ನಾಲ್ಕನೇ ತರಗತಿಯ ಒಂದು ಪಾಠ ನಿಮಗೆ ಗೊತ್ತಾ..? “ಚಿನ್ನದ ಕೊಡಲಿ” ಈ ಪಾಠದ ಅನುಸಾರ ಒಬ್ಬ ಜೀವನ ಮಾಡ್ತಾ ಇದ್ದ. ಆದ್ರೆ ಅವ್ನಿಗೆ ಬದುಕು ಭಯಂಕರ ನರಕ ತೋರ್ಸೋಕೆ ಶುರು ಮಾಡಿತು. ಹುಚ್ಚ ಎಂದು ಜನ ಹೇಳ್ತ ಇದ್ರು . ಆದ್ರೆ ಅವ್ನು ಜನ ಹೀಗೇ ಮಾತಾಡ್ತಾರೆ ಅವ್ರೆಲ್ಲ ಹೀಗೇ ಬದುಕಿ ಅಭ್ಯಾಸ ಆಗಿದೆ ಎಂದು ಸುಮ್ಮನಾದ. ಆದ್ರೆ.. ಅವ್ನು ನಮ್ಮ ಕುಟುಂಬ, ನನ್ನ ತಾಯಿ, ನನ್ನ ತಂದೆ, ನನ್ನ ಸಹೋದರ, ಸಹೋದರಿಯರೆಲ್ಲ ನನ್ನ ಹಾಗೆ ಎಂದು ತಿಳಿದುಕೊಂಡಿದ್ದ. ಒಂದು ದಿವಸ ಅವನ ತಂದೆ ಮಗನ ಮಾತಿನಲ್ಲಿ ಸ್ವಲ್ಪ ಮಾತು ಕತೆ ಆಗಿತ್ತು.. ಏನೆಂದರೆ ತಂದೆಯ ಹತ್ತಿರ ಒಂದು ವಾಚ್ಜ್ ಇತ್ತು ಅದನ್ನು ಮಗ ನೋಡಿ ಅಪ್ಪ ಈ ವಾಚ್ ನನಗೆ ಕೊಡು ಎಂದು ಕೇಳಿದ. ಅಪ್ಪ ಅದಕ್ಕೆ ಮಗನೆ ಇದು ನನ್ನದಲ್ಲ ಇದು ಸುಮಾರು 35 ಸಾವಿರ. ಇದು ನನ್ನ ಸ್ನೇಹತ ಹತ್ತಿರ ತೆಗೆದುಕೊಂಡೆ ಇನ್ನು ಹಣ ಅವನಿಗ ನೀಡಿಲ್ಲ ಎಂದ. ಆಗ ಮಗ ಸರಿ ಅಪ್ಪ ನಿನಗೆ ಆ ಹಣ ಕೊಡುತ್ತೇನೆ ಅವರಿಗೆ ಕೊಡು ಎಂದ ಮಗ. ಸುಮಾರು ಒಂದ ವರ್ಷ ಕಳೆಯಿತು ತಂದೆಯ ಸ್ನೇಹಿತ ನೀನು ಪ್ರಕಾಶನ ಮಗ ಅಲ್ವೇ ಎಂದು ಒಂದು ಮದುವೆಯ ಕಾರ್ಯಕ್ರಮದಲ್ಲಿ ಕೇಳಿದರು.. ಹಾ.. ಹೌದು.. ಏನೋ ಒಳ್ಳೆ ಬೆಲೆ ಇರೋ ವಾಚ್ ಹಾಕಿದಿಯ ಎಂದರು. ನಿಮ್ಮ ವಾಚ್ ಬಗ್ಗೆ ನೀವೇ ಕೇಳ್ತಿದೀರಾ ಹೇಳಿದೆ. ನಂದ…?
ನಾನು ಕೈಗೆ ವಾಚ್ ಕಟ್ಟೋದಿಲ್ಲ ಎಂದರು.
ಆಗ ನಾನು ಅಪ್ಪ ಹೀಗೇ ಹೇಳಿದರು ಎಂದು ಕೇಳಿದೆ. ಹೌದ ಎಂದು ನಗುತ್ತಾ ನಾನು ಕೊಟ್ಟಿಲ್ಲ. ನಿಮ್ ತಂದೆನೇ ಇದನ್ನು ಮಾರುಕಟ್ಟೆಯಲ್ಲಿ ಖರೀದಿ ಮಾಡಿದ್ದರು ಎಂದರು.
ತಕ್ಷಣ ಮನೆಗೆ ಬಂದು ಅಪ್ಪನ ಕೋಣೆ ಬೀರುವಿನಲ್ಲಿ ನೋಡಿದಾಗ ಅದರ ಬೆಲೆ ಕೇವಲ ಇಪ್ಪತ್ತೆಳು ಸಾವಿರ ಆಗಿತ್ತು.
ಎಲ್ಲರಿಗೂ ವ್ಯಾಪಾರ ದೃಷ್ಟಿಯೇ ಸರಿ ಎನ್ನುವುದಾದರೆ..ಸಂಬಂಧಗಳು, ವಿಶ್ವಾಸ, ಸ್ನೇಹ ಇವೆಲ್ಲ ವ್ಯಾಪಾರದ ದೃಷ್ಟಿಕೋನಗಳಾಗಬಾರದು.
ವ್ಯಾಪಾರದಲ್ಲಿ ಲಾಭ ಎನ್ನುವುದು ಸಾಮಾನ್ಯ. ಮೋಸ ಎನ್ನುವುದು ಸಾಮಾನ್ಯವೇ? ಸಂಬಂಧಗಳಲ್ಲಿ ಪ್ರೀತಿ ಎನ್ನುವುದು ಸಾಮಾನ್ಯ ಸಂಭಂದಗಲ್ಲಿ ಪ್ರಾಣ ಇವರು ಎನ್ನುವುದು ಸಾಮಾನ್ಯವೇ? ಅಥವಾ ಪ್ರಾಣ ಎಂಬುದು ಅದ ವ್ಯಾಪಾರವೇ?
ಇದರ ಅರ್ಥ ಕುಟಂಬದ ಬಗ್ಗೆ ಅಥವಾ ತಂದೆ ಬಗ್ಗೆ ಕೆಟ್ಟ ಅಭಿಪ್ರಾಯಗಳನ್ನ ಇಲ್ಲಿ ತಂದು ಬೇರೆಯವರ ಕುಟುಂಬ ಹೀಗೆ ಎಂದು ಪ್ರದೀಪಾದಿಸಲು ಇದನ್ನು ಹೇಳುತ್ತಿಲ್ಲ.ಆದರೆ ಕುಟುಂಬದಲ್ಲಿಯೇ ಹೀಗೆ ಆದರೆ ಇನ್ನು ಇಂದಿನ ಸಮಾಜ ಎಲ್ಲಿ ಹೋಗಿದೆ ಎಬುದು ಅಷ್ಟೇ.
Shambhu
0 Followers
0 Following