ಓ ನನ್ನ ಒಲವಿನ ಗೆಳತಿ
ನಿನ್ನಂದಕೆ ನಾನಾದೆ ಶರಣಾಗತಿ
ತೊಡಿಸಲೇ ಬಂಗಾರದ ಮೂಗುತಿ?
ನಿನಗಾಗಿ ತೆರೆದಿದೆ ಹೃದಯದ ವಸತಿ
ಆ ನಿನ್ನ ಒಂದು ನೋಟ
ಕೊಡುತಿದೆ ಹೃದಯಕೆ ಕಾಟ
ನಿನಗೆ ಕಲಿಸುವೆ ಪ್ರೀತಿಯ ಪಾಠ
ನೀ ಸಿಗದಿರೆ ನಾ ಸೇರುವೆ ಮಠ
ಮಾಡದಿರು ಹೃದಯದ ಮೇಲೆ ಪ್ರಹಾರ
ನೀ ಬಡಿಸುವೆಯ ಪ್ರೀತಿಯ ಉಪಹಾರ?
ಕಲಿತಿರುವೆ ಒಳ್ಳೆಯ ಸಂಸ್ಕಾರ
ನಡೆಸೋಣ ಸರಳ ಸಂಸಾರ
ಆಗದಿರಲಿ ಪ್ರೀತಿಯೊಪ್ಪಲು ಕಾಲಹರಣ
ಆದಷ್ಟು ಬೇಗ ನಾವ್ ಹಾಕಿಸುವ ತೋರಣ
ದಾರಿ ಉದ್ದಕ್ಕೂ ಪ್ರೀತಿಯ ಪ್ರಯಾಣ
ನಿನಗಾಗಿ ಕಾಯುತ್ತಿರುವ ಈ ತರುಣ
0 Followers
0 Following