ಸೀದಾ ಹತ್ನಡೀ ಗಾಡಿ

ಕವನ

ProfileImg
13 Jun '24
1 min read


image

ಸೀದಾ ಹತ್ನಡಿ ಗಾಡಿ!!!
--------------------

ಲೇ ಇಕಿನ‌.......
ನೀ ಶಟಗೊಂಡ ಹೋದಾಗಿನಿಂದ 
ಹಂಚ ಮ್ಯಾಲಿಂದ ಕೆಬರಿ ತಗದ 
ಮೊದಲನೇ ಶೇಪ್ಲೆಸ್ ಕರಕ ದ್ವಾಸಿ 
ಆಗೇತಿ ನನ್ನ ಮುಖಾ !!!

ಹೋಗೋದ ಅಷ್ಟ ಗೊತ್ತ ನಮಗ 
ಬರೋ ಡೇಟ್  ಗೊತ್ತಿಲ್ಲ ಅಂತ 
ಸತ್ತ ಹಂದಿ ಹಂತಾ ಸೂಟ್ಕೇಸ್ 
ಎಳ್ಕೊಂಡ ತೌರ ಮನಿ ಸೇರಿ?

ಇಕಾ ಇದು ಕಡೆ ಲಾಸ್ಟ್ ವಾರ್ನಿಂಗ್ !
ಬರಾಕಿದ್ರ ಸೀದಾ ಬಾ ....
ಅಲ್ಲೆ ಕೂತ್ಗೊಂಡ ಹವಾ ಮಾಡಬ್ಯಾಡಾ
ಮೂರ್ನಾಕ್ ದಿನಾ ಬಿಟ್ಟ ವ್ಯಾಟ್ಸಪ್ ಗೆ
ಉತ್ರಾ ಯಾಕ ಕೊಡ್ತಿ? ಪಾರಿವಾಳರ ಇಟ್ಕೋ! 
ಖೋಡಿ ತಂದೊಂದು !

ಹೊರಗ ಹೋದ್ರ ಹುಳದ್ದ ಕಾಟಾ
ಮನ್ಯಾಗ ಕುಂತ್ರ ಝಳದ್ದ ಕಾಟಾ
ಅವನೌನ ತಲಿ ಕೆಟ್ ಕೆರಾ ಆಗೈತಿ
ನೀನರ ಲಗೂ ಬರ್ತಿ ಅಂದ್ರsssss.....
ಮಂಡ ಮೂಗು ಪುಟ್ಟ ಸ್ವಾಟಿ ತಿವದ ಹೋಗಿ ..!

ಒಂದ ಮಾತ ಬರ್ತೈತಿ ಹೊಕ್ಕೈತಿ
ಹುಚ್ಚಿ,  ಈ ಪರಿ ಶಟಗೊಂತಾರನು ಯಾರರ?
ಆತ್ವಾ ನೀ ಮಾಡಿದ ಅಡಗಿಗೆ‌ ಹೆಸರ ಇಡಲಾರದ
ಬಾಯಿ ಮುಚ್ಗೊಂಡ ತಿಂತೇನಿ
ಈಗರ ಬಾssssss ಲೇ !!!

ನಾಕ ಭಾಂಡೆ ಜೊತಿ ಒಂದ 
ಇಡ್ಲಿ ಸ್ಟ್ಯಾಂಡೂ ತಿಕ್ಕಂದ್ರ ......
ಮೂರ ಹೊತ್ತೂ ಮಾಡಿ ಹಾಕಿ 
ಸಾಕತ್ ನಂಗ ಅಂತ ಕ್ಯಾಕರಿಸಿ ನೋಡ್ತಿಲಾ? 
ಆತ್ ಇನ್ಮ್ಯಾಲಿಂದ ಇಬ್ರೂ 
ಹಾಫಾಫ್ ಕೆಲಸ ಮಾಡೂಣು
ಯಾಕಂದ್ರ ನೀ ನನ್ನ ಬೆಟರ್ ಹಾಫು ..
ನಿನ್ನ ಮದುವ್ಯಾದ ನಾ ಅಂತ್ರೂ 
ಮೊದಲ ಹಾಫುssssss !

ಏನsss ಇರಲಿ.. ನಾ ನಿಂಗ್ ಬೇಕಿದ್ರ 
ಸೀದಾ ಹತ್ತ  ನಡಿ ನಮ್ಮೂರ ಗಾಡಿ ...! 
ಫೋನ್ ಮಾಡಿ ಬಾರಾ ಮತ್ತ....
ದೋಸ್ತರ ಕೂಟ ಇದ್ದ ಮನಿ ರಂದ್ಯಾಗೈತಿ ... 
ಮೂಲಿ ಮೂಲಿ ಸ್ವಚ್ಛ ಮಾಡಿ ಇಡತೇನಿ..! 
ಹೌಹಾರಿ ಮತ್ತ ಶಟಗೋಬ್ಯಾಡಾ ಈ ಬಾರಿ ! 
ಬರ್ತಿ ಹೌದಲ್ ಮತ್ತ ........?

*ಶ್ರೀವಲ್ಲಭ ಕುಲಕರ್ಣಿ*
ಹುಬ್ಬಳ್ಳಿ
ProfileImg

Written by Shreevallabha Kulkarni