Do you have a passion for writing?Join Ayra as a Writertoday and start earning.

ಕುವೆಂಪು ಹಾಗೂ ಅವರ 'ರಕ್ತತರ್ಪಣ"ಕವನ

ಕುವೆಂಪು ಅವರ 'ರಕ್ತತರ್ಪಣ'ದ ವಿಶ್ಲೇಷಣೆ

ProfileImg
15 Jan '24
4 min read


image

                            

 

ಕುವೆಂಪು 

ಕರ್ತೃ - ಕೃತಿ ಪರಿಚಯ

      ಹೊಸಗನ್ನಡಸಾಹಿತ್ಯದ ಮಹಾಕವಿಗಳಲ್ಲಿ ಕುವೆಂಪು ಅಗ್ರಗಣ್ಯರು. ‘ಹೊಸಗನ್ನಡ ಸಾಹಿತ್ಯದ ಮೊದಲ ಮಹಾಕವಿ’ ಎಂಬ ಕೀರ್ತಿ ಕುವೆಂಪು ಅವರದು. ಇವರ ಪೂರ್ಣಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ‘ಕುವೆಂಪು’ ಎಂಬುದು ಇವರ ಕಾವ್ಯನಾಮ. ಈ ಕಾವ್ಯನಾಮದಿಂದಲೇ ಸುಪ್ರಸಿದ್ಧರಾದವರು ಕುವೆಂಪು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಕುವೆಂಪು ಅವರು ಹುಟ್ಟೂರು. ೧೯೦೪ರ ಡಿಸೆಂಬರ್ ೨೯ರಂದು ಜನಿಸಿದ ಕುವೆಂಪು ಅವರ ತಂದೆ ವೆಂಕಟಪ್ಪ, ತಾಯಿ ಸೀತಮ್ಮ. ‘ರಸಋಷಿ’, ‘ಕನ್ನಡದ ವರ್ಡ್ಸ್ ವರ್ಥ್', ‘ಕನ್ನಡದ ವಾಲ್ಮೀಕಿ’- ಇವು ಕುವೆಂಪು ಅವರ ಬಿರುದುಗಳು.

      ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ. ಎ. ಪದವಿಯನ್ನೂ, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ. ಎ. ಪದವಿಯನ್ನೂ ಪಡೆದ ಕುವೆಂಪು ಅವರು, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ನಂತರ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಪ್ರಾಚಾರ‍್ಯರಾಗಿ ಕಾರ್ಯನಿರ್ವಹಿಸಿದರು. ತದನಂತರ ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಕಾರ್ಯನಿರ್ವಹಿಸಿ ೧೯೬೦ರಲ್ಲಿ ನಿವೃತ್ತರಾದರು. ಇಂದು ಶೈಕ್ಷಣಿಕರಂಗದಲ್ಲಿ ವಿಶ್ವಮಾನ್ಯವಾಗಿ ತಮ್ಮ ಕಲ್ಪನೆಯ ಕೂಸು ‘ಮಾನಸಗಂಗೋತ್ರಿ’ಯನ್ನು ಸ್ಥಾಪಿಸಿದ ಹೆಗ್ಗಳಿಕೆ ಕುವೆಂಪು ಅವರದು.

      ವಿದ್ಯಾರ್ಥಿ  ದೆಸೆಯಿಂದಲೇ ಕನ್ನಡ-ಆಂಗ್ಲ ಸಾಹಿತ್ಯಗಳ ಆಳವಾದ ಅಧ್ಯಯನ ಮಾಡಿದವರು ಕುವೆಂಪು. ಈ ಅಧ್ಯಯನ ಅವರೊಬ್ಬ ಉತ್ತಮಕವಿಯಾಗಿ, ಮಹಾಕವಿಯಾಗಿ ಬೆಳೆಯಲು ನಾಂದಿಯಾಯಿತು. ಮೊದಮೊದಲು ಇಂಗ್ಲಿಷ್ ಸಾಹಿತ್ಯದ ಬಗೆಗೆ ವಿಶೇಷ ಆಸಕ್ತಿ ಹೊಂದಿದ್ದ ಕುವೆಂಪು ಅವರು, ೧೯೨೨ರಲ್ಲಿ ‘ಬಿಗಿನರ್ಸ್  ಮ್ಯೂಸ್’ ಎಂಬ ಇಂಗ್ಲಿಷ್ ಕವನಸಂಕಲನದ ಮೂಲಕ ಸಾಹಿತ್ಯಕ್ಷೇತ್ರ ಪ್ರವೇಶಿದರು. ಆದರೆ, ಆರಂಭದಲ್ಲಿ ಇವರಿಗಿದ್ದ ಆಂಗ್ಲಭಾಷಾ ವ್ಯಾಮೋಹವನ್ನು  ಐರಿಸ್‌ನ ಆಂಗ್ಲಕವಿ ಜೇಮ್ಸ್ ಕಸಿನ್ಸ್ ತಪ್ಪಿಸಿ ಮಾತೃಭಾಷೆಯಲ್ಲಿ ಕಾವ್ಯರಚಿಸಲು ಪ್ರೇರೇಪಿಸಿದರು. “ಮಾತೃಭಾಷೆಯಲ್ಲಿ ಮಾತ್ರ ಸಮರ್ಥ ಅಭಿವ್ಯಕ್ತಿ ಸಾಧ್ಯವೇ ಹೊರತು, ಅನ್ಯಭಾಷೆಯಲ್ಲಿ ಸಾಧ್ಯವಿಲ್ಲ” ಎಂಬ ಕಸಿನ್ಸರ ಮಾತು ಕುವೆಂಪು ಅವರನ್ನು ಎಚ್ಚರಿಸಿ ಕನ್ನಡಕ್ಕೆ ತರದೇ ಹೋಗಿದ್ದರೆ, ಕನ್ನಡ ಸಾಹಿತ್ಯ ಮಹಾಕವಿಯೊಬ್ಬನನ್ನು ಕಳೆದುಕೊಂಡು ಬರಡಾಗುತ್ತಿದ್ದುದರಲ್ಲಿ ಯಾವ ಸಂದೇಹವೂ ಇರುತ್ತಿರಲಿಲ್ಲ! ಇದರ ಫಲಶೃತಿಯಿಂದಾಗಿ ಕುವೆಂಪು ಅವರಿಂದ ಕನ್ನಡ ಸಾರಸ್ವತಲೋಕಕ್ಕೆ ಅನುಪಮ ಸಾಹಿತ್ಯಸೇವೆ ಸಂದುವಂತಾಯಿತು.

      ೧೯೨೫ರಲ್ಲಿ ‘ಅಮಲನ ಕಥೆ’ಯ ಮೂಲಕ ಕನ್ನಡಸಾಹಿತ್ಯವನ್ನು ಪ್ರವೇಶಿಸಿದ ಕುವೆಂಪು ಅವರ ದೈತ್ಯಪ್ರತಿಭೆ ಮಂದೆ ಓತಪ್ರೋತವಾಗಿ ಹರಿದು ಬಂದದ್ದಿದೆ. ಹೊಸಗನ್ನಡ ಸಾಹಿತ್ಯದ ಏನೆಲ್ಲ ಪ್ರಕಾರಗಳಲ್ಲಿ ಶ್ರೇಷ್ಟಸಾಹಿತ್ಯವನ್ನು ರಚಿಸುವುದರ ಮೂಲಕ ಕನ್ನಡಸಾಹಿತ್ಯವನ್ನು ಸಮೃದ್ಧಗೊಳಿಸುವುದರ ಮೂಲಕ ಕನ್ನಡಸಾಹಿತ್ಯವನ್ನು ಪ್ರಪ್ರಥಮವಾಗಿ ಅಂತರ್‌ರಾಷ್ಟ್ರೀಯ ಮಟ್ಟಕ್ಕೇರಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಎಲ್ಲ ಸಾಹಿತ್ಯ ಪ್ರಕಾರಗಳನ್ನು ಕುರಿತಂತೆ, ಎಪ್ಪತ್ತಾರು ಕೃತಿಗಳನ್ನು ರಚಿಸಿದ ಹೆಗ್ಗಳಿಕೆ ಕುವೆಂಪು ಅವರದು.

      ‘ಕುವೆಂಪು’ ಕಾವ್ಯನಾಮದಿಂದ ಸುಪ್ರಸಿದ್ಧರಾಗಿದ್ದ ಕೆ. ವಿ ಪುಟ್ಟಪ್ಪನವರದು ಅದ್ವಿತೀಯವಾದ ಬಹುಮುಖ ಪ್ರತಿಭೆ ಹಾಗೂ ವ್ಯಕ್ತಿತ್ವ. ಅವರು ಹೊಸಗನ್ನಡದ ಮೊದಲ ಮಹಾಕವಿ ಮಾತ್ರವಲ್ಲ, ಶ್ರೇಷ್ಠ ರಮ್ಯವಿರ‍್ಶಕರೂ, ಕಾವ್ಯಮೀಮಾಂಸಕರೂ, ನಾಟಕಕಾರರೂ, ಸಣ್ಣಕಥೆಗಾರರೂ, ಕಾದಂಬರಿಕಾರರೂ, ಪ್ರಬಂಧಕಾರರೂ ಹೌದು. ಅವರ ದೈತ್ಯಪ್ರತಿಭೆ ‘ರಾಷ್ತ್ರಕವಿ’ ಪ್ರಶಸ್ತಿಯೊಂದನ್ನು ಬಿಟ್ಟು, ಉಳಿದೆಲ್ಲ ಶ್ರೇಷ್ಠಪ್ರಶಸ್ತಿಗಳು ಪ್ರಪ್ರಥಮವಾಗಿ ಕುವೆಂಪು ಅವರಿಗೆ ಸಂದಿರುವುದು ಗಮನರ‍್ಹವಾದ ಸಂಗತಿ. ಕನ್ನಡದಲ್ಲಿ ಜ್ಞಾನಪೀಠಪ್ರಶಸ್ತಿಯನ್ನು ಪ್ರಪ್ರಥಮವಾಗಿ ಪಡೆಯುವುದರ ಮೂಲಕ ಕನ್ನಡ ಸಾಹಿತ್ಯದ ಕರ‍್ತಿಪತಾಕೆಯನ್ನು ಅಂತರ್ ರಾಷ್ತ್ರೀಯಮಟ್ಟದವರೆಗೆ ಎತ್ತರಿಸಿದ ಶ್ರೇಯಸ್ಸು ಕುವೆಂಪು ಅವರದು.

      ಕುವೆಂಪು ಅವರು ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರಗಳೆಲ್ಲದರಲ್ಲೂ ಕೃಷಿ ಮಾಡಿದ್ದಾರೆ. ಕಾವ್ಯ, ನಾಟಕ, ಕಾದಂಬರಿ, ಸಣ್ಣಕಥೆ, ವಿರ‍್ಶೆ, ಕಾವ್ಯಮೀಮಾಂಸೆ, ವಿಚಾರ ಸಾಹಿತ್ಯ, ವೈಚಾರಿಕ ಸಾಹಿತ್ಯ, ಜೀವನ ಚರಿತ್ರೆ, ಶಿಶುಸಾಹಿತ್ಯ, ಹರಟೆ, ಸಂಶೋಧನೆ- ಇವೇ ಮೊದಲಾದ ಸಾಹಿತ್ಯಪ್ರಕಾರಗಳಲ್ಲಿ ಶ್ರೇಷ್ಠಮಟ್ಟದ ಕೃತಿಗಳನ್ನು ರಚಿಸಿದವರು ಕುವೆಂಪು. ಈ ಎಲ್ಲಾ ಕ್ಷೇತ್ರಗಳಲ್ಲಿ ಅವರಿಗೆ ಅತ್ಯಂತ ಪ್ರಿಯವಾದ ಕ್ಷೇತ್ರವೆಂದರೆ ಕಾವ್ಯಕ್ಷೇತ್ರ. ಸಾಮಾನ್ಯವಾಗಿ, ಕುವೆಂಪು ಅವರ ಸಾಹಿತ್ಯಸೃಷ್ಠಿಯ ಪ್ರಮುಖಲಕ್ಷಣವೆಂದರೆ- ಗಾಂಭರ‍್ಯ, ರಸಪ್ರತೀತಿ, ಪ್ರಕೃತಿಸೌಂರ‍್ಯ, ಆಧ್ಯಾತ್ಮ, ಆರ‍್ಶಿಕೃತ ಪ್ರಣಯ ನಿರೂಪಣೆ ಇತ್ಯಾದಿ. ಕನ್ನಡ ನವೋದಯಕಾವ್ಯದ ಎಲ್ಲ ಲಕ್ಷಣಗಳನ್ನು ಬಹುಸರ‍್ಥವಾಗಿ ದುಡಿಸಿಕೊಂಡವರಲ್ಲಿ ಕುವೆಂಪು ಮತ್ತು ಬೇಂದ್ರೆಯವರು ಮೊದಲಿಗರು; ಪ್ರಮುಖರು.

      ಪ್ರಕೃತಿಯೆಂದರೆ ಕುವೆಂಪು ಅವರಿಗೆ ಪಂಚಪ್ರಾಣ. ಮಲೆನಾಡಿನ ಅನುಪಮ ಸೃಷ್ಠಿಸೌಂರ‍್ಯವನ್ನು ಅವರು ತಮ್ಮ ಸಾಹಿತ್ಯಸೃಷ್ಠಿಯಲ್ಲಿ ರಮ್ಯಾದ್ಭುತವಾಗಿ ಸೂರೆಚೆಲ್ಲಿದ್ದಾರೆ; ಸರೆಹಿಡಿದುತೋರಿದ್ದಾರೆ. ಅಂತಯೇ ಅವರನ್ನು ‘ಪ್ರಕೃತಿಕವಿ’, ‘ಕನ್ನಡದ ವಡ್ಸ್ರ‍್ತ್’ಎಂದೆಲ್ಲ ಕರೆದು ಗೌರವಿಸಲಾಗುತ್ತಿದೆ. ವಡ್ಸ್ರ‍್ತ್ ಎಂದರೆ ಕುವೆಮಪು ಅವರಿಗೆ ತುಂಬಾ ಪ್ರೀತಿಯಂತೆ! ವಡ್ಸ್ರ‍್ತ್ ಕವಿ ಕುವೆಂಪು ಅವರ ಮೇಲೆ ಗಾಢವಾದ ಪ್ರಭಾವ ಬೀರಿದ ಕವಿ. ಕುವೆಂಪು ಅವರು ಅನೇಕ ಶ್ರೇಷ್ಠಪ್ರಕೃತಿಕವನಗಳನ್ನು ರಚಿಸಿದ್ದು, ಅವುಗಳಲ್ಲಿ ‘ಪಕ್ಷಿಕಾಶಿ’, ‘ನವಿಲು’ಮುಂತಾದ ಕವನಗಳು ಪ್ರಮುಖವಾದವು. ಇತರ ಪ್ರಕೃತಿಕವಿಗಳು ಗಮನಿಸದ ಹಲವು ಪಕ್ಷಿಗಳನ್ನು ಕುವೆಂಪು ಅವರು ಗಮನಿಸಿ, ಹೊಸದೊಂದು ‘ಪಕ್ಷಿಕಾಶಿ’ಯನ್ನೇ ಸಹೃದಯರ ಮುಂದೆ ತೆರೆದಿಡುತ್ತಾರೆ ಕುವೆಂಪು ಅವರು. ಅವರ ಅನನ್ಯ ಪ್ರಕೃತಿಪ್ರೇಮ ಖಂಡಕಾವ್ಯ, ಮಹಾಕಾವ್ಯ, ಮಹಾನ್ ಕಾದಂಬರಿಗಳಲ್ಲೂ ಬಹು ಸುಂದರವಾಗಿ ಅಭಿವ್ಯಕ್ತಿಗೊಂಡಿದೆ. ಇಲ್ಲೆಲ್ಲ ಅವರ ಪ್ರಕೃತಿ ಸೌಂರ‍್ಯದ ರ‍್ಣನೆ ಭವ್ಯರೂಪ ತಾಳಿ ನಿಂತಿದೆ.

    ಕುವೆಂಪು ಅವರು ಪ್ರಕೃತಿಕವನಗಳನ್ನಲ್ಲದೆ, ಪ್ರಣಯಕವನ, ರಾಷ್ತ್ರೀಯಕವನ, ಭಾವಗೀತೆ, ಸುನೀತ, ಪ್ರಗಾಥ- ಮುಂತಾದವುಗಳನ್ನು ರಚಿಸಿದ್ದಾರೆ. ಅವರ ‘ಸ್ವಾತಂತ್ತ್ಯೋದಯ ಪ್ರಗಾಥ' ಕನ್ನಡದ ಶ್ರೇಷ್ಠಪ್ರಗಾಥಗಳಲ್ಲಿ ಒಂದು.

      ಛಂದಸ್ಸಿನ ದೃಷ್ಠಿಯಿಂದಲೂ ಕುವೆಂಪು ಅವರದು ಬಹುದೊಡ್ಡ ಸಾಧನೆ. ‘ಚಿತ್ರಾಂಗದಾ’ ಖಂಡಕಾವ್ಯದಲ್ಲಿ ಸರಳರಗಳೆಯನ್ನು ಬಹುಸಮರ್ಥವಾಗಿ ದುಡಿಸಿಕೊಂಡ ಕುವೆಂಪು ಅವರು, ಆ ಸರಳರಗಳೆಗೆ ತಮ್ಮ ಜಗದ್ಭವ್ಯಮೇರುಕೃತಿ ‘ಶ್ರೀರಾಮಾಯಣ ದರ್ಶನಂ’ದಲ್ಲಿ ಮಹಾಛಂದಸ್ಸಿನ ಸ್ವರೂಪವನ್ನು ತಂದುಕೊಟ್ಟ ಹೆಗ್ಗಳಿಕೆ ಕುವೆಂಪು ಅವರದು.

     ಕುವೆಂಪು ಅವರ ಪ್ರಮುಖ ಕೃತಿಗಳು:

 ಕವನಸಂಕಲನಗಳು [ಕಾವ್ಯ]:

      ‘ಕೊಳಲು’, ‘ಕದರಡಿಕೆ’, ‘ಅನುತ್ತರಾ’, ‘ಜೇನಾಗುವಾ’, ‘ಚಂದ್ರಮಂಚಕೆ ಬಾ ಚಕೋರಿ’, ‘ಷೋಡಶಿ’, ‘ಪ್ರೇಮಕಾಶ್ಮೀರ’,’ಪಕ್ಷಿಕಾಶಿ’, ‘ಕಿಂಕಿಣಿ’ [ವಚನಕವನಗಳು], ‘ಅನಿಕೇತನ’ [ಅನುಭಾವ ಕವನಗಳು], ’ಕುಟೀರ’, ‘ಪ್ರೇತಕ್ಯೂ’, ‘ಮಂತ್ರಾಕ್ಷತೆ’ [ಪುಡಿ ಕವನಗಳು],’ಕುಟೀಚಕ’, ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ [ಕ್ರಾಂತಿಕಾರಿ ಕವನಗಳು], ‘ಇಕ್ಷÄಗಂಗೋತ್ರಿ’ [ಸ್ವಾತಂತ್ರೊö್ಯÃದಯ ಕವನಗಳು], ‘ಅಗ್ನಿಹಂಸ’ [ದರ್ಶನ ಕವನಗಳು], ‘ಕಥನಕವನಗಳು’ ‘ಕಲಾಸುಂದರಿ’, ‘ಕನ್ನಡ ಡಿಂಡಿಮ’, ‘ಕೃತ್ತಿಕೆ’ [ಸಾನೆಟ್ಟುಗಳು], ‘ಪಾಂಚಜನ್ಯ’, ಪ್ರಾರ್ಥನಾ ಗೀತಾಂಜಲಿ’.

ಖಂಡಕಾವ್ಯ:

‘ಚಿತ್ರಾಂಗದಾ’

ಮಹಾಕಾವ್ಯ:

    ‘ಶ್ರೀರಾಮಾಯಣ ದರ್ಶನಂ'

ನಾಟಕಗಳು:

      ‘ಬೆರಳ್ ಗೆ ಕೊರಳ್’, ‘ಚಂದ್ರಹಾಸ’, ಮಹಾರಾತ್ರಿ’, ಶೂದ್ರತಪಸ್ವಿ’, ‘ಜಲಗಾರ’, ‘ಶ್ಮಶಾನ ಕುರುಕ್ಷೇತ್ರಂ’ ‘ಏಕಲವ್ಯ’, ‘ಯಮನ ಸೋಲು’, ‘ವಾಲ್ಮೀಕಿ ಭಾಗ್ಯ’, ‘ಬಲಿದಾನ’, ‘ಕಾನೀನ’, 

ರೂಪಾಂತರಿತ ನಾಟಕಗಳು:

 

    ‘ಬಿರುಗಾಳಿ’ [ಷೇಕ್ಸಪಿಯರ್‌ನ ‘ಟೆಂಪೆಸ್ಟ್’ ನಾಟಕದ ರೂಪಾಂತರ]

      ‘ರಕ್ತಾಕ್ಷಿ’ [ಷೇಕ್ಸಪಿಯರನ ‘ಹ್ಯಾಮ್ಲೇಟ್’ ನಾಟಕದÀ ರೂಪಾಂತರ].

 ಮಕ್ಕಳ ಕಥೆ, ಕವನ,ನಾಟಕಗಳು:

     ‘ನನ್ನ ಗೋಪಾಲ’, ಮೋಡಣ್ಣನ ತಮ್ಮ’, ‘ಮರಿವಿಜ್ಞಾನಿ’ [ಶಿಶುಗೀತೆಗಳು], ಬೊಮ್ಮನಹಳ್ಳಿಯ ಕಿಂದರಿಜೋಗಿ’, ‘ಮೇಘಪುರ’, ‘ನನ್ನ ಮನೆ’, ‘ಅಮಲನ ಕಥೆ’, ಸಾಹಸ ಪವನ’, ‘ನರಿಗಳಿಗೆ ಕೋಡಿಲ್ಲ’, ‘ಹಾಳೂರು’, ‘ಶಿಶು ಗೀತಾಂಜಲಿ’,

ಕಾದಂಬರಿಗಳು:

      ‘ಕಾನೂರು ಸುಬ್ಬಮ್ಮ ಹೆಗ್ಗೆಡತಿ’, ‘ಮಲೆಗಳಲ್ಲಿ ಮದುಮಗಳು’.

ಕಾವ್ಯಮೀಮಾಂಸಾ ಕೃತಿಗಳು:

   ‘ರಸೋ ವೈ ಸಃ’

ರಮ್ಯವಿಮರ್ಶಾ ಕೃತಿಗಳು:

      ‘ತಪೋನಂದನ’, ‘ಕಾವ್ಯವಿಹಾರ’, ‘ಸರೋವರದ ಸಿರಿಗನ್ನಡಿ’, ‘ದ್ರೌಪದಿಯ ಶ್ರೀಮುಡಿ’. ‘ವಿಭೂತಿ ಪೂಜೆ’.

ಜೀವನ ಚರಿತ್ರೆಗಳು:

      ‘ಶ್ರೀ ರಾಮಕೃಷ್ಟಪರಮಹಂಸ’, ‘ಸ್ವಾಮಿ ವಿವೇಕಾನಂದ’.

ಆತ್ಮಕಥೆ:

     ‘ನೆನಪಿನ ದೋಣಿಯಲ್ಲಿ’.

ವೈಚಾರಿಕ ಕೃತಿಗಳು:

     ‘ನಿರಂಕುಶಮತಿಗಳಾಗಿ’, ‘ವಿಚಾರಕ್ರಾಂತಿಗೆ ಆಹ್ವಾನ’

ಇತರೆ ಕೃತಿಗಳು:

   ‘ಸಾಹಿತ್ಯ ಪ್ರಚಾರ’ [ವಿಮರ್ಶೆಯ ಭಾಷಣಗಳು], ‘ಮಲೆನಾಡಿನ ಚಿತ್ರಗಳು’, ‘ಷಷ್ಟಿನಮನ’, [ಭಾಷಣ,ಲೇಖನ,ಮುನ್ನುಡಿ], ‘ಮನುಜಮತ ವಿಶ್ವಪಥ’[ಭಾಷಣ, ಲೇಖನ], ‘ಹೊನ್ನಹೊತ್ತಾರೆ’, ‘ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ’, ‘ನೆನಪುಗಳಲ್ಲಿ ವಿವೇಕಾನಂದರು’, ಜನತಾಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ’, ‘ಸಮುದ್ರಲಂಘನ’, ‘ಕಥೆಗಗಳೊಡನೆ ಆರಂಭದಲ್ಲಿ’, ಮಹಾದರ್ಶನ ಮತ್ತು ಪ್ರಾಯಶ್ಚಿತ್ತ’,  'ಗುರುವಿನೊಡನೆ ದೇವರೆಡೆಗೆ ' ಭಾಗ -1, 'ಗುರುವಿನೊಡನೆ ದೇವರೆಡೆಗೆ ' ಭಾಗ -2, 'ಜನಪ್ರಿಯ ವಾಲ್ಮೀಕಿ ರಾಮಾಯಣ'.

*ಕುವೆಂಪು ಅವರ "ರಕ್ತ ತರ್ಪಣ": ಒಂದು ವಿಶ್ಲೇಷಣೆ: 

   ‘ರಕ್ತ ತರ್ಪಣ’ ದೇಶಾಭಿಮಾನವನ್ನು ಕುರಿತ ಕುವೆಂಪು ಅವರ ಒಂದು ಶ್ರೇಷ್ಠ ಕವನ.ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ರಕ್ತ ತರ್ಪಣ ಕೊಟ್ಟು ಬಲಿದಾನವಾದವರ  ಆರ್ತಕೂಗಿನ ಆಶಯ ಇಲ್ಲಿದೆ. ದೇಶಾಭಿಮಾನ ಕುರಿತಂತೆ ಯುವಪೀಳಿಗೆಯನ್ನು ಎಚ್ಚರಿಸಿ, ಅವರನ್ನು  ದೇಶಭಿಮಾನಕ್ಕೆ ಹುರಿದುಂಬಿಸುವುದು ಈ ಕವನದ ಮೂಲ ಆಶಯ. ಭಾರತ ಸ್ವಾತಂತ್ಯ್ರಕ್ಕಾಗಿ ಬಲಿದಾನವಾದ ತಮ್ಮನ್ನು ಯುವಜನಾಂಗ ಮರೆಯಬಾರದು. ತಾವು ಯುವಜನಾಂಗದ ಕೈಗಿತ್ತ ರಾಷ್ಟ್ರಧ್ವಜವನ್ನು ಆ ಯುವಕರು ಎತ್ತಿ ಹಿಡಿದು ದೇಶದ ರಕ್ಷಣೆಗೆ ಕಂಕಣಬದ್ಧರಾಗಿ ನಿಲ್ಲಬೇಕು ; ಬಲಿದಾನದಂತಹ ಸಂದರ್ಭ ಒದಗಿ ಬಂದರೆ ಅದಕ್ಕೂ ಸಿದ್ಧರಾಗಿ ನಿಲ್ಲಬೇಕು ಎಂಬ ಸ್ವಾತಂತ್ರ್ಯ ಬಲಿದಾನಿಗಳ ಕಳಕಳಿಯ ಆಶಯ  ಇಲ್ಲಿ  ಹೃದಯಸ್ಪರ್ಶಿಯಾಗಿ ಅಭಿವ್ಯಕ್ತಿಗೊಂಡಿದೆ.

  ಒಟ್ಟಾರೆ, ಭಾರತ ಸ್ವಾತಂತ್ರ್ಯಕ್ಕಾಗಿ ರಕ್ತ ತರ್ಪಣ ಕೊಟ್ಟ ಬಲಿದಾನಿಗಳ ತ್ಯಾಗವನ್ನು ನೆನಪಿಗೆ ತಂದುಕೊಡುತ್ತ, ಯುವಜನಾಂಗವನ್ನು ದೇಶಾಭಿಮಾನಕ್ಕೆ ಕಂಕಣಬದ್ಧರಾಗಿ ನಿಲ್ಲುವಂತೆ ಹುರಿದುಂಬಿಸುವ ಈ  ಕವನದ ಆಶಯ ತುಂಬಾ ಹೃದಯಸ್ಪರ್ಶಿಯಾದುದು.

                                                    

   

 

Category : Books


ProfileImg

Written by LS KADADEVARMATH

Lokayya Shivalingayya Kadadevarmath Education: M.A.In Kannada [1984-85] Karnataka University Dharwad Experience: Writing & DTP Published: Publication of about 60-70 works.