ಸುಖವ ತಂದ ಅಮ್ಮನ ಪತ್ರ 

ಮನದಲ್ಲಿ ಮಂದಹಾಸ ....

ProfileImg
20 Jul '24
1 min read


image

     ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸಿ ಅವರು ತಮ್ಮ ಕಾಲಮೇಲೆ ನಿಲ್ಲುವಂತೆ ಮಾಡುವುದು ಹೆತ್ತವರ ಕನಸು.  ಮಗಳನ್ನು ಉತ್ತಮ ಕಾಲೇಜಿಗೆ ಸೇರಿಸುತ್ತಾರೆ. ಮನೆಯಿಂದ ಎಷ್ಟೋ ದೂರವಿರುವ ಪರಿಚಯವಿಲ್ಲದ, ಪರಿಚಿತರೂ ಇಲ್ಲದ ಊರು. ಮನೆಯಿಂದ ಹೊರಬಂದು ಏಕಾಂಗಿಯಾಗಿ ಕೇವಲ ಏಕಾಗ್ರತೆಯಲ್ಲಿ ವ್ಯಾಸಂಗ ಮಾಡುವ ಪರಿಯದು.  

     ಮೊಬೈಲ್ ಜಗತ್ತಿಗೆ ಕಾಲಿಡದ ಸಮಯ. ಮನೆಯವರ  ಸಂಪರ್ಕವೇ ಇಲ್ಲ. ಕೇವಲ ಪತ್ರವೊಂದೇ ದಾರಿ. ಪತ್ರ ಬರೆಯಲು ಕಾಲೇಜಿನ ಓದು, ಬರೆಯುವ ಕೆಲಸಗಳೇ ಜಾಸ್ತಿ. ರಜೆ ಸಿಕ್ಕಾಗ ಊರಿಗೆ ಹೋಗಿ ಹೆತ್ತವರನ್ನು ಮಾತಾಡಿಸಿ ಬಂದರಾಯಿತು ಅಂದುಕೊಂಡಳು. ಅದೂ ೧೦-೧೫ ದಿನ ರಜೆ ಸಿಕ್ಕರೆ.. 

     ಇಂಥ ಸಂದರ್ಭದಲ್ಲಿ ಒಂದು ದಿನ ಗೆಳತಿಯರೊಂದಿಗೆ ಹಾಸ್ಟೆಲಿನಲ್ಲಿ ಇರುವಾಗ ತನ್ನ ಹೆಸರಿಗೊಂದು ಪತ್ರ ಬರುತ್ತದೆ. ಅದನ್ನು ನೋಡಿ "ಯಾರಿರಬಹುದು?" ಎಂದು ಆಶ್ಚರ್ಯಪಡುತ್ತಾಳೆ. ಅಮ್ಮನ ಪತ್ರವೆಂದು ತಿಳಿದಾಗ ಅವಳ ಸಂತಸಕ್ಕೆ ಪಾರವೇ ಇಲ್ಲ..!! 

      ನಿಧಾನಕ್ಕೆ ಪತ್ರವನ್ನು ತೆಗೆದು ಓದುತ್ತಾಳೆ. ಮನೆಯ ಸಮಾಚಾರಗಳೆಲ್ಲ ಅದರಲ್ಲಿ ಇರುತ್ತದೆ. ಅಷ್ಟೇ ಅಲ್ಲದೆ, ಅಮ್ಮ ಅವಳಿಗೆ ಇಷ್ಟದ ಗಾಜಿನ ಬಳೆಯನ್ನೂ ಕಳುಹಿಸಿರುತ್ತಾರೆ. ಹುಡುಗನ ನೋಡುವ ವಿಷಯವೂ ಅದರಲ್ಲಿರುತ್ತದೆ.  ಮನೆಗೊಮ್ಮೆ ಹೋಗಿ ಬರೋಣ ಅಂತ ಅವಳಿಗೆ ಅನ್ನಿಸುತ್ತೆ. ಆದರೆ ಮನಸ್ಸಿಗೆ ಕಂಡಂತೆ ಮಾಡಲಾಗದು. ಪ್ರಾಂಶುಪಾಲರ, ಶಿಕ್ಷಕರ ಒಪ್ಪಿಗೆ ಬೇಕಾಗುತ್ತದೆ. ಹೋಗಿ ಬರಲು ನಾಲ್ಕು ದಿನ ಹಿಡಿಯುತ್ತದೆ. ಅಷ್ಟರಲ್ಲಿ ಎಷ್ಟೋ ಪಾಠಗಳು ಆಗಿರುತ್ತವೆ ಎಂಬ ಬೇಸರ ಮನದಲ್ಲಿ. 

     ಅಮ್ಮ ಮಕ್ಕಳ ಸಂಬಂಧವೆಂದರೆ ಹಾಗೆ.. ಗಿಡ ಬೇರುಗಳಿದ್ದಂತೆ.. ಕಳಚಲಾಗದ ಕೊಂಡಿ... ಅವಳನ್ನು ಉತ್ತಮ ಕುಟುಂಬಕ್ಕೆ ಕೊಟ್ಟು ಮದುವೆ ಮಾಡುತ್ತಾರೆ.  ಓದು ಅರ್ಧದಲ್ಲೇ ಕುಂಠಿತಗೊಳ್ಳುತ್ತದೆ. ಓದುವುದನ್ನು ಮತ್ತೆ ಮುಂದುವರಿಸಬಹುದು; ಆದರೆ ಉತ್ತಮ ಕುಟುಂಬ ಸಿಕ್ಕಾಗ ಮದುವೆ ಮಾಡದಿದ್ದರೆ ಹೇಗೆ..? ಎಂಬ ಚಿಂತೆ ಹೆತ್ತವರಲ್ಲಿ ಮೂಡುತ್ತದೆ.  ವಿವಾಹವಾಗಿ ಗಂಡನ ಮನೆಯಲ್ಲಿ ಸುಖದ ಜೀವನವನ್ನು ನಡೆಸುತ್ತಾಳೆ. 

✍ ಮುರಳಿಕೃಷ್ಣ ಕಜೆಹಿತ್ತಿಲು

Category:Parenting and Family



ProfileImg

Written by Murali Krishna

DTP Worker, Vittal, Mangalore

0 Followers

0 Following