ಕುಲೆ /ಪ್ರೇತ ಮದುವೆ
ಇತ್ತೀಚೆಗೆ ಯಾರೋ ಒಬ್ಬರು ಪ್ರೇತ ಮದುವೆಗೆ ವಧು ಬೇಕಾಗಿದೆ ಎಂದು ಜಾಹೀರಾತು ನೀಡಿದ್ದು ಅನೇಕರ ನಗುವಿಗೆ ಅನೇಕರ ಜಿಜ್ಞಾಸೆಗೆ ಕಾರಣವಾಗಿದೆ
ಕುಲೆ ಮದುವೆ / ಪ್ರೇತ ಮದು ೆ ತುಳುವರಲ್ಲಿ ಈಗಲೂ ಪ್ರಚಲಿತವಿರುವ ಗತಿಸಿದ ಆತ್ಮಗಳ ನಡುವೆ ನಡೆಸುವ ಮದುವೆ ಆಗಿದೆ .
ಒಂದು ಮನೆಯಲ್ಲಿ ವಿವಾಹ ಪೂರ್ವದಲ್ಲಿ ಗಂಡು ಅಥವಾ ಹೆಣ್ಣು ಮರಣಿಸಿದ್ದರೆ ಅವರು ಅತೃಪ್ತ ಆತ್ಮಗಳಾಗಿ ಅವರ ಅಣ್ಣ ತಮ್ಮ ಅಕ್ಕ ತಂಗಿಯರನ್ನು ಕಾಡುತ್ತವೆ ಎಂಬ ನಂಬಿಕೆ ಇದೆ
ಈ ಉಪದ್ರ ಪರಿಹಾರಕ್ಕಾಗಿ ಗತಿಸಿದ ಆತ್ಮಗಳ ನಡುವೆ ವಿವಾಹ ಮಾಡುತ್ತಾರೆ.
ಗತಿಸಿದ ಆತ್ಮಗಳಿಗೆ ಮದುವೆ ಮಾಡುವ ಪದ್ಧತಿ
ಕೇವಲ ತುಳುವರಲ್ಲಿ ಮಾತ್ರ ಇರುವುದಲ್ಲ .ವಿಶ್ವದ ಹಲವೆಡೆ ಪ್ರಚಲಿತ ಇದೆ
ಚೀನಾ, ತೈವಾನ್ , ಕೊರಿಯಾ, ಏಷ್ಯಾ ದ ಪೂರ್ವ ಈಶಾನ್ಯ ದೇಶಗಳಲ್ಲಿಯೂ ಈ ಪ್ರೇತ ಮದುವೆ / ghost marriage ಪ್ರಚಲಿತ ಇದೆ.
ಚೀನಾದಲ್ಲಿ ಗತಿಸಿದ ಹೆಣ್ಣು ಮತ್ತು ಗಂಡಿಗೆ ghost marriage / ಪ್ರೇತ ಮದುವೆ ಮಾಡುತ್ತಾರೆ . ಇದಕ್ಕಾಗಿ ಅವರ ದೇಹಗಳು ಬೇಕಾಗುತ್ತದೆ.ಹಾಗಾಗಿ ಸತ್ತ ಗಂಡಿನ ಅಂತ ಯ ಸಂಸ್ಕಾರ ಮಾಡುವಾಗಲೇ ಅದಕ್ಕೂ ಮೊದ ೇ ಸತ್ತಿದ್ದ ಹೆಣ್ಣಿನ ಗೋರಿಯ ಬಳಿಗೆ ಹೋಗಿ ಮದುವೆಯನ್ನೂ ಮಾಡುತ್ತಾರೆ .ನಂತರ ಮಾಡುವುದೂ ಇದೆಯಂತೆ.
ತೈವಾನ್ ನಲ್ಲಿ ಗತಿಸಿದ ಹೆಣ್ಣು ಮತ್ತು ಜೀವಂತ ಗಂಡಿನ ನಡುವೆ ವಿವಾಹ ಮಾಡುತ್ತಾರೆ
ಇದಕ್ಕಾಗಿ ಕೆಂಪು ಲಕೋಟೆಯಲ್ಲಿ ಗತಿಸಿದ ಹೆಣ್ಣಿನ ಫೋಟೋ ಅಥವಾ ಕೂದಲು ಇರಿಸಿ ವಿವಿಧ ಉಡುಗೊರೆಗಳನ್ನು ತುಂಬಿ ಜನರು ಓಡಾಡುವ ಜಾಗದಲ್ಲಿ ಇರಿಸುತ್ತಾರೆ.ಇದನ್ನು ಯಾರಾದರೂ ಗಂಡಸರು , ಗಂಡು ಮಕ್ಕಳು ಹೆಕ್ಕಿದರೆ ,ತೆಗೆದು ನೋಡಿದರೆ ಆತ ಆ ಗತಿಸಿದ ಹೆಣ್ಣು ಆತ್ಮ ಕ್ಕೆ ವರನಾಗುತ್ತಾನೆ.ಅದಕ್ಕಾಗಿ ಕೆಂಪು ಲಕೋಟೆಯನ್ನು ಮುಟ್ಟಬಾರದು ಎಂದು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಹಿರಿಯರು ಹೇಳಿಕೊಡುತ್ತಾರೆ
ಕೆಂಪು ಲಕೋಟೆಯನ್ನು ಎತ್ತಿದ ನಂತರ ಆ ಆತ್ಮ ವನ್ನು ಮದುವೆಯಾಗದೆ ಇರಬೇಕಾದರೆ ದೊಡ್ಡ ಪ್ರಮಾಣದ ಉಡುಗೊರೆಗಳನ್ನು ಹೆಣ್ಣಿನ ಮನೆಯವರಿಗೆ ನೀಡಬೇಕಾಗುತ್ತದೆ
ಮದುವೆಗೆ ಒಪ್ಪಿದರೆ ಸರಳವಾದ ವಿವಾಹ ಸಮಾರಂಭ ಏರ್ಪಡಿಸಿ ಸಾಂಪ್ರದಾಯಿಕ ಇತರ ಮದುವೆಯಂತೆ ಈ ಆತ್ಮದ ಜೊತೆಗೆ ಮದುವೆ ನಡೆಯುತ್ತದೆ.ಅಲ್ಲಿಗೆ ಬಂಧನ ಮುಕ್ತಿ ಆಗುತ್ತದೆ
ಎರಡು ಮೂರು ಬಾರಿ ಈ ರೀತಿಯ ಮದುವೆ ಆದವರೂ ಇದ್ದಾರೆ
ಈ ರೀತಿಯ ಗತಿಸಿದ ಆತ್ಮಗಳಿಗೆ ವಧು ವರರನ್ನು ಹುಡುಕಿ ಕೊಡುವ ವ್ವವಹಾರ ನಡೆಸುವವರೂ ಅಲ್ಲಿ ಇದ್ದಾರೆ
ಚೀನಾದಲ್ಲಿ ಸತ್ತ ಗಂಡು ಮತ್ತು ಹೆಣ್ಣಿನ ಮದುವೆಗಾಗಿ ಗೋರಿಯಿಂದ ದೇಹವನ್ನು ತೆಗೆಯುತ್ತಾರೆ.ಇದಕ್ಕಾಗಿ ದೇಹವನ್ನು ಗೋರಿಯಿಂದ ಕದಿಯುವವರೂ ಇದ್ದಾರೆ ಅದಕ್ಕಾಗಿ ಚೀನಾ ದೇಶ ಈ ಗತಿಸಿದ ಆತ್ಮಗಳ ಮದುವೆಯನ್ನು ಈಗ ನಿಷೇಧ ಮಾಡಿದೆ.
ಕೋರಿಯದಲ್ಲಿ ಪ್ರೇಮಿಗಳು ವಿವಾಹ ಪೂರ್ವದಲ್ಲಿ ಸತ್ತರೆ ಆಗ ಅವರ ನಡುವೆ ವಿವಾಹ ಮಾಡಿಸುತ್ತಾರೆ.ಗಂಡು ಹೆಣ್ಣು ಇಬ್ಬರೂ ಸತ್ತರೆ ಎರಡೂ ಗತಿಸಿದ ಆತ್ಮಗಳ ನಡುವೆ ವಿವಾಹ ಮಾಡುತ್ತಾರೆ.ಪ್ರೇಮಿಗಳಲ್ಲಿ ಗಂಡು ಅಥವಾ ಹೆಣ್ಣು ಸತ್ತರೆ ಉಳಿದ ಗಂಡು ಅಥವಾ ಹೆಣ್ಣಿಗೆ ಗತಿಸಿದ ಆತ್ಮದೊಂದಿಗೆ ವಿವಾಹ ಮಾಡುತ್ತಾರೆ
ಇದನ್ನು ಮೂಢನಂಬಿಕೆ ಎಂದು ಹೇಳುವವರೂ ಇದ್ದಾರೆ.ಯಾವುದನ್ನು ನಂಬಿಕೆ, ಮೂಢನಂಬಿಕೆ ಎನ್ನುವುದು.ಗತಿಸಿದ ಆತ್ಮಗಳಿಗೆ ಅಂತ್ಯೇಷ್ಟಿ ಸಂಸ್ಕಾರ ಎಲ್ಲ ಜಾತಿ ಧರ್ಮಗಳಲ್ಲೂ ಅವರದ್ದೇ ಆದ ವಿಧಾನದಲ್ಲಿ ಮಾಡುತ್ತಾರೆ.ಹಾಗೆಯೇ ಪ್ರೇತ ಮದುವೆ/ ghost marriage ಕೂಡ
ತುಳುವರಲ್ಲಿ ಮೂರು ವಿಧದ ವಿವಾಹ ಸಂಸ್ಕಾರಗಳು ಇವೆ.ಕೈಧಾರೆ,ಬುಡುಧಾರೆ ಮತ್ತು ಕುಲೆ ಮದುವೆ
ಮದುವೆಗೆ ಮೊದಲೇ ಗತಿಸಿದ ಆತ್ಮಗಳ ನಡುವೆ ನಡೆಸುವ ವಿವಾಹವೇ ಕುಲೆ( ಪ್ರೇತ) ಮದುವೆ
ಧರ್ಮಧಾರೆ
ಹಿರಿಯರು ಕುಲ ಗೋತ್ರ ನೋಡಿ ನಿಶ್ಚಯಮಾಡಿದ ಸಾಂಪ್ರದಾಯಿಕ ವಿವಾಹ ಇದು.
ಈ ಮದುವೆಯ ಮುಖ್ಯ ಭಾಗ ಧಾರೆ ಎರೆಯುವುದು. ಇದನ್ನು ಧರ್ಮಧಾರೆ ಎಂದು ಕರೆಯುತ್ತಾರೆ. ಸೊನ್ನೆಯ ಮತ್ತು ಗುರುಮಾರ್ಲರ ಧರ್ಮಧಾರೆಯನ್ನು ಹೀಗೆ ವರ್ಣಿಸಿದ್ದಾರೆ.
ಸೇಸೆಗು ಮೂಜಿ ಸುತ್ತು ಬಲಿ ಬರ್ಪಾಯೆರ್
ದಾರೆದ ಮಂಟಪೊಡು ಕುಲ್ಲಾಯೆರ್
ಎಡ್ಡೆ ಮುರ್ತೊಡು ಎಡ್ಡೆ ವೇಲ್ಯಗಳಿಗೆಡು
ಮಾಯದ ಸೊನ್ನೆಗುಲಾ ಗುರುಮಾರ್ಲೆರೆಗುಲಾ
ಧರ್ಮಧಾರೆ ದಂಗಾಯೆರ್
ಕೈಮುಟ್ಟು ಕೈದಾರೆ ತೀರ್ತೆರ್
ಮೈಮುಟ್ಟು ಮೈ ಸೇಸೆ ತೀರ್ತೆರ್ 48
(ಸೇಸೆಗೆ ಮೂರು ಸುತ್ತು ಬರಿಸಿದರು
ಧಾರೆ ಮಂಟಪದಲ್ಲಿ ಕುಳ್ಳಿರಿಸಿದರು
ಒಳ್ಳೆ ಮುಹೂರ್ತದಲ್ಲಿ ಒಳ್ಳೆ ವೇಳೆ ಗಳಿಗೆಯಲ್ಲಿ
ಮಾಯದ ಸೊನ್ನೆಗೂ ಗುರುಮಾರ್ಲರಿಗೂ
ಧರ್ಮಧಾರೆ ಎರೆದರು
ಕೈ ಮುಟ್ಟಿ ಕೈಧಾರೆ ಪೂರೈಸಿದರು
ಮೈಮುಟ್ಟಿ ಮೈ ಸೇಸೆ ಪೂರೈಸಿದರು)
ತುಳುವರಲ್ಲಿ ರಾತ್ರಿ ಧಾರೆ ಇದ್ದುದಾಗಿಯೂ, ರಾತ್ರಿ ಊಟದ ನಂತರ ಧಾರೆ ಎರೆದು ಬೆಳಗಿನ ಜಾವದ ಹೊತ್ತಿನಲ್ಲಿ ಬೊಳ್ಳೆರೆ ಮಾಣಿ ಎಂಬ ಹಕ್ಕಿ ಕೂಗುವ ಹೊತ್ತಿನಲ್ಲಿ ಧಾರೆ ಮಾಡಿ ಹೆಣ್ಣೊಪ್ಪಿಸಿ ಕೊಟ್ಟರು ಎಂಬ ವಿವರಣೆ ಅನೇಕ ಪಾಡ್ದನಗಳಲ್ಲಿ ಕಂಡುಬರುತ್ತದೆ.
ಮುಡಾಯಿ ಬೊಳ್ಳಿ ಉದಿಪುನ
ಬೊಳ್ಳೆರೆ ಮಾಣಿಗದ ಸೊರ ಕೇಣ್ಣಾಗ ಕೈ ಮುಟ್ಟು ಕೈದಾರೆ
ಮೈ ಮುಟ್ಟು ಮೆಯಾದೇಸೆ ಆವೊಡು
(ಮೂಡುದಿಕ್ಕಿನಲ್ಲಿ ಬೆಳ್ಳಿ ಉದಯಿಸುವಾಗ
ಬೊಳ್ಳೆರೆ ಮಾಣಿಗ ಹಕ್ಕಿ ಕೂಗುವಾ ಸ್ವರ ಕೇಳಿಸುವಾಗ
ಗಂಡು ಹೆಣ್ಣಿನ ಕೈ ಮುಟ್ಟಿ ಕೈ ಧಾರೆ
ಮೈ ಮುಟ್ಟಿ ಮೈ ಸೇಸೆ ಆಗಬೇಕು)
ಇದೇ ರೀತಿಯ ವರ್ಣನೆ ಕೊರಗ ತನಿಯ, ಬಾಲೆ ಮಾಡೆದಿ ಮೊದಲಾದ ಪಾಡ್ದನಗಳಲ್ಲಿದೆ. ಬಾಲೆ ಮಾಡೆದಿಯ ಧಾರೆಯ ವರ್ಣನೆ ಹೀಗಿದೆ:
ವಣಸ್ ಬಲ್ಮಣ ಆಂಡ್
ಬೊಳ್ಳಿ ತೋಜಿದ್ ಬೊಳ್ಳಿರಾನಾಗ
ಬೊಳೆರಿ ಮಾಣಿಗ ಸೊರದನಿ ಕೊರ್ನಾಗ
ಆಣ್‍ಗ್‍ಲಾ ಪೊಣ್ಣ್‍ಗ್‍ಲಾ ಕೈ ಮುಟ್ಟುಧಾರೆ
ಮೈಮುಟ್ಟು ದೇಸೆ ಆಂಡ್
ಧಾರೆ ಆದು ಪೊಣ್ಣ ಒಚ್ಚದ್ ಕೊರಿಯೆರ್ 50
(ಊಟ ಸಮ್ಮಾನ ಆಯಿತು
ಬೆಳ್ಳಿ ಕಾಣಿಸಿ ಬೆಳಕಾದಾಗ
ಬೊಳ್ಳೆರಿ ಮಾಣಿಗ ಹಕ್ಕಿ ಕೂಗಿದಾಗ
ಗಂಡು-ಹೆಣ್ಣಿಗೆ ಕೈ ಮುಟ್ಟಿ ಕೈಧಾರೆ
ಮೈಮುಟ್ಟಿ ಸೇಸೆ ಆಯಿತು
ಧಾರೆ ಆಗಿ ಹೆಣ್ಣು ಒಪ್ಪಿಸಿಕೊಟ್ಟರು)
ತುಳುಪಾಡ್ದನಗಳಲ್ಲಿ ಎಲ್ಲಿಯೂ ಕೂಡ ಮಾಂಗಲ್ಯಧಾರಣೆಯ ಪ್ರಸ್ತಾಪ ಕಂಡುಬಂದಿಲ್ಲ. ಪ್ರಾಚೀನ ತುಳುವರಲ್ಲಿ ಮಂಗಲಸೂತ್ರದ ಕಲ್ಪನೆ ಇರಲಿಲ್ಲ ಎಂದು ಇದರಿಂದ ತಿಳಿದುಬರುತ್ತದೆ.
2 ಬುಡುದಾರೆ ಮದುವೆ (ಕೈ ಪತ್ತವುನು ಮದಿಮೆ)
ತುಳುನಾಡಿನಲ್ಲಿ ಗಂಡ ಸತ್ತ ಹೆಣ್ಣಿಗೆ ಅಥವಾ ಗಂಡನಿಂದ ಬೇರೆಯಾದ ಹೆಣ್ಣಿಗೆ ಎರಡನೆಯ ಮದುವೆಯ ಹಕ್ಕಿದೆ. ಮೊದಲ ಮದುವೆಯನ್ನು ಕೈಧಾರೆ ಎಂದು ಹೇಳಿದರೆ, ಎರಡನೆಯ ಮದುವೆಯನ್ನು ಬುಡುಧಾರೆ ಎಂದು ಹೇಳುತ್ತಾರೆ. ಈ ಮದುವೆಯನ್ನು ಕೈ ಪತ್ತವುನು ಅಂದರೆ ಕೈ ಹಿಡಿಯುವುದು ಎಂದು ಹೆಚ್ಚಾಗಿ ಹೇಳುತ್ತಾರೆ. ಈ ಮದುವೆ ಬಹಳ ಸರಳವಾಗಿರುತ್ತದೆ. ಈ ಮದುವೆಯನ್ನು ರಾತ್ರಿಯ ಹೊತ್ತಿನಲ್ಲೇ ಮಾಡುತ್ತಾರೆ. ರಾತ್ರಿಯ ಹೊತ್ತು ಹೆಣ್ಣಿನ ಮನೆಗೆ ದಿಬ್ಬಣ ಹೋಗಿ ಒಂದು ಸೀರೆಯನ್ನು ಅಡ್ಡವಾಗಿ ಹಿಡಿಯುತ್ತಾರೆ. ಸೀರೆಯ ಒಂದು ಬದಿಯಲ್ಲಿ ಗಂಡು, ಇನ್ನೊಂದು ಬದಿಯಲ್ಲಿ ಹೆಣ್ಣನ್ನು ನಿಲ್ಲಿಸಿ ಗುರಿಕಾರರು ಕೈ ಕೈ ಹಿಡಿಸುತ್ತಾರೆ.
ಸಿರಿಯು ಕೊಡ್ಸರಾಳ್ವನನ್ನು ಮರುವಿವಾಹವಾಗುವ ಕಥಾನಕ ಸತ್ಯನಾಪುರದ ಸಿರಿಪಾಡ್ದನದಲ್ಲಿದೆ.
ರಡ್ಡು ದಿನ ಕರಿದ್ ಮೂಜಿ ದಿನೊಟು ಕೊಟ್ರಾಡಿ ಗುತ್ತು ಕೊಡ್ಸರಾಳ್ವೆರ
ಮದಿಮಾಯ ಆಯಿತ ಸಿಂಗಾರ ಆವೊಂದು
ಬೋಳ ಮಲ್ಲಿಗೆಗ್ ಜತ್ತ್ ಪಯಣ ಪತ್ತೊಂಡೆರ್
ಕೊಡ್ಸರಾಳ್ವೆರೆಗ್ ಬಹು ಬಿರ್ದ್‍ದ ತಮ್ಮನ ಬಲಿಮನ ಮನ್ತೆರ್
ಸತ್ಯಮಾಲೋಕಂದ ಬಾಲೆಕ್ಕೆ ಸಿರಿನ್ ಮದಿಮೆ ಮಂಗಲ ಮನ್ತ್‍ದ್
ಪೊನ್ನು ಒಟ್ಟಿದ್ ಕೊರ್ದು ಎಡ್ದೆ ವರ ಕೊರ್ದು
ದಿಬ್ಬಣ ಜಪುಡಿಯೆರ್ ಬೋಳಮಲ್ಲಿಗೆ ಚತ್ತಲು
(ಎರಡು ಮೂರು ದಿನಗಳಲ್ಲಿ ಕೊಟ್ರಾಡಿ ಗುತ್ತು ಕೊಡ್ಸರಾಳ್ವರು
ಮದುಮಗನ ಅಲಂಕಾರ ಮಾಡಿಕೊಂಡು
ಬೋಳಮಲ್ಲಿಗೆಗೆ ಇಳಿದು ಪ್ರಯಾಣ ಮಾಡಿದರು
ಕೊಡ್ಸರಾಳ್ವರಿಗೆ ಬಹಳ ವೈಭವ ಸಮ್ಮಾನ ಮಾಡಿದರು
ಸತ್ಯನಾಪುರದ ಬಾಲೆಕ್ಕೆ ಸಿರಿಯನ್ನು ಮದುವೆ ಮಾಡಿ
ಹೆಣ್ಣೊಪ್ಪಿಸಿ ಕೊಟ್ಟರು ಒಳ್ಳೆ ವರ ಕೊಟ್ಟು
ದಿಬ್ಬಣ ಇಳಿಸಿದರು ಬೋಳಮಲ್ಲಿಗೆ ಅರಸರು)
ಇಲ್ಲಿ ಸಿರಿಗೆ ಮರು ಮದುವೆ ಮಾಡಿಸಿದ್ದರ ವರ್ಣನೆ ಇದೆ
ಕುಲೆ ಮದಿಮೆ/ ಗತಿಸಿದ ಆತ್ಮಗಳ ಮದುವೆ
ಇದು ಗತಿಸಿದ ಆತ್ಮಗಳ ನಡುವೆ ನಡೆಸುವ ಮದುವೆ ಆಗಿದೆ
ಕೈ ಧಾರೆ ಮದುವೆಯ ಎಲ್ಲ ಪದ್ಧತಿ ಗಳೂ ಇದರಲ್ಲಿ ಇರುತ್ತದೆ.ಮದುವೆಗೆ ಮೊದಲು ಸತ್ತ ಹೆಣ್ಣಿಗೂ ಗಂಡಿಗೂ ಕುಲ ಗೋತ್ರ ಅನುಸಾರವಾಗಿ ಲಗ್ನ ನಿಶ್ಚಯ ಆಗುತ್ತದೆ
ಕುಲೆ ಮದಿಮೆ
ಕೈ ಧಾರೆ ಮದುವೆಯ ಎಲ್ಲ ಪದ್ಧತಿ ಗಳೂ ಇದರಲ್ಲಿ ಇರುತ್ತದೆ.ಮದುವೆಗೆ ಮೊದಲು ಸತ್ತ ಹೆಣ್ಣಿಗೂ ಗಂಡಿಗೂ ಕುಲ ಗೋತ್ರ ಅನುಸಾರವಾಗಿ ಲಗ್ನ ನಿಶ್ಚಯ ಆಗುತ್ತದೆ
ಮದು ಮಗ ಮದು ಮಗಳ ಬದಲಿಗೆ ಹಿಂಗಾರವನ್ನು ಇರಿಸುತ್ತಾರೆ. ಬಾಳೆ ಎಲೆ ಅಡಿಕೆ ತೆಂಗಿನಕಾಯಿ ಕಾಯಿ ಇರಿಸಿಯೂ ಮಾಡುತ್ತಾರೆ
ಕೆಲವೆಡೆ ಬಾಳೆ ಕಂಬವನ್ನು ಇರಿಸುವುದೂ ಇದೆ.
ಬಾಳೆ ಕಂಬಕ್ಕೆ ವಧು ವರರ ಅಲಂಕಾರ ಮಾಡಿ ಹಾರ ಹಾಕಿ ಧಾರೆ ಎರೆದು ಮಂಗಲ ಸೂತ್ರವನ್ನು ಕಟ್ಟುತ್ತಾರೆ.
ಸೊನ್ನೆ ಮತ್ತು ಗುರುಮಾರ್ಲರ ಅವಳಿ ಮಕ್ಕಳಾದ ಅಬ್ಬಗ ದಾರಗೆಯರು ವಿವಾಹ ಪೂರ್ವದಲ್ಲಿ ಸಾವನ್ನಪ್ಪಿರುತ್ತಾರೆ.ಇವರಿಗೆ ಇವರಂತೆಯೇ ಅವಳಿಗಾಗಿ ಹುಟ್ಟಿ ವಿವಾಹ ಪೂರ್ವದಲ್ಲಿ ಸಾವನ್ನಪ್ಪಿದ ಇಬ್ಬರನ್ನು ಹುಡುಕಿ ಮರಣೋತ್ತರ ವಿವಾಹ/ ಕುಲೆ ಮದುವೆ ಮಾಡಿಸಿದ್ದರ ಉಲ್ಲೇಖ ಸಿರಿ ಪಾಡ್ದನದಲ್ಲಿದೆ
ಇದನ್ನು ಮೂಢನಂಬಿಕೆ ಎಂದು ಹೇಳುವವರೂ ಇದ್ದಾರೆ.ಯಾವುದನ್ನು ನಂಬಿಕೆ, ಮೂಢನಂಬಿಕೆ ಎನ್ನುವುದು.ಗತಿಸಿದ ಆತ್ಮಗಳಿಗೆ ಅಂತ್ಯೇಷ್ಟಿ ಸಂಸ್ಕಾರ ಎಲ್ಲ ಜಾತಿ ಧರ್ಮಗಳಲ್ಲೂ ಅವರದ್ದೇ ಆದ ವಿಧಾನದಲ್ಲಿ ಇದೆ.ಹಾಗೆಯೇ ಇದೂ ಕೂಡ ಒಂದು.
ಎಲ್ಲವೂ ಅವರವರ ಭಾವಕ್ಕೆ ನಂಬಿಕೆಗೆ ಬಿಟ್ಟದ್ದು.
ಕುಲೆ ಮದಿಮೆ ಚಿತ್ರ ಕೃಪೆ ನಮ್ಮ ಬಂಟ್ವಾಳ
0 Followers
0 Following