ಕೋಟೆರಾಯ

ದೈವತ್ವ ಪಡೆದ ಕುಂದಾಪುರದ ಐತಿಹಾಸಿಕ ವೀರ ಕೋಟೇಶ್ವರ ನಾಯಕ

ProfileImg
22 Jun '24
4 min read


image

ಅರಸಮ್ಮನ ಕಾನು ಸಮೀಪದ ಬೆಟ್ಟದಲ್ಲಿ ಪತ್ತೆಯಾದ ಕೋಟೆರಾಯನ ಮೂಲ ಸ್ಥಾನ 

 

ಕುಂದಾಪುರ ಸುತ್ತ ಮುತ್ತ ಕೋಟೆರಾಯ ಎಂಬ ದೈವಕ್ಕೆ ಆರಾಧನೆ ಇದೆ.ಮಡಾಮಕ್ಕಿ ವೀರಭದ್ರ ದೇವಸ್ಥಾನದ ಪ್ರಧಾನ ದೈವ ಈತ .ಅಲ್ಲಿ ನಿಧಿಯನ್ನು ಕಾಯುವ ಕಾರ್ಯ ಈತನದು.ಈ ದೈವದ ವೃತ್ತಾಂತದಲ್ಲಿ ಇತಿಹಾಸದ ಎಳೆಗಳು ಅಡಕವಾಗಿವೆ .

ಪ್ರಚಲಿತ ಐತಿಹ್ಯದಂತೆ 1200 ವರ್ಷಗಳ ಹಿಂದೆ ಈ ಪರಿಸರವನ್ನು ಕೋಟೆರಾಯ / ಕೋಟೇಶ್ವರ ರಾಯ ಎಂಬ ಅರಸ ಆಳುತ್ತಿದ್ದ ...
ಉಡುಪಿ ಕುಂದಾಪುರ ಕಡೆ ಕೋಟೆರಾಯ  ದೈವಸ್ಥಾನಗಳು ಇವೆ .ಇಲ್ಲಿ ಈತನಿಗೆ ನೇಮ ಕೊಟ್ಟು ಆರಾಧಿಸುತ್ತಾರೆ .

ಅರಸಮ್ಮನ ಕಾನು ಸಮೀಪದ ಬೆಟ್ಟದಲ್ಲಿ ಕೋಟೆರಾಯನ ಮೂಲ ಸ್ಥಳ ಪತ್ತೆಯಾಗಿದೆ ಅಲ್ಲಿ ಈತ ಲಿಂಗ ರೂಪಿಯಾಗಿ ನೆಲೆ ನಿಂತಿದ್ದಾನೆ.

.ಕೋಟೆರಾಯನಿಗೆ  ಡಕ್ಕೆ ಬಲಿಯಲ್ಲಿ  ಆರಾಧನೆ ಇದೆ .ಕೋಟೆರಾಯನ ಕುರಿತಾಗಿ ಡಕ್ಕೆ ಬಲಿಯಲ್ಲಿ ವೈದ್ಯರು ಹೇಳುವ ಹಾಡುಗಳಲ್ಲಿ ಈ ರೀತಿಯ ಕಥಾನಕವಿದೆ

ಕುಂದಾಪುರ ಸುತ್ತ ಮುತ್ತ ಕೋಟೆರಾಯ ಎಂಬ ದೈವಕ್ಕೆ ಆರಾಧನೆ ಇದೆ.ಮಡಾಮಕ್ಕಿ ವೀರಭದ್ರ ದೇವಸ್ಥಾನದ ಪ್ರಧಾನ ದೈವ ಈತ .ಅಲ್ಲಿ ನಿಧಿಯನ್ನು ಕಾಯುವ ಕಾರ್ಯ ಈತನದು.
ಪ್ರಚಲಿತ ಐತಿಹ್ಯದಂತೆ 1200 ವರ್ಷಗಳ ಹಿಂದೆ ಈ ಪರಿಸರವನ್ನು ಕೋಟೆರಾಯ ಎಂಬ ಅರಸ ಆಳುತ್ತಿದ್ದ ,ಶತ್ರುಗಳ ಹುನ್ನಾರಕ್ಕೆ ಸಿಕ್ಕಿದ ಈತ ದುರಂತವನ್ನಪ್ಪಿ ರುದ್ರನ ಅನುಗ್ರಹದಿಂದ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ.
 ಉಡುಪಿ ಕುಂದಾಪುರ ಕಡೆ ಕೋಟೆರಾಯ  ದೈವಸ್ಥಾನಗಳು ಇವೆ .ಇಲ್ಲಿ ಈತನಿಗೆ ನೇಮ ಕೊಟ್ಟು ಆರಾಧಿಸುತ್ತಾರೆ .
ಅರಸಮ್ಮನ ಕಾನು ಸಮೀಪದ ಬೆಟ್ಟದಲ್ಲಿ ಕೋಟೆರಾಯನ ಮೂಲ ಸ್ಥಳ ಪತ್ತೆಯಾಗಿದೆ ಅಲ್ಲಿ ಈತ ಲಿಂಗ ರೂಪಿಯಾಗಿ ನೆಲೆ ನಿಂತಿದ್ದಾನೆ.
.ಕೋಟೆರಾಯನಿಗೆ  ಡಕ್ಕೆ ಬಲಿಯಲ್ಲಿ  ಆರಾಧನೆ ಇದೆ .ಕೋಟೆರಾಯನ ಕುರಿತಾಗಿ ಡಕ್ಕೆ ಬಲಿಯಲ್ಲಿ ವೈದ್ಯರು ಹೇಳುವ ಹಾಡುಗಳಲ್ಲಿ ಈ ರೀತಿಯ ಕಥಾನಕವಿದೆ.
ಕಲಿಯುಗದ ಆರಂಭದಲ್ಲಿ ಕೋಟೆತುರ ಎಂಬ ಸ್ಥಳದಲ್ಲಿ ಬ್ರಹ್ಮರಾಯನೆಂಬಾತ ಧರ್ಮದಿಂದ ರಾಜ್ಯವಾಳುತಲಿದ್ದನು. ಬ್ರಹ್ಮರಾಯ-ಚಂದ್ರಮುಖಿ ದಂಪತಿಗಳಿಗೆ ಪುತ್ರ ಸಂತಾನವಿರುವುದಿಲ್ಲ. ಈ ಬಗ್ಗೆ ಚಂದ್ರಮುಖಿ ದುಃಖಿಸಲು ಬ್ರಹ್ಮರಾಯ ತಪಸ್ಸನ್ನಾಚರಿಸಿ ಶ್ರೀಹರಿಯನ್ನು ಮೆಚ್ಚಿಸಿ ವರ ಪಡೆಯಲು ನಿರ್ಧರಿಸುತ್ತಾನೆ. ಅನಂತರ ರಾಜ್ಯ ಉಸ್ತುವಾರಿಯನ್ನು ಮಂತ್ರಿಗಳಿಗೆ ವಹಿಸಿ ಘೋರಾರಣ್ಯದಲ್ಲಿ ಮಡದಿಯೊಂದಿಗೆ ನಿಷ್ಠೆಯಿಂದ ತಪವನ್ನಾಚರಿಸುತ್ತಾನೆ. ಅವನ ನಿಷ್ಠೆಗೆ ಒಲಿದ ಪಶುಪತಿ ಪುತ್ರಸಂತಾನದ ವರವನ್ನು ಕೊಡುತ್ತಾನೆ. ಅನಂತರ ಹತ್ತನೆ ತಿಂಗಳಿನಲ್ಲಿ ಬ್ರಹ್ಮರಾಯನ ಮಡದಿ ಚಂದ್ರಮುಖಿ ಗಂಡುಮಗುವಿಗೆ ಜನ್ಮ ಕೊಡುತ್ತಾಳೆ. ಆ ಮಗುವಿಗೆ ಕೋಟೆರಾಯ ಎಂದು ಹೆಸರಿಡುತ್ತಾರೆ. ಸರ್ವವಿದ್ಯೆಗಳಲ್ಲೂ ಪಾರಂಗತನಾಗುತ್ತಾನೆ ಕೋಟೆರಾಯ. ಬ್ರಹ್ಮರಾಯನಿಗೆ ಮುಪ್ಪು ಆವರಿಸಲು ಮಗ ಕೋಟೆರಾಯನಿಗೆ ಕೋಟೆತುರದ ಪಟ್ಟವನ್ನು ಕಟ್ಟುತ್ತಾನೆ. ಬ್ರಹ್ಮರಾಯನ ಮರಣಾನಂತರ ಕೋಟೆರಾಯ ದಿಗ್ವಿಜಯಕ್ಕೆ ಹೊರಡುತ್ತಾನೆ. ಅಗಣಿತ ಸೈನ್ಯವನ್ನು ಸೇರಿಸಿಕೊಂಡು, ಹಾರುಕುದ್ರೆ ಏರಿಕೊಂಡು ಕಾರ್ಕಳಕ್ಕೆ ತೆರಳಿ, ಊರ ಕೋಟೆಯ ಹೊಕ್ಕು ಮುರಿದು ಬೈರ್‍ಸೂಡನ ಕಪ್ಪವನ್ನು ಪಡೆಯುತ್ತಾನೆ. ಬಾರ್ಕೂರಿಗೆ ತೆರಳಲು ಇವನ ಸಾಹಸಕ್ಕೆ ಹೆದರಿ ಬದ್ದಪ್ ಕಪ್ಪಕಾಣಿಕೆ ಕೊಡುತ್ತಾನೆ. ಹೀಗೆ ಕದ್ರಿ, ಕಾಲ್ ತೋಡು, ಭಟ್ಕಳ, ಕೊಲ್ಲೂರು, ಮೊದಲಾದ ಪ್ರದೇಶಗಳನ್ನು ಗೆದ್ದು ಕಪ್ಪಕಾಣಿಕೆಗಳನ್ನು ಪಡೆದುಕೊಳ್ಳುತ್ತಾನೆ. ಅನಂತರ ಅರಮನೆಗೆ ಬಂದು ಭಯವಿಲ್ಲದ ರಾಜ್ಯವಾಳುತ್ತಿದ್ದನು. ಆಗ ಇಜಪುರ (ವಿಜಾಪುರ) ಸೀಮೆಯ ಪಾಚ್ಚವನು ಎಂಬ ರಾಜ ಕೋಟೆರಾಯನ ದಿಗ್ವಿಜಯದ ಸಾಹಸದ ವಾರ್ತೆ ಕೇಳಿ ಅವನನ್ನು ಸದೆಬಡಿಯಬೇಕೆಂದು ಯುದ್ಧಕ್ಕೆ ಬರುತ್ತಾನೆ. ದೂತರ ಮೂಲಕ ಕೋಟೆರಾಯನಿಗೆ ಕಪ್ಪ ಕಾಣಿಕೆ ಸಲ್ಲಿಸುವಂತೆ ಇಲ್ಲವೇ ಯುದ್ಧಕ್ಕೆ ಬರುವೆನೆಂದು ದೂತನಲ್ಲಿ ಹೇಳುತ್ತಾನೆ ಕೋಟೆರಾಯ. ಘೋರ ಯುದ್ಧ ನಡೆಯುತ್ತದೆ. ಕೋಟೆರಾಯನ ಪರಾಕ್ರಮದೆದುರು ನಿಲ್ಲಲು ಸಾಧ್ಯವಾಗದೆ ಪಾಶ್ಚವನು ಓಡಿ ಹೋಗುತ್ತಾನೆ. ಕೋಟೆರಾಯ ಪಾಶ್ಚವನ್ನುವ ಸೋಲಿಸಿದ ನಂತರ, ತನ್ನ ರಾಜ್ಯವನ್ನು ಧರ್ಮದಿಂದ ಆಳುತ್ತಾ ಇದ್ದ. ಆಗ ಕೋಟೆರಾಯನನ್ನು ಸೋಲಿಸುವುದಕ್ಕಾಗಿ ಅಡ್ಡದಾರಿಯನ್ನು ಹಿಡಿಯುವ ಪಾಶ್ಚವನು ಬೀಸ್ಹಗ್ಗ ಹೊೈನೇಣ ತೆಗೆದುಕೊಂಡು, ಮೋಸದಿಂದ ಕಟ್ಟಿ ಹಿಡಿಯುತ್ತಾನೆ. ಆಗ ಕೋಟೆರಾಯ ಪಾಶ್ಚವನ ವಶನಾಗಲಾರೆನೆಂದು ಮಾಯವಾಗುತ್ತಾನೆ. ಘೋರ ದೈವಿಕತೆಯನ್ನು ಪಡೆದು ರಣಜಟ್ಟಿಗನ ಜೊತೆಗೂಡಿಕೊಂಡು ದಂಡಿನೊಂದಿಗೆ ಮುತ್ತಿಗೆ ಹಾಕುತ್ತಿದ್ದನು. ಆನೆ ಕುದುರೆಗಳನ್ನು ಹೊಡೆಯುತ್ತಿದ್ದನು. ಸೇನೆಯನ್ನು ಆನೆ ಕುದುರೆಗಳನ್ನು ಮಾಯ ಮಾಡುತ್ತಿದ್ದನು. ಇಜಪುರಕ್ಕೆ ತೊಂದರೆ ಕೊಡುತ್ತಿದ್ದನು. ಪ್ರಶ್ನೆ ಇಟ್ಟು ನೋಡುವಾಗ ಇದು ಕೋಟೆರಾಯನ ತಂಟೆಯೆಂದು ಕಂಡು ಬರಲು ಹೊನ್ನಪೀಠ ತಂದು ಕೋಟೆರಾಯನನ್ನು ಸ್ಥಾಪಿಸಿ, ಕಪ್ಪಕಾಣಿಕೆಯಿಟ್ಟು ಪೂಜಿಸುತ್ತಾನೆ ಪಾಶ್ಚವ. ಕೋಟೆತುರದವರ ಪೂಜೆ ಭೋಗ ಸಾಲದೆಂದೂ ಉತ್ತರದಲ್ಲಿ ಅನೇಕ ಸ್ಥಳಮನೆ ಕಟ್ಟಿಸಿಕೊಳ್ಳುತ್ತಾನೆ ಕೋಟೆರಾಯ. ಈ ಕೋಟೆರಾಯ ಮಂಡ್ಲಭೋಗಕ್ಕೆ ಬಂದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ.ಮಂಚಿ ಯಲ್ಲಿ ಕೋಟೆದಾರ್ ಎಂಬ ದೈವತಕ್ಕೆ ಆರಾಧನೆ ಇದೆ .
  ಕೋಟೆರಾಯನ ಕಥಾನಕದಲ್ಲಿ ಇತಿಹಾಸದ ಎಳೆಗಳು ಅಡಗಿವೆ.ಇಲ್ಲಿ ವಿಜಾಪುರದ ಪಾಶ್ಚವ ಅರಸನ ದಾಳಿಯ ಪ್ರಸ್ತಾಪವಿದೆ 

 

ಮಂಚಿಯಲ್ಲಿ ಕೋಟೆಬಾರ್ ಎಂಬ ದೈವಕ್ಕೆ ಆರಾಧನೆ ಇದೆ. 

ಕೋಟೆರಾಯನ ಕಥಾನಕದಲ್ಲಿ ಇತಿಹಾಸಮ ಎಳೆಗಳ ಸಿದ್ಧಿಯಾಗುತ್ತವೆ. ಅಡಗಿವೆ. ಇಲ್ಲಿ ವಿಜಾಪುರದ ಪಾಶ್ವವ ಅರಸನ ದಾಳಿಯ ಪ್ರಸ್ತಾಪವಿದೆ.

ಕೋಟೇಶ್ವರರಾಯ ಎಂಬ ವೀರನಿದ್ದ ಬಗ್ಗೆ ಇತಿಹಾಸದಲ್ಲಿ ದಾಖಲೆಗಳಿವೆ. ವಿಜಯ ನಗರ ಅದನ ಆಣತಿಯಂತೆ ತಿಮ್ಮಪ್ಪವೊಡೆಯನು ಹೊನ್ನಾವರದಿಂದ ಹೈವೆ, ತುಳು ಕೊಂಕಣ ರಾಜ್ಯವನ್ನು ನೋಡಿಕೊಳ್ಳುತ್ತಿದ್ದನು. ಆಗ ಹೊನ್ನಾವರದ ಸಮೀಪದ ಕಾಸರಕೋಡಿನ ಹಂಜಮಾನರ ನಾಯಕ ಉಮ್ಮರ ಮರಕಲನು ತಿಮ್ಮಪ್ಪವೊಡೆಯನ ವಿರುದ್ಧ ನಿಲ್ಲುತ್ತಾನೆ. ಉಮ್ಮರ ಮರಕಲನು ನಗಿರೆಯ ಸಂಗಿರಾಯನ ಸಹಾಯವನ್ನು ಕೇಳುತ್ತಾನೆ. ಆಗ ಕೋಟ ಶ್ವರ ನಾಯಕನ ನಾಯಕತ್ವದಲ್ಲಿ ಸಾವಿರ ಸೈನಿಕರನ್ನು ನಗಿರೆಯ ಸಂಗಿರಾಯ ಕಳುಹಿಸಿಕೊಡುತ್ತಾನೆ. ಆದರೆ ಅಷ್ಟರೊಳಗೆ ತಿಮ್ಮಪ್ಪ ವೊಡೆಯನು ಮೋಸದಿ ಕಾಸರಗೋಡನ್ನು ಮುತ್ತಿ ಉಮ್ಮರ ಮರಕಲ ಮೊದಲಾದ ಹಂಜಮಾನವರ ಹೆಣ್ಣು ಮಕ್ಕಳಗೆ ಹೊಂದರೆ ಕೊಡುತ್ತಾನೆ. ಆಗ ಸಿಟ್ಟಿಗೆದ್ದ ಕೋಟೇಶ್ವರ ನಾಯಕನು ಯುದ್ಧಮಾಡಿ ಹಂಜಮಾನದವರನ್ನು ರಕ್ಷಿಸಿ ಸುರ ್ಷಿತ  ಸ್ಥಳಕ್ಕೆ ದೋಣಿಗಳ ಮೂಲಕ ಕಳುಹಿಸಿಕೊಡುತ್ತಾನೆ. ಈ ಭೀಕರ ಯುದ್ಧದಲ್ಲಿ, ಕೋಟೇಶ್ವರ ನಾಯಕನು ರಾಜಗುರು ರೇವಣ್ಣ ನಾಯಕರನ್ನು  ಕೆಡಹಿ, ಮುಂದೆ ನುಗ್ಗಿ ತನಗೆ ಇದಿರಾದ 'ಮೂರು ಚಾವಡಿಯ ವೀರಭಟ'ರನ್ನು ಓಡಿಸಿ ಧರಣಿಗೆ ಬಿದ್ದು ವೀರಸ್ವರ್ಗವನ್ನು ಪಡೆದನು ಎಂದು ಸಂಗಿರಾಯನ ಕಾಲದ ಕ್ರಿ.ಶ. 1472 ಕಾಯ್ಕಿಣಿಯ ಶಾಸನವು ವಿವರಿಸುತ್ತದೆ. ಈತ ಕೋಟೇರಶ್ವರಾಯ, ಕೋಟೇಶುರಾಯ, ಕೋಟೇತುರಾಯ ಎಂಬ ಹೆಸರಿಲ್ಲಿ ಆರಾಧಿಸಲ್ಪಡುತ್ತಾನೆ ಕೋಟೆರಾಯ ಮತ್ತು ಕೋಟೇಶ್ವರ ರಾಯ ಒಬ್ಬನೆಯಾ ಬೇರೆ ಬೇರೆಯಾ ಎಂಬ ಬಗ್ಗೆ  ಇದಮಿತ್ಥಂ ಮಾಹಿತಿ ಲಭ್ಯವಿಲ್ಲ. ಆದರೂ ಕೋಟೇತುರಾಯನ ಹೊಗಳಿಕೆಯಲ್ಲಿ  ವಿಜಯ ನಗರ ಈಜಾನಗರದ ಪಾಶ್ಚವ ಅರಸನ ಉಲ್ಲೇಖ ಇರುವ ಕಾರಣ ಇವರಿಬ್ಬರೂ ಒಂದೇ ಆಗಿರುವ ಸಾಧ್ಯತೆ ಇದೆ ಈ ಬಗ್ಗೆ ಸಮಗ್ರ ಅಧ್ಯಯನದ ಅಗತ್ಯವಿದೆ 

ತುಳುನಾಡಿನಲ್ಲಿ ಯಾರು ಯಾವಾಗ ಹೇಗೆ ದೈವತ್ವವನ್ನು ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ‌

ಸಾಮಾನ್ಯವಾಗಿ ಅತಿಮಾನುಷ ವೀರರು ಕಾರಣಾಂತರಗಳಿಂದ ದುರಂತವನ್ನಪ್ಪಿ ದೈ ವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ.

ಕೋಟಿ ಚೆನ್ನಯ್ಯ ಕಾನದ ಕಟದ ,ಎಣ್ಮೂರ ದೆಯ್ಯು ,ಕೇಲತ್ತ ಪೆರ್ನೆ, ಮುದ್ದ,ಕಳಲ ,ಕಾಂತಾಬಾರೆ ಬೂದಾಬಾರೆ ಮೊದಲಾದವರು ಅತಿ ಮಾನುಷ ಸಾಹಸಿಗಳಾಗಿದ್ದವರು 

ಕೆಳದಿಯ ಅರಸ ಬಸಪ್ಪ ನಾಯಕ,ಕೆಳದಿಯ ಮಾಂಡಳಿಕ ತಿಮ್ಮಪ್ಪ ನಾಯಕ ಸೇರಿದಂತೆ ಅನೇಕ ವೀರರು ಕಾರಣಾಂತರಗಳಿಂದ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ 

ಅಂತೆಯೇ ಯುದ್ದದ ್ಲಿ  ದುರಂತ ವನ್ನಪ್ಪಿದ ಕೋಟೇ ಶ್ವರ ನಾಯಕ ಕೂಡ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಿರಬಹುದು 

Copy rights reserved 
ಅಧಾರ ಗ್ರಂಥಗಳು 
1 ವೈದ್ಯರ ಹಾಡುಗಳು ಸಂ-ಎ ವಿ ನಾವಡ
2 ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ :ಡಾ.ಲಕ್ಷ್ಮೀ ಜಿ ಪ್ರಸಾದ
3 ಕರಾವಳಿಯ ಸಾವಿರದೊಂದು ದೈವಗಳು.ಡಾ.ಲಕ್ಷ್ಮೀ ಜಿ ಪ್ರಸಾದ, ಮೊಬೈಲ್ 9480516684

ಸಾಂಕೇತಿಕ ಚಿತ್ರ ಕೃಪೆ ಅಂತರ್ಜಾಲ 

ಈ ಬರಹದ ಬಗ್ಗೆ ಪ್ರತಿಕ್ರಿಯೆ ಯಲ್ಲಿ ವಿದ್ವಾಂಸರಾದ ಡಾ.ಕೆ ಜಿ ವೆಂಕಟೇಶ್ ಅವರು ನೀಡಿದ ಅಭಿಪ್ರಾಯ ಇಲ್ಲಿದೆ 

ಕೋಟೆರಾಯ ಮತ್ತು ವಿಜಯನಗರದ ಸಂಬಂಧವನ್ನು ಮತ್ತು ಕೋಟೆ ರಾಯನ ಕಾಳಗದ ಪರಿಯನ್ನು ನೋಡಿದರೆ ಕೆಳದಿ ಸಂಸ್ಥಾನದಿಂದ ಕಾಸರಗೋಡಿನ ಬೇಕಲ್ವರೆಗೆ ಹೋಗಿ ಅಲ್ಲಿ ಕೋಟೆಯನ್ನು ರಕ್ಷಣೆ ಮಾಡುತ್ತಿದ್ದ ಹಾಗೂ ಕೋಟೆಯಲ್ಲಿ ಸತಿ ಹೊಂದಿದ ಸೀತಮ್ಮ ಅಥವಾ ಸಿದ್ದಮ್ಮ ಕೋಟೆ ಕ್ಷತ್ರಿಯರಾಗಿದ್ದು ಕೋಟೆ ರಾಯಣ್ಣ ಕೂಡ ಇದೇ ಪಂಗಡಕ್ಕೆ ಸೇರಿದ ವ್ಯಕ್ತಿಯಾಗಿರಬಹುದು ಏಕೆಂದರೆ ಇಂದಿಗೂ ಕುಂದಾಪುರದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ಜಾತಿ ಎಂದರೆ ಕೋಟೆಗಾರ ಅಥವಾ ರಾಮಕ್ಷತ್ರಿಯರು ಈ ಬಗ್ಗೆ ಆಸಕ್ತರು ಅಧ್ಯಯನ ಮಾಡಬಹುದು ಮತ್ತು ಕುಂದಾಪುರದ ಕಾಡಿನಲ್ಲಿ ಲಿಂಗ ರೂಪದಲ್ಲಿರುವ ಕೋಟೆ ರಾಯನನ್ನು ಈಗ ಯಾರು ಪೂಜಿಸುತ್ತಾರೆ ಎಂಬ ಇತಿಹಾಸವನ್ನು ಆಸಕ್ತರು ಕುಡುಕಬಹುದು.

ಡಾ. ಕೆಜಿ ವೆಂಕಟೇಶ್ ಇತಿಹಾಸ ಸಂಶೋಧಕರು

 

Category:StoriesProfileImg

Written by Aravinda S