಹೆಣೆಸಿ ಹಣೆಗೆ ಬಾಸಿಂಗ ಕಟ್ಟಿಕೊಂಡು ಮಹಾಲಕ್ಷ್ಮಿಯ ಹಾಗೆ ಕಂಗೊಳಿಸುತ್ತಿದ್ದಳು ವೈದೇಹಿ.

         ಅಂತರಪಟ ಸರಿಸಿದ ನಂತರ ಮೊದಲು ವೈದೇಹಿ ಕಡೆಯಿಂದ ಜೀರಿಗೆ ಬೆಲ್ಲವನ್ನು ಜಯ್ನ ತಲೆಯ ಮೇಲೆ ಹಾಕಿ ನಂತರ ಅವನಿಂದ ಇವಳಿಗೆ ಹಾಕಿಸದ ಮೇಲೆ ಇಬ್ಬರು ಹಾರ ಬದಲಾಯಿಸಿಕೊಂಡರು. 

           ತಾಳಿ ಕಟ್ಟುವ ಶಾಸ್ತ್ರಕ್ಕೆ ಅಕ್ಕ ಪಕ್ಕ ಮಣೆ ಹಾಕಿ ಇಬ್ಬರನ್ನು ಕೂಡಿಸಿದ ಆಚಾರ್ಯರು ಮಾಂಗಲ್ಯವನ್ನು ಜಯ್ನ ಕೈಗೆ ಕೊಡುತ್ತಾರೆ. 

           ಇಬ್ಬರ ಎದೆ ಬಡಿತ ಜೋರಾಗಿತ್ತು. ಅವನ ಕನಸು ಈಡೇರಲಿರುವ ಕಾರಣಕ್ಕೆ ಅವನ ಎದೆ ಬಡಿತ ಜೋರಾಗಿದ್ದರೆ ಇವಳದ್ದು?

       ಗಟ್ಟಿಮೇಳ ಎನ್ನುವ ಸದ್ದಿಗೆ ತಲೆತಗ್ಗಿಸಿ ಕೊಳ್ಳುತ್ತಿದ್ದವಳು ಒಮ್ಮೆ ಕಣ್ಣುಗಳನ್ನು ಮೇಲೆತ್ತಿ ಜನಗಳು ಕುಳಿತ ಸಾಲನ್ನು ನೋಡಿ ಮತ್ತೆ ತಲೆತಗ್ಗಿಸಿ ಕಣ್ಣು ಮುಚ್ಚಿತ್ತಾಳೆ. 

          ತಾಳಿಯನ್ನು ಕೈಯಲ್ಲಿ ಹಿಡಿದ ಜಯ್ ದೊಡ್ಡದಾದ ಉಸಿರು ದಬ್ಬಿ ಅವಳ ಕುತ್ತಿಗೆಗೆ ಮೂರು ಗಂಟು ಹಾಕಿದ. ಎಲ್ಲರ ಅಕ್ಷತಯ ಜೊತೆಯ ವೈದೇಹಿಯ ಒಂದು ಕಣ್ಣ ಹನಿ ಅವನ ಕೈ ಮೇಲೆ ಬಿದ್ದಿತ್ತು. 

            ತಾಳಿಕಟ್ಟಿದವ ಅವಳ ಕಿವಿಯ ಬಳಿ ಬಂದು "ವೆಲ್ಕಂ ಮಿಸ್ಸ್ ಜಯರಾಮ್, ನನ್ನ ಕತ್ತಲೆಯ ಜೀವನಕ್ಕೆ ಬೆಳದಿಂಗಳಾಗಿ ಬಂದಿದ್ದಕ್ಕೆ ಥ್ಯಾಂಕ್ಯೂ ಕಂದ" ಎನ್ನುವ ಧ್ವನಿಗೆ ತಲೆಯೆತ್ತಿ ಪಕ್ಕಕ್ಕೆ ನೋಡಲು ಅಲ್ಲಿ ಮಂದಹಾಸ ಬೀರುತ್ತಾ ಕೂತಿದ್ದಾನೆ ಇಷ್ಟು ದಿನ ಪ್ರೀತಿಯೆಂದು ಅವಳನ್ನು ಪಿಡಿಸಿದ್ದ ರಾಮ್. ಅವಳಿಗೆ ಅವನನ್ನು ನೋಡು ಆಶ್ಚರ್ಯವಾಗಿತ್ತು ಕಣ್ಣು ಬಿಟ್ಟು ಅವನನ್ನೇ ನೋಡುತ್ತಿರಲು ಅವನೇ ಎಚ್ಚರಿಸಿದ.

         "ಓಯ್ ಕಂದ ಹೇಗಿತ್ತು ಸರ್ಪ್ರೈಸ್" ಎಂದನು. 

       ಮೆಲ್ಲನೆ "ರಾಮವರೆ ನೀವು ಇಲ್ಲಿ" ಎನ್ನುತ್ತ ಎಲ್ಲರ ಮುಖ ನೋಡಲು ಎಲ್ಲರೂ ಖುಷಿಯಲ್ಲಿ ಇದ್ದರೂ. ಇವಳಿಗೆ ಇದು ಕನಸೋ ನನಸೋ ಎಂದು ತಿಳಿಯದಾಗಿತ್ತು. 

        "ಜಾಸ್ತಿ ಕನ್ಫ್ಯೂಸ್ ಆಗಬೇಡ ಕಂದ ನಾನೇ ನಿನ್ನ ಮದುವೆ ಆಗಲು ಬಂದಿದ್ದ ಗಂಡು... ನನ್ನ ಪೂರ್ತಿ ಹೆಸರು ಜಯರಾಮ್, ಮನೆಯಲ್ಲಿ ನನ್ನ ಪ್ರೀತಿಯಿಂದ ಜಯ್ ಅಂತ ಕರೆದರೆ ಹೊರಗಡೆ ನನ್ನನ್ನು ರಾಮ್ ಅಂತ ಕರೆಯೋದು ಅದಕ್ಕೆ ನಿಂಗೆ ನಿಮ್ಮ ಮನೆಯಲ್ಲಿ ನನ್ನ ಜಯ್ ಎಂದು ಕರೆದಿದ್ದಕ್ಕೆ ನಾನೇ ಅಂತ ಗೊತ್ತಾಗ್ಲಿಲ್ಲ ಅಲ್ವಾ" ಎನ್ನುವನನ್ನು ಹೌದೆನ್ನುವಂತೆ ನೋಡುತ್ತಾಳೆ ವೈದೇಹಿ. 

           "ಶಾಲೆಯಲ್ಲಿನೆ ನಾನು ನಿನ್ನ ಮೊದಲು ನೋಡಿದ್ದು ಅವತ್ತೇ ಫಿಕ್ಸ್ ಆದೆ ನೀನೇ ಈ ರಾಮನರಸಿ ಅಂತ ಆದರೆ ನಿನ್ನ ಬಗ್ಗೆ ತಿಳಿದ ಮೇಲೆ ಅನಿಸಿತು ನಿನ್ನನ್ನು ಒಲಿಸಿ ಮದುವೆ ಆಗುವುದು ಕಷ್ಟ...." "ಅದಕ್ಕೆ ಸೀದ ನಿಮ್ಮ ಮನೆಗೆ ಬಂದು ಮದುವೆ ಪ್ರಸ್ತಾಪ ಮಾಡಿದ್ದು ಆದರೆ ನೀನು ಯಾವಾಗ ನನ್ನನ್ನು ನಿಮ್ಮ ಮನೆಯಲ್ಲಿ ನೋಡಲಿಲ್ಲವೋ, ಆಗ ನಾನು ರಾಮ್ ಆಗಿ ನಿನ್ನ ಪ್ರೀತಿ ಗಳಿಸುವಲ್ಲಿ ಒಂದು ಚಾನ್ಸ್ ತಾಗೆದುಕೊಳ್ಳೋಣ ಅಂತ ನಿನ್ನ ಹಿಂದೆ ಬಸ್ಸಿನಲ್ಲಿ ಬಂದಿದ್ದು... ಬಟ್ ನೋಡು ನಾನು ರಾಮನಾಗಿ ನಿನ್ನ ಹೃದಯ ಗೆಲ್ಲುವುದರಲ್ಲಿ ಸೋತು ಹೋದೆ" ಎಂದು ಬೇಸರದಿಂದ ಹೇಳುತ್ತಾನೆ. 

         ಅವನ ಬೇಸರದ ಮಾತು ಕೇಳಿದ ವೈದೇಹಿ "ಇಲ್ಲ ರಾಮವರೆ ನೀವು ಸೋತಿಲ್ಲ ಈ ವೈದೇಹಿ ಇರುವವರೆಗೂ ನನ್ನ ರಾಮ್ ಸೋಲುವುದಿಲ್ಲ.... ನಿಮ್ಮ ಪ್ರೀತಿ ನನ್ನ ಮನಸ್ಸನ್ನು ಗೆದ್ದಿದೆ ರಾಮವರೆ, ಅದಕ್ಕೆ ಅಲ್ವಾ ಜಯ್ ಆಗಿ ಬಂದ ನಿಮ್ಮನ್ನು ನಾನು ಕಣ್ಣೆತ್ತಿ ನೋಡಿರಲಿಲ್ಲ.... " ಎಂದವಳನ್ನು  ಆಶ್ಚರ್ಯದಿಂದ ನೋಡುತ್ತಾನೆ ರಾಮ್.

        ಅವನ ನೋಟ ಅರ್ಥ ಮಾಡಿಕೊಂಡವಳಂತೆ "ಆದರೆ ನೀವು ಕೇಳಬಹುದು ನಿಮ್ಮನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇನ್ನೊಬ್ಬರ ಕೈಯ್ಯಲ್ಲಿ ತಾಳಿ ಕಟ್ಟಿಸಿಕೊಳ್ಳಲು ತಯಾರಿದ್ದೆ ಅಲ್ವಾ ಅಂತ, ಹೌದು ನನ್ನ ಚಿಕ್ಕಮ್ಮನಿಗಾಗಿ ಈ ಮದುವೆ ಆಗ್ತೀದ್ದೆ ಆದರೆ ನೀವು ಅಲ್ಲದೆ ಬೇರೆ ಅವರ ಜೊತೆ ನಾನು ಜೀವನ ಮಾಡ್ತಾಯಿರಲಿಲ್ಲ ರಾಮಯವರೆ..." ಎನ್ನವುಳನ್ನು ಕಣ್ಣು ಸಂಕುಚಿಸಿ ನೋಡುತ್ತಾನೆ ರಾಮ್. 

      ‌ "ಒ ಹೇಗೆ ಅಂತನಾ, ನನ್ನ ಮದುವೆ ಆಗುತ್ತಿರುವುದು ನಾನು ಪ್ರೀತಿಸಿದ ರಾಮ್ ಅಂತ ತಿಳಿಯದೆ ಬೇರೆಯವರ ಜೊತೆ ಜೀವನ ಮಾಡಲು ಇಷ್ಟವಿಲ್ಲದೆ ನಾನು ಒಂದು ತಾಸಿನ ಹಿಂದೆ ವಿಷ ಸೇವಿಸಿದೆ ರಾಮಯವರೆ..." "ಆದರೆ ನೋಡಿ ಈಗ ನಾನು ನನ್ನ ಪ್ರೀತಿನ ಪಡೆದುಕೊಂಡೆ…

ಇಷ್ಟೆ ಸಾಕು ನಾನು ಸತ್ತರು ಚಿಂತೆ ಇಲ್ಲ" ಎನ್ನುತ್ತಾ ಸಂತೃಪ್ತಿಯ ಭಾವದಿಂದ ಹೇಳಿದ ವೈದೇಹಿ ಹಿಂದ್ದಕ್ಕೆ ವಾಲುತ್ತಿದ್ದಳನ್ನು ಗಟ್ಟಿಯಾಗಿ ಹಿಡಿಯುವ ರಾಮ್, 

      "ಏ ಕಂದ ನೋಡಿಲ್ಲಿ ಕಣ್ಣ ಬಿಡು...ಯಾಕೋ ಈ ರೀತಿ ಮಾಡಿಕೊಂಡೆ... ನಿನಗೆ ನನ್ನ ನೆನಪೇ ಆಗಲಿಲ್ವ" ಎಂದು ಗಾಬರಿಯಿಂದ ಅವಳ ಕೆನ್ನೆಯ ಮೇಲೆ ಕೈ ಇಟ್ಟು ಕೇಳಿದ. 

         ಇಷ್ಟೊತ್ತು ಇವರ ಮಾತು ಕೇಳುತ್ತಿದ್ದ ಎಲ್ಲರೂ ಗಾಬರಿಯಿಂದ ಅವರತ್ತ ಹೋಗುತ್ತಾರೆ. 

        ಎಚ್ಚರ ತಪ್ಪುತ್ತಿದ್ದವಳನ್ನು ಎತ್ತಿಕೊಂಡ ರಾಮ್ ಅವನ ಭಾವನಿಗೆ ಗಾಡಿ ತಾಗೆಯಲು ಹೇಳಿ ಅವನದ್ದೇ  ಸ್ಪಂದನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. 

         

      ದಿಗ್ಗನೆ ಎದ್ದವನು "ಕಂದ" ಎನ್ನುತ್ತ ಆತ್ತ ಇತ್ತ ಹುಡುಕಲು ಇದು ತನ್ನದೇ ಎಂ ಡಿ ಕೋಣೆ ಅನ್ನುವುದು ತಿಳಿಯುತ್ತದೆ. 

       "ಸೋರಿ ವೈದೇಹಿ ನಾನು ಮೊದಲೇ ನಿಂಗೆ ನನ್ನ ಬಗ್ಗೆ ತಿಳಿಸಿದ್ದಾರೆ ಇಷ್ಟೆಲ್ಲಾ ಆಗ್ತಾಯಿರಲಿಲ್ಲ, ಸರ್ಪ್ರೈಸ್ ಮಣ್ಣು ಮಸಿ ಅಂತ ನಿನ್ನ ಜೀವದ ಜೊತೆ ಆಟ ಆಡಿದೆ...." "ನಿನಗೇನಾದ್ರೂ ಆದ್ರೆ ನಾ ಮಾತ್ರ ಬದುಕಿರಲ್ಲ" ಎಂದು ದುಃಖದಲ್ಲಿ ಕುಳಿದ್ದವನಿಗೆ ಅವನ ಪಿ ಯೆ  ಸುರೇಶ್ ಬಂದವ "ಸರ್ ಮೇಡಂಗೆ ಪ್ರಜ್ಞೆ ಬಂತು" ಎಂದನು. 

        ಅವನ ಮಾತು ಕೇಳಿ ಮನದಲ್ಲೇ ದೇವರಿಗೆ ಧನ್ಯವಾದ ಅರ್ಪಿಸಿದವ ಓಡುತ್ತಾ ಅವಳಿದ್ದ ವಾರ್ಡ್ ಕಡೆಗೆ ಹೋದ. 

        ರಾಮ್ ಬರುವುದನ್ನೇ ಕಾಯುತ್ತಿದ್ದ ಡಾಕ್ಟರ್ "ಸರ್ ಅವರ ಜೀವಕ್ಕೇನು ಅಪಾಯ ಇಲ್ಲ...ಎಲ್ಲಾ ವಿಷ ಹೊರ ಬಂದಿದೆ... ಆದ್ರೆ ಸ್ವಲ್ಪ ದಿನ ರೆಸ್ಟ್ ಮಾಡಿದ್ರೆ ಸಾಕು..." "ಅವರಿಗೆ ಈಗಷ್ಟೇ ಪ್ರಜ್ಞೆ ಬಂದಿದೆ ಇನ್ನೂ ಅರ್ಧ ಗಂಟೆಗೆ ವಾರ್ಡಿಗೆ ಶಿಫ್ಟ್ ಆದಮೇಲೆ ಒಬ್ಬರಂತೆ ಹೋಗಿ ನೋಡಿಕೊಂಡು ಬನ್ನಿ" ಎಂದು ಹೇಳಿ ತಮ್ಮ ಕೆಲಸಕ್ಕೆ ಹೋಗುತ್ತಾರೆ. 

       ಅವಳು ಬದುಕುಳಿದ ವಿಷಯ ಕೇಳಿ ಖುಷಿಯಲ್ಲೇ  ಕುಸಿದು ಕೂರುತ್ತಾನೆ. ಅವನ ಅಪ್ಪ ಚಿಕ್ಕಪ್ಪ ಬಂದು ಅವನನ್ನು ಎಬ್ಬಿಸಿ ಕೂಡಿಸಿದರೆ ಅವನ ಅಮ್ಮ ಕುಡಿಯಲು ಜೂಸ್ ಕೊಟ್ಟು ತಲೆ ಸವರುತ್ತಾರೆ. 

           ಅರ್ಧ ಗಂಟೆಯ ಬಳಿಕ ವಾರ್ಡಿಗೆ ಶಿಫ್ಟ್ ಮಾಡಿದ ವೈದೇಹಿಯನ್ನು ಮೊದಲು ರಾಮನೇ ನೋಡಲು ಹೋಗುತ್ತಾನೆ. 

       ಭಾರದ ಹೆಜ್ಜೆಗಳನ್ನಿಡುತ್ತ ಅವಳ ಹತ್ತಿರ ಬಂದವ ಅವಳ ಸೂಜಿ ಚುಚ್ಚಿದ ಹಸ್ತವನ್ನು ಹಿಡಿಯುತ್ತಾ ಕಣ್ಣ್ತುಂಬಿಕೊಂಡು ನೋಡುತ್ತಾನೆ. ಅವಳು ಕೂಡ ಅವನನ್ನು ಪ್ರೀತಿಯಿಂದ ನೋಡುತ್ತಾಳೆ. ಸ್ವಲ್ಪ ಹೊತ್ತು ಇಬ್ಬರ ನಡುವೆ ಮೌನದ್ದೆ ರಾಜ್ಯಭಾರ. 

          ಮೊದಲು ತಾನೇ ಮಾತನಾಡಿದ ವೈದೇಹಿ "ಹೇಗಿದ್ದೀರ ರಾಮವರೆ ಎಂದು ಕಷ್ಟ ಪಟ್ಟು ಕೇಳಲು..." ಅವಳ ಬಾಯಿ ಮೇಲೆ ಕೈ ಇಡುವ ರಾಮ್, 

     "ಇನ್ನ ಒಂದು ಮಾತು ಆಡಿದರೆ ಬಾಯಿ ಮೇಲೆ ಹೊಡಿತಿನಿ ಅಷ್ಟೇ" ಎಂದು ಹುಸಿ ಮುನಿಸಲ್ಲಿ ಗದರಿದವನು, 

        "ಸಾಕು ಕಣೆ ಜೀವವೇ ಹೋದ ಹಾಗಿತ್ತು ನನಗೆ. ನಿ ಇನ್ನೂ ಮಾತಾಡಿ ತ್ರಾಸು ಮಾಡ್ಕೋಬೇಡ... ನಿನಗೆ ನನ್ನ ಬಿಟ್ಟಿರೋ ಶಕ್ತಿ ಇರಬಹುದು ಆದ್ರೆ ನನಗಿಲ್ಲಮ್ಮ...." "ನಾನು ಆ ತ್ರೇತಯ ರಾಮನಲ್ಲವೆ ಸೀತೆಯನ್ನು ಬಿಟ್ಟಿರಲು, ಈ ರಾಮನಿಗೆ ನನ್ನ ಸೀತೆಯ ಅವಶ್ಯಕತೆ ತುಂಬಾ ಇದೆ... ಅದಕ್ಕೆ ಅಲ್ವಾ ನಿಮ್ಮ ಹಿಟ್ಲರ್ ಚಿಕ್ಕಮ್ಮನ ಒಪ್ಪಿಸಿ ನಾನು ಮದುವೆ ಆಗಿದ್ದು" ಎನ್ನುತ್ತಾ ಅವಳ ಕೈ ಮೇಲೆ ಹಣೆ ಇಡುತ್ತಾ ಹೇಳಲು ಅವನ ಕಣ್ಣಿನಿಂದ ಹನಿಗಳು ಸಾಲಾಗಿ ಉದುರುತ್ತವೆ. 

           "ದಯವಿಟ್ಟು ರಾಮವರೆ ಹೀಗೆಲ್ಲ ಮಾತಾಡಬೇಡಿ... ನನಗೂ ನಿಮ್ಮನ್ನು ಬಿಟ್ಟಿರಲು ಆಗಲ್ಲ... ನಿಮ್ಮ ಪ್ರೀತಿಗೆ ನಾನು ಶರಣಾಗಿದ್ದೆ ರಾಮವರೆ ಆದರೆ ಎನ್ ಮಾಡ್ಲಿ ನನ್ನ ಮದುವೆಯ ಆಯಿಕೆ ನನ್ನ ಕೈಯಲ್ಲಿ ಇರಲಿಲ್ಲ. ನಿಮ್ಮ ಪ್ರೀತಿ ಸವಿ ಕಂಡ ನನಗೆ ಈ ಶ್ರೀಮಂತ ಸಂಬಂಧ ಬೇಕಿರಲಿಲ್ಲ ಆದರೆ ಚಿಕ್ಕಮ್ಮನ ಸಾಲುವಾಗಿ ಒಪ್ಪಿಕೊಂಡೆ. ನಿಮ್ಮ ಪ್ರೀತಿ ಮರೆಯಲಾರದೆ, ಬಂದ ಸಂಬಂಧ ಒಪ್ಪಲಾರದೆ ,ಯಾರ ಮುಂದೆ ನನ್ನ ಕಷ್ಟ ಹೇಳಿಕೊಳ್ಳಲಾರದೆ ತುಂಬಾ ಒದ್ದಾಡಿದ್ದೇನೆ ನಾನು....ನಿಮ್ಮ ಬಿಟ್ಟಿರಲು ಆಗಲ್ಲ ಅಂತನೆ ಅಲ್ವಾ ನಾನು ವಿಷ ಸೇವಿಸಿದ್ದು... ಈ ಸಾರಿ ನನ್ನ ಕ್ಷಮಿಸಿ ನನ್ನ ಒಪ್ಪಿಕೊಳ್ಳಿ ರಾಮವರೆ" ಎನ್ನುತ್ತಾ ಅಳುತ್ತಾಳೆ ವೈದೇಹಿ. 

          ತನ್ನ ಮನದೊಡತಿಯ ಕಣ್ಣೀರನ್ನು ಸಹಿಸಲಾರದೆ, ಅವಳ ಕಣ್ಣೀರನ್ನು ಒರೆಸಿ ಅವಳ ಹಣೆಯ ಪ್ರೀತಿಯಿಂದ ಮುತ್ತಿಟ್ಟವನು, 

       "ಸರಿ ಆಗಿದ್ದು ಆಯಿತು ನೀ ಬೇಗ ಹುಷಾರ್ ಆಗು ನಾವು ನಮ್ಮ ಮನೆಗೆ ಹೋಗೋಣ ಅಪ್ಪ ಅಮ್ಮ ಎಲ್ಲರು ನಿ ಬರೋದೇ ಕಾಯ್ತಿದ್ದರೆ" ಎನ್ನುತ್ತಾನೆ. 

      ಸರಿ ಎನ್ನುವಂತೆ ತಲೆ ಅಲ್ಲಾಡಿಸಿದವಳನ್ನು ನೋಡಿ ತನ್ನ ಹಣೆ ಚಚ್ಚಿಕೊಳ್ಳುತ್ತ "ಈ ಮೂಕ ಭಾಷೆ ಬಿಟ್ಟು ಅದು ಯಾವಾಗ ಅಂತ ಬಾಯಲ್ಲಿ ಮಾತಾಡ್ತೀಯೋ" ಎಂದು ಅವಳ ರೆಗಿಸಿದ ರಾಮನಿಗೆ ನಗುವೊಂದೆ ಅವಳ ಉತ್ತರ. ​

     ನಂತರ ಎಲ್ಲರೂ ಬಂದು ಮಾತನಾಡಿಸಿಕೊಂಡು ಹೋಗುತ್ತಾರೆ. ಎರಡು ದಿನ ಆಸ್ಪತ್ರೆಯ ವನವಾಸ ಮುಗಿಸಿದ ವೈದೇಹಿ ಕೊನೆಗೂ ರಾಮನ ಅರಮನೆಯ ಪಟ್ಟದರಸಿ ಮತ್ತು ಅವನ ಮನದರಸಿ ಆಗಿ ಸೇರೋದ್ದು ಬಲಗಾಲಿಟ್ಟು ಒಳಗೆ ಬರುತ್ತಾಳೆ. ​

💐😍💐😍💐😍💐😍💐😍💐😍💐💐💐😍​​                     

                         ಐದು ವರ್ಷದ ನಂತರ 

           "ರೀ" ಎನ್ನವ ಕೂಗಿಗೆ ಮಾಡುವ ಕೆಲಸ ಬಿಟ್ಟು ರೂಮಿಗೆ ಹೋಗುತ್ತಾನೆ ರಾಮ. ಸೀರೆಯ ಸೆರಗನ್ನು ಸೋಟಂಕ್ಕೆ ಸಿಕ್ಕಿಸಿ ಒಂದು ಕೈಯನ್ನು ಸೊಂಟದ ಮೇಲೆ ಇಟ್ಟು ದುರುಗುಡುತ್ತಾ ಅವನನ್ನ ನೋಡಲು,

     "ಯಾಕೆ ಕಂದ ಕಾಳಿ ಅವರತಾರ ತಾಳಿದ್ದಿಯ" ಎರುಸಿರು ಬಿಡುತ್ತಾ ಕೇಳಿದ ರಾಮ್. 

       "ಹಾ ಹೌದು ನಿನ್ನ ಮುದ್ದಿನ ಮಗಳು ಮಾಡೋ ಕೆಲಸಕ್ಕೆ ನಾನು ಕಾಳಿ ಅಲ್ಲ ಮೌನ ಗೌರಿ ಆಗ್ತೀನಿ ಇನ್ನೂ ತಲಿ ಏರಿ ಕೂರಲಿ ಅವಳು" ಎಂದು ದುಮುಗುಡುತ್ತಿದ್ದ ವೈದೇಹಿಯ ಬಳಿ ಬಂದ ರಾಮ್ 

     "ಅವಳೇನೆ ಮಾಡ್ತಾಳೆ ಪಾಪ ಸಣ್ಣ ಮಗು ಅದು" ಎಂದು ಮೂರು ವರ್ಷದ ಮಗಳ ಪರವಾಗಿ ಮಾತನಾಡಿದ ರಾಮನಿಗೆ ಸಿಕ್ಕಿದ್ದು ವೈದೇಹಿಯ ಖಡಕ್ ಲುಕ್. 

        "ಅಯ್ಯೋ ಇರ್ಲಿ ಬಿಡೆ ಹೀಗೇಕೆ ನೋಡ್ತಿ" ಎನ್ನುತ್ತಾ ಇನ್ನೂ ಅವಳ ಸಮೀಪ ಬಂದವ ಸೀರೆಯ ಮರೆಯಲ್ಲಿ ಇಣುಕುತ್ತಿದ್ದ ಅವಳ ಬೆಳ್ಳಗಿನ ನಡುವನ್ನು ಮೆತ್ತಗೆ ಸವರಲು ಅವಳ ಮೈಯೆಲ್ಲ ವಿದ್ಯುತ್ ಸಂಚಾರದಂತಾಗಿತ್ತು. 

         ನಾಚಿಕೊಳುತ್ತ ಅವನಿಂದ ಬಿಡಿಸಿಕೊಂಡವಳು "ಎನ್ ರಿ ಇದು ಹೊತ್ತು ಗೊತ್ತು ಇಲ್ವಾ ನಿಮಗೆ... ನೋಡಿ ನಿಮ್ಮ ಮಗಳು ಇಲ್ಲೇ ಇದ್ದಾಳೆ" ಎನ್ನುತ್ತಾಳೆ ವೈದೇಹಿ. 

     ಅವಳ ನಾಚಿಕೆ ಕಂಡವ "ಏನೇ ಮಾಡ್ಲಿ ಮದುವೆ ಆಗಿ ಐದು ವರ್ಷ ಕಳೆದರೂ ನಿನಗಿನ್ನು ಈ ನಾಚಿಕೆ ಕಮ್ಮಿ ಆಗಿಲ್ಲ ಅಲ್ವಾ ಅದಕ್ಕೆ ನನ್ನ ರಸಿಕನಕ್ಕೆ ಹೊತ್ತು ಗೊತ್ತು ಇಲ್ಲ ನೋಡು" ಎಂದು ಮೋಹಕವಾಗಿ ನುಡಿಯುತ್ತಾನೆ ರಾಮ್. 

         ಇವರಿಬ್ಬರ ಸಲ್ಲಾಪಕ್ಕೆ ಅಡ್ಡಿ ಆಗಿದ್ದು ಅವಳ ಮಗಳ ಕೂಗು. "ರಾಮು" ಎನ್ನುತ್ತಾ ಓಡಿ ಬಂದವಳು ರಾಮನ ಕಾಲಿಗೆ ಜೋತು ಬಿದ್ದಳು ರಾಮ್ ವೈದೇಹಿಯ ಮುದ್ದು ಮಗಳು "ರಾಗ". 

            "ಬಂಗಾರಿ" ಎನ್ನುತ್ತಾ ಮಗಳನ್ನು ಎತ್ತಿಕೊಂಡು ಎರಡು ಕೆನ್ನೆಗಳಿಗೆ ಮುತ್ತಿಟ್ಟ ರಾಮ್. 

         ಆದರೆ ವೈದೇಹಿ "ಏಯ್ ರಾಗಾ ಏಷ್ಟು ಸಾರಿ ಹೇಳಿದ್ದಿನಿ ನಿಂಗೆ ಅಪ್ಪನ್ನ ಹೆಸರಿಟ್ಟು ಕರಿಬೇಡ ಅಂತ... ಆದರೂ ನಿನ್ನ ಬುದ್ಧಿ ಬಿಡಲ್ಲ ಅಲ್ವಾ ನೀನು" ಎಂದು ರೆಗುತ್ತಾಳೆ ವೈದೇಹಿ. 

       "ಇರ್ಲಿ ಬಿಡು ಕಂದ ಪಾಪ ಚಿಕ್ಕದು" ಎಂದು ರಾಮ ಹೇಳಿದ. 

    "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಅಂತ ಗೊತ್ತಿಲ್ವಾ ನಿಮಗೆ...., ನೋಡಿ ನನ್ನ ಗೆಜ್ಜೆ ಎಲ್ಲೋ ಕಳೆದು ಹಾಕಿದ್ದಾಳೆ ಏಷ್ಟು ಹುಡುಕಿದರೂ ಸಿಗ್ತಿಲ್ಲ" ಎಂದು ದೂರು ಹೇಳುತ್ತಾಳೆ ವೈದೇಹಿ. 

      "ಅಯ್ಯೋ ಇದಾ ನಿನ್ನ ಸಮಸ್ಯೆ" ಎಂದು ಹೇಳುವ ರಾಮ್ ಮಗಳನ್ನು ಕೆಳಗಿಳಿಸಿ ಅವಳ ನೇರಕ್ಕೆ ಕೂತು "ಬಂಗಾರಿ ಹೋಗು ಅಜ್ಜಿ ತಾತ ನಿನ್ನ ಕೆಳ್ತಾಯಿದ್ರು"ಅಂತ ಹೇಳಿ ಅವಳನ್ನು ಕೆಳಗೆ ಕಳಿಸುತ್ತಾನೆ,

            ನಂತರ ವೈದೇಹಿಯನ್ನು ಕರೆತಂದು ಮಂಚದ ಮೇಲೆ ಕೂಡಿಸಿ ತಾನು ನೆಲಕ್ಕೆ ಮಂಡೆ ಊರಿ ಕುಳಿತು ಒಂದು ಕೈ ಅವಳ ಕೆನ್ನೆಯ ಮೇಲೆ ಮತ್ತೊಂದು ಕೈ ಅವಳ ಕೈಗಯನ್ನು ಹಿಡಿದು,  "ಕಂದ ನಾಳೆಗೆ ನಿನ್ನ ಕನಸು ಸರಸ್ವತಿ ಡಾನ್ಸ್ ಇನ್ಸ್ಟಿಟ್ಯೂಟ್ ಶುರುವಾಗಿ ಮೂರು ವರ್ಷ ಆಗುತ್ತೆ ಕಣೋ.... ಅದಕ್ಕೆ ನಿನಗೆ ಒಂದು ಚಿಕ್ಕ ಉಡುಗೊರೆ" ಎನ್ನುತ್ತಾ ತನ್ನ ಕಿಸೆಯಲ್ಲಿರುವ ಗೆಜ್ಜೆಗಳನ್ನು ಹೊರ ತೆಗೆದು ಅವಳ ನುಣುಪಾದ ಪಾದವನ್ನು ತನ್ನ ತೊಡೆಯಮೇಲೆ ಇರಿಸಿ ತಾನೇ ಗೆಜ್ಜೆಯನ್ನು ಕಟ್ಟಿ ಅದಕ್ಕೆ ಮುತ್ತು ಕೊಡುತ್ತಾನೆ ರಾಮ್. 

      ನಾಚಿ ಕಾಲು ಹಿಂದೆ ತಗೆದುಕೊಂಡವಳು ಹೊಸ ಗೆಜ್ಜೆ ನೋಡಿ ಎಲ್ಲಿಲ್ಲದ ಸಂಭ್ರಮ ಅವಳಿಗೆ.

        ಮದುವೆ ಆಗಿ ಎರಡು ವರ್ಷಕ್ಕೆ ವೈದೇಹಯ ಕನಸಿನಂತೆ ಒಂದು ಡಾನ್ಸ್ ಇನ್ಸ್ಟಿಟ್ಯೂಟ್ ತೆರೆದಿದ್ದ ರಾಮ್. ಅದಕ್ಕೆ ಅವಳ ಅಮ್ಮ ಹೆಸರು ಇಟ್ಟಿದ್ದರು. ಆ ಎರಡು ವರ್ಷದಲ್ಲಿ ಅವಳಿಗೆ ಧರ್ಯ ತುಂಬಿ ನಾಲ್ಕು ಜನರ ನಡುವೆ ಬೆರೆಯುವ ಹಾಗೆ ಮಾಡಿದ್ದ. ಅವಳಿಗೆ ಕರಾಟೆ ತರಬೇತಿ ನೀಡಿ ಅವಳಲ್ಲಿ ಇನ್ನೂ ಆತ್ಮಸ್ಥೈರ್ಯ ಹೆಚ್ಚಿಸಿದ್ದ. ಈಗ ಅವಳು ನೂರಾರು ಹುಡುಗರು ನೃತ್ಯ ಕಲಿಯುವ ತರಬೇತಿ ಕೇಂದ್ರವನ್ನು ಒಬ್ಬಳೇ ಸಮರ್ಪಕವಾಗಿ ನಿಭಾಯಿಸುತ್ತಿದ್ದಾಳೆ. ಇವಳ ಈ ಬದಲಾವಣೆ ರಾಮನ ಪಾತ್ರ ಎಷ್ಟಯಿದೆಯೋ ಅವನ ಮನೆಯವರ ಸಹಕಾರವೂ ಅಷ್ಟೇ ಇದೆ. 

    ರಾಮನ ಮನೆಯವರು ವೈದೇಹಿಯನ್ನು ಮನೆಯ ಮಗಳ ಹಾಗೆ ನೋಡಿಕೊಂಡಿದ್ದರು. ಈಗಂತೂ ಮನೆಗೆ ಪುಟ್ಟ ಲಕ್ಷ್ಮಿ ಬಂದ ಮೇಲೆ ಮನೆಯಲ್ಲಿ ಸಂತಸ ಹೆಚ್ಚಿತ್ತು. 

          ರಾಧಿಕಾರು ತಮ್ಮ ಕೆಟ್ಟತನವೆಲ್ಲ ಬಿಟ್ಟು ಒಳ್ಳೆ ರೀತಿಯಲ್ಲಿ ಗಂಡನ ಸೇವೆ ಮಾಡುತ್ತಾ ಬದುಕುತ್ತಿದ್ದಾರೆ. ಯಾವಾಗ ಚಿಕ್ಕಮ್ಮನ ಮಾತು ಮೀರದೆ ನಿಮ್ಮ ಮದುವೆ ಆದೆ ಎಂದ ವೈದೇಹಿಯ ಮಾತು ಕೇಳಿ, ಅವಳು ತಮ್ಮ ಮೇಲೆ ಇಟ್ಟಿರುವ ಪ್ರೀತಿ ಕಂಡು ಬದಲಾಗಿದ್ದರು. ಇನ್ನೂ ರಿಷಿಯನ್ನು ರಾಮನ ಆಸ್ಪತ್ರೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅವನು ಸಹ ದೇವಿಕಾ ಎಂಬುವಳನ್ನು ಮದುವೆ ಆಗಿ ಖುಷಿಯಾಗಿದ್ದ. ಎರಡು ವರ್ಷಗಳ ಹಿಂದೆ ಮೊಮ್ಮಗಳ ಜೀವನ ಹಸನಾಗಿದ್ದು ನೋಡಿ ನೆಮ್ಮದಿಯಿಂದ ರಾಮಸ್ವಮಿಯವರು ವೈಕುಂಠವಾಸಿ ಆಗಿದ್ದರು. 

              "ತುಂಬಾ ಥ್ಯಾಂಕ್ಸ್ ರಿ, ಕಣ್ಣೀರೇ ತುಂಬಿದ್ದ ನನ್ನ ಜೀವನಕ್ಕೆ ಬಂದು ಸಂತಸದ ಮಳೆಯನ್ನೇ ಹರಿಸಿದ್ದಿರಾ.... ನಿಮ್ಮ ಋಣ ಎಷ್ಟು ಜನ್ಮ ಎತ್ತಿದರು ತೀರಿಸೋಕೆ ಆಗಲ್ಲ ರೀ ಭಾವುಕತೆಯಿಂದ ಹೇಳಿ ರಾಮನನ್ನು ತಬ್ಬುತ್ತಾಳೆ ವೈದೇಹಿ…

          ಅವಳನ್ನು ಬಳಸುತ್ತಾ ಒಂದು ಕೈಲಿ ಅವಳ ತಲೆ ಸವರುತ್ತ "ಹಾಗೆಲ್ಲ ಹೇಳಬೇಡವೇ ನೀನು ಬಂದ್ಮೇಲೆನೆ ನನ್ನ ಜೀವನ ಇಷ್ಟು ಚಂದ ಆಗಿರೋದು.... ಅಂತ ಮುತ್ತಿನಂತ ಮಗಳನ್ನ ಕೊಟ್ಟಿರೋದಕ್ಕೆ ನಾನು ನಿನಗೆ ಋಣಿ ಕಣೆ, ಥ್ಯಾಂಕ್ಸ್ ಕಂದ" ಎನ್ನುತ್ತಾ ಅರ್ತಿಯಿಂದ ಅವಳ ಹಣೆಗೆ ಮುತ್ತಿಡುತ್ತಾನೆ…

                                          ಕೃಷ್ಣಾರ್ಪಣಮಸ್ತು 🙏

     

 

Category:Stories



ProfileImg

Written by swathi rao

ಬಯಲು ಸೀಮೆಯ ಕನ್ನಡತಿ... ಹವ್ಯಾಸ ಬರಹಗಾರ್ತಿ🥰