ಚಿತ್ರ ಕೃಪೆ :ಧರ್ಮ ದೈವ
ಕೊಡಮಣಿ/ ಕೊಡ ಮಣ್ ಎಂಬ ಜಾಗದಲ್ಲಿ ನೆಲೆಯಾದ ಧರ್ಮ ದೈವ ಕೊಡಮಣಿತ್ತಾಯ/ ಕೊಡಮಂರಾಯ
ಕೊಡಮಣಿ ಬರ್ಕೆಯ ಬಲ್ಲಾಳ ಅರಸು ಕುಂಞಳ್ವ ತುಲಾ ಸಂಕ್ರಮಣದಂದು ತಲ ಕಾವೇರಿಗೆ /ಗಂಗಾ ಮೂಲಕ್ಕೆ ಹೋಗಿ ಹಿಂತಿರುಗುವಾಗ ಒಂದು ದೈವ ಕಾಣಿಸಿಕೊಳ್ಳುತ್ತದೆ .ಯಾರೆಂದು ಕೇಳುವಾಗ ತಾನು ಪೊಸ ಉಳ್ಳಾಯ ಧರ್ಮ ದೈವ ,ನನಗೆ ನೆಲೆ ಕೊಟ್ಟು ನಮ್ಬಿದೆಯಾದರೆ ಸಾವಿರ ವರ್ಷ ಕೂದಲು ಕೊಂಕದಂತೆ ರಕ್ಷಣೆ ಕೊಟ್ಟು ಕೀರ್ತಿಯನ್ನು ತಂದು ಕೊಡುತ್ತೇನೆ ಎಂದು ವಾಗ್ದಾನ ಮಾಡುತ್ತದೆ.ಅಂತೆಯೇ ಅವರ ಆ ದೈವವ ನ್ನು ಸೆರಗಿನಲ್ಲಿ ಕಟ್ಟಿ ಕೊಂಡು ಬಂದು ಕೊಡ ಮಾಣಿ ಬರ್ಕೆಯಲ್ಲಿ ಮಾಡ ಕಟ್ಟಿ ಕೊಟ್ಟು ಆರಾಧಿಸುತ್ತಾರೆ
ಕೊಡಮಣಿತ್ತಾಯ ವೈದ್ಯನಾಥನಾದ ಕಥೆ
ಶಿಬರೂರುಗುತ್ತಿನ ತಿಮ್ಮಣ್ಣ ಕರಿಯಲ್ ಮತ್ತು ತಂಗಡಿ ಬರಿಕೆಯ ದುಗ್ಗಣ್ಣ ಅತಿಕಾರಿ ಅಣ್ಣ ತಮ್ಮಂದಿರು ಅವರು ಇರುವೈಲ್ ಗೆ ಹೋಗಿ ಹರಿಕೆ ಕೊಡಲು ಹೋಗಿ ಹಿಂದೆ ಬರುವಾಗ ಒಂದು ಕೋಳಿ ಮತ್ತು ಕೋಣ ವ ನ್ನು ತರುತ್ತಾರೆ ಒಂದು ಅಶ್ವತ್ತ ಮರಕ್ಕೆ ಕಟ್ಟಿ ಹಾಕಿ ನಡ್ದೊಡಿ ಗುತ್ತಿನಲ್ಲಿ ರಾತ್ರಿ ತಂಗುತ್ತಾರೆ .ಮರುದಿನ ಬೆಳಗ್ಗೆ ನೋಡುವಾಗ ಕೋಳಿ ಮತ್ತು ಕೋಣ ಮಾಯವಾಗುತ್ತದೆ (ಇವರಿಗೆ ಆವೇಶ ಬರುತ್ತದೆ ಎಂದು ಕೂಡಾ ಕಥೆ ಇದೆ )ಇದೇನೆಂದು ಆಲಿವೊಲಿ ನಾಯಿಗನಲ್ಲಿ ಬಲಿಮೆ ಕೇಳಿದಾಗ ಒರಿ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಗಳು ಬಂದಿವೆ ಎಂದು ಗೊತ್ತಾಗುತ್ತದೆ.
““ಇರುವೈಲಾ ದೇವೆರೆ ತಳೊರ್ದು ಒರಿ ಉಳ್ಳಾಯೆ,ಧರ್ಮ ದೈವೋ ಬೈದೆರ್
ಅಕ್ಲೆನ್ ನಂಬೋಡು ಸಾನದಾನೆ ಕಟ್ಟೊಡು ಪನ್ಪೇರಾ
ಸಾನ ಕಟ್ಟೊಡು ಸಾನೊಗು ಕೆಸರು ಕಲ್ಲು ಪಾಡ್ಯರ
ಏರೆನ ಕೈ ಪೊಲಿಪು ಎಡ್ಡೆ ಎಂಡ್ ಕೇನ್ದೆರು
ಆಪನ ಕಾಲೊಡು ಬಾರಿ ಮಗುರುಂದೊಲ್ಲೆರ್
ತುರಿಂಜೆ ಗುತ್ತುಡ್ ತುರಿಂಜೆ ತ್ಯಾಂಪು ಶೆಟ್ತ್ಯಾಲ್ ಯಾ ..”
ಆ ಹೊತ್ತಿನಲ್ಲಿ ಸೂರಿಂಜೆ ಗುತ್ತಿ ನಲ್ಲಿ ವಿಷ ವೈದ್ಯ ಆಗಿದ್ದ ತ್ಯಾಂಪು ಶೆಟ್ರು ಇದ್ದರು.ಅವರಿಗೆ ಓಲೆ ಹೋಗುತ್ತದೆ .ಓಲೆ ಮಾಣಿಯ ಹಿಂದಿನಿಂದ ಬಂದ ತ್ಯಾಂಪು ಶೆಟ್ಟಿಯಾಲ್ ಅಲ್ಲಿ ತನ್ನ ಚೀಲದಿಂದ ವಿಷದ ತೆಗೆಯುವ ಕಲ್ಲನ್ನು ತೆಗೆದು ಧರ್ಮ ದೈವಕ್ಕೆ ಅರಿಕೆ ಮಾಡಿ ಈ ಭೂಮಿ ಇರುವ ವರೆಗೆ ವಿಷಕ್ಕೆ ವೈದ್ಯನಾಥನಾಗಿ ನೀನು ತಿಬಾರು ಗುತ್ತಿನಲ್ಲಿ ಇರಬೇಕೆಂದು ಹೇಳಿ ವಿಷ ತೆಗೆಯುವ ಕಲ್ಲನ್ನು ಸತ್ಯದ ಭಾವಿಗೆ ಹಾಕುತ್ತಾರೆ .ಹೀಗೆ ಇರುವೈಲ್ ನಿಂದ ಬಂದ ಕೊಡ ಮಣಿತ್ತಾಯ ದೈವ ವೈದ್ಯನಾಥನಾಗಿ ನೆಲೆ ನಿಲ್ಲುತ್ತದೆ .
ಧರ್ಮ ದೈವೋಡ ಅರಿಕೆ ದಾನೇ ಮಲ್ಪುವೇರಾ..
ಉದಿಪುರ್ದು ಅಸ್ತಮಾನ ಮುಟ್ಟೋಗ್ ಇಸಕ್ಕ್ ವೈದ್ಯನಾಥೆ ಆದ್
ಉಪ್ಪುಲ ಪಂಡ್ ದ್ ತಿಬಾರು ಗುತ್ತ್ ದ ಸತ್ಯೋದ ಉಗ್ಗೆಲ್ ಗು ಪಾಡ್ಯೇರಾ..
ಶ್ರೀಕ್ಷೇತ್ರ ಕಟೀಲಿಗೂ ಶಿಬರೂರಿ(ತಿಬಾರ್)ನ ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೂ ಅಭೇದ್ಯ ಸಂಬಂಧವಿದೆ. ವಾರ್ಷಿಕ ಜಾತ್ರೆಯ ಸಂದರ್ಭ ಶ್ರೀ ಕೊಡಮಣಿತ್ತಾಯ ದೈವವು ಕಟೀಲಿಗೆ ಭೇಟಿ ಮಾಡುವಂತಹ ಒಂದು ಸಂಪ್ರದಾಯವಿದೆ. ಇದು ತುಂಬಾ ನಯನಮನೋಹರವಾಗಿರುತ್ತದೆ. ನಾಗನ ಸಹಿತವಾಗಿ ಒಂದು ವಿಶೇಷವಾದ ಸಾನಿಧ್ಯ ಶಿಬರೂರಲ್ಲಿದೆ. ಇವತ್ತು ಅಲ್ಲಿಯ ತೀರ್ಥವನ್ನು ಸ್ವೀಕರಿಸಿದರೆ ಯಾವುದೇ ಸರ್ಪಗಳ ವಿಷ ಪರಿಹಾರ ಆಗುತ್ತದೆಂದು ಪ್ರತ್ಯಕ್ಷ ನಿದರ್ಶನ ಇದೆ. ಅಲ್ಲಿಯ ತೀರ್ಥ ಬಾವಿಯ ಪಾವಿತ್ರ್ಯವನ್ನು ಇವತ್ತಿನವರೆಗೂ ಕಾಪಾಡಿಕೊಂಡು ಬಂದಿದ್ದಾರೆ.
ಕೊಡ ಮಣಿಯ ಬರ್ಕೆಯಲ್ಲಿ ದೈವವನ್ನು ನೆಲೆ ಗೊಳಿಸಿದ ಅರಸು ಕುಂಞಳ್ವ ಎಂದು ಕೂಡಾ ಪಾಠ ಭೇದ ಇದೆ
ಈ ದೈವದ ಬಗ್ಗೆ ಈ ಕಥಾನಕಗಳಿಂದ ಭಿನ್ನವಾದ ಐತಿಹ್ಯ ದೊರೆಯಿತು
ಹರಿದಾಸ ಬಿ ಸಿ ರಾವ್ ಎಂಬ ನಿವೃತ್ತ ಉಪನ್ಯಾಸಕರಾದ ಹಿರಿಯರು ಕೊಡಮಣಿತ್ತಾಯ ಕೂಡಾ ಮೂಲತಃ ಬ್ರಾಹ್ಮಣ ಎಂದು ಹೇಳಿದರು
ಅವರಿಗೆ ಈ ಬಗ್ಗೆ ಮಾಹಿತಿ ಇತ್ತಾದರೂ ಅದನ್ನು ಸ್ಷಪಷ್ಟ ಪಡಿಸಿದವರು ಕೊಡಮಣಿತ್ತಾಯ ದೈವದ ಆರಾಧಕರಾದ ರಾಜಾರಾಮ ಹೆಗ್ಡೆ ಹಾಗೂ ವಸಂತ ಹೆಗ್ಡೆಯವರು ಎಂದವರು ತಿಳಿಸಿದ್ದಾರೆ
ಪ್ರಾಚೀನ ಕಾಲದಲ್ಲಿ ಓರ್ವ ಬ್ರಾಹ್ಮಣ ಸಂತರಿದ್ದರು.ಅವರು ನೂರಾರು ಜನರಿಗೆ ಸಹಾಯ ಹಾಗೂ ಮಾರ್ಗದರ್ಶನ ಮಾಡಿದ್ದರು
ಅವರು ಬರುವಾಗ ಜನರು ಅವರಿಗೆ ಕೋಡೆ ಹಿಡಿಯುಯುತ್ತಿದ್ದರು.ಕುಳಿತುಕೊಳ್ಳಲು ಮಣೆ ಕೊಡುತ್ತಿದ್ದರು.. ಕಾಲಾಂತರದಲ್ಲಿ ಅವರು ದೈವತ್ವವನ್ನು ಪಡೆಯುತ್ತಾರೆ.ಆಗ ಜನರು ಕೊಡೆಮಣೆತ್ತಾರ್ ಕೊಡಮಣಿತ್ತಾಯೆರ್ ಎಂದು ಕರೆದು ಆರಾಧನೆ ಮಾಡಿದರು.ಅವರು ನೆಲೆಸಿದ್ದ ಜಾಗಕ್ಕೆ ಕೊಡೆಮಣೆ ಕೊಡಮಣ್ ಎಂಬ ಹೆಸರು ಬಂತು.ಅವರು ಕೊಡಮಣಿತ್ತಾ ಯ ಎಂಬ ಹೆಸರಿನಲ್ಲಿ ಆರಾಧನೆ ಪಡೆದರು ಎಂಬ ಐತಿಹ್ಯ ಇರುವುದನ್ನು ಹರಿಧಾಸ ಬಿಸಿ ರಾವ್ ತಿಳಿಸಿದ್ದಾರೆ
ಈಗಲೂ ಈ ದೈವ ಪಾತ್ರಿಗೆ ಕೊಡೆ ಹಿಡಿಯುವ ಪದ್ದತಿ ಇದೆ.ಈ ದೈವಕ್ಕೆ ಹಾಲು ಹಣ್ಣು ಮಾತ್ರ ಆಹಾರ ಎಂದು ಅವರು ತಿಳಿಸಿದ್ದಾರೆ
ಈ ಬಗ್ಗೆ ಅಧ್ಯಯನ ನಡೆದರೆ ಹೆ ್ಚಿನ ಮಾಹಿತಿ ಸಿಗ ಬಹುದು
ಡಾ.ಲಕ್ಷೀ ಜಿ ಪ್ರಸಾದ