ನಮ್ಮ ದೇಶದ ಜನರು ತಮ್ಮ ಹೆತ್ತವರು, ಹಿರಿಯರು, ಶಿಕ್ಷಕರು ಮತ್ತು ಉದಾತ್ತ ಆತ್ಮಗಳ ಮುಂದೆ ಅವರ ಪಾದ ಸ್ಪರ್ಶಿಸುವ ಮೂಲಕ ನಮಸ್ಕರಿಸುತ್ತಾರೆ. ಹಿರಿಯರುತಮ್ಮ ಕೈಯನ್ನು ನಮ್ಮ ತಲೆಯ ಮೇಲೆ ಅಥವಾ ನಮ್ಮ ಮೇಲೆ ಇರಿಸುವ ಮೂಲಕ ನಮ್ಮನ್ನು ಆಶೀರ್ವದಿಸುತ್ತಾರೆ.
ನಿತ್ಯ ನಾವು ಹಿರಿಯರನ್ನು ಬೇಟಿಯಾಗುವದು , ಹೊಸಕಾರ್ಯಗಳ ಆರಂಭ, ಜನ್ಮದಿನಗಳು, ಹಬ್ಬಗಳು , ಪ್ರಮುಖ ಸಂದರ್ಭಗಳಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಲಾಗುತ್ತದೆ. ಈ ಗೌರವ ನಮ್ಮ ಆತ್ಮವನ್ನು ಪರಿಚಯಿಸಲು ಒಬ್ಬರ ಕುಟುಂಬ ಘೋಷಿಸಲು ಮತ್ತು ಸಾಮಾಜಿಕ ಸ್ಥಾನಮಾನಗಳ ಕುರುಹುಗಳಾಗಿವೆ. ನಾವು ಪಾದಸ್ಪರ್ಶಿಸಿ ನಮಸ್ಕರಿಸುವದು ಹಿರಿಯರು ನಿರೂಪಿಸುವ ವಯಸ್ಸು, ಪ್ರಬುದ್ಧತೆ, ಉದಾತ್ತತೆ ಮತ್ತು ದೈವತ್ವದ, ಗೌರವದ ಸಂಕೇತವಾಗಿದೆ.
ಇದು ನಮ್ಮ ಮೇಲಿನ ಹಿರಿಯರ ನಿಸ್ವಾರ್ಥ ಪ್ರೀತಿ, ನಮ್ಮ ಕಲ್ಯಾಣಕ್ಕಾಗಿ ಅವರು ಮಾಡಿದ ತ್ಯಾಗ ಗುರುತಿಸುವದನ್ನು ಸಂಕೇತಿಸುತ್ತದೆ. ಸಂಪ್ರದಾಯವು ಬಲವಾದ ಕುಟುಂಬ ಸಂಬಂಧವನ್ನು ನಿರಂತರ ಪ್ರತಿಬಿಂಬಿಸುತ್ತದೆ. ಕಾಶ್ಮಿಕ್ ಅನ್ನುವ ಶಕ್ತಿಯು ನಮ್ಮ ದೇಹದಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಹರಿಯುತ್ತದೆ. ಇದು ಎರಡು ಮನಸ್ಸುಗಳ ತಮ್ಮ ಹೃದಯಗಳ ನಡುವೆ ಸಂಪರ್ಕ ಹೊಂದಿದೆ.
ಈ ಶಕ್ತಿಯೇ ಕೈಕುಲುಕುವ ಮತ್ತು ಅಪ್ಪುಗೆಯ ಮೂಲಕ ವರ್ಗಾಯಿಸಲು ಅಲ್ಲದೇ ಕಾಶ್ಮಿಕ್ ಅನ್ನುವ ಶಕ್ತಿಯು ನಮ್ಮ ಬೆರಳಿನ ತುದಿಯಲ್ಲಿ ಸಂಗ್ರಹವಾಗುವದರಿಂದ ನಾವು ವಯಸ್ಸಾದವರ ಪಾದ ಮುಟ್ಟಿದಾಗ ಪಾದವನ್ನು ಮುಟ್ಟಿದವರಿಗೆ ವರ್ಗಾಯಿಸಲ್ಪಡುತ್ತದೆ. ಈ ರೀತಿಯಾಗಿಕೈಬೆರಳು, ಪಾದಗಳ ಬೆರಳುಗಳು, ಗ್ರಾಹಕ ಶಕ್ತಿ ನೀಡುತ್ತವೆ.
ನಮ್ಮ ದೇಶದಲ್ಲಿ ಹಿರಿಯರ ಸಂಪಲ್ಪ, ಆಶೀರ್ವಾದ ಮೌಲ್ಯವಾದವುಗಳಾಗಿವೆ. ಪ್ರೀತಿ, ದೈವಿಕತೆ, ಉದಾತ್ತತೆಯಿಂದ ತುಂಬಿದ ಹೃದಯದಿಂದ ಹೊರಬರುವ ಶುಭಹಾರೈಕೆಗಳು ಅಗಾಧವಾದ ಶಕ್ತಿ ಹೊಂದಿವೆ. ನಮ್ರತೆ, ಗೌರವಗಳಿಂದ ನಮಸ್ಕರಿಸಿದಾಗ ಹಿರಿಯರು ಆಶೀರ್ವದಿಸಿ ಶುಭಕೋರುತ್ತಾರೆ. ಅದು ನಮ್ಮನ್ನು ಆವರಿಸಲು ಧನಾತ್ಮಕ ಶಕ್ತಿಯ ರೂಪದಲ್ಲಿ ಹರಿಯುತ್ತದೆ. ಹಿರಿಯರ, ಗುರುಗಳ, ಮಹತ್ವ ಬೀರುವ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ಈ ಅಂಶ ಎತ್ತಿ ತೋರಿಸುವ ಅನೇಕ ಕಥೆಗಳನ್ನು ಹೊಂದಿವೆ.
ಮಕ್ಕಳಿಗೆ ತಂದೆತಾಯಿಯರು ಹಿರಿಯರ ಮಹತ್ವ, ಹಿರಿಯರಿಗೆ ಕೊಡುವ ಗೌರವ , ಗುರುಗಳಿಗೆ, ಶಿಕ್ಷಕರಿಗೆ ನೀಡುವ ಮರ್ಯಾದೆ, ಸ್ನೇಹಿತರ ಜೊತೆ ಒಳ್ಳೆಯ ಒಡನಾಟ, ಓದಿನ ಮಹತ್ವ ತಿಳಿಸಿ ಕೊಟ್ಟಾಗಲೇ ಮಕ್ಕಳು ಮುಂದೆ ಅವರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುವದು.
0 Followers
0 Following