ಮೂಲೆಲಿದ್ದ ಮಡುವಿನ ಕಾಲಿಂಗೆಳದು ಹಾಕಿಗೊಂಡ ಹಾಂಗೆ

ಗಿಳಿ ಬಾಗಿಲು: ಹವ್ಯಕ ಕನ್ನಡ ಗಾದೆಗಳು ಮತ್ತು ನುಡಿಕಟ್ಟುಗಳು

ProfileImg
27 May '24
1 min read


image

ಮೂಲೆಲಿದ್ದ ಮಡುವಿನ ಕಾಲಿಂಗೆಳದು ಹಾಕಿಕೊಂಡ ಹಾಂಗೆ

ಇದೊಂದು ನಮ್ಮ ಭಾಷೆಲಿ ಅಂಬಗಂಬಕ ಬಳಕೆ ಅಪ್ಪ ಮಾತು.ಸೀತಾರಾಮ್ ನ ಮಗಳು ಜಾನಕಿ ಧಾರಾವಾಹಿ ನೋಡುವ ಈ ಮಾತು ಬಹಳ ಸ್ಪಷ್ಟ ಆತೆನಗೆ.ಇಲ್ಲಿ ಧಾರಾವಾಹಿ ಲಿ ಸಿಎಸ್ಪಿ ದೊಡ್ಡ ಕ್ರಿಮಿನಲ್ ಲಾಯರು.ಅವಂಗೂ ಅವನ ಹೆಂಡತಿ ರಶ್ಮಿ ಗೂ ಡೈವರ್ಸ್ ಆಗಿ ,ರಶ್ಮಿ ಚಂದು ಭಾರ್ಗಿಯ ಮದುವೆ ಆಯಿದು.ಮಗಳು ಜಾನಕಿಯ ಎನ್ನ ಸ್ವಂತ ಮಗಳ ಹಾಂಗೆ ನೊಡಿಗೊಳ್ತೆ ಹೇಳಿ ಚಂದು ಭಾರ್ಗಿ ಮಾತುಕೊಟ್ಟಿತ್ತಿದ.ಆದರೆ ‌ಮುಂದೆ ಯಾವದೋ ರಾಜಕೀಯಕ್ಕೆ ಒಳಗಾಗಿ ಅವ ಜೈಲಿಂಗಡ ಹೊಗಿ ಎಂಎಲ್ ಎ ಸೀಟಿನ ಕಳಕೊಳ್ತ.ಅದಕ್ಕೆ ಸಿಎಸ್ಪಿ ಕಾರಣ ಹೇಳಿ ಅವನ ಮಗಳು ಜಾನಕಿಗೆ ಅನ್ಯಾಯ ಮಾಡುತ್ತ.ಜಸ್ಟ್ ಬಿಎ ಓದಿದ ಬಡ ಮಾಣಿಯ ಬ್ಲ್ಯಾಕ್ ಮೇಲ್ ಮಾಡಿ ಐಎ ಎಸ್ ಹೇಳಿ ಹೇಳಿಸಿ ನಂಬಿಸಿ‌ಮದುವೆ ಮಾಡುತ್ತ .ಅಂಬಗ ಎನಗೆ ಈ ಮಾತು ನೆನಪಾತು.ಸಿಎಸ್ಪಿ ತನ್ನ ಮಗಳಿಂಗೆ ಅನ್ಯಾಯ ಮಾಡಿರೆ ಸುಮ್ಮನಿರ್ತನಾ? ಸುಮ್ಮನೆ ಅವನ ಎದುರು ಹಾಕಿಕೊಳ್ತ.ಇದರ ಪರಿಣಾಮವಾಗಿ ಭಾರ್ಗಿಯ ಎಲ್ಲ ಮೋಸಂಗಳುದೆ ಹೆರ ಬಕ್ಕು.ಅವಂಗೆ ಜೈಲು ಖಂಡಿತಾ ಅಕ್ಕು.ಸುಮ್ಮನೇ ಅವನ ದ್ವೇಷ ಕಟ್ಟಿಕೊಳ್ಳುತ್ತಾ ಚಂದು ಭಾರ್ಗಿ. ದೂರಲ್ಲಿ ಹೋಪ ಮಾರಿಯ ಮನೆಗೆ ಕರೆದ ಹಾಗೆ ಹೇಳಿ ಕನ್ನಡಲ್ಲು ಗಾದೆ ಇದ್ದು.ಅದೇ ಅರ್ಥ ಕೊಡುವ ಗಾದೆ ಮಾತಿದು.ದೂರಲ್ಲಿ ಇಪ್ಪ ಮಡು( ಕೊಡಲಿಯ) ಕಾಲಿಂಗೆ ಎಳದು ಹಾಕಿಕೊಂಬದು ಹೇಳಿರೆ ಇದು.ಮಡು ದೂರಲ್ಲಿ ಇದ್ದರೆ ಎಂತ ಅಪಾಯ ಇಲ್ಲೆ.ಅದೇ ಅದು ಕಾಲಿಂಗೆ ಬಿದ್ದರೆ ಕಾಲು ತುಂಡಕ್ಕು.ಅಕಸ್ಮಾತ್ ಆದರೆ ಎಂತ ಮಾಡುಲೆ ಎಡಿಯ.ಆದರೆ ನಾವಾಗಿಯೇ ಕಾಲಿಂಗೆ ಎಳದು ಹಾಕಿರೆ ಅಪಾಯ ತಪ್ಪಿದ್ದಲ್ಲ ಹೇಳಿ ಈ ಮಾತಿನ ಅರ್ಥ.ನಾವಾಗಿಯೇ ಅಪಾಯವ ಎಳದು ಹಾಕಿಕೊಂಬಲಾಗ ಹೆಳುವ ವಿವೇಕವ ಇದು ತಿಳಿಸುತ್ತು.

© ಡಾ.ಲಕ್ಷ್ಮೀ ಜಿ ಪ್ರಸಾದ




ProfileImg

Written by Dr Lakshmi G Prasad

Verified

0 Followers

0 Following