ಜೂ. 7 ಮತ್ತು 8ರಂದು ಮೂಡುಬಿದಿರೆಯಲ್ಲಿ “ಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ"

20 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ

ProfileImg
04 Jun '24
1 min read


image

ಮಂಗಳೂರು: ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಜೂ. 7 ಮತ್ತು 8ರಂದು “ಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ’ ನಡೆಯಲಿದ್ದು, 20 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ  ತಿಳಿಸಿದ್ದಾರೆ.

ಉದ್ಯೋಗ ಮೇಳದಲ್ಲಿ ಐಟಿ ವಲಯ, ಉತ್ಪಾದನಾ ವಲಯ, ಬಿಎಫ್‌ಎಸ್‌ಐ, ಐಟಿಇಎಸ್‌, ಫಾರ್ಮಾ, ಆರೋಗ್ಯ, ಮಾರಾಟ, ಮಾಧ್ಯಮ, ನಿರ್ಮಾಣ, ಹಾಸ್ಪಿಟಾಲಿಟಿ ವಲಯದ ಕಂಪೆನಿಗಳು ಭಾಗವಹಿಸಲಿವೆ. ರಾಜ್ಯದವರ ಜತೆಗೆ ಹೊರ ರಾಜ್ಯದವರೂ ಭಾಗವಹಿಸಲಿದ್ದಾರೆ ಎಂದರು.

ಕಳೆದ 13 ಆಳ್ವಾಸ್‌ ಪ್ರಗತಿ ಹಾಗೂ 7 ಉದ್ಯೋಗ ಮೇಳಗಳಲ್ಲಿ ಒಟ್ಟು 31,896 ಮಂದಿಗೆ ಉದ್ಯೋಗಾವಕಾಶ ನೀಡಲಾಗಿದೆ.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ತನ್ನ ಸಿಎಸ್‌ಆರ್‌ ಚಟುವಟಿಕೆಯಡಿ ಉದ್ಯೋಗ ಮೇಳವನ್ನು ಉಚಿತವಾಗಿಯೇ ಆಯೋಜಿಸಿದ್ದು, ನೇಮಕಾತಿ ನಡೆಸುವ ಕಂಪೆನಿಗಳಿಗೆಗೂ ಇದು ಉಚಿತವಾಗಿದೆ. ಈವರೆಗೆ 300ಕ್ಕೂ ಅಧಿಕ ಕಂಪೆನಿಗಳು ನೋಂದಾಯಿಸಿದ್ದು, 10 ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿದ್ದಾರೆ. ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್‌, ಎಂಜಿನಿಯರಿಂಗ್‌, ಕಲೆ, ವಾಣಿಜ್ಯ ಮತ್ತು ನಿರ್ವಹಣೆ, ವಿಜ್ಞಾನ, ನರ್ಸಿಂಗ್‌ ಜತೆಗೆ ಐಟಿಐ, ಡಿಪ್ಲೊಮಾ, ಪಿಯುಸಿ ಮತ್ತು ಎಸೆಸೆಲ್ಸಿ, ಇತರ ಅರ್ಹ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಅಂತಿಮ ಸೆಮಿಸ್ಟರ್‌ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಅನುಭವಿ ವಿದ್ಯಾರ್ಥಿಗಳೂ ಈ ಅವಕಾಶ ಬಳಸಿಕೊಳ್ಳಬಹುದು ಎಂದರು.

ಉದ್ಯೋಗಾವಕಾಶ
ಐಟಿ ವಲಯದಲ್ಲಿ 207 ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ಹುದ್ದೆ ಸೇರಿದಂತೆ 20 ಕಂಪೆನಿಗಳಲ್ಲಿ 843 ಉದ್ಯೋಗಾವಕಾಶ ಇದೆ. 400ಕ್ಕೂ ಅಧಿಕ ಉದ್ಯೋಗಾವಕಾಶ ಯಾವುದೇ ಹಿನ್ನೆಲೆಯ ಪದವೀಧರರಿಗೆ ಅಮೆಜಾನ್‌ ಹಾಗೂ ಟಿಸಿಎಸ್‌ ಕಂಪನಿಗಳಲ್ಲಿದೆ. ಉತ್ಪಾದನ ವಲಯದಲ್ಲಿ 70 ಸಾವಿರಕ್ಕೂ ಅಧಿಕ ಉದ್ಯೋಗದಾತಾರ 52 ಕಂಪೆನಿಗಳು ಈ ವಲಯದಲ್ಲಿವೆ ಎಂದರು.

Category:Entrepreneurship



ProfileImg

Written by Praveen Chennavara